ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

PM Kisan Scheme: ಕೃಷಿ ಮತ್ತು ರೈತರ ಕಲ್ಯಾಣಕ್ಕಾಗಿ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಯಿತು. ರೈತರಿಗೆ ಕೃಷಿಗೆ ಬೆಂಬಲ ವಾಗುವಂತೆ ವಾರ್ಷಿಕವಾಗಿ 6,000 ನೀಡುವುದಾಗಿ ಘೋಷಿಸಿತು ಈ ಯೋಜನೆಯಿಂದ ಸಾವಿರಾರು ರೈತರು ತಮ್ಮ ಕೃಷಿಯನ್ನು ಮುಂದುವರೆಸಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತಿದೆ. ಅಷ್ಟೇ ಅಲ್ಲದೆ ಪಿಎಂ ಕಿಸಾನ್ ಯೋಜನೆಯಿಂದ ನಮ್ಮ ದೇಶದ ಬೆನ್ನೆಲುಬಾದ ರೈತಾಪಿಯನ್ನು ಮುಂದುವರಿಸಲು ಸಹಾಯವಾಗುತ್ತಿದೆ. ಇಲ್ಲಿಯ ತನಕ 14 ಕಂತುಗಳ ಬೆಂಬಲವನ್ನ ಪಡೆದ ರೈತರಿಗೆ 15ನೇಯ ಕಂತು ಯಾವಾಗ ಬರಲಿದೆ, ಫಲಾನುಭವಿಗಳ ಪಟ್ಟಿಯಲ್ಲಿ ಯಾರ್ಯಾರು ಮೊದಲು ಸೇರಿದ್ದಾರೆ ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನ ತಿಳಿಸಿಕೊಡುತ್ತೇವೆ. ಪೂರ್ತಿ ಲೇಖನವನ್ನ ಓದಿ ಮಾಹಿತಿಯನ್ನು ಪಡೆಯಿರಿ.

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹಾಗಾದ್ರೆ ಪಿಎಂ ಕಿಸಾನ್ ಯೋಜನೆಯ 15ನೇ ಕಂತು ಖಾತೆಗೆ ಯಾವಾಗ ವರ್ಗಾವಣೆ ಆಗುತ್ತದೆ?

ಸರ್ಕಾರ ಹೇಳಿದ ಹಾಗೆ ನವೆಂಬರ್ 30ರೊಳಗಾಗಿ 15ನೇ ಕಂತಿನ ಹಣವನ್ನು ರೈತರು ಪಡೆಯಬಹುದಾಗಿದೆ. ಹಾಗೂ ಎಲ್ಲಾ ಪಾವತಿಗಳನ್ನ ನವೆಂಬರ್ 30ರೊಳಗಾಗಿ ಮಾಡಲಾಗುತ್ತದೆ ಎಂದು ನಮ್ಮ ಕೇಂದ್ರ ಸರ್ಕಾರವು ಹೇಳಿದೆ. ಈ ಯೋಜನೆಗಾಗಿ ವಾರ್ಷಿಕವಾಗಿ 75,000 ಕೋಟಿಗಳನ್ನು ಸರಕಾರ ಮೀಸಲಿಟ್ಟಿದೆ. ಒಂದು ಪಿಎಂ ಕಿಸಾನ್ ಯೋಜನೆಯಲ್ಲಿ ನೀವು ಭಾಗವಹಿಸಲು ಇಚ್ಚಿಸಿದ್ದರೆ ಮೊದಲಿಗೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನೀವು ಸೇರಿಕೊಳ್ಳಿ.  ಇನ್ನು ಹಣ ವರ್ಗಾವಣೆಯನ್ನು ಮೂರು ಕಂತುಗಳಲ್ಲಿ ಮಾಡಲಾಗುತ್ತದೆ, ಪ್ರತಿ ಕಂತುಗಳ ಪ್ರಕಾರ 2000ದಂತೆ ಮೂರು ಕಂತುಗಳಲ್ಲಿ ಹಣವನ್ನ ರೈತರಿಗೆ ವರ್ಗಾವಣೆ ಮಾಡಲಾಗುತ್ತದೆ. ನೀವು ಇದಕ್ಕೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಪಿಎಂ ಕಿಸಾನ್ ವೆಬ್ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ಎಲ್ಲ ಗೊಂದಲಗಳಿಗೂ ಕೂಡ ಪರಿಹಾರವನ್ನು ಪಡೆದುಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಯಿಂದ(PM Kisan Scheme) ಬಹಳ ಜನ ರೈತರು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಏಕೆಂದರೆ ಅವರಿಗೆ ಇದೊಂದು ಆದಾಯ ಅಂತಾನೆ ಹೇಳಬಹುದು. ಈ ಯೋಜನೆಯ ಫಲವನ್ನು ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರು ಪಡೆಯಬಹುದಾಗಿದೆ. ಈ ಯೋಜನೆಯನ್ನು ಸರ್ಕಾರವು ಫೆಬ್ರವರಿ 24, 2019 ರಂದು ಆರಂಭಿಸಿತು. ಇದು ರೈತರ ಆರ್ಥಿಕತೆಗೆ ಸಹಾಯವಾಗುವಂತೆ ಹಾಗೂ ಕೃಷಿಯನ್ನು ಮುಂದುವರಿಸಿಕೊಳ್ಳಲು ಇದನ್ನ ಯೋಜಿಸಲಾಯಿತು. ಒಟ್ಟು 6,000 ಹಣವನ್ನು ವರ್ಷದ ಮೂರು ಕಂತುಗಳಲ್ಲಿ ಪಡೆಯಬಹುದಾಗಿದೆ. ನಿಮಗೆ ಹೇಳಬೇಕೆಂದರೆ ಈ ಯೋಜನೆಯ 15ನೇ ಕಂತಿನ ಹಣವನ್ನ ಯಾವ ತಾರೀಕಿನೆಂದು ಬರುತ್ತದೆ ಎಂದು ಇನ್ನೂ ನಿಖರವಾಗಿ ತಿಳಿದಿಲ್ಲ. ನವೆಂಬರ್ ಕೊನೆಯ ಒಳಗಾಗಿ ನಿಮಗೆ ಬಂದು ತಲುಪುತ್ತದೆ. ಪಕ್ಕ ದಿನಾಂಕ ಇನ್ನು ನಿಖರವಾಗಿಲ್ಲ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದರೆ ವರ್ಗಾವಣೆಯ ದಿನಾಂಕವು ಸ್ವಲ್ಪ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಪಿಎಂ ಕಿಸಾನ್ 15ನೇ ಕಂತಿನ ಅವಲೋಕನ

ಹಾಗಾದರೆ 15ನೇ ಕಂತಿನ ಬಗ್ಗೆ ನಾವು ಮಾಹಿತಿಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕೆಲವರಿಗೆ ಗೊಂದಲವಿದೆ. ನೀವು ಮಾಡಬೇಕಾದದ್ದು ಇಷ್ಟೇ, ನಿಖರವಾದ ವೆಬ್ಸೈಟ್ ಗೆ ಭೇಟಿ ನೀಡಿ, www.pmkisan.gov.in ಈ ವೆಬ್ ಸೈಟಿಗೆ ಹೋಗಿ ನಂತರ ಫಲಾನುಭವಿಗಳ ಪಟ್ಟಿಯನ್ನು ನೋಡಿ. ಅದರಲ್ಲಿ ನಿಮ್ಮ ಹೆಸರು ಇದೆ ಅಂತ ಪರೀಕ್ಷಿಸಿಕೊಳ್ಳಿ. ಇದರ ಮೂಲಕವಾಗಿ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದಲ್ಲಿ ನಿಮ್ಮ ಹತ್ತಿರವಿರುವ ಸರಕಾರಿ ಕಚೇರಿಗೆ ಭೇಟಿಯಾಗಿ ಅಧಿಕಾರಿಗಳನ್ನು ಸಂಪರ್ಕಿಸಿ. ನಿಮ್ಮ ಕಂತಿನ ಪಾವತಿಗಳ ಸ್ಥಿತಿಗತಿಗಳನ್ನು ಒಮ್ಮೆ ಪರಿಶೀಲಿಸಿ ನೋಡಿ.

ಅರ್ಜಿದಾರರು ಇ -ಕೆವೈಸಿ(E-KYC)ಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ಪೂರ್ಣಗೊಳಿಸದಿದ್ದಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗುವುದಿಲ್ಲ. ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಬೇಕು. ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳೆಂದರೆ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ ಸಹಾಯವಾಗುವಂತೆ ಆದಾಯವನ್ನು ಒದಗಿಸಲಾಗುತ್ತದೆ. ತಲಾ ಎರಡು ಸಾವಿರದಂತೆ 4 ತಿಂಗಳಿಗೊಮ್ಮೆ ವಾರ್ಷಿಕವಾಗಿ 6,000 ಆದಾಯವನ್ನು ರೈತರು ಪಡೆಯಬಹುದಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ SSLC ಬೋರ್ಡ್ ನಿಂದ ಗುಡ್ ನ್ಯೂಸ್ ಶಾಲೆಯಲ್ಲೇ ಅಂಕಪಟ್ಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ

ಇದನ್ನೂ ಓದಿ: ಕಿಚ್ಚನ ಜೊತೆ ಮೊದಲ ವಾರದ ಪಂಚಾಯಿತಿ; ತುಕಾಲಿ ಸಂತುಗೆ ಬಿಸಿ ಮುಟ್ಟಿಸಿದ ಕಿಚ್ಚ