ರೈತರಿಗೆ ಆರ್ಥಿಕವಾಗಿ ಸಹಾಯ ನೀಡುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ಕಿಸಾನ್ ಸಮ್ಮನ್ ಯೋಜನೆಯನ್ನು(PM Kisan Scheme) ಜಾರಿಗೊಳಿಸಿತು. ದೇಶದ ಕೋಟ್ಯಂತರ ರೈತರು ಈ ಯೋಜನೆಯ ಫಲಾನುಭವಿ ಆಗಿದ್ದರೆ. ರೈತರಿಗೆ ಇನ್ನಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ಈ ಯೋಜನೆಯು ಬಹಳ ಉತ್ತಮವಾಗಿದೆ. ಈಗಾಗಲೇ 15 ಕಂತಿನ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಇನ್ನೇನು 16 ನೇ ಕಂತಿನ ಹಣವೂ ಸಹ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ. ಹಾಗಾದರೆ 16 ನೇ ಕಂತಿನ ಬಗ್ಗೆ ಮಾಹಿತಿ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಕಿಸಾನ್ ಸಮ್ಮನ್ ಯೋಜನೆಯ 16 ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಲಿದೆ.
ಕಿಸಾನ್ ಸಮ್ಮನ್ ಹಣವನ್ನು ರಾಷ್ಟ್ರದ ಪ್ರಧಾನಮಂತ್ರಿಗಳು ಇದೆ ಬರುವ ಫೆಬ್ರುವರಿ 28 ರಂದು ಬಿಡುಗಡೆ ಮಾಡುವುದಾಗಿ ಪಿಎಂ ಕಿಸಾನ್ ಸಮ್ಮನ್ ಯೋಜನೆಯ(PM Kisan Scheme) ಅಧಿಕೃತ ವೆಬ್ಸೈಟ್ ನಲ್ಲಿ ತಿಳಿಸಲಾಗಿದೆ. ಈ ಯೋಜನೆಯಲ್ಲಿ ಜನರು ಪ್ರತಿ ವರುಷ 6,000 ರೂಪಾಯಿ ಹಣವನ್ನು ರೈತರು ಪಡೆಯುತ್ತಾರೆ. 3 ಕಂತಿನ ರೂಪದಲ್ಲಿ ಹಣವನ್ನು ನೀಡಲಾಗುತ್ತದೆ. 15ನೇ ಕಂತಿನ ಹಣವನ್ನು ನವೆಂಬರ್ 15 ರಂದು ನೀಡಲಾಗಿತ್ತು. 15ನೇ ಕಂತಿನಲ್ಲಿ 18,000 ಕೋಟಿ ಹಣವನ್ನು 8 ಕೋಟಿ ಫಲಾನುಭವಿ ರೈತರಿಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಫಲಾನುಭವಿಗಳ ಮಾಹಿತಿ ಪಡೆಯುವುದು ಹೇಗೆ?: ಮೊದಲು ಕಿಸಾನ್ ಸಮ್ಮನ್ ಯೋಜನೆಯ ಅಧಿಕೃತ ವೆಬ್ಸೈಟ್ pmkisan.gov.in ಗೆ ತೆರಳಿ, ಮುಖಪುಟದ ಮೇಲಿನ ಮೆನುವಿನಲ್ಲಿ, ಫಾರ್ಮರ್ ಕಾರ್ನರ್ ಟ್ಯಾಬ್ ಕ್ಲಿಕ್ ಮಾಡಿ. ಫಾರ್ಮರ್ ಕಾರ್ನರ್’ ಪುಟದಲ್ಲಿ, ಫಲಾನುಭವಿ ಸ್ಥಿತಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ರಾಜ್ಯ ಜಿಲ್ಲೆ , ಹೋಬಳಿ, ಗ್ರಾಮ ಎಲ್ಲಾ ಮಾಹಿತಿಯನ್ನು ಕ್ಲಿಕ್ ಮಾಡಿ ನಂತರ ವರದಿ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಆ ಪ್ರದೇಶದ ಕಿಸಾನ್ ಸಮ್ಮನ್ ರೈತರ ಬಗ್ಗೆ ಪೂರ್ಣ ಮಾಹಿತಿ ಪಡೆಯಿರಿ.
ಕಿಸಾನ್ ಸಮ್ಮನ್ ಯೋಜನೆಯ ಬಗ್ಗೆ ಯಾವುದೇ ಅನುಮಾನ ಇದ್ದಲ್ಲಿ ಸಂಪರ್ಕಿಸಿ :- ಸಂಪರ್ಕಿಸುವ ಮೇಲ್ ವಿಳಾಸ :[email protected] ಸಹಾಯವಾಣಿ ಸಂಖ್ಯೆ :- 155261 ಅಥವಾ 1800115526 (ಟೋಲ್-ಫ್ರೀ) ಅಥವಾ 011-23381092. *ಹಿಂದಿ, ತಮಿಳು, ಒಡಿಯಾ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ.
ಇದನ್ನೂ ಓದಿ: ಕರ್ನಾಟಕ ರಾಜ್ಯಾದ್ಯಂತ 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅಧಿಸೂಚನೆ ಹೊರಡಿಸಿದೆ
ಕಿಸಾನ್ ಸಮ್ಮನ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರಲ್ಲ.
- ಮಾಜಿ ಮತ್ತು ಪ್ರಸ್ತುತ ಸಚಿವರು ಹಾಗೂ ರಾಜ್ಯ ಸಚಿವರು ಮತ್ತು ಲೋಕಸಭೆ ಮತ್ತು ರಾಜ್ಯಸಭೆ, ರಾಜ್ಯ ವಿಧಾನಸಭೆ, ರಾಜ್ಯ ವಿಧಾನ ಪರಿಷತ್ತಿನ ಸದಸ್ಯರು, ಮುನ್ಸಿಪಲ್ ಕಾರ್ಪೊರೇಷನ್‌ಗಳ ಮಾಜಿ ಮತ್ತು ಪ್ರಸ್ತುತ ಮೇಯರ್‌ಗಳು, ಜಿಲ್ಲಾ ಪಂಚಾಯತ್‌ಗಳ ಮಾಜಿ ಮತ್ತು ಪ್ರಸ್ತುತ ಅಧ್ಯಕ್ಷರು ತೋಟ ಹೊಲ ವನ್ನು ಹೊಂದಿದ್ದರೆ ಅವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
- 10,000 /- ರೂ. ಗಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತಿ ವೇತನದಾರರು ಹಾಗೂ ಯಾವುದೇ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಯೋಜನೆಗೆ ಅರ್ಹರಲ್ಲ.
- ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರಗಳಿಂದ ಯಾವುದೇ ಇತರ ಯೋಜನೆಯಲ್ಲಿ 6000 ಅಥವಾ ಅದಕ್ಕೂ ಹೆಚ್ಚಿನ ಸಹಾಯಧನ ಪಡೆಯುತ್ತಿರುವ ರೈತ ಕುಟುಂಬಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
- ಫಾರ್ಮ್‌ಹೌಸ್ ಅಥವಾ ಕೃಷಿ ಭೂಮಿಯನ್ನು ಹೊಂದಿರುವ ಆದಾಯ ತೆರಿಗೆ ಪಾವತಿಸುವ ವ್ಯಕ್ತಿಗಳು ಈ ಯೋಜನೆಗೆ ಅರ್ಹರಲ್ಲ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ರೈತ ವಿದ್ಯಾನಿಧಿ ವೇತನಕ್ಕೆ ಅರ್ಜಿ ಆಹ್ವಾನ..