ದೀಪಾವಳಿ ಹಬ್ಬಕ್ಕೆ ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ಬರಲಿದೆ ಹಣ; 15ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ?

ಕೇಂದ್ರ ಸರ್ಕಾರ ರೈತರಿಗೆ ಗುಡ್‌ ನ್ಯೂಸ್‌ ನೀಡೋದಕ್ಕೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಹೌದು ಪಿಎಂ ಕಿಸಾನ್‌ ಯೋಜನೆಗೆ(PM Kisan Yojana) ಸೇರಿಕೊಂಡಿರುವ ಅನ್ನದಾತರಿಗೆ ಇದು ಸಂತಸದ ಸುದ್ದಿ ಎಂದರೆ ತಪ್ಪಾಗಲ್ಲ. ಕೃಷಿಯಲ್ಲಿ ತೊಡಗುವ ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒಂದಿಷ್ಟು ಸಹಾಯಧನ ಒದಗಿಸಲು 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM Kisan Samman Nidhi Yojana) ಆರಂಭಿಸಿತು. ಅದರಂತೆ ವರ್ಷಕ್ಕೆ 3 ಕಂತುಗಳಲ್ಲಿ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರಿಗೆ ಒದಗಿಸಲಾಗುತ್ತದೆ. ಇನ್ನು ಈಗಾಗಲೇ ಕೇಂದ್ರ ಸರ್ಕಾರ 14ಕಂತುಗಳ ಹಣವನ್ನ ರೈತರ ಖಾತೆಗೆ ಜಮೆ ಮಾಡಿದೆ. ಇನ್ನು ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣವನ್ನು ರೈತರ ಖಾತೆಗೆ ಈ ಬಾರಿ ಅವಧಿಗೂ ಮೊದಲೇ ಜಮಾ ಮಾಡಬಹುದೆಂಬ ವರದಿಗಳಿವೆ. ಹೀಗೇನಾದ್ರೂ ಆದ್ರೆ, ಅನೇಕ ಜನರಿಗೆ ಪ್ರಯೋಜನವಾಗುತ್ತದೆ. ಹಬ್ಬ ಹರಿದಿನಗಳ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಈ ನಿರ್ಧಾರವನ್ನು ಕೈಗೊಳ್ಳಬಹುದು ಎಂದು ವರದಿಗಳು ತಿಳಿಸಿವೆ.

WhatsApp Group Join Now
Telegram Group Join Now

ಕೇಂದ್ರ ಸರ್ಕಾರ ವಾರ್ಷಿಕ ರೂ. 6 ಸಾವಿರ ನೀಡಲಾಗುತ್ತದೆ. ಈ ಹಣವನ್ನು ಅನ್ನದಾತರ ಬ್ಯಾಂಕ್ ಖಾತೆಗೆ ಒಂದೇ ಬಾರಿಗೆ ಬದಲಾಗಿ ಮೂರು ಕಂತುಗಳಲ್ಲಿ ಜಮಾ ಮಾಡಲಾಗುತ್ತದೆ. ಈ ಹಣ ನಾಲ್ಕು ತಿಂಗಳಿಗೊಮ್ಮೆ ಬರುತ್ತಿದೆ. ಈಗಾಗಲೇ 14 ಕಂತು ಹಣ ಬಂದಿದೆ. ಈಗ 15ನೇ ಕಂತು ಬಾಕಿ ಇದೆ. ಹೌದು ಒಮ್ಮೆ ಏಪ್ರಿಲ್ – ಜುಲೈ ಅವಧಿಗೆ, ಮತ್ತೊಮ್ಮೆ ಆಗಸ್ಟ್ – ನವೆಂಬರ್ ಅವಧಿಗೆ ಮತ್ತು ಮತ್ತೊಮ್ಮೆ ಡಿಸೆಂಬರ್ ನಿಂದ ಮಾರ್ಚ್ ಅವಧಿಗೆ ಬರುತ್ತೆ. ಏಪ್ರಿಲ್ ಮತ್ತು ಜುಲೈ ನಡುವೆ ಯಾವಾಗ ಬೇಕಾದರೂ ಹಣ ರೈತರಿಗೆ ತಲುಪಬಹುದು. ಅಲ್ಲದೆ, ಆಗಸ್ಟ್ ನಿಂದ ನವೆಂಬರ್ ವರೆಗೆ ಯಾವಾಗ ಬೇಕಾದರೂ ಹಣ ಬರಬಹುದು. ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಯಾವುದೇ ಸಮಯದಲ್ಲಿ ರೈತರಿಗೆ ಹಣ ತಲುಪಬಹುದು. ಹೀಗಾಗಿ ನವೆಂಬರ್ ತಿಂಗಳಲ್ಲಿ 15ನೇ ಕಂತಿನ ಹಣ ಬಿಡುಗಡೆ ಆಗುವ ನಿರೀಕ್ಷೆ ಇದ್ದು ವರದಿಗಳ ಪ್ರಕಾರ ನವೆಂಬರ್ ಮೊದಲ ವಾರದಲ್ಲಿಯೇ 2,000 ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್

ಇನ್ನು ಪಿಎಂ ಕಿಸಾನ್ ಯೋಜನೆಯ(PM Kisan Yojana) 14 ನೇ ಕಂತು ಜುಲೈನಲ್ಲಿ ಬಿಡುಗಡೆಯಾಗಿದ್ದು, ಈಗ 15 ನೇ ಕಂತು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಯೋಜನೆಯಡಿ ಇನ್ನೂ ಇಕೆವೈಸಿ(E-KYC) ಮಾಡದ ರೈತರು, ಅದನ್ನು ಆದಷ್ಟು ಬೇಗ ಮಾಡಬೇಕು, ಇಲ್ಲದಿದ್ದರೆ ಅವರು 15 ನೇ ಕಂತಿನ ಪ್ರಯೋಜನವನ್ನು ಪಡೆಯಲು ಸಾಧ್ಯವಾಗೋದಿಲ್ಲ. ಇನ್ನು ಇಕೆವೈಸಿ ಮಾಡಲು, ನಿಮಗೆ ಆಧಾರ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಬೇಕು. ಇನ್ನು ನೀವು ಈ ಯೋಜನೆಗೆ ಅರ್ಜಿ ಸಲ್ಲಿಸದಿದ್ದರೆ, ಪಿಎಂ ಕಿಸಾನ್ ಯೋಜನೆಯ(PM Kisan Yojana) ಅಧಿಕೃತ ಪೋರ್ಟಲ್ಗೆ ಭೇಟಿ ನೀಡುವ ಮೂಲಕ ನೀವು ಅದನ್ನು ಮಾಡಬಹುದು.

ಪಿಎಂ ಕಿಸಾನ್ ವೆಬ್ಸೈಟ್ ಪ್ರಕಾರ, ಪಿಎಂ ಕಿಸಾನ್ ನೋಂದಾಯಿತ ರೈತರು ಇಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಒಟಿಪಿ ಆಧಾರಿತ ಇಕೆವೈಸಿಯನ್ನು ಪಿಎಂ ಕಿಸಾನ್ ಪೋರ್ಟಲ್ ಅಥವಾ ಹತ್ತಿರದ ಸಿಎಸ್ಸಿ ಕೇಂದ್ರದಿಂದ ಕೂಡ ನೀವು ಮಾಡಬಹುದು. ಇನ್ನು ಹಣ ಜಮಾವಣೆ ಕುರಿತಂತೆ, ಪಿಎಂ ಕಿಸಾನ್ 15 ನೇ ಕಂತಿನ ಹಣದ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದ್ರೆ ವರದಿಗಳ ಪ್ರಕಾರ, ದಸರಾ ಅಥವಾ ದೀಪಾವಳಿಯಂದು ರೈತರ ಬ್ಯಾಂಕ್ ಖಾತೆಗಳಿಗೆ ಪಿಎಂ ಕಿಸಾನ್ ಹಣವನ್ನು ಜಮಾ ಮಾಡುವ ಸಾಧ್ಯತೆಯಿದೆ. ಹೀಗಾಗಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಕೃಷಿಯಲ್ಲಿ ತೊಡಗುವ ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒಂದಿಷ್ಟು ಸಹಾಯಧನ ಒದಗಿಸಲು 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿತು. ಅದರಂತೆ ವರ್ಷಕ್ಕೆ 3 ಕಂತುಗಳಲ್ಲಿ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರಿಗೆ ಒದಗಿಸಲಾಗುತ್ತದೆ. ಸುಮಾರು 10 ಕೋಟಿ ಆಸುಪಾಸಿನ ಸಂಖ್ಯೆಯಷ್ಟು ಫಲಾನುಭವಿಗಳು ಈ ಯೋಜನೆಯಲ್ಲಿದ್ದಾರೆ. ಒಂದು ಹಣಕಾಸು ವರ್ಷದಲ್ಲಿ 3 ಕಂತುಗಳಲ್ಲಿ, ಅಂದರೆ ಏಪ್ರಿಲ್​ನಿಂದ ಜುಲೈವರೆಗೆ, ಆಗಸ್ಟ್​ನಿಂದ ನವೆಂಬರ್​ವರೆಗೆ, ಡಿಸೆಂಬರ್​ನಿಂದ ಮಾರ್ಚ್​ವರೆಗಿನ ಅವಧಿಗೆ 2,000 ರೂ ಹಣವನ್ನು ಸರ್ಕಾರ ರೈತರಿಗೆ ನೀಡುತ್ತದೆ.

ಸರ್ಕಾರ ಇಲ್ಲಿಯವರೆಗೆ 15 ಕಂತುಗಳಲ್ಲಿ ಒಟ್ಟು 2.5 ಲಕ್ಷಕೋಟಿ ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದೆ. ಅದರಂತೆ, ನವೆಂಬರ್ ತಿಂಗಳಲ್ಲಿ 15ನೇ ಕಂತಿನ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ನವೆಂಬರ್ ಮೊದಲ ವಾರದಲ್ಲಿ 2,000 ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಆದ್ರೆ ಅಧಿಕೃತವಾಗಿ ಸರ್ಕಾರ ಹಣ ವರ್ಗಾವಣೆ ಕುರಿತು ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ದೀಪಾವಳಿ ಕೊಡುಗೆ : ಹೋಂಡಾ ಎಸ್ ಪಿ 125 ನಲ್ಲಿ ಭರ್ಜರಿ ರಿಯಾಯಿತಿ, ಲಿಮಿಟೆಡ್ ಆಫರ್

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ನಿಮಗೆ ಸಿಗಲಿದೆ 6 ಸಾವಿರ ಯಾರಿಗೆಲ್ಲಾ ಸಿಗಲಿದೆ ಈ ಹಣ? ಸಂಪೂರ್ಣ ಮಾಹಿತಿ ಇಲ್ಲಿದೆ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram