ಪೆಟ್ರೋಲ್ ದರ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ದರ ಕುಸಿತ ಆದರಿಂದ ಸಾಗಾಣಿಕೆ ವೆಚ್ಚ ಮತ್ತು ಜೀವನ ವೆಚ್ಚ ಕಡಿಮೆ ಆಗುತ್ತದೆ. ಜನಸಾಮಾನ್ಯರು ಎಲ್ಲಾ ಬೆಲೆ ಏರಿಕೆಯ ನಡುವೆ ಆರ್ಥಿಕ ತೊಂದರೆ ಅನುಭವಿಸುತ್ತಾ ಇದ್ದರೂ ಈಗ ಪೆಟ್ರೋಲ್ ದರ ಕುಸಿತ ಕಂಡಿರುವುದು ಬಹಳ ಸಂತಸದ ಸುದ್ದಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಜನಸಾಮಾನ್ಯರು ಮನವಿ ಸಲ್ಲಿಸಿದ್ದರು. ಈಗ ಮನಿವಿಗೆ ಸ್ಪಂದನೆ ದೊರೆತಿದೆ.
ಪೆಟ್ರೋಲ್ ದರ ಮೇ 2022 ರ ಬಳಿಕ ಇದೇ ಮೊದಲು ಕುಸಿತ ಕಾಣುತ್ತಿದೆ: ಆಹಾರ ಧಾನ್ಯಗಳ ಬೆಲೆ ಚಿನ್ನ, ಬೆಳ್ಳಿ ಆಭರಣ ಬೆಲೆ ಏರಿಕೆಯ ನಡುವೆ ದಿನ ದಿನಕ್ಕೂ ಪೆಟ್ರೋಲ್ ಬೆಲೆಯೂ ಏರಿಕೆ ಕಾಣುತ್ತಾ ಇತ್ತು. ಇದು ಗ್ರಾಹಕರಿಗೆ ಹೆಚ್ಚಿನ ಪ್ರಮಾಣದ ಆರ್ಥಿಕ ಹೊರೆಗೆ ಕಾರಣವಾಗಿತ್ತು. ಪೆಟ್ರೋಲ್ ದರ transport charges ಹೆಚ್ಚಿಸುತ್ತದೆ ಜೊತೆಗೆ ಎಲ್ಲಾ ಸರಕು ಸಾಮಗ್ರಿಗಳ ಬೆಲೆ ಹೆಚ್ಚಿಸಲು ಮೂಲ ಕಾರಣವೇ ಪೆಟ್ರೋಲ್ ದರ ಆಗಿದೆ. ಮೇ 2022 ರ ಬಳಿಕ ಪೆಟ್ರೋಲ್ ದರವು ಇಳಿಕೆ ಕಾಣಲಿಲ್ಲ ಎಂದು ಉನ್ನತ ಮೂಲಗಳು ಹೇಳಿವೆ. ಈಗ ಪೆಟ್ರೋಲ್ ಬೆಲೆ ಇಳಿದಿರುವುದು ಕೊಂಚ ಮಟ್ಟಿಗೆ ಜನಸಾಮಾನ್ಯರಿಗೆ ಸಹಾಯ ಆಗಲಿದೆ.
ಏಷ್ಟು ರೂಪಾಯಿ ಪೆಟ್ರೋಲ್ ದರ ಕಡಿಮೆ ಆಗಿದೆ?: ಒಂದು ಲೀಟರ್ ಗೆ ಎರಡು ರೂಪಾಯಿ ದರ ಕಡಿಮೆ ಆಗಿದೆ. ಈ ದರವು ಮಾರ್ಚ್ 15 ರಿಂದ ಜಾರಿಯಾಗಲಿದೆ ಎಂದು ವರದಿ ಆಗಿದೆ.
ಕೇಂದ್ರ ಚುನಾವಣೆಗೂ ಮುನ್ನ ದರ ಇಳಿಕೆ ಮಾಡಿದ ಸರ್ಕಾರ:-
ಪ್ರಧಾನಿ ಮೋದಿ ಮಹಿಳಾ ದಿನಾಚರಣೆ ದಿನದಂದು ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂಪಾಯಿ ಕಡಿಮೆ ಮಾಡಿ ಜನರಿಗೆ ಬೆಲೆ ಇಳಿಕೆ ಮಾಡಿತ್ತು. ಈಗ ಪೆಟ್ರೋಲ್ ಡೀಸೆಲ್ ಬೆಲೆ ಆಗಿದ್ದು ಲೋಕಸಭಾ ಚುನಾವಣಾ ದಿನಾಂಕ ಘೋಷಣೆ ಆಗುವ ಮೊದಲು ದರ ಇಳಿಕೆ ಕಂಡಿದ್ದು ಜನರಿಗೆ ಸಂತಸ ತಂದಿದೆ. ಪರಿಷ್ಕೃತ ದರವು ಪೆಟ್ರೋಲ್ ಬೆಲೆ 99.94 ರೂಪಾಯಿ ಹಾಗೂ ಡೀಸೆಲ್ ಬೆಲೆ 85.89 ಆಗಿದೆ.
ಮಾರ್ಚ್ 14 ರ ಪೆಟ್ರೋಲ್ ದರ ಹೀಗಿತ್ತು :-
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 96.72 ರೂಪಾಯಿ ಆಗಿತ್ತು. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 89.62 ರೂಪಾಯಿ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂಪಾಯಿ ಡೀಸೆಲ್ ಬೆಲೆ 87.89 ರೂ. ಇತ್ತು. ತಿರುವನಂತಪುರಂನಲ್ಲಿ ಪೆಟ್ರೋಲ್ ಲೀಟರ್ ಗೆ 109.73 ರೂಪಾಯಿ ಹಾಗೂ ಡೀಸೆಲ್ 98.53 ರೂಪಾಯಿ ಇತ್ತು ಹಾಗೂ ಚೆನ್ನೈನಲ್ಲಿ ಪೆಟ್ರೋಲ್ 102.63 ರೂಪಾಯಿ ಮತ್ತು ಡೀಸೆಲ್ 94.24 ರೂಪಾಯಿ ಇತ್ತು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪೆಟ್ರೋಲ್ ದರ ಕುಸಿತ ಆಗಿರುವುದರಿಂದ ಆಗುವ ಉಪಯೋಗ ಏನು?
- ಜನಸಾಮಾನ್ಯರ ಜೀವನ ಸುಧಾರಣೆ :- ಪೆಟ್ರೋಲ್ ದರ ಕುಸಿತ ಜನಸಾಮಾನ್ಯರಿಗೆ ಸ್ವಾಗತಾರ್ಹ ಬೆಳವಣಿಗೆಯಾಗಿದೆ, ಏಕೆಂದರೆ ಇದು ಸಾಗಣೆ ವೆಚ್ಚ ಮತ್ತು ಜೀವನ ವೆಚ್ಚವನ್ನು ಕಡಿಮೆ ಮಾಡುತ್ತದೆ.
- ವ್ಯಾಪಾರ ಚಟುವಟಿಕೆಯ ವೆಚ್ಚ ಕಡಿಮೆ: ಪೆಟ್ರೋಲ್ ದರ ಕುಸಿತವು ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ, ಇದು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ.
- ಆರ್ಥಿಕ ಬೆಳವಣಿಗೆಗೆ ಸಹಾಯಕ: ಪೆಟ್ರೋಲ್ ದರ ಕುಸಿತವು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ.
- ಹಣದುಬ್ಬರದ ಮೇಲೆ ನಿಯಂತ್ರಣ: ಪೆಟ್ರೋಲ್ ದರ ಕುಸಿತವು ಹಣದುಬ್ಬರದ ಮೇಲೆ ನಿಯಂತ್ರಣವನ್ನು ಸಾಧಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಯಾವುದಕ್ಕೂ ಸರಿಸಾಟಿಯಾಗದ ಎಲ್ಲ ವರ್ಗದವರೂ ಖರೀದಿಸಬಹುದಾದ ಒಂದೇ ಒಂದು ಬೈಕ್ ಎಂದರೆ ಅದುವೇ ‘ Hero Super Splender’