ಕೇಂದ್ರ ಸರ್ಕಾರದಿಂದ ಅನ್ನದಾತರಿಗೆ ಭರ್ಜರಿ ಗುಡ್ ನ್ಯೂಸ್; ಪಿ ಎಂ ಕಿಸಾನ್ ಯೋಜನೆಯಡಿಯಲ್ಲಿ ಬರಲಿದೆ ಹೆಚ್ಚುವರಿ ಹಣ

PM Kisan Scheme Amount Increasing

ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ರೈತರಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ ಅಂತಲೇ ಹೇಳಬಹುದು. ಹೌದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ವರ್ಷ ಮಂಡಿಸಲಿರುವ ಬಜೆಟ್ ನಲ್ಲಿ ರೈತರಿಗೆ ಸಿಹಿಸುದ್ದಿ ನೀಡಬಹುದು ಎನ್ನಲಾಗುತ್ತಿದೆ. ಈ ಮೂಲಕ ಪಿಎಂ ಕಿಸಾನ್ ಹಣ ಹೆಚ್ಚಿಸುವ ನಿರೀಕ್ಷೆಯಿದೆ. ಈ ವರ್ಷದ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಪಿಎಂ ಕಿಸಾನ್ ಹಣವನ್ನು ಮತ್ತೊಂದು ಕಂತು ನೀಡಬಹುದು ಎಂದು ವರದಿಗಳು ಮಾಹಿತಿ ನೀಡಿವೆ. ಹೌದು ಪಿಎಂ ಕಿಸಾನ್ ಯೋಜನೆ ಇನ್ನೂ 2 ಸಾವಿರ ರೂಪಾಯಿ ಹೆಚ್ಚಾಗುವ ಸಾಧ್ಯತೆಯಿದ್ದು, ಸದ್ಯ ಮೂರು ಕಂತುಗಳಲ್ಲಿ ಹಣ ಬರುತ್ತಿದೆ. ಇದುವರೆಗೆ ವರ್ಷಕ್ಕೆ ಒಟ್ಟು 6 ಸಾವಿರ ಬರುತ್ತಿತ್ತು. ಆದರೆ ಇನ್ಮು ಮುಂದೆ ಮತ್ತೊಂದು ಕಂತು ನೀಡುವ ಜೊತೆಗೆ 8 ಸಾವಿರದವರೆಗೆ ಹೆಚ್ಚಿಸುವ ಸಾಧ್ಯತೆ ಹೆಚ್ಚಾಗಿದೆ.

WhatsApp Group Join Now
Telegram Group Join Now

ಮುಖ್ಯವಾಗಿ ಇದುವರೆಗೆ ಕೇಂದ್ರ ಸರ್ಕಾರ ರೈತರ ಬ್ಯಾಂಕ್ ಖಾತೆಗೆ 15 ಕಂತುಗಳ ಹಣವನ್ನು ಜಮಾ ಮಾಡಿದ್ದು, ಒಟ್ಟಾಗಿ 30 ಸಾವಿರ ರೈತರಿಗೆ ತಲುಪಿದೆ. ಇನ್ನು ಮುಂದಿನ ದಿನಗಳಲ್ಲಿ 16ನೇ ಕಂತಿನ ಹಣ ಬರಲಿದೆ ಎನ್ನಲಾಗಿದ್ದು, ಹೀಗಾದರೆ ರೈತರಿಗೆ ಒಟ್ಟು 32 ಸಾವಿರ ಸಿಗಲಿದೆ. ಇನ್ನು ಫೆಬ್ರವರಿಯಲ್ಲಿ ನಿರ್ಮಲಾ ಸೀತಾರಾಮನ್ 2024 ರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ಪಿಎಂ ಕಿಸಾನ್ ನಿಧಿಯನ್ನು ಹೆಚ್ಚಿಸುವ ಪ್ರಸ್ತಾಪ ಬರುವ ಸಾಧ್ಯತೆ ಬಗ್ಗೆ ವರದಿಗಳು ಮಾಹಿತಿ ನೀಡಿವೆ. ಇದರ ನಡುವೆ, ಲೋಕಸಭಾ ಚುನಾವಣೆ ಕೂಡ ನಡೆಯಲಿರುವ ಹಿನ್ನೆಲೆ ಕೇಂದ್ರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಹೆಚ್ಚಳವನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಬಹುದು ಎಂಬ ನಿರೀಕ್ಷೆಗಳು ಹೆಚ್ಚಾಗಿವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೈತರ ಖಾತೆಗೆ ಬರಲಿದೆಯಾ 8ಸಾವಿರ ಹಣ?

ಹೌದು 2023-24ನೇ ಹಣಕಾಸು ವರ್ಷದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು 8,000 ರೂಪಾಯಿಗೆ ಹೆಚ್ಚಿಸಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅಂದರೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ನೀಡುತ್ತಿರುವ ವಾರ್ಷಿಕ 6 ಸಾವಿರ ರೂಪಾಯಿಗಳನ್ನು 8 ಸಾವಿರ ರೂಪಾಯಿಗಳಿಗೆ ಹೆಚ್ಚಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದ್ದರು. ರೈತರಿಗೆ ವರ್ಷದಲ್ಲಿ ಮೂರು ಕಂತುಗಳ ಮೂಲಕ ತಲಾ 2 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಗಳನ್ನು ಕೇಂದ್ರ ಸರ್ಕಾರವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ. ಈಗಿರುವ 3 ಕಂತುಗಳ ಜತೆಗೆ ಮತ್ತೊಂದು ಕಂತು ಹೆಚ್ಚಿಸುವ ಮೂಲಕ 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ ಎಂಬುದು ವರದಿಯಾಗಿದೆ. ಆದ್ರೆ ಸಂಸತ್ತಿನ ಅಧಿವೇಶನದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಯೊಂದು ಚರ್ಚೆಗೆ ಬಂದಾಗ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯಿಸಿದ್ದು, ಸದ್ಯ ಕೇಂದ್ರದಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲ ಅಂತ ಲೋಕಸಭೆಗೆ ತಿಳಿಸಿದ್ದಾರೆ. ಆದ್ರೆ ಮುಂದಿನ ತಿಂಗಳಲ್ಲಿ ಇದಕ್ಕೆ ಉತ್ತರ ಸಿಗಲಿದ್ದು, ಒಂದು ಕಂತನ್ನ ಹೆಚ್ಚಿಸಿದ್ರೆ ರೈತರಿಗೂ ಅನುಕೂಲವಾಗಲಿದೆ.

ಈಗಾಗ್ಲೇ ರಾಜ್ಯ ಸರ್ಕಾರದಿಂದ ಪಿ.ಎಂ. ಕಿಸಾನ್ – ಕರ್ನಾಟಕ ಯೋಜನೆಯಡಿ ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟ ರೈತ ಕುಟುಂಬಗಳಿಗೆ 2019 ರಿಂದ ಇಲ್ಲಿವರೆಗೆ 4821.37 ಕೋಟಿಗಳ ಆರ್ಥಿಕ ಸಹಾಯಧನವನ್ನು ನೀಡಲಾಗಿದೆ. 2022-23 ನೇ ಸಾಲಿನಲ್ಲಿ 956.71 ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಂಜೂರಾತಿ ನೀಡಲಾಗಿತ್ತು. ಇನ್ನು 2022-23ರ ಆರ್ಥಿಕ ವರ್ಷದ ಮೂರು ಕಂತುಗಳನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದ್ದು, ಇದೀಗ ಸಣ್ಣ ರೈತರು ಪಿಎಂ ಕಿಸಾನ್ ಯೋಜನೆಯ ನಾಲ್ಕನೇ ಕಂತು ಹಣಕ್ಕಾಗಿ ಕಾಯುತ್ತಿದ್ದಾರೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಹೌದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿ ನೀಡಲಾಗುತ್ತಿದೆ. ಅಂದರೆ ವರ್ಷಕ್ಕೆ 6,000 ಮೊತ್ತವನ್ನು ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿದೆ. ಇದನ್ನ ಈಗ ಹೆಚ್ಚಿಸುವ ಚಿಂತನೆಗಳಿದೆ ಅಂತ ಬಲ್ಲ ಮೂಲಗಳಿಂದ ಮಾಹಿತಿಯಿದ್ದು, ಸದ್ಯ ಇದರ ಬಗ್ಗೆ ಕೃಷಿ ಸಚಿವರು ಸರಿಯಾದ ಮಾಹಿತಿ ನೀಡಿಲ್ಲವಾದ್ರೂ, ಚುನಾವಣಾ ದೃಷ್ಟಿಯಿಂದ ಮತ್ತೊಂದು ಕಂತು ಹೆಚ್ಚಿಸುವ ಉದ್ದೇಶ ಇರೋದು ಮೇಲ್ನೋಟಕ್ಕೆ ನಿಜ ಎನಿಸುತ್ತಿದ್ದೂ, ಮುಂದಿನ ಬಜೆಟ್ ನಲ್ಲಿ ಇದಕ್ಕೆ ಉತ್ತರ ಸಿಗಲಿದ್ದು, ಅಲ್ಲಿಯವರೆಗೂ ಕಾಯಲೇಬೇಕು ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ: ನಿವೃತ್ತಿಯ ನಂತರ ತಿಂಗಳಿಗೆ 2.60 ಲಕ್ಷ ಗಳಿಸಬೇಕಾ? ಅದಕ್ಕಾಗಿ ಇಲ್ಲಿದೆ ಹೂಡಿಕೆಯ ಸಲಹೆಗಳು