ದೇಶದ ಕೋಟ್ಯಂತರ ರೈತರಿಗೆ ನೆರವು ನೀಡಲು ಮೋದಿ ಸರ್ಕಾರ ಆರಂಭಿಸಿದ ಯೋಜನೆಯ ಪಿಎಂ ಕಿಸಾನ್ ಸಮ್ಮಾನ್ ಯೋಜನೆ. ಈಗಾಗಲೆ ನರೇಂದ್ರ ಮೋದಿ ಅವರು ದೇಶದ ಎಲ್ಲ ರೈತರಿಗೆ 16 ಕಂತಿನ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣೆಯ ಅಂಗವಾಗಿ ಬಿಡುಗಡೆ ಆಗದೆ ಉಳಿದಿದ್ದ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ದಿನಾಂಕ ನಿಗದಿ ಮಾಡಿದೆ. ಯಾವಾಗ ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರಲಿದೆ ಎಂಬುದನ್ನು ತಿಳಿಯೋಣ.
ಪ್ರಧಾನಿ ಹುದ್ದೆಗೆ ಅಧಿಕಾರ ಸ್ವೀಕರಿಸಿದ ನಂತರ ಮೊದಲು ಪಿಎಂ ಕಿಸಾನ್ ಯೋಜನೆಗೆ ಸಹಿ ಮಾಡಿರುವ ಮೋದಿ :- ನರೇಂದ್ರ ದಾಮೋದರದಾಸ್ ಮೋದಿ ಅವರು ಸತತವಾಗಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ಮಾಡಿರುವ ಕೆಲಸ ಏನೆಂದರೆ ಪಿಎಂ ಕಿಸಾನ್ ಯೋಜನೆಯ 17 ನೇ ಕಂತಿನ ಹಣ ಬಿಡುಗಡೆಯ ಪತ್ರಕ್ಕೆ ಸಹಿ ಹಾಕಿದ್ದು. ಇದರಿಂದ ಮೋದಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದು ತಿಳಿದಿದೆ. ಇದರ ಬಳಿಕ ಈಗ ಮೋದಿ ಅವರು ಒಮ್ಮೆಲೇ ಇಡಿ ದೇಶದ ಜನರಿಗೆ ಯಾವಾಗ ಮತ್ತೆ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡುತ್ತಾರೆ ಎಂದು ರೈತರು ಕುತೂಹಲದಿಂದ ಕಾಯುತ್ತಾ ಇದ್ದರೂ. ಈಗ ನರೇಂದ್ರ ಮೋದಿ ಅವರು ಜೂನ್ 18 ರಂದು ಪಿಎಂ ಕಿಸಾನ್ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಜೂನ್ 18 2024 ರಂದು ಪಿಎಂ ಕಿಸಾನ್ ಯೋಜನೆಯ 17 ನೇ ಕಂತಿನ ಹಣ ಬಿಡುಗಡೆಯ ಆಗಲಿದೆ:- ನಾಳೆ ಪಿಎಂ ಮೋದಿ ಅವರು ತಾವು ಚುನಾವಣೆಗೆ ಅಭ್ಯರ್ಥಿ ಆಗಿರುವ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಇದೆ ಸಮಯದಲ್ಲಿ ದೇಶದ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣವನ್ನು ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ: ಜಿಯೋ 28-ದಿನಗಳ ಅದ್ಭುತ ಯೋಜನೆ;13 OTT ಚಾನಲ್‌ಗಳು ಮತ್ತು 6GB ಹೆಚ್ಚುವರಿ ಡೇಟಾವನ್ನು ಪಡೆಯಿರಿ!
ರೈತರಿಗೆ ಎಷ್ಟು ಹಣ ಬಿಡುಗಡೆ ಮಾಡಲಾಗುತ್ತಿದೆ?
ದೇಶದ ರೈತರಿಗೆ ಪಿಎಂ ಕಿಸಾನ್ ಯೋಜನೆಯ 17 ನೇ ಕಂತಿನ ಹಣವು 9.26 ಕೋಟಿ ಫಲಾನುಭವಿಗಳಿಗೆ ಸಿಗುತ್ತಿದೆ. ಕೇಂದ್ರ ಸರ್ಕಾರವು ಈ ಯೋಜನೆಗೆ 20 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಹೇಳಿಕೆ ಹೀಗಿದೆ :- ನರೇಂದ್ರ ಮೋದಿ ಅವರು ಈ ಹಿಂದೆ ಎರಡು ಬಾರಿ ಪ್ರಧಾನಿ ಆದಾಗಲೂ ಸಹ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರು. ಈಗಲೂ ಕೃಷಿ ಗೆ ಹೆಚ್ಚಿನ ಒತ್ತು ನೀಡಿ ಅಧಿಕಾರ ಸ್ವೀಕರಿಸದ ಬಳಿಕ ಮೊದಲು ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡುತ್ತಿರುವುದು ಕೃಷಿ ಗೆ ಪ್ರಧಾನಿಗಳು ಏಷ್ಟು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲದೆ ಪ್ರಧಾನಿಗಳು ಇನ್ನಷ್ಟು ಕೃಷಿಕರಿಗೆ ಉಪಯೋಗ ಆಗುವ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ನೀಡುತ್ತಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಪಿಎಂ ಕಿಸಾನ್ ಯೋಜನೆಯ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಒಮ್ಮೆಲೇ ದೇಶದ ಎಲ್ಲ ರೈತರಿಗೆ ಯಾವುದೇ ರೀತಿಯ ತೊಂದರೆ ಇಲ್ಲದೆಯೇ ಒಮ್ಮೆಲೇ ಹಣ ನೀಡುತ್ತಿರುವುದು ಪ್ರಧಾನಿ ಮೋದಿ ಅವರ ಸಾಧನೆ ಎನ್ನಬಹುದು. ಬೇರೆ ಎಲ್ಲ ಯೋಜನಗಳು ತಾಂತ್ರಿಕ ದೋಷ ಅಥವಾ ಇನ್ನೇನಾದರೂ ಕಾರಣಗಳನ್ನು ಹೇಳಿ ಹಣ ಬಾರದೆ ಇರುವುದು ಇದೆ. ಆದರೆ ಪಿಎಂ ಕಿಸಾನ್ ಹಣ ಮಾತ್ರ ಬಿಡುಗಡೆ ಅದ ದಿನವೇ ರೈತರ ಖಾತೆಗೆ ಜಮಾ ಆಗುತ್ತದೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಉಚಿತ ಹೊಸ ಸ್ಯಾಮ್ ಸಂಗ್ ಮೊಬೈಲ್ ವಿತರಣೆ