ಇನ್ನು ಕೇವಲ 3 ದಿನದಲ್ಲಿ ‘PF ಹಣ’ ನೇರವಾಗಿ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಿತ್ತದೆ.

PF Amount withdrawal

ಪಿಎಫ್ ಎನ್ನುವುದು ಖಾಸಗಿ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಪೆನ್ಷನ್ ಜೀವನದಲ್ಲಿ ಹಣದ ಭದ್ರತೆಯ ಸಲುವಾಗಿ ಇರುವ ಒಂದು ಯೋಜನೆ ಆಗಿದ್ದು. ಉದ್ಯೋಗಿಗಕ್ಕೆ ಸೇರಿದ ವ್ಯಕ್ತಿಗಳು ಮುಂದಿನ ಭವಿಷ್ಯದ ನಿಧಿಗೆ ಹಣವನ್ನು ಕೂಡಿಡಲು ಒಂದು ಉತ್ತಮ ಯೋಜನೆ ಆಗಿದೆ. ಈಗ ಉದ್ಯೋಗಗಳಿಗೆ ಕೇವಲ ಮೂರು ದಿನಗಳಲ್ಲಿ ಪಿಎಫ್ ಹಣವೂ ನೇರವಾಗಿ ಜಮಾ ಆಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ವಿಷಯದ ಬಗ್ಗೆ ಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಪಿಎಫ್ ಖಾತೆಯ ಭಾಗಶಃ ಹಣವನ್ನು ಹಿಂಪಡೆಯುವ ಯೋಚನೆಯನ್ನು ಈಗ ಇಲಾಖೆ ಪರಿಚಯಿಸಿದೆ:- ನಿವೃತ್ತಿಯ ನಂತರ ಸಾಮಾನ್ಯವಾಗಿ ಪಿಎಫ್ ಹಣವೂ ನಮಗೆ ಸಿಗುತ್ತದೆ. ಆದರೆ ಈಗ ಯಾವುದಾದರೂ ಎಮರ್ಜೆನ್ಸಿ ಕಾರಣಕ್ಕೆ ಪಿಎಫ್ ನ ಅರ್ಧ ಭಾಗದ ಹಣವನ್ನು ಪಡೆಯಬೇಕು ಎಂದರೆ ಈಗ ಒಂದು ಲಕ್ಷ ರೂಪಾಯಿಯ ವರೆಗೆ ಹಣ ಪಡೆಯುವ ಫಿಸಿಲಿಟಿ ಇದೆ. ನೀವು ವೈದ್ಯಕೀಯ emergency ಅಥವಾ ಮಗಳ ಅಥವಾ ಮಗನ ಮದುವೆ, ಅಥವಾ ಮನೆ ಖರೀದಿ ಅಥವಾ ಯಾವುದೇ ನಿವೇಶನ ಖರೀದಿ ಮಾಡುವ ಬಯಕೆ ಇದ್ದರೆ ಅಂತಹ ಸಮಯದಲ್ಲಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಆಗ ನೀವು ಸರಿಯಾದ ದಾಖಲೆಗಳನ್ನು ನೀಡಿ ಹಣವನ್ನು ಪಡೆಯಬಹುದು.

ಮುಂಗಡವಾಗಿ ಪಿಎಫ್ ಹಣ ಮಿತಿಯನ್ನು ಹೆಚ್ಚಿಸಲಾಯಿತು :- ಈ ಹಿಂದೆ ಮುಂಗಡವಾಗಿ ಪಿಎಫ್ ಹಣವನ್ನು 50,000 ರೂಪಾಯಿ ವರೆಗೆ ತೆಗೆಯಬಹುದಾಗಿತ್ತು. ಆದರೆ ಈಗ ಅದನ್ನು ಒಂದು ಲಕ್ಷ ರೂಪಾಯಿಯ ವರೆಗೆ ಪಡೆಯುವ ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ವೈದ್ಯಕೀಯ, ಶಿಕ್ಷಣ, ಮದುವೆ, ವಸತಿಗಾಗಿ EPF ಹಣ ಪಡೆಯಲು ಕೆಲವು ಹಕ್ಕು ನಿಯಮಗಳ ಬದಲಾವಣೆಯ ಮಾಹಿತಿ ಇಲ್ಲಿದೆ

3 ದಿನಗಳಲ್ಲಿ ಪಿಎಫ್ ಖಾತೆಯ ಹಣ ನೇರವಾಗಿ ಖಾತೆಗೆ ಜಮಾ ಆಗುತ್ತದೆ :-

ಈ ಹಿಂದೆ ಪಿಎಫ್ ಖಾತೆಗೆ ಹಣ ವರ್ಗಾವಣೆ ಆಗಲೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಹಲವಾರು ದಾಖಲೆಗಳನ್ನು ನೀಡಿದ ಮೇಲೂ ಹಲವಾರು ಬಾರಿ ಪರಿಶೀಲನೆ ನಡೆಸಿ ನಂತರ ಪಿಎಫ್ ಹಣವನ್ನು ನೀಡಲಾಗುತ್ತಿತ್ತು. ಆದರೆ ಈಗ ಹಾಗಲ್ಲ ನೀವು ಅರ್ಜಿ ಸಲ್ಲಿಸಿದ ನಂತರ ಆಟೋ ಸೆಟಲ್ಮೆಂಟ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಈಗ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪ ಇಲ್ಲದೆ ಸುಲಭಬಾಗಿ ಹಣ ಪಡೆಯುವ ಅವಕಾಶ ಇದೆ.

ನಿಮ್ಮ ಅರ್ಜಿ ಬಹಳ ಬೇಗ ಪರಿಶೀಲನೆ ಆಗಿ ನಿಮ್ಮ ಅರ್ಜಿ ಆಕ್ಸೆಪ್ಟ್ ಅಥವಾ ರಿಜೆಕ್ಟ್ ಆಗಿದೆ ಎಂಬ ಮಾಹಿತಿ ಬಹಳ ಬೇಗ ನಿಮಗೆ ಸಿಗುತ್ತದೆ. ಹಾಗೆಯೇ ಕೇವಲ ಮೂರು ದಿನದ ಒಳಗೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಆದ್ದರಿಂದ ನೀವು ಮೊದ್ಲನೆ ಬಾರಿ ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳನ್ನು ನೀಡಬೇಕು ಎಂಬ ಬಗ್ಗೆ ಹಿರಿಯ ಅಧಿಕಾರಿಗಳನ್ನು ಒಮ್ಮೆ ಭೇಟಿ ನೀಡಿ ಮಾಹಿತಿ ಪಡೆದು ನಂತರ ಯಾವುದೇ ತಪ್ಪಿಲ್ಲದೆ ಅರ್ಜಿ ಸಲ್ಲಿಸಬಹುದು. ಹಾಗೂ ಒಂದು ಲಕ್ಷ ರೂಪಾಯಿಗೂ ಮೀರಿ ನಿಮಗೆ ಹಣ ಬೇಕಾದರೆ ನೀವು ಪಿಎಫ್ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆಯಲು ಅವಕಾಶ ಇರುತ್ತದೆ. ಹಾಗೆಯೇ ಪಿಎಫ್ ಹಣವನ್ನು ಮುಂಗಡವಾಗಿ ಪಡೆಯುವಾಗ ನಿಮಗೆ ನಿವೃತ್ತಿಯ ನಂತರ ಎಷ್ಟು ಹಣ ಉಳಿಯುತ್ತದೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ತಿಳಿಯುವುದು ಉತ್ತಮ ಆಗಿದೆ. ಅಡ್ವಾನ್ಸ್ pf ಹಣ ಪಡೆಯುವಾಗ ಬಹಳ ಯೋಚಿಸಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: SIP ಫಾರ್ಮುಲಾ; ಈ 4 ಸಲಹೆಗಳೊಂದಿಗೆ ನಿಮ್ಮ ಹಣವನ್ನು ಡಬಲ್, ಟ್ರಿಪಲ್ ಮಾಡಿ!