ದೇಶದ ರೈತರಿಗೆ ಆರ್ಥಿಕ ಸಹಾಯ ನೀಡಬೇಕು ಎಂಬ ಉದ್ದೇಶದಿಂದ ಪಿಎಂ ಕಿಸಾನ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದರು. ಇದು ದೇಶದ ಹಲವಾರು ರೈತರಿಗೆ ಆರ್ಥಿಕವಾಗಿ ಸಹಾಯ ಆಗಿದೆ. ಈಗಾಗಲೇ ದೇಶದ ರೈತರಿಗೆ 16 ಕಂತುಗಳ ಹಣವನ್ನು ದೇಶದ ರೈತರ ಖಾತೆಗಳಿಗೆ 2,000 ರೂಪಾಯಿಯಂತೆ ಹಣ ಜಮಾ ಆಗಿದೆ. ಈಗ ಮುಂದಿನ ಕಂತಿನ ಕಿಸಾನ್ ಯೋಜನೆಯ ಹಣವನ್ನು ಪಡೆಯಬೇಕು ಎಂದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಕೆಲವು ರೈತರು ಇನ್ನು ಪಿ ಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿಲ್ಲ ಅಂತವರು ಈಗ ಹೊಸದಾಗಿ ನೋಂದಣಿ ಮಾಡಲು ಸಾಧ್ಯ..
ಪಿ ಎಂ ಕಿಸಾನ್ ಸಮ್ಮನ್ ಯೋಜನೆಗೆ ನೋಂದಣಿ ಆಗುವುದು ಹೇಗೆ?
- ಹಂತ 1: ಮೊದಲು ನೀವು PM ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್‌ಗೆ ಹೋಗಬೇಕು. ಅಧಿಕೃತ ವೆಬ್ಸೈಟ್ https://pmkisan.gov.in/.
- ಹಂತ 2: ಹೊಸದಾಗಿ ರೈತರು ನೋಂದಣಿ ಆಗಲಿ ನೀವು ಹೊಸ ರೈತ ನೋಂದಣಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
- ಹಂತ 3: ನಂತರ ನೀವು ಅಪ್ಲಿಕೇಶನ್ ನಲ್ಲಿ ನಿಮ್ಮ ಆಸ್ತಿಯ ಮತ್ತು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ನಂತರ ನಿಮ್ಮ ಆಧಾರ್ ಲಿಂಕ್ ಗೆ ಜೋಡಣೆ ಆಗಿರುವ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಭರ್ತಿ ಮಾಡಿ.
- ಹಂತ 4: ನಂತ್ರ ಕ್ಯಾಪ್ಚಾ ಕೋಡ್ ಹಾಗೂ ನೋಂದಣಿ ಮೊಬೈಲ್ ಸಂಖ್ಯೆಗೆ ಬಂದಿರುವ OTP ಕ್ಲಿಕ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
16 ನೇ ಕಂತಿನ ಹಣ ಯಾವಾಗ ಬಿಡುಗಡೆ ಆಯಿತು?: ರೈತರಿಗೆ ವಾರ್ಷಿಕ 6,000 ರೂಪಾಯಿ ಸಿಗುವ ಸೌಲಭ್ಯ ಸಿಗುತ್ತಿದೆ. 28 ಫೆಬ್ರವರಿ 2024 ರಂದು ರೈತರ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯ 16 ನೇ ಕಂತಿನ ಹಣವೂ ನೇರವಾಗಿ ರೈತರ ಖಾತೆಗೆ ಬಿಡುಗಡೆ ಆಗಿತ್ತು.
ಇದನ್ನೂ ಓದಿ: 55 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಶಕ್ತಿಯುತ ಕಾರ್ಯಕ್ಷಮತೆಯನ್ನು ಹೊಂದಿರುವ 5 ರೀತಿಯ ಲ್ಯಾಪ್ಟಾಪ್ ಗಳು!
ಈ ಯೋಜನೆಯ ಲಾಭಗಳು :-
- ಆರ್ಥಿಕ ನೆರವು: ಈ ಯೋಜನೆಯು ಭಾರತದ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ ಆರ್ಥಿಕ ಸಹಾಯ ಸಿಗುತ್ತಿದೆ. ಇದನ್ನು ರೈತರು ಕೃಷಿ ಉಪಕರಣಗಳು, ಇತರ ಬೀಜಗಳು, ಗೊಬ್ಬರ ಮತ್ತು ಕೃಷಿ ಖರ್ಚುಗಳನ್ನು ಖರೀದಿಸಲು ಬಳಸಲು ಸಹಾಯ ಆಗುತ್ತದೆ.
- ಉತ್ಪಾದಕತೆಯನ್ನು ಹೆಚ್ಚಿಸುವುದು: ಇದು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳು ಮತ್ತು ಗೊಬ್ಬರಗಳನ್ನು ಉಪಯೋಗಿಸುವುದರಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಆಗುತ್ತದೆ.
- ರೈತರ ಜೀವನಮಟ್ಟವನ್ನು ಸುಧಾರಿಸುವುದು: ಈ ಯೋಜನೆಯು ರೈತರ ಆದಾಯವನ್ನು ಹೆಚ್ಚಿಸುವ ಮೂಲಕ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಮೂಲಕ ರೈತರ ಜೀವನಮಟ್ಟ ಸುಧಾರಣೆ ಆಗುತ್ತದೆ.
- ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು: ಗ್ರಾಮೀಣ ಪ್ರದೇಶಗಳಲ್ಲಿ ಇರುವ ರೈತರಿಗೆ ಆರ್ಥಿಕ ಮಟ್ಟ ಸುಧಾರಿಸಲು ಈ ಹಣವೂ ಬಹಳ ಉಪಯೋಗ ಆಗಲಿದೆ. ಇದರಿಂದ ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ.
ರೈತರು ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ PM ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ತಮ್ಮ ಹತ್ತಿರದ ಕೃಷಿ ಕಚೇರಿಯನ್ನು ಸಂಪರ್ಕಿಸಬಹುದು. ಹಾಗೂ ನೀವು ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ್ ಒನ್ ಕೇಂದ್ರ ಅಥವಾ ನಿಮ್ಮ ಹತ್ತಿರದ ರೈತ ಕಚೇರಿಗೆ ಭೇಟಿ ನೀಡಬಹುದು.
ಇದನ್ನೂ ಓದಿ: ಮಹಿಳೆಯರು ಈ ಯೋಜನೆಯಲ್ಲಿ 2 ಲಕ್ಷ ಹೂಡಿಕೆ ಮಾಡಿದರೆ 30,000 ಲಾಭ ಪಡೆಯಬಹುದು.