ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣ ಪಡೆಯಲು ನಾಳೆ ಒಳಗೆ ಕಡ್ಡಾಯವಾಗಿ ಈ ಕೆಲಸ ಮಾಡಿ

PM Kisan Yojana E Kyc

ರೈತರಿಗಾಗಿ ಕೇಂದ್ರ ಸರ್ಕಾರವು 2019 ರಲ್ಲಿ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯು ಪ್ರತಿ ವರ್ಷ 6,000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತಾ ಬಂದಿದೆ. ಈಗಾಗಲೇ 15 ಕಂತುಗಳನ್ನು ಪೂರ್ಣಗೊಳಿಸಿ, ಸಧ್ಯದಲ್ಲೇ ಇನ್ನೊಂದು ಕಂತಿನ ಹಣವೂ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ 16ನೇ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ನೀವು ಮುಂಚಿತವಾಗಿ ಒಂದು ಮುಖ್ಯ ಕೆಲಸ ಮಾಡಬೇಕು.

WhatsApp Group Join Now
Telegram Group Join Now

ಪಿಎಂ ಕಿಸಾನ್ ಕಂತಿನ ಹಣ ಬಾರದೆ ಇದ್ದಾರೆ ಏನು ಮಾಡಬೇಕು?: ಈಗಾಗಲೇ ನೀವು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ ಆಗಿದ್ದಲ್ಲಿ ನಿಮಗೆ ಈಗಾಗಲೇ 2,000 ನಿಮಗೆ ಜಮಾ ಆಗುತ್ತಿದ್ದಾರೆ ನೀವು ಈಗಲೇ ನಿಮ್ಮ ಬ್ಯಾಂಕ್ ಗೆ ಹೋಗಿ ಇ ಕೆ ವೈ ಸಿ ಮಾಡಿಸಬೇಕು ಇಲ್ಲವೇ ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಇದ್ದರೆ ಅಲ್ಲಿ ಸಹ ಇ ಕೆ ವೈ ಸಿ ಮಾಡಬೇಕು. ನೀವು ಇ ಕೆ ವೈ ಸಿ ಮಾಡಿಸದೆ ಇದ್ದಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ. ಇ ಕೆ ವೈ ಸಿ ಮಾಡಲು ಕೊನೆಯ ದಿನಾಂಕ 31 ಜನವರಿ 2024. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

16ನೇ ಕಂತಿನ ಹಣ ಯಾವಾಗ ಬರುತ್ತದೆ.?: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16 ನೇ ಕಂತು ಫೆಬ್ರವರಿಯಲ್ಲಿ ಅಥವಾ ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದರ ಬಗ್ಗೆ ಇಲಾಖೆಯಿಂದ ಯಾವುದೇ ನಿಖರವಾದ ಮಾಹಿತಿ ಇಲ್ಲ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಂದಾಯ ಇಲಾಖೆಯಿಂದ1820 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಭರ್ತಿಗೆ ಅನುಮತಿ ಸಿಕ್ಕಿದೆ. ಪ್ರತಿ ವರ್ಷ 500 ಹುದ್ದೆಗಳ ನೇಮಕಕ್ಕೆ ಇಲಾಖೆ ಯೋಚಿಸಿದೆ

ಪಿಎಂ ಕಿಸಾನ್ ಸಮ್ಮಾನ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಹೋಗಿ.
  • ಮುಖಪುಟದಲ್ಲಿ ಕಾಣುವ ರೈತರ ಕಾರ್ನರ್‌ಗೆ ಎಂಬ ಆಪ್ಷನ್ ಗೆ ಹೋಗಿ.
  • ನ್ಯೂ ಫಾರ್ಮರ್‌ ರಿಜಿಸ್ಟ್ರೇಷನ್‌ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಗ್ರಾಮೀಣ ರೈತರ ನೋಂದಣಿ ಅಥವಾ ನಗರ ರೈತರ ನೋಂದಣಿ ಎಂಬ ಎರಡು ಆಪ್ಷನ್ ಇರುತ್ತದೆ. ನೀವು ಯಾವ ರೈತರು ಎಂಬುದನ್ನು ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ನಂಬರ್, ನಿಮ್ಮ ರಾಜ್ಯದ ಹೆಸರು ಮತ್ತು ನಿಮ್ಮ ವಿಳಾಸವನ್ನು ಭರ್ತಿ ಮಾಡಿ.
  • ’get OTP’ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ otp ಯನ್ನು ಭರ್ತಿ ಮಾಡಿ.
  • ಆಧಾರ್ ಕಾರ್ಡ್ ದೃಢೀಕರಣ ಮಾಡಬೇಕಾಗುತ್ತದೆ.
  • ಆಧಾರ್ ಕಾರ್ಡ್ ದೃಢೀಕರಣ ಪೂರ್ಣಗೊಂಡ ಬಳಿಕ ನಿಮ್ಮ ಭೂಮಿಯ ವಿವರಗಳನ್ನು ಹಾಕಬೇಕು.
  • ನಂತರ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬೇಕು.

ಪಿಎಂ ಕಿಸಾನ್ ಸಮ್ಮಾನ ಯೋಜನೆಯ ನಿಮ್ಮ ಖಾತೆಯ ಸ್ಥಿತಿಯನ್ನು ತಿಳಿಯುವುದು ಹೇಗೆ?

  • ಪಿಎಂ ಕಿಸಾನ್ ಮೊಬೈಲ್ ಆಪ್‌ ಡೌನ್ಲೋಡ್ ಮಾಡಿ ರೈತರ ಕಾರ್ನರ್ ಗೆ ಹೋಗಿ ಫಲಾನುಭವಿ ಸ್ಥಿತಿ ಎಂಬ ಆಪ್ಷನ್ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ನಿಮ್ಮ ಪಿಎಂ ಕಿಸಾನ್ ಖಾತೆಯ ಸಂಖ್ಯೆಯನ್ನು ಹಾಕಿ.
  • ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಗೇಟ್ ಡೇಟಾ ಬಟನ್ ಒತ್ತಿದರೆ ನಿಮ್ಮ ಖಾತೆಯ ಪೂರ್ಣ ವಿವರ ಸಿಗುತ್ತದೆ.

ಇದನ್ನೂ ಓದಿ: Dolby Atmos ಹೊಂದಿರುವ TECNO POVA 6 Pro 5G ಸದ್ಯದಲ್ಲೇ ಮಾರುಕಟ್ಟೆಗೆ, ಖರೀದಿಗೆ ಕಾಯುತ್ತಾ ನಿಂತ ಜನ