ನಮ್ಮ ದೇಶದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಿಗೂ ಕೂಡ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹೌದು ಸರ್ಕಾರದಿಂದ ಸಾಲ ಸೌಲಭ್ಯದ ಜೊತೆಗೆ ಸಬ್ಸಿಡಿ ಕೂಡ ನೀಡಲಾಗುತ್ತದೆ, ಏಕೆಂದರೆ ಉದ್ಯಮ ಮಾಡುವವರಿಗೆ, ಕೃಷಿ ಮಾಡುವವರಿಗೆ ಸಾಕಷ್ಟು ಅನುಕೂಲವಾಗಬೇಕು ಅನ್ನೋ ನಿಟ್ಟಿನಲ್ಲಿ ಕೆಲವೊಂದಷ್ಟು ಯೋಜನೆಗಳನ್ನ ಜಾರಿಗೆ ತಂದು ಆ ಮೂಲಕ ದೇಶದ ಅನ್ನದಾತನ ಕೈ ಬಲಪಡಿಸುವ ಕೆಲಸವನ್ನ ಕೇಂದ್ರ ಸರ್ಕಾರ ಮಾಡ್ತಿದೆ. ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚಿಗೆ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದರು, ಈ ಯೋಜನೆಯ ಅಡಿಯಲ್ಲಿ ಕರಕುಶಲ ಕೆಲಸ ಮಾಡುವ ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ವರ್ಗಕ್ಕೆ ಯಾವುದೇ ಮೇಲಾಧಾರವು ಇಲ್ಲದೆ ಬಡ್ಡಿರಹಿತ ಸಾಲವನ್ನು ನೀಡುವುದರ ಜೊತೆಗೆ ಅಷ್ಟೇ ಉಚಿತ ತರಬೇತಿಯನ್ನು ಕೂಡ ನೀಡಿ ಅವರ ಕೌಶಲ್ಯವನ್ನು ಇನ್ನಷ್ಟು ಹೆಚ್ಚಿಸಿ ವೃತ್ತಿ ಜೀವನವನ್ನು ಇನ್ನಷ್ಟು ಆರ್ಥಿಕವಾಗಿ ಬಲಪಡಿಸಿಕೊಳ್ಳುವಂತೆ ಮಾಡುವ ಸದುದ್ದೇಶ ಈ ಯೋಜನೆಯದ್ದಾಗಿತ್ತು. ಇದೀಗ ರೈತರ ಹಿತ ಕಾಯಲು ಕೇಂದ್ರ ಸರ್ಕಾರ ಮತ್ತೊಂದು ವ್ಯವಸ್ಥಿತ ಪ್ಲಾನ್ ಮಾಡಿದ್ದು ಅನ್ನದಾತನಿಗೆ ಈ ಮೂಲಕ ಬಂಪರ್ ಕೊಡುಗೆ ನೀಡಿದ್ದಾರೆ.
ಹೌದು ಪಿಎಂ ಕಿಸಾನ್ ರೈತರಿಗೆ ಸಾಲ ನೀಡಲು ಕೇಂದ್ರ ಸರ್ಕಾರ ವಿಶೇಷ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಪಿಎಂ ಕಿಸಾನ್ ರಿನ್ ಪೋರ್ಟಲ್ ಹೆಸರಿನ ಈ ವೆಬ್‌ಸೈಟ್ ಅನ್ನು ಕೆಲವು ದಿನಗಳ ಹಿಂದೆ ಪ್ರಾರಂಭಿಸಲಾಯಿತು. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಪಿಎಂ ಕಿಸಾನ್ ರೈತರಿಗೆ ಸಾಲವನ್ನು ಒದಗಿಸುವುದು ಈ ವೆಬ್‌ಸೈಟ್‌ನ ಉದ್ದೇಶವಾಗಿದೆ. ಇನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಎಲ್ಲಾ ರೈತರಿಗೆ ಲಭ್ಯವಿದೆ. ಆದರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿರುವ ಅನೇಕ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನಗಳು ಇನ್ನೂ ಸಿಕ್ಕಿಲ್ಲ. ಹೌದು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಇನ್ನೂ ತೆಗೆದುಕೊಳ್ಳದ ಲಕ್ಷಾಂತರ ರೈತರಿದ್ದಾರೆ.
ಇದುವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್(Kisan Credit Card) ಯೋಜನೆ ಮೂಲಕ ಸಾಲ ಪಡೆಯದ ರೈತರಿಗೆ ಮಾಹಿತಿ ನೀಡಿ, ಸಾಲ ನೀಡಲು ಕೇಂದ್ರ ಸರ್ಕಾರ ಘರ್ ಘರ್ ಕೆಸಿಸಿ ಅಭಿಯಾನ ಎಂಬ ಹೆಸರಿನಲ್ಲಿ ಮನೆ ಮನೆಗೆ ಅಭಿಯಾನ ನಡೆಸುತ್ತಿದೆ. ಹೊಸದಾಗಿ ಪ್ರಾರಂಭಿಸಲಾದ ಪಿಎಂ ಕಿಸಾನ್ ಪೋರ್ಟಲ್ ಮೂಲಕ ರೈತರಿಗೆ ಸಾಲ ನೀಡಲು ಸರ್ಕಾರ ಮುಂದಾಗಿದೆ. ಹೌದು ರೈತರು ಕಿಸಾನ್ ಪೋರ್ಟಲ್ ವೆಬ್ಸೈಟ್ ಗೆ ಹೋಗಿ ಲಾಗಿನ್ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ಸಂಖ್ಯೆ, ಪಾಸ್‌ವರ್ಡ್, ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಲಾಗಿನ್ ಮಾಡಿ. ಅದರ ನಂತರ ರೈತರು ತಮ್ಮ ವಿವರಗಳೊಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು. ಬ್ಯಾಂಕ್‌ಗಳು ಈ ವಿವರಗಳನ್ನು ಪರಿಶೀಲಿಸಿದ ನಂತರ ಅರ್ಹ ರೈತರಿಗೆ ಸಾಲ ನೀಡುತ್ತವೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಪಿ.ಎಂ ಕಿಸಾನ್ ಯೋಜನೆಯಡಿ ಸಿಗಲಿದೆ 3ಲಕ್ಷ ಹಣ ಸಾಲ
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ 1998 ರಲ್ಲಿ ಪ್ರಾರಂಭವಾಯಿತು. ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ಜಂಟಿಯಾಗಿ ಈ ಯೋಜನೆಯನ್ನು ಪ್ರಾರಂಭಿಸಿವೆ. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ರೈತರಿಗೆ ಕೇವಲ ಶೇ.4ರ ಬಡ್ಡಿ ದರದಲ್ಲಿ ರೂ.3 ಲಕ್ಷದವರೆಗೆ ಸಾಲ ನೀಡುತ್ತದೆ. ಎಲ್ಲಾ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಸಾಲ ಪಡೆಯಬಹುದು. ಬೆಳೆಗಳನ್ನು ಬೆಳೆಯಲು ಅಲ್ಪಾವಧಿ ಸಾಲದ ಅವಶ್ಯಕತೆಗಳನ್ನು ಪೂರೈಸಲು ಬ್ಯಾಂಕುಗಳಿಂದ ಸಾಲವನ್ನು ಪಡೆಯಬಹುದು. ಸದ್ಯ 97 ವಾಣಿಜ್ಯ ಬ್ಯಾಂಕ್‌ಗಳು, 58 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು 512 ಸಹಕಾರಿ ಬ್ಯಾಂಕ್‌ಗಳು ಪಿಎಂ ಕಿಸಾನ್ ಸಾಲ ಪೋರ್ಟಲ್‌ಗೆ ಸೇರ್ಪಡೆಗೊಂಡಿವೆ.
ಅಂದರೆ ಈ ಎಲ್ಲಾ ಬ್ಯಾಂಕುಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು ಸಾಲವನ್ನು ಪಡೆಯಬಹುದು. ಆದರೆ, ಕೇಂದ್ರ ಸರ್ಕಾರದಿಂದ ರೂ.3 ಲಕ್ಷದವರೆಗೆ ಬಡ್ಡಿ ಸಹಾಯಧನ ಲಭ್ಯವಿದೆ. ಸಾಮಾನ್ಯವಾಗಿ ರೈತರು ರೂ.3 ಲಕ್ಷದವರೆಗೆ ಸಾಲ ಪಡೆದರೆ ವಾರ್ಷಿಕ ಬಡ್ಡಿ ದರ ಶೇ.7.3 ರಷ್ಟು ಬಡ್ಡಿ ಇರುತ್ತೆ. ಆದ್ರಿಗ ಇದಕ್ಕೆ ಸಬ್ಸಿಡಿ ಕೇಂದ್ರ ಸರ್ಕಾರದಿಂದ ಲಭ್ಯವಿದೆ. ಹಾಗಾಗಿ ರೈತರು ರೂ.3 ಲಕ್ಷದವರೆಗಿನ ಸಾಲಕ್ಕೆ ಶೇ.4ರಷ್ಟು ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ರೂ.3 ಲಕ್ಷಕ್ಕಿಂತ ಹೆಚ್ಚಿನ ಸಾಲಗಳ ಬಡ್ಡಿದರಗಳನ್ನು ಬ್ಯಾಂಕ್‌ಗಳು ನಿರ್ಧರಿಸುತ್ತವೆ. ಹೀಗಾಗಿ ಅವಶ್ಯಕತೆ ಇರುವಂತಹ ಅನ್ನದಾತರು ಒಮ್ಮೆ ವೆಬ್ಸೈಟ್ ಗೆ ಭೇಟಿ ನೀಡಿ ಇನ್ನು ಹೆಚ್ಚಿನ ಮಾಹಿತಿ ಪಡೆದು ಸಾಲ ಸೌಲಭ್ಯವನ್ನ ಪಡೆಯಬಹುದು.
ಇದನ್ನೂ ಓದಿ: ಕೇವಲ 10000 ಡೌನ್ ಪೇಮೆಂಟ್ ನೊಂದಿಗೆ ಹೀರೋ ಎಲೆಕ್ಟ್ರಿಕ್ AE 75 ಫ್ಯಾಮಿಲಿ ಸ್ಕೂಟರ್ ಅನ್ನು ಖರೀದಿಸಿ.
ಇದನ್ನೂ ಓದಿ: ಪದವಿಯಲ್ಲಿ ಓದುತ್ತಿರುವವರಿಗೆ ಸಿಹಿ ಸುದ್ದಿ, U go ದಿಂದ 40,000 ಇಂದ 60,000 ವರೆಗೆ ವಾರ್ಷಿಕ ವೇತನವನ್ನು ಪಡೆಯಿರಿ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram