PM Kisan Samman Scheme: ಲೋಕಸಭಾ ಚುನಾವಣೆ ಮುನ್ನ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆಯ 2000 ಹಣ ಹೆಚ್ಚಾಗುವ ಸಾಧ್ಯತೆ

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕೇಂದ್ರ ಸರ್ಕಾರ ಹಲವು ಯೋಜನೆಯನ್ನು ಜಾರಿಗೆ ತರುತ್ತಿದೆ. ಸ್ವಲ್ಪ ದಿನಗಳ ಹಿಂದೆ ಎಲ್ಪಿಜಿ ಸಿಲಿಂಡರ್ ನ (LPG Gas Cylinder) ನ ಬೆಲೆಯಲ್ಲಿ ರೂಪಾಯಿ 200ರಷ್ಟು ಇಳಿಕೆಯನ್ನು ಮಾಡಿತ್ತು. ಇನ್ನೂ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆ ಇದೆ. ಹಾಗೆಯೇ 2024ರ ಲೋಕಸಭಾ ಚುನಾವಣೆಗೂ ಮುನ್ನ ರೈತರಿಗೆ ನೀಡುತ್ತಿರುವ ಸಹಾಯದ ಮೊತ್ತದಲ್ಲಿ 2000 ಅಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎಂದು ಕೆಲವೊಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಮತದಾರರನ್ನು ಬಲಪಡಿಸುವ ನಿಟ್ಟಿನಲ್ಲಿ ರೈತರಿಗೆ ನೀಡಲಾಗುವ ಸಹಾಯ ಮೊತ್ತದಲ್ಲಿ 6000 ದಿಂದ 8000ಗಳವರೆಗೆ ಏರಿಕೆಯಾಗಲಿದೆ ಎನ್ನುವ ಸುದ್ದಿ ಹರಡುತ್ತಿದೆ.

WhatsApp Group Join Now
Telegram Group Join Now

ಚುನಾವಣೆಗೂ ಮೊದಲು ರೈತರಿಗೆ ಬಿಗ್ ಸರ್ಪ್ರೈಸ್

ಕೆಲವೊಂದು ವರದಿಗಳ ಪ್ರಕಾರ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ನೀಡಲಾಗುತ್ತಿರುವ ಸಹಾಯಧನದಲ್ಲಿ 6,000 ದಿಂದ 8000 ಏರಿಕೆ ಮಾಡುವ ಸಾಧ್ಯತೆ ಇದೆ, ಆಗಲೇ ಇದರ ಬಗ್ಗೆ ಚರ್ಚೆಯು ಕೂಡ ಆಗಿದೆ ಎಂದು ಕೆಲವೊಂದು ಅಧಿಕಾರಿಗಳಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಹಣಕಾಸಿನ ಸಚಿವಾಲಯದಿಂದ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ. ಈ ಹಣವನ್ನು ರೈತರಿಗೆ ನಾಲ್ಕು ಕಂತಿನಲ್ಲಿ ಕೊಡಲಾಗುತ್ತಿದೆ ಎಂಬ ಮಾಹಿತಿಯು ಕೇಳಿ ಬರುತ್ತಿದೆ. ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಚರ್ಚೆಯನ್ನ ನಡೆಸಿದ್ದು, ಮಧ್ಯಂತರ ಬಜೆಟ್ ನಲ್ಲಿ ಇದರ ಬಗ್ಗೆ ಪ್ರಸ್ತಾಪವಾಗುವುದು ಎಂಬ ಒಂದು ನಿರೀಕ್ಷೆಯು ಕೂಡ ಇದೆ. ಈಗಾಗಲೇ ನಿರ್ಮಲ ಸೀತಾರಾಮನ್ ಅವರು ಇಲಾಖೆಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂಬುದಾಗಿ ಮಾಹಿತಿಗಳು ತಿಳಿಸಿವೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಪಿಎಂ ಕಿಸಾನ್ ಹಣ ಎಲ್ಲರಿಗೂ ಸಿಗುತ್ತಿದೆಯೇ?

ಪಿಎಂ ಕಿಸಾನ್ ಯೋಜನೆಯ ಹಣವು ಇನ್ನೂ ಕೆಲವರಿಗೆ ಒಂದು ವರ್ಷದಿಂದ ಸಿಗುತ್ತಿಲ್ಲ. ದಾಖಲಾತಿಗಳನ್ನು ಸರಿಪಡಿಸಿಕೊಂಡರೂ ಕೂಡ, ಈ ಕೆ ವೈ ಸಿ(E-KYC) ಅನ್ನು ಮಾಡಿಸಿದರು ಕೂಡ ಬಹಳಷ್ಟು ರೈತರಿಗೆ ಇನ್ನೂ ಹಣವು ತಲುಪಿಲ್ಲ. ರೈತರು ಸರ್ಕಾರವನ್ನ ಆರೋಪಿಸಿದ್ದಾರೆ. ನೀವು ಇದರ ಬಗ್ಗೆ ದೂರನ್ನು ಕೂಡ ದಾಖಲಿಸಬಹುದಾಗಿದೆ. ದೂರನ್ನ ಕೊಡಲು ಕರೆ ಮಾಡಲು ಈ ಸಂಖ್ಯೆಯು ಕನೆಕ್ಟ್ ಆಗ್ತಾ ಇಲ್ಲ ಎನ್ನುವ ಆರೋಪವೂ ಕೂಡ ಇದೆ. ಹಲವಾರು ಕಂತುಗಳ ಮೊತ್ತ ಇನ್ನೂ ಬಂದಿಲ್ಲ ಆ ಕಚೇರಿ ಈ ಕಚೇರಿ ಅಂತ ಅಲೆದಿದ್ದೇನೆ ಆದರೆ ಇನ್ನೂ ತನಕ ಯಾವ ಮೊತ್ತವು ನನ್ನ ಖಾತೆಗೆ ಬಂದಿಲ್ಲ ಇಮೇಲ್ ಕೂಡ ಮಾಡಿದೀನಿ, ದಾಖಲಾತಿಗಳನ್ನೆಲ್ಲಾ ಒದಗಿಸಿದ್ರು ಕೂಡ ಇನ್ನು ಮೊತ್ತ ನನ್ನ ಕೈಗೆ ಬಂದಿಲ್ಲ ಅಂತ ರೈತರೊಬ್ಬರು ಸರಕಾರದ ಮೇಲೆ ಆರೋಪವನ್ನು ಮಾಡಿದ್ದಾರೆ.

ಫೋನಿಗೆ ಕರೆ ಮಾಡಿದರೆ ಫೋನ್ ಕನೆಕ್ಟ್ ಆಗ್ತಿಲ್ಲ ಅಲ್ಲಿ ಯಾರು ರಿಸೀವ್ ಮಾಡುವವರು ಇಲ್ಲ ಇದರಿಂದಾಗಿ ಸುಮ್ಮನೆ ಅಲ್ಲಿ ಇಲ್ಲಿ ಅಂತ ಕಚೇರಿಗೆ ಅಲೆದದ್ದು ಆಗಿದೆ. ಅಂತ ರೈತರೊಬ್ಬರು ತಮ್ಮ ನಿರಾಶೆಯನ್ನ ತೋಡಿಕೊಂಡಿದ್ದಾರೆ. ಎಲ್ಲ ದಾಖಲಾತಿಗಳನ್ನು ಪರೀಕ್ಷೆ ಮಾಡಿಸಿದ್ದೇನೆ. ಮಕ್ಕಳ ಹತ್ತಿರ ಮೇಲ್ ಕೂಡ ಮಾಡಿಸಿದ್ದೇನೆ. ಆದರೂ ಕೂಡ ಹಣವು ಮಾತ್ರ ಬಂದಿಲ್ಲ. ಎಂದು ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ವಾರ್ಷಿಕವಾಗಿ ಒಂದು ಕಂತನ ಕೊಡಲಾಗುತ್ತಿತ್ತು ಆದರೆ ಮೊತ್ತದಲ್ಲಿ ಸ್ವಲ್ಪ ಹೆಚ್ಚಳವನ್ನು ಮಾಡಿ ಒಟ್ಟು ನಾಲ್ಕು ಕಂತುಗಳನ್ನ ಕೊಡಲಾಗುವುದು ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ ಅಪ್ಪು ಏನಿದು ಅಚ್ಚರಿ, ಕಣ್ಣು ಕಣ್ಣು ಮಿಟುಕಿಸುತ್ತಾ ನಿಂತ ಜನರು

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಸದ್ಯಕ್ಕೆ ಬರಲ್ಲ; ಯೋಜನೆಗೆ ಹಣ ಬಿಡುಗಡೆ ಆಗಿಲ್ಲ…ಹಣ ಬರಲ್ಲ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram