Puneeth Rajkumar: ಭತ್ತದ ಗದ್ದೆಯಲ್ಲಿ ಅಪ್ಪು ಏನಿದು ಅಚ್ಚರಿ, ಕಣ್ಣು ಕಣ್ಣು ಮಿಟುಕಿಸುತ್ತಾ ನಿಂತ ಜನರು..

Puneeth Rajkumar: ಕರ್ನಾಟಕ ರಾಜರತ್ನ ಅಪ್ಪು ಅವರು ಅಕ್ಟೋಬರ್ 29 2021 ನೇ ಇಸ್ವಿಯಲ್ಲಿ ನಮ್ಮನ್ನೆಲ್ಲ ಬಿಟ್ಟು ದೂರ ಅಗಲಿದ್ದಾರೆ. ಅವರು ಹೋಗಿ ಇಂದಿಗೆ ಎರಡು ವರ್ಷ ಆಗುತ್ತಾ ಬಂತು ಆದರೆ ಅವರ ನೆನಪು ಮಾತ್ರ ಇನ್ನೂ ಕೂಡ ಮಾಡಿಸುತ್ತಿಲ್ಲ. ಇಲ್ಲಿ ಒಂದು ಅಚ್ಚರಿಯ ಅಂದರೆ ರಾಯಚೂರಿನ ಅಪ್ಪು ಅಭಿಮಾನಿಯೊಬ್ಬರು ವಿಶೇಷ ರೀತಿಯಲ್ಲಿ ಅಪ್ಪುವಿನ ಪುಣ್ಯಸ್ಮರಣೆಯನ್ನ ಮಾಡಿದ್ದಾರೆ. ಕೇಳಿದರೆ ನೀವು ಅಚ್ಚರಿಯಾಗುತ್ತೀರಾ. ಅದೇನೆಂದರೆ ತಮ್ಮ ಎರಡು ಎಕರೆ ಭತ್ತದ ಭೂಮಿಯ ಬೆಳೆಯಲ್ಲಿಯೇ ಅಪ್ಪುವಿನ ಚಿತ್ರವನ್ನ ಮೂಡಿಸಿದ್ದಾರೆ. ಎಂತಹ ಅಚ್ಚರಿ ಅಲ್ವಾ? ರಾಯಚೂರಿನ ಸತ್ಯನಾರಾಯಣ ಅವರು ಅಪ್ಪುವಿನ ಅಭಿಮಾನಿಗಳು. ತಮ್ಮ 6 ಎಕರೆ ಭೂಮಿಯಲ್ಲಿ ಎರಡು ಎಕರೆಯನ್ನ ಅಪ್ಪುವಿನ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಬೀಜಗಳನ್ನ ತರಿಸಿ ಮೂರು ತಳಿಯ ವಿಶಿಷ್ಟ ಭತ್ತದ ಬೀಜಗಳಿಂದ ಅಪ್ಪುವಿನ ಚಿತ್ರವನ್ನ ಬಿತ್ತನೆ ಮಾಡಿದ್ದಾರೆ. ಗುಜರಾತ್ ನ ಗ್ರೀನ್ ಗೋಲ್ಡ್ ರೋಜ್ ಹಾಗೂ ತೆಲಂಗಾಣದ ಕಾಲ ಬುಟ್ಟಿ ಮತ್ತು ಕರ್ನಾಟಕದ ಸೋನಾಮಸೂರಿ ಬತ್ತದ ಬೀಜವನ್ನ ಬಳಸಿ ಅಪ್ಪು ಭಾವಚಿತ್ರವನ್ನು ಅವರ ಭೂಮಿಯಲ್ಲಿ ಮೂಡಿಸಿದ್ದಾರೆ. ಇವರು ಸಾವಯವ ಕೃಷಿಯ ಮೂಲಕವೇ ಈ ಚಿತ್ರವನ್ನ ಭತ್ತದ ಮೂಲಕ ಬೆಳೆದಿದ್ದಾರೆ. ಅಪ್ಪುವಿನ ಎರಡನೇ ಪುಣ್ಯ ಸ್ಮರಣೆ ಹತ್ತಿರ ಬರುತ್ತಿದೆ.

WhatsApp Group Join Now
Telegram Group Join Now

ಅಪ್ಪುವಿನ ಅಭಿಮಾನಿ ಸತ್ಯನಾರಾಯಣ ಅವರು ಅಪ್ಪು ನಮ್ಮನಗಲಿ ಎಲ್ಲೂ ಹೋಗಿಲ್ಲ ಅವರು ನಮ್ಮ ಜೊತೆ ಇದ್ದಾರೆ ಎನ್ನುವುದನ್ನು ತಮ್ಮ ಬೆಳೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಅಪ್ಪುವಿನ ಭಾವಚಿತ್ರದ ಮೇಲೆ ಕರ್ನಾಟಕ ರತ್ನ ಎಂದು ಬರೆದಿದ್ದಾರೆ. ರಾಯಚೂರಿನ ಸತ್ಯನಾರಾಯಣ ಅವರಿಗೆ ಅಪ್ಪುವಿನ ಮೇಲೆ ಎಲ್ಲಿಲ್ಲದಂತಹ ಅಭಿಮಾನ. ಅವರ ದ್ವಿತೀಯ ಪುಣ್ಯ ಸ್ಮರಣೆಯಲ್ಲಿ ವಿಶೇಷವಾದಂತಹ ಒಂದು ನಮನವನ್ನ ಸಲ್ಲಿಸಬೇಕು ಎಂದು ಈ ಕೆಲಸವನ್ನ ವಿಶ್ವನಾಥ್ ಹೂಗಾರ ಅವರು ಮಾಡಿದ್ದಾರೆ.

ಅಪ್ಪುವಿನ ಪುಣ್ಯ ಸ್ಮರಣೆಗೆ ಅಪ್ಪುವಿನ ಅಭಿಮಾನಿಗಳು ವಿವಿಧ ರೀತಿಯ ಕಲಾಕೃತಿಗಳಿಂದ ಅಪ್ಪುವಿಗೆ ನಮನವನ್ನು ಸಲ್ಲಿಸುತ್ತಿದ್ದಾರೆ ಅದೇ ರೀತಿ ಈ ಕರಿ ಸತ್ಯನಾರಾಯಣ ಅವರು ಎರಡನೇ ವರ್ಷದ ಪುಣ್ಯಸ್ಮರಣೆಗೆ ಈ ರೀತಿಯಾಗಿ ನಮನವನ್ನು ಸಲ್ಲಿಸಿದ್ದಾರೆ. ಭತ್ತವನ್ನ ಗುಜರಾತಿನಿಂದ ತೆಲಂಗಾಣದಿಂದ ಹಾಗೂ ಕರ್ನಾಟಕದಿಂದ ಒಟ್ಟುಗೂಡಿಸಿ ತಮ್ಮ ಆರು ಎಕರೆ ಗದ್ದೆಯಲ್ಲಿ ಎರಡು ಎಕರೆಯನ್ನು ಅಪ್ಪುವಿಗಾಗಿ ಮೀಸಲಿಟ್ಟಿದ್ದಾರೆ ಈ ಎರಡು ಎಕರೆಯಲ್ಲಿ ಅಪ್ಪುವಿನ ಭಾವಚಿತ್ರವನ್ನು ತಮ್ಮ ಬೆಳೆಯಲ್ಲೇ ಮೂಡಿಸಿ ಅಪ್ಪುವಿಗೆ ತಮ್ಮ ಪೂರ್ಣ ಭಾವದಿಂದ ನಮನವನ್ನು ಸಲ್ಲಿಸುತ್ತಿದ್ದಾರೆ.

ಅಪ್ಪು ಅವ್ರು ನಮ್ಮನ್ನ ಬಿಟ್ಟು ಎಲ್ಲೂ ಹೋಗಿಲ್ಲ ಅವರು ಈ ಭತ್ತದ ಬೆಳೆಯಲ್ಲಿ ನಮ್ಮೊಂದಿಗೆ ಇದಾರೆ ಎಂದು ತೋರಿಸುವ ಈ ಕಲಾಕೃತಿಯನ್ನು ನೋಡಿದರೆ ನಿಜಕ್ಕೂ ಅಪ್ಪು ಅವರೇ ಎಂದು ಬರುವಂತೆ ಕಾಣಿಸುತ್ತಿದೆ. ಇವರು ಹೇಳಿದಂತೆ ಗುಜರಾತ್ ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಸುಮಾರು ಈ ಚಿತ್ರವನ್ನ ಅವರಿಗೆ ಬೆಳೆಯಲಿಕ್ಕೆ ಸುಮಾರು ನೂರು ಕೆಜಿ ಭತ್ತ ಬೇಕಾಗಿದೆಯಂತೆ. ಈ ನೂರು ಕೆಜಿ ಭತ್ತವನ್ನು ಒಟ್ಟುಗೂಡಿಸಿ ಅಪ್ಪು ಅವರನ್ನ ಇವರು ಭತ್ತದ ಗದ್ದೆಯಲ್ಲಿ ಬೆಳೆದಿದ್ದಾರೆ ಹಾಗೂ ಬೆಳಗಿಸಿದ್ದಾರೆ. ನಿಜವಾಗಲೂ ಇವರಿಗೆ ಅಪ್ಪು ಅವರ ಮೇಲಿರುವಂತ ಅಭಿಮಾನ ತುಂಬಾ ದೊಡ್ಡದು ಅಂತ ಹೇಳಬಹುದು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅಶ್ವಿನಿ ಪುನೀತ್ ರಾಜ್ ಕುಮಾರ್ ಬೇಟಿಯಾದ ಸತ್ಯನಾರಾಯಣ

ಭತ್ತದ ನಾಡಾದ ರಾಯಚೂರಿನಲ್ಲಿ ಈ ಅಪ್ಪುವಿನ ಚಿತ್ರ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದೆ. ಅಷ್ಟೇ ಅಲ್ಲದೆ ಈ ಸತ್ಯನಾರಾಯಣ ಅವರು ಅಪ್ಪುವಿನ ಭಾವಚಿತ್ರವನ್ನು ಅಪ್ಪುವಿನ ಧರ್ಮಪತ್ನಿ ಅಶ್ವಿನಿ ಅವರ ಮೂಲಕವೇ ಲೋಕಾರ್ಪಣೆ ಮಾಡಬೇಕಾಗಿ ಕೇಳಿಕೊಂಡಿದ್ದಾರೆ. ಹಾಗೂ ಸತ್ಯನಾರಾಯಣ ಅವರು ಅಶ್ವಿನಿಯನ್ನ ಭೇಟಿ ಕೂಡ ಆಗಿದ್ದಾರೆ ಅಶ್ವಿನಿ ಇವರ ಅಭಿಮಾನವನ್ನು ಕಂಡು ನಿಬ್ಬೆರಗಾಗಿದ್ದಾರೆ.

ಸತ್ಯನಾರಾಯಣ ಅವರು ಅಪ್ಪುವಿನ ಭಾವಚಿತ್ರಕ್ಕೆ ದಿನವೂ ಕೂಡ ಕರ್ಪೂರವನ್ನು ಹಚ್ಚಿ ಆರತಿಯನ್ನು ಮಾಡುತ್ತಾರೆ ನಿತ್ಯವೂ ಊದಿಯನ್ನ ಸಲ್ಲಿಸುತ್ತಾರೆ ಅಪ್ಪು ಅವರು ಒಂದು ದೇವರಂತೆ ಅವರ ಭತ್ತದ ಗದ್ದೆ ಒಂದು ದೇವಾಲಯವಂತೆ ಎಂದು ಅವರು ತಿಳಿದುಕೊಂಡಿದ್ದಾರೆ. ಭತ್ತದ ಗದ್ದೆಗೆ ಹೋಗುವಾಗ ಚಪ್ಪಲನ್ನ ಹೊರಗಡೆ ಇಟ್ಟು ನಾವು ದೇವಾಲಯಕ್ಕೆ ಹೋಗುವಾಗ ಹೇಗೆ ಹೋಗ್ತೀವೋ ಅದೇ ರೀತಿ ಪಾಲಿಸುತ್ತಿದ್ದಾರೆ ಅಂದರೆ ಅಪ್ಪುವಿನಲ್ಲಿ ದೇವರನ್ನ ಕಾಣುತ್ತಿದ್ದಾರೆ. ನಿಜವಾಗಲೂ ಇದು ನೋಡುಗರನ್ನು ಭಾವುಕರನ್ನಾಗಿ ಮಾಡುವಂತಹ ಒಂದು ದೃಶ್ಯವಾಗಿದೆ. ಹಾಗೂ ಅವರ ಭಾವಚಿತ್ರ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದೆ.

 

View this post on Instagram

 

A post shared by YUVA RAJKUMAR (@yuva_rajkumarfc)

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಸದ್ಯಕ್ಕೆ ಬರಲ್ಲ; ಯೋಜನೆಗೆ ಹಣ ಬಿಡುಗಡೆ ಆಗಿಲ್ಲ…ಹಣ ಬರಲ್ಲ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram