ಪಿಎಂ ಆವಾಸ್ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

PM Awas Yojana Eligibility

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಕೇಂದ್ರ ಸರ್ಕಾರದ ಉತ್ತಮ ಯೋಜನೆ ಆಗಿದ್ದು ಇದು ಗ್ರಾಮೀಣ ವರ್ಗದ ಹಾಗೂ ಬಡ ವರ್ಗದ ಸೂರು ಇಲ್ಲದ ಕುಟುಂಬಕ್ಕೆ ಮನೆ ಒದಗಿಸಿಕೊಡುವ ಸದುದ್ದೇಶದಿಂದ ಆರಂಭ ಆಗಿರುವ ಯೋಜನೆ ಆಗಿದೆ. ಈ ಯೋಜನೆಯನ್ನು ನರೇಂದ್ರ ಮೋದಿ ಅವರು ಜೂನ್ 25 2015 ನೇ ತಾರೀಖಿನ ದಿನ ಜಾರಿಗೆ ತಂದರು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂಬ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಯಾರಿಗೆ ಈ ಯೋಜನೆಯ ಲಾಭ ಸಿಗುತ್ತದೆ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳು ಇವೆ. ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ್ಯಾವ ನಿಯಮಗಳು ಇವೆ ಎಂದು ನೋಡೋಣ.

1) ಸ್ವಂತ ಮನೆ:- ಈ ಯೋಜನೆಗೆ ಅರ್ಜಿ ಸಲ್ಲಿಸುವ ಕುಟುಂಬದ ಸದಸ್ಯರ ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಸ್ವಂತ ಮನೆಯು ಇರಬಾರದು. ಬಾಡಿಗೆ ಮನೆಯ ಇರುವ ಬಗ್ಗೆ ನಿಖರವಾದ ದಾಖಲೆಗಳನ್ನು ಸಲ್ಲಿಸಬೇಕು.

2) ಭಾರತೀಯ ನಾಗರಿಕ :- ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಭಾರತದ ನಾಗರಿಕರು ಆಗಿರಬೇಕು. ಅರ್ಜಿ ಸಲ್ಲಿಸುವಾಗ ವಿಳಾಸದ ಪುರಾವೆ ಜೊತೆಗೆ ಭಾರತೀಯ ಎಂಬ ದಾಖಲೆಯೂ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

3) ಕುಟುಂಬದ ಆದಾಯ :- ಯೋಜನೆಗೆ ಅರ್ಜಿ ಸಲ್ಲಿಸಲು ಕುಟುಂಬದ ಆದಾಯ ಪ್ರಮಾಣ ಪತ್ರವನ್ನು ನೀಡಬೇಕು. ಕುಟುಂಬದ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು ಹಾಗೂ ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ನೌಕರಿ ಹೊಂದಿರಬಾರದು.

4) ಹಿಂದುಳಿದ ವರ್ಗ:- ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಮಾಜದಲ್ಲಿ ಹಿಂದುಳಿದ ವರ್ಗಗಗಳಾದ ಪರಿಶಿಷ್ಟ ಜಾತಿ ಹಾಗೂ ಪಂಗಡ ಅಭ್ಯರ್ಥಿಗಳು ಅರ್ಹರು.

5) ಮಹಿಳೆ ಅಥವಾ ಅಂಗವಿಕಲ:- ಈ ಯೋಜನೆಗೆ ಮಹಿಳೆಯರು ಅಥವಾ ಅಂಗವಿಕಲರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮಹಿಳೆಯರು ಮನೆಯ ಮುಖ್ಯಾ ಸದಸ್ಯರು ಆಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

6) ಪ್ರಥಮ ಬಾರಿಗೆ ಅರ್ಜಿ ಸಲ್ಲಿಸುವವರು:- ಸರ್ಕಾರದ ಯಾವುದೇ ಅವಸ್ ಯೋಜನೆಗಳಲ್ಲಿ ಈಗಾಗಲೇ ಮನೆ ನಿರ್ಮಾಣ ಮಾಡಿದ್ದಾರೆ ಅಥವಾ ಅರ್ಜಿ ಸಲ್ಲಿಸಿದ್ದಾರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಾರದು.

ಇದನ್ನೂ ಓದಿ: ಮೇ 1ರಿಂದ ನಿಮ್ಮ ಸ್ಥಳೀಯ ಅಂಗಡಿಗಳಲ್ಲಿ Oneplus ಫೋನ್ ಅನ್ನು ಖರೀದಿಸಲು ಸಾಧ್ಯವಿಲ್ಲ!? ಕಾರಣ ಏನಿರಬಹುದು?

ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು :-

ಯೋಜನೆಗೆ ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳ ಪಟ್ಟಿ ಇಲ್ಲಿದೆ..

  1. ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್.
  2. ಪಾಸ್ಪೋರ್ಟ್ ಸೈಜ್ ಫೋಟೋ.
  3. ವಿಳಾಸದ ಪುರಾವೆ.
  4. ಮನೆ ಬಾಡಿಗೆಯನ್ನು ನೀಡುವ ಬಗ್ಗೆ ಮಾಹಿತಿ.
  5. ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಪ್ರತಿ.

ಪ್ರಧಾನಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ: ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ನೀವು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ನೀವು ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀವು ಪಿಎಂ ಆವಾಸ್ ಯೋಜನೆಯ ಅಧಿಕೃತ ಪೋರ್ಟಲ್ http://pmayg.nic.in/ ಗೆ ತೆರಳಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ನೀವು ಅರ್ಜಿಯನ್ನು ಹಾಕಬಹುದು. 

ಯೋಜನೆಯ ಲಾಭಗಳು :-

  1. ತಾತ್ಕಾಲಿಕ ಮನೆಗಳಲ್ಲಿ ವಾಸಿಸುವ ಜನರು ಈ ಯೋಜನೆಯಡಿ ಶಾಶ್ವತ ಮನೆಗಳನ್ನು ಪಡೆಯಲು ಸಹಾಯ ಮಾಡುತ್ತಾರೆ.
  2. ಯಾವುದೇ ವ್ಯಕ್ತಿಗೆ ಭೂಮಿ ಹೊಂದಿದ್ದರೆ ಅವನು ಮನೆ ನಿರ್ಮಿಸಲು ಈ ಯೋಜನೆಯ ಮೂಲಕ ಆರ್ಥಿಕ ಸಹಾಯವನ್ನು ಪಡೆಯಲು ಸಾಧ್ಯವಿದೆ.
  3. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 2.5 ಲಕ್ಷದವರೆಗೆ ಸಬ್ಸಿಡಿ ಸಿಗುತ್ತದೆ.
  4. ಈ ಯೋಜನೆಯಲ್ಲಿ ಕುಟುಂಬದ ಆದಾಯ ಮತ್ತು ಸಾಲದ ಆಧಾರದ ಮೇಲೆ ಸರ್ಕಾರ ಸಾಲ ನೀಡುತ್ತದೆ.

ಇದನ್ನೂ ಓದಿ: ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಇನ್ನು ಮುಂದೆ 24 ಗಂಟೆಗಳ ಒಳಗೆ ನಿಮಗೆ ಹಣ ಸಿಗುತ್ತದೆ.