ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಲು ಕೇಂದ್ರ ಸರ್ಕಾರ ಸಂಗ್ರಹಿಸಿದ ದಂಡ ಬರೋಬ್ಬರಿ 600 ಕೋಟಿ ರೂಪಾಯಿ

Pan Card Aadhaar Card Link Penalty

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು ಅದರ ಸೂಚನೆಯ ಪ್ರಕಾರ ಅನೇಕ ಜನರು ಆಧಾರ್ ಮತ್ತು ಪ್ಯಾನ್ ಜೋಡಣೆ ಮಾಡಿದ್ದರು. ಆದರೆ ಕೆಲವರು ಕೊನೆಯ ದಿನಾಂಕ ಮುಗಿದರೂ ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡಿರಲಿಲ್ಲ. ಅವರಿಗೆ ದಂಡ ವಿಧಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಜೂನ್ 30 2023 ರ ನಂತರ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಿಸಿದರೆ 1,000 ರೂಪಾಯಿ ದಂಡ ವಿಧಿಸಲು ಕೇಂದ್ರ ನಿರ್ಧರಿಸಿತ್ತು. ಆದರೆ ಶಾಕಿಂಗ್ ವಿಷಯ ಏನೆಂದರೆ ಈಗಾಗಲೇ ಸಂಗ್ರಹವಾದ ದಂಡದ ಮೊತ್ತ ಬರೋಬ್ಬರಿ 600 ಕೋಟಿ ರೂಪಾಯಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇನ್ನು ಆಗಿಲ್ಲ ಆಧಾರ್ ಮತ್ತು ಪ್ಯಾನ್ ಜೋಡಣೆ: ಈ ಬಗ್ಗೆ ಮಾತನಾಡಿದ ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್‌ ಚೌಧರಿ ಅವರು ಜನವರಿ 29, 2024 ರ ವರೆಗೆ ಇನ್ನೂ 11.48 ಕೋಟಿ ಜನರು ತಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಪ್ಯಾನ್ ಕಾರ್ಡ್ ಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡದಿದ್ದರೆ pan card ಜುಲೈ 1, 2023ರಿಂದ ನಿಷ್ಕ್ರಿಯಗೊಳ್ಳುತ್ತದೆ. ಆದಾಯ ತೆರಿಗೆ ನೀಡುವವರಿಗೆ ಇದರಿಂದ ಹೆಚ್ಚಿನ TDS ಮತ್ತು TC ಮೊತ್ತ ಕಡಿತವಾಗಿತ್ತದೆ. ಹೆಚ್ಚಿನ ಆದಾಯ ತೆರಿಗೆ ಇಂದ ಪಾರಾಗಲು 1,000 ರೂಪಾಯಿ ದಂಡ ನೀಡಿ ಪ್ಯಾನ್ ಮತ್ತೆ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡುವ ವಿಧಾನ

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಆಗದೆ ಇದ್ದರೆ ದಂಡ ವಿಧಿಸಿ ಆದರೆ ತೆರಿಗೆ ಕಡಿತ ಮತ್ತು ಸರ್ಕಾರದ ಹಲವು ಯೋಜನೆಗಳು ಜಾರಿ ಆಗುವಾಗ ಅಂದರೆ ನಿಮಗೆ ಯಾವುದೇ ಸಹಾಯಧನ ಬರುವುದು ಇದ್ದರೆ ಅದು ಸಹ ಈ ಪ್ರಕ್ರಿಯೆ ಮಾಡದೆ ಇದ್ದರೆ ಬಾರದೆ ಇರಬಹುದು. ಆದ್ದರಿಂದ ನಿಮ್ಮ ಪಾನ್ ಕಾರ್ಡ್ ಕೆಲಸ ಮಾಡದೆ ಇದ್ದರೆ ನೀವು ಈಗಲೇ ಪ್ಯಾನ್ ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡುವುದು ಉತ್ತಮ. ಹಾಗಾದರೆ ಈಗ ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

  • ಆದಾಯ ತೆರಿಗೆ ಇ-ಫೈಲಿಂಗ್ ವೆಬ್ಸೈಟ್ ಗೆ ಭೇಟಿ ನೀಡಿ.
  • ಕ್ವಿಕ್ ಲಿಂಕ್ಸ್ ವಿಭಾಗಕ್ಕೇ ಹೋಗಿನ ಅಲ್ಲಿ ಲಿಂಕ್ ಆಧಾರ್ ಎಂಬ ಆಪ್ಷನ್ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
  • ಆಧಾರ್ ಕಾರ್ಡ್‌ನಲ್ಲಿ ಇರುವಂತೆ ನಿಮ್ಮ ಹೆಸರನ್ನು ಹಾಕಿ ಮತ್ತು ಕ್ಯಾಪ್ಚಾ ಕೋಡ್ ( captha code) ಅನ್ನು ಹಾಕಿ.
  • ನಂತರ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ. ಹಾಗೂ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆದ ಬಗ್ಗೆ ಮಾಹಿತಿ ನಿಮ್ಮ ಆಧಾರ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಬರುತ್ತದೆ.

ಇದನ್ನೂ ಓದಿ: ಜೂನಿಯರ್ ಅಸಿಸ್ಟೆಂಟ್ ಹುದ್ದೆ ಗೆ IDBI ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ. ಫೆಬ್ರುವರಿ 12 ರಿಂದ ಅರ್ಜಿ ನಮೂನೆ ಬಿಡುಗಡೆ ಆಗಲಿದೆ. 

ಇದನ್ನೂ ಓದಿ: ಪಿಎಫ್ ಖಾತೆಗೆ ಹೆಚ್ಚಿನ ಹಣ ಹೂಡಿಕೆ ಮಾಡುವ ವಿಧಾನ ಮತ್ತು ವಿಪಿಎಫ್ ಖಾತೆಯ ಬಗ್ಗೆ ಮಾಹಿತಿ