PM ಕಿಸಾನ್ ಸ್ಟೇಟಸ್; 17ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ?

PM Kisan Scheme

ಭಾರತದ ರೈತರಿಗೆ ಆರ್ಥಿಕ ನೆರವು ನೀಡಬೇಕು ಎಂಬ ಉದ್ದೇಶದಿಂದ ಆರಂಭವಾದ ಕೇಂದ್ರ ಸರ್ಕಾರದ ಯೋಜನೆ ಕಿಸಾನ್ ಸಮ್ಮನ್. ಈಗಾಗಲೇ 16 ಕಂತುಗಳನ್ನು ಯಶಸ್ವಿಯಾಗಿ ಮುಗಿಸಿದೆ. ಭಾರತದ ಲಕ್ಷಾಂತರ ರೈತರು ಈ ಯೋಜನೆಯ ಲಾಭ ಪಡೆಯುತ್ತ ಇದ್ದಾರೆ. ವರುಷಕ್ಕೆ 6,000 ರೂಪಾಯಿಯಂತೆ ಮೂರು ಕಂತುಗಳಲ್ಲಿ ಈ ಹಣವನ್ನು ಕೇಂದ್ರವು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಿದೆ. ಪಿಎಂ ಕಿಸಾನ್ ಸಮ್ಮನ್ ಯೋಜನೆಯ ಮುಂದಿನ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

16 ಕಂತುಗಳು ಬಿಡುಗಡೆ ಆಗಿರುವ ದಿನಾಂಕಗಳು :- ಪಿಎಂ ಕಿಸಾನ್ ಸಮ್ಮನ್ ಯೋಜನೆಯು ಫೆಬ್ರವರಿ 24, 2019 ರಂದು ನರೇಂದ್ರ ಮೋದಿಯವರ ಸರ್ಕಾರವು ಯೋಜನೆಗೆ ಚಾಲನೆ ನೀಡಿತು. ಇದರ ಮೊದಲ ಕಂತಿನ ಹಣ ಫೆಬ್ರವರಿ 24, 2019 ರಂದು ಭಾರತದ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಆಯಿತು. ನಂತರ ಎರಡನೇ ಕಂತು ಮೇ 2, 2019 ರಂದು ಬಿಡುಗಡೆ ಆಯಿತು. ಮೂರನೇ ಕಂತು ನವೆಂಬರ್ 1, 2019 ರಂದು ಬಿಡುಗಡೆ ಆಯಿತು. ನಾಲ್ಕನೇ ಕಂತು ಏಪ್ರಿಲ್ 4, 2020 ರಂದು ಬಿಡುಗಡೆ ಆಯಿತು. 5 ನೇ ಕಂತು ಜೂನ್ 25, 2020, 6 ನೇ ಕಂತು ಆಗಸ್ಟ್ 9, 2020, 7 ನೇ ಕಂತು ಡಿಸೆಂಬರ್ 25, ಡಿಸೆಂಬರ್ 2020, ಹಾಗೂ 8 ನೇ ಕಂತು ಮೇ 14, 2021, 9ನೇ ಕಂತು ಆಗಸ್ಟ್ 10, 2021, 10ನೇ ಕಂತು 2021, 11ನೇ ಕಂತು ಜೂನ್ 1, 2022, 12ನೇ ಕಂತು ಅಕ್ಟೋಬರ್ 17, 2022, 13ನೇ ಕಂತು ಫೆಬ್ರುವರಿ 27, 2023, 14ನೇ ಕಂತು ಜುಲೈ 27, 2023, 15ನೇ ಕಂತು ನವೆಂಬರ್ 15, 2023, 16ನೇ ಕಂತು 28, ಫೆಬ್ರುವರಿ 2024 ರಂದು ಬಿಡುಗಡೆ ಆಯಿತು.

ಮುಂದಿನ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ.

ಏಪ್ರಿಲ್, ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ಯಾವುದೇ ಸರ್ಕಾರಿ ಹಣಗಳು ಜಮಾ ಆಗುವುದಿಲ್ಲ. ಮುಂದಿನ ಜೂನ್ ಅಥವಾ ಜುಲೈ ತಿಂಗಳಲ್ಲಿ 17 ನೇ ಕಂತಿನ ಕಿಸಾನ್ ಸಮ್ಮನ್ ಯೋಜನಾ ಹಣವೂ ರೈತರಿಗೆ ಸಿಗುವ ಸಾಧ್ಯತೆ ಇದೆ. ಆದರೆ ಇದು ಮುಂದಿನ ಎಲೆಕ್ಷನ್ ನಲ್ಲಿ ಅಧಿಕಾರ ಬದಲಾವಣೆ ಆದರೆ ಯಾವ ಯಾವ ಯೋಜನೆಗಳು ಇರಲಿವೆ ಎಂಬುದು ಸ್ಪಷ್ಟ ಇಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ವಿದ್ಯುತ್ ದರ ಇಳಿಕೆ ಆಗಲಿದೆ.

ಪಿಎಂ ಕಿಸಾನ್ ಸಮ್ಮನ್ ಯೋಜನೆಯ ಪ್ರಯೋಜನಗಳು ಏನೇನು?

  • ಸಣ್ಣ ಮತ್ತು ಮಧ್ಯಮ ಹಿಡುವಳಿ ರೈತರಿಗೆ ಆರ್ಥಿಕವಾಗಿ ಸಹಾಯ ಸಿಗಲಿದೆ.
  • ರೈತರಿಗೆ ಕೃಷಿಯಲ್ಲಿ ಆಸಕ್ತಿ ಬರಲು ಈ ಯೋಜನೆಯು ಸಹಾಯ ಮಾಡಲಿದೆ.
  • ಮಹಿಳಾ ಕೃಷಿಕರಿಗೆ ಉತ್ತೇಜನದ ಜೊತೆಗೆ ಆರ್ಥಿಕ ನೆರವು ಸಿಗಲಿದೆ.
  • ನೇರವಾಗಿ ರೈತರ ಖಾತೆಗೆ ಹಣ ಜಮಾ ಆಗುವುದರಿಂದ ಯಾವುದೇ ಮಧ್ಯವರ್ತಿಗಳ ಕಾಟ ಇರುವುದಿಲ್ಲ.

ಯೋಜನೆಯ ಬಗ್ಗೆ ಹಾಗೂ ಹೊಸದಾಗಿ ಪಿಎಂ ಕಿಸಾನ್ ಸಮ್ಮನ್ ಯೋಜನೆಗೆ ಅರ್ಜಿ ಹಾಕುವ ರೈತರು ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ.

ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೊದಲು ಅಧಿಕೃತ ವೆಬ್‌ಸೈಟ್‌ಗೆ ( pmkisan.gov.in ). ಭೇಟಿ ನೀಡಿ ರೈತರ ಕಾರ್ನರ್ ವಿಭಾಗಬ್ದಲ್ಲಿ ಫಾರ್ಮರ್ಸ್ ಕಾರ್ನರ್ ಬಟನ್ ಕ್ಲಿಕ್ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡ್ ನಮೂದಿಸಿ ನಿಮ್ಮ ಖಾತೆಯ ಸ್ಥಿತಿಯನ್ನು ತಿಳಿಯಿರಿ

ಇದನ್ನೂ ಓದಿ: ಇದೊಂದು ಬೈಕ್ ಇದ್ದರೆ ಸಾಕು, ಕಾಲಲ್ಲಿ ಟ್ರಕ್ ಮಾಡುವುದೇ ಬೇಡ, ಬೆಟ್ಟ ಗುಡ್ಡ ಎನು ನೋಡದೆ ಗಾಡಿ ಓಡಿಸಬಹುದು.

ಇದನ್ನೂ ಓದಿ: ರೈಲ್ವೇ ನಿಯಮದಲ್ಲಿ ದೊಡ್ಡ ಬದಲಾವಣೆ, ಪ್ರಯಾಣಿಸುವ ಮುನ್ನ ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿಗಳು!