ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಭಾರತೀಯ ರೈತರ ಸಹಾಯಕ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಕೃಷಿಕರಿಗೆ ವರ್ಷಕ್ಕೆ 3 ಸಲ ಹಣವನ್ನು ವಿತರಿಸಲಾಗುತ್ತದೆ, ಅದರಲ್ಲಿ ಪ್ರತಿ ಬಾರಿಯೂ 2,000 ರೂಪಾಯಿ ಜಮೆ ಆಗುತ್ತದೆ. ಈ ಯೋಜನೆಯ ಉದ್ದೇಶ ದೇಶದ ಕೃಷಿಕರಿಗೆ ನೆರವಾಗುವುದರ ಜೊತೆಗೆ ರೈತಾಪಿಯನ್ನು ಬೆಂಬಲಿಸುವುದು ಇದರ ಉದ್ದೇಶವಾಗಿದೆ. 2023ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆ ಸಾಮಾನ್ಯವಾಗಿ ರೈತರ ಖಾತೆಗೆ ಹಣ ಜಮೆ ಮಾಡುತ್ತದೆ ಮತ್ತು ಕೃಷಿಕರಿಗೆ ನೆರವಾಗುವ ಮೂಲಕ ರೈತರಿಗೆ ಬೆಂಬಲವನ್ನು ನೀಡುತ್ತದೆ.
ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ವರ್ಷಕ್ಕೆ ಮೂರು ಬಾರಿ ಪಾವತಿಸಲಾಗುತ್ತದೆ. ಪ್ರತಿ ತಿಂಗಳಲ್ಲಿ 2,000 ರೂಪಾಯಿಗಳಂತೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಹಣವನ್ನು ಎಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಮೂರು ತಿಂಗಳಲ್ಲಿ ಒದಗಿಸಲಾಗುತ್ತದೆ. ಈ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮ್ಮಾದಾರರು ವರ್ಗಾಯಿಸುತ್ತಾರೆ. ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತಿನ ಹಣವನ್ನು ಇಂದು( ನವೆಂಬರ್ 15) ಬಿಡುಗಡೆ ಮಾಡಲಾಗಿದೆ, ಜಾರ್ಖಂಡ್ ನ ಕುಂಟಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಇದರ ಬಗ್ಗೆ ಪ್ರಸ್ತಾಪಿಸಲಾಯಿತು 8.5 ಕೋಟಿ ಅರ್ಹ ರೈತರ ಖಾತೆಗಳಿಗೆ 18,000 ಕೋಟಿ ಹಣ ಜಮೆ ಮಾಡಲಾಗಿದೆ.
ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಹೇಗೆ?: ನೀವು ಯೋಜನೆಯ ಫಲಾನುಭವಿಯಾಗಿದ್ದರೆ ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎಂಬುದನ್ನು ನೀವು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಇಲ್ಲಿರುವ ಹೇಳಿದ ವೆಬ್‌ಸೈಟ್ pmkisan.gov.in ಭೇಟಿ ನೀಡಿ. ಪೇಜ್‌ನ ಬಲ ಬದಿಯಲ್ಲಿ ‘Know Your Status’ ಆಯ್ಕೆಯನ್ನು ಒತ್ತಿ, ರಿಜಿಸ್ಟ್ರೇಷನ್ ನಂಬರ್ ಮತ್ತು ಕ್ಯಾಪ್ಚ ಕೋಡ್ ಅನ್ನು ನಮೂದಿಸಿ ‘Get Data’ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿ. ಆಗ ಫಲಾನುಭವಿಯ ವಿವರ, ಹಣ ಜಮೆಯಾದ ಬಗ್ಗೆ ಒಂದಷ್ಟು ಮಾಹಿತಿಗಳು ಬರುತ್ತವೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಪಿಎಂ ಕಿಸಾನ್ ಯೋಜನೆಗೆ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆ
ಕೃಷಿ ಮತ್ತು ಹೊಸದಾಗಿ ಪ್ರಾರಂಭಿಸುವ ಪ್ರಕ್ರಿಯೆಯಲ್ಲಿ ಮುಖ್ಯವಾದ ಹೆಸರು ನೋಂದಾಯಿಸಲು, ನೀವು ನಿಮ್ಮ ಸ್ಥಳೀಯ ಕೃಷಿ ವಿಭಾಗಕ್ಕೆ ಹೋಗಿ ಅಥವಾ ಆ ಕೃಷಿ ವಿಭಾಗದ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಅಲ್ಲಿ ಕೆಲವು ಪ್ರಕ್ರಿಯೆಗಳಿವೆ, ಅದರಲ್ಲಿ ಹೆಸರು ಮತ್ತು ಮಾಹಿತಿ ನೋಂದಾಯಿಸಲು ಕೆಲವೊಂದು ಆಪ್ಷನ್ ಗಳು ಇರುತ್ತವೆ. ನೀವು ಆ ಸೈಟ್‌ಗೆ ಭೇಟಿ ನೀಡಿ, ಆನ್‌ಲೈನ್ ಫಾರಮ್ ಅನ್ನು fill ಮಾಡಬೇಕು ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಅಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ಒಂದು ಫಾರಂ ವಿಂಡೋ ಓಪನ್ ಆಗುತ್ತೆ ಅದರಲ್ಲಿ ನಿಮ್ಮ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ submit ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನೀವು ಈ ರೀತಿ ಮಾಡುವುದರಿಂದ ಆನ್ಲೈನ್ ಮೂಲಕವೇ ನಿಮ್ಮ ಹೆಸರನ್ನು ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿಕೊಳ್ಳಬಹುದು ಅಲ್ಲಿ ನಿರ್ದಿಷ್ಟ ಮಾರ್ಗದರ್ಶನಗಳನ್ನು ಅನುಸರಿಸಿದರೆ ನಿಮಗೆ ಮಾಹಿತಿ ಸಿಗುತ್ತದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಕೂಡ ರೈತರ ಅಭಿವೃದ್ಧಿಗಾಗಿ ಸಾಕಷ್ಟು ಬೆಂಬಲವನ್ನು ನೀಡುತ್ತಿದೆ ರೈತರಿಗೆ ಕೊಡುವ ಸಾಲವಾಗಿರಬಹುದು ಅಥವಾ ಮಾಸಿಕ ವೇತನವಾಗಿರಬಹುದು ಹೀಗೆ ಹತ್ತು ಹಲವಾರು ರೀತಿಯಲ್ಲಿ ರೈತರ ಬೆಂಬಲಕ್ಕೆ ನಿಂತಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: ಟಾಟಾ ಹೆರಿಯರ್ 1.40 ಲಕ್ಷದ ಭರ್ಜರಿ ರಿಯಾಯಿತಿಯೊಂದಿಗೆ ಸಿಗಲಿದೆ. ಆಫರ್ ಪ್ರೈಸ್ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram