18 ಲಕ್ಷದ ವರೆಗೆ ಆದಾಯ ಬರುವವರಿಗೂ ಸಿಗಲಿದೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಸಾಲ; 3 ಲಕ್ಷದವರೆಗೆ ಸಿಗುತ್ತದೆ ಸಬ್ಸಿಡಿ

PM Awas Yojana 2024 Complete Details

ಬಡವರ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆಯ ಕನಸನ್ನು ನೆರವೇರಿಸಲು ಸರ್ಕಾರ 2015 ರಲ್ಲಿ ಆರಂಭವಾಗಿ ಈಗಾಗಲೇ ಯಶಸ್ವಿ ಕಂಡಿತ್ತು. ಈಗ ಈ ಯೋಜನೆಯನ್ನು ಇನ್ನೊಂದಿಷ್ಟು ಜನರಿಗೆ ಸಹಾಯ ಆಗಲೆಂದು ಮತ್ತೆ ಮಧ್ಯಂತರ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಾಣಕ್ಕೆ ಸಾಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದು ಉಳಿದ ಬ್ಯಾಂಕ್ ಅಥವಾ ಸಂಸ್ಥೆಯಲ್ಲಿ ಸಿಗುವ ಹೋಮ್ ಲೋನ್ ಗಳಿಗಿಂತ ವಿಭಿನ್ನವಾಗಿದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸಾಲ ನೀಡುವ ಜೊತೆಗೆ 3 ಲಕ್ಷದ ವರೆಗೆ ಸಬ್ಸಿಡಿ (ಸಹಾಯ ಧನ) ಸಹ ಸಿಗಲಿದೆ. ಈಗಾಗಲೇ 3 ಕೋಟಿಗೂ ಅಧಿಕ ಜನರು ಸಾಲ ಪಡೆದು ಮನೆಯನ್ನು ಕಟ್ಟಿದ್ದಾರೆ.

WhatsApp Group Join Now
Telegram Group Join Now

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ.

  1. ಮೊದಲನೇ ವರ್ಗ :-EWS (economically weaker section), ಈ ವರ್ಗದಲ್ಲಿ ವಾರ್ಷಿಕವಾಗಿ ಮೂರು ಲಕ್ಷ ರೂಪಾಯಿ ಕಡಿಮೆ ಆದಾಯ ಹೊಂದಿರಬೇಕು. ಇವರು ಈ ಯೋಜನೆಯ ಮೂಲಕ 6 ಲಕ್ಷ ರೂಪಾಯಿ ವರೆಗೆ ಸಾಲವನ್ನು ಪಡೆಯಬಹುದು. 20 ವರುಷಗಳ ವರೆಗೆ ಸಾಲ ಮರುಪಾವತಿಗೆ ಅವಕಾಶ ಇರುತ್ತದೆ. ವಾರ್ಷಿಕವಾಗಿ 9% ಬಡ್ಡಿದರ ಇರುತ್ತದೆ. 2,67,280 ರೂಪಾಯಿ ಸಬ್ಸಿಡಿ ಸಿಗುತ್ತದೆ. ಸಬ್ಸಿಡಿ ಹಣ ಕಳೆದು 6.50% ಹಣವನ್ನು ಮಾತ್ರ ಮರುಪಾವತಿ ಮಾಡಬೇಕು.
  2. ಎರಡನೇ ವರ್ಗ :- LIG ( lower income group), ಇದರಲ್ಲಿ ಮೂರರಿಂದ ಆರು ಲಕ್ಷ ರೂಪಾಯಿಯ ವರಗೆ ವಾರ್ಷಿಕ ಆದಾಯ ಬರುವ ಕುಟುಂಬಗಳು ಸೇರುತ್ತವೆ. ಇವರು ಸಹ ಈ ಯೋಜನೆಯ ಮೂಲಕ 6 ಲಕ್ಷ ರೂಪಾಯಿ ವರೆಗೆ ಸಾಲವನ್ನು ಪಡೆಯಬಹುದು. 20 ವರುಷಗಳ ವರೆಗೆ ಸಾಲ ಮರುಪಾವತಿಗೆ ಅವಕಾಶ ಇರುತ್ತದೆ. ವಾರ್ಷಿಕವಾಗಿ 9% ಬಡ್ಡಿದರ ಇರುತ್ತದೆ. 2,67,280 ರೂಪಾಯಿ ಸಬ್ಸಿಡಿ ಸಿಗುತ್ತದೆ. ಸಬ್ಸಿಡಿ ಹಣ ಕಳೆದು 6.50% ಹಣವನ್ನು ಮಾತ್ರ ಮರುಪಾವತಿ ಮಾಡಬೇಕು.
  3. ಮೂರನೇ ವರ್ಗ :- MIG one (middle income group one), ವಾರ್ಷಿಕವಾಗಿ 12 ಲಕ್ಷ ಆದಾಯ ಇರುವ ಕುಟುಂಬಗಳು ಈ ವರ್ಗಕ್ಕೆ ಸೇರುತ್ತಾರೆ. ಇವರು 9 ಲಕ್ಷ ರೂಪಾಯಿ ವರೆಗೆ ಸಾಲವನ್ನು ಪಡೆಯಬಹುದು. ನಿಮ್ಮ ಆದಾಯವನ್ನು ನೋಡಿ ಹೆಚ್ಚಿನ ಹಣವನ್ನು ಪಡೆಯಬಹುದು. ಆದರೆ ಸರ್ಕಾರದ ಸಹಾಯಧನ ಸಿಗುವುದು 9 ಲಕ್ಷ ರೂಪಾಯಿಗೆ ಮಾತ್ರ. 20 ವರುಷಗಳ ವರೆಗೆ ಸಾಲ ಮರುಪಾವತಿಗೆ ಅವಕಾಶ ಇರುತ್ತದೆ. ವಾರ್ಷಿಕವಾಗಿ 9% ಬಡ್ಡಿದರ ಇರುತ್ತದೆ. 2,35,000 ರೂಪಾಯಿ ಸಬ್ಸಿಡಿ ಸಿಗುತ್ತದೆ. ಸಬ್ಸಿಡಿ ಹಣವನ್ನು ಸರ್ಕಾರ ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡುತ್ತದೆ.
  4. ನಾಲ್ಕನೇ ವರ್ಗ :- MIG two (middle income group two) ವಾರ್ಷಿಕವಾಗಿ 18 ಲಕ್ಷ ರೂಪಾಯಿ ಆದಾಯ ಇರುವವರು ಈ ಗುಂಪಿಗೆ ಸೇರುತ್ತಾರೆ. ಇವರು 12 ಲಕ್ಷ ರೂಪಾಯಿಯವರೆಗೆ ಸಾಲವನ್ನು ಪಡೆಯಬಹುದು. ನಿಮ್ಮ ಆದಾಯವನ್ನು ನೋಡಿ ಹೆಚ್ಚಿನ ಹಣವನ್ನು ಪಡೆಯಬಹುದು. ಆದರೆ ಸರ್ಕಾರದ ಸಹಾಯಧನ ಸಿಗುವುದು 12 ಲಕ್ಷ ರೂಪಾಯಿಗೆ ಮಾತ್ರ. ಇದಕ್ಕೂ ಸಹ 20 ವರುಷ ಅವಧಿ ಇರುತ್ತದೆ. ವಾರ್ಷಿಕ 9% ಬಡ್ಡಿದರ ಇರುತ್ತದೆ. 3% ಬಡ್ಡಿದರವನ್ನು ಸರ್ಕಾರ ಸಬ್ಸಿಡಿ ರೂಪದಲ್ಲಿ ನೀಡುತ್ತದೆ.

ಈ ಯೋಜನೆಗೆ ನೀವು ಆನ್ಲೈನ್ ಮೂಲಕ ಹಾಗೂ ಬ್ಯಾಂಕ್ ಗೆ ಹೋಗಿ ಅಪ್ಲೈ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಇದನ್ನೂ ಓದಿ: ಜನಸಾಮಾನ್ಯರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ, ಇನ್ನು ಮುಂದೆ ಅಕ್ಕಿ ಮತ್ತು ಗೋಧಿಯನ್ನು ಬಹಳ ರಿಯಾಯಿತಿಯಲ್ಲಿ ಪಡೆಯಬಹುದು

ಇದನ್ನೂ ಓದಿ: ಸೂರ್ಯೋದಯ ಯೋಜನೆಯ ಅಡಿಯಲ್ಲಿ 300 ಯೂನಿಟ್‌ ಉಚಿತ ವಿದ್ಯುತ್‌ ಪಡೆಯಲಿರುವ ಒಂದು ಕೋಟಿ ಕುಟುಂಬಗಳು, ಕೇಂದ್ರ ಬಜೆಟ್ ಮಂಡನೆ