ಹೊಸ ಮನೆ ಕಟ್ಟೋರಿಗೆ ಖುಷಿ ಸುದ್ದಿ; ಸ್ವಂತ ಮನೆ ಕನಸು ಕಂಡವರಿಗೆ ಸಿಗಲಿದೆ ದೊಡ್ಡ ಮೊತ್ತ

PM Awas Yojana Benefits

ಬಾಡಿಗೆ ಮನೆಯಿಂದ ಸ್ವಂತ ಮನೆಯ ಮಾಲೀಕರಾಗುವ ಕನಸು ಕಾಣುವವರಿಗೆ ಶುಭ ಸುದ್ದಿ. ಭಾರತದಲ್ಲಿ ವಾಸಿಸುವ ಲಕ್ಷಾಂತರ ಜನರು ಈಗಾಗಲೇ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಗೃಹ ನಿರ್ಮಾಣ ಮಾಡಿಕೊಂಡಿದ್ದಾರೆ. ಗೃಹ ನಿರ್ಮಾಣ ಮಾಡುವ ಕನಸು ಕಂಡ ಫಲಾನುಭವಿಗಳಿಗೆ ಈಗಲು ಅವಕಾಶವಿದ್ದು, ಅರ್ಜಿ ಸಲ್ಲಿಸಿ ಸಹಾಯ ಪಡೆದುಕೊಳ್ಳಬಹುದು. ಹೌದು ಸರ್ಕಾರದಿಂದ ವಸತಿ ನಿರ್ಮಾಣಕ್ಕೆ ಅನುದಾನ ಸಿಗುವುದರ ಜೊತೆಗೆ ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯ ಮೂಲಕ ಸಾಕಷ್ಟು ಜನರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಅದರಲ್ಲೂ ಬೆಂಗಳೂರು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಸತಿ ಯೋಜನೆ ಅಡಿಯಲ್ಲಿ 7.5 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ನೀಡಲಾಗುತ್ತಿದೆ.

WhatsApp Group Join Now
Telegram Group Join Now

ಇನ್ನು ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೆ ಮನೆ ನಿರ್ಮಾಣ ಮಾಡಿಕೊಡುವ ಕನಸು ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಮಸ್ಯೆಯಿಂದ ಪೂರ್ಣವಾಗಿರಲಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2024/ನೇ ಸಾಲಿನಲ್ಲಿ ಹೆಚ್ಚು ಪ್ರಯೋಜನ ನೀಡಲು ಮುಂದಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆ ನಿರ್ಮಾಣವನ್ನು ರಾಜೀವ್ ಗಾಂಧಿ ವಸತಿ ಯೋಜನೆಯ ಮೂಲಕ ಮಾಡಲಾಗುತ್ತಿದ್ದು, ಈಗಾಗಲೇ 52,189 ಮನೆ ನಿರ್ಮಾಣ ಮಾಡಲಾಗಿದೆ. ಜನರಿಗೆ ಸ್ವಂತ ಸೂರು ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 3.5 ಲಕ್ಷ ರೂಪಾಯಿಗಳು ದೊರೆತರೆ ರಾಜ್ಯ ಸರ್ಕಾರದಿಂದ ಮೂರು ಲಕ್ಷ ರೂಪಾಯಿಗಳನ್ನು ಸಹಾಯಧನ ರೂಪದಲ್ಲಿ ನೀಡಲಾಗುತ್ತದೆ. ಹಾಗಾದ್ರೆ ಈ ಯೋಜನೆಯ ಲಾಭ ಯಾರೆಲ್ಲ ಪಡೆಯಬಹುದು? ಅರ್ಜಿ ಸಲ್ಲಿಸೋದು ಹೇಗೆ? ಮತ್ತು ಎಲ್ಲಿ? ಏನೆಲ್ಲಾ ದಾಖಲೆಗಳು ಬೇಕು ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗೃಹ ನಿರ್ಮಾಣ ಮಾಡಬೇಕೆನ್ನುವವರು ಈಗಲೇ ಅರ್ಜಿ ಸಲ್ಲಿಸಿ

ಅವಾಸ್ ಯೋಜನೆಯ ಅಡಿಯಲ್ಲಿ ಸ್ವಂತ ಮನೆ ಕಟ್ಟಲು ಬಯಸುವವರು ಈ ಮೊದಲೇ ಆವಾಸ್ ಯೋಜನೆಯ ಪ್ರಯೋಜನ ಪಡೆದುಕೊಂಡಿರುವವರು ಇಲ್ಲವೇ ಸ್ವಂತ ಮನೆ ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಮುಖ್ಯವಾಗಿ ಅವಾಸ್ ಯೋಜನೆಯ ಅರ್ಜಿಯನ್ನು ಮಹಿಳೆಯರು ಮಾತ್ರ ಸಲ್ಲಿಸಬಹುದು. ಇನ್ನು ಕೇಂದ್ರ ಸರ್ಕಾರದ 2011ರ ಆರ್ಥಿಕ ಮತ್ತು ಸಾಮಾಜಿಕ ಜನಗಣತಿ ಪಟ್ಟಿಯಲ್ಲಿ ಅರ್ಜಿ ಸಲ್ಲಿಸುವವರ ಹೆಸರಿರಬೇಕು. ಜೊತೆಗೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರವೇ ಅದರಲ್ಲಿಯೂ ಪುರುಷರಾಗಿದ್ದರು ಕೂಡ ಅರ್ಜಿ ಸಲ್ಲಿಸಬಹುದು. ಮಾಜಿ ಯೋಧರು, ವಿಶೇಷ ಚೇತನರು ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇನ್ನು 450 ಚದರ ಮೀಟರ್ ಜಾಗ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆದ್ರೆ ಸ್ವಂತ ಮನೆ ಹೊಂದಿರಬಾರದು. ಆದರೂ ಸ್ವಂತ ಮನೆ ನಿರ್ಮಾಣಕ್ಕೆ ಸ್ವಂತ ಜಮೀನು ಇಲ್ಲವೇ ಜಾಗ ಹೊಂದಿರಬೇಕಾಗಿದೆ. ಇನ್ನು ಅರ್ಜಿ ಸಲ್ಲಿಸುವವರು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅರ್ಜಿ ಫಾರಂನಲ್ಲಿ ಅಗತ್ಯ ಇರುವ ಮಾಹಿತಿಯನ್ನು ಪೂರೈಸಿ ಬಳಿಕ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕು. ಅಲ್ದೇ ಮುಂಗಡ ಹಣವನ್ನು ಆನ್ನೈನ್ ಮೂಲಕವೇ ಪಾವತಿ ಮಾಡಬೇಕಾಗುತ್ತದೆ.

ಇನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಅನೇಕ ಪ್ರಯೋಜನಗಳಿವೆ. ಹೌದು ಜೀವನದಲ್ಲಿ ಎಷ್ಟು ಜನರಿಗೆ ವಸತಿ ಸೌಲಭ್ಯ ಪಡೆಯುವ ಆಸೆ ಇರುತ್ತೆ ಇದಲ್ಲದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಅಡಿಯಲ್ಲಿ ನೀವು ಪ್ರಯೋಜನ ಪಡೆಯುತ್ತೀರಾ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ತಿಳಿದುಕೊಳ್ಳಬಹುದು. ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ ಸರ್ಕಾರ ಖಂಡಿತವಾಗಿಯೂ ನಿಮಗೆ ವಸತಿಗೆ ಆರ್ಥಿಕ ಸಹಾಯ ಮಾಡುತ್ತದೆ. ಹೀಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಅಡಿಯಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ಭಾರತದ ಗ್ರಾಮೀಣ ನಾಗರಿಕರು ಸೌಲಭ್ಯ ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ, ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಲು ಭಾರತ ಸರ್ಕಾರವು ನಿಮಗೆ ನೀಡುವ ಸಹಾಯಾವನ್ನ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಉಚಿತ ಹೊಲಿಗೆ ಯಂತ್ರ ಪಡೆಯಲು ಹೀಗೆ ಮಾಡಿ; ಅರ್ಜಿ ಸಲ್ಲಿಸಿ ಉಚಿತವಾಗಿ ಹೊಲಿಗೆ ಯಂತ್ರ ಪಡೆಯಿರಿ