ಮಹಿಳಾ ರೈತರಿಗೆ ಬಂಪರ್ ಗಿಫ್ಟ್; ಪಿ.ಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಹಣ ಡಬಲ್..

PM Kisan Yojana

ಮಹಿಳೆಯರ ಸಬಲೀಕರಣ ಮತ್ತು ರೈತರ ಬದುಕನ್ನು ಉನ್ನತ ಮಟ್ಟಕ್ಕೆ ತರುವಲ್ಲಿ ಕೇಂದ್ರ ಸರಕಾರ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬ ರೈತನ ಮೊಗದಲ್ಲಿ ಮಂದಹಾಸ ಇರಬೇಕು. ಆರ್ಥಿಕವಾಗಿ ಸಾಮಾಜಿಕವಾಗಿ ರೈತನ ಜೀವನ ಉತ್ತಮವಾಗಿ ಇರಬೇಕು ಎಂಬುದು ಕೇಂದ್ರ ಸರಕಾರದ ಆಶಯ. ಅದರಿಂದಲೇ ಈಗಾಗಲೇ ರೈತರಿಗೆ ಹಲವಾರು ಬಗೆಯ ಯೋಜನೆಗಳನ್ನು ಕೇಂದ್ರ ಸರಕಾರ ನೀಡುತ್ತಿದೆ. ರೈತ ದೇಶದ ಆಸ್ತಿ. ಇಡೀ ದೇಶಕ್ಕೆ ಅನ್ನ ನೀಡುವ ರೈತ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿ ಬಹಳ ಆಗಿತ್ತು. ಇದನ್ನು ಗಮನಿಸಿದ ಕೇಂದ್ರ ಈಗಾಗಲೇ ಪ್ರತಿಯೊಬ್ಬ ರೈತನ ಕುಟುಂಬದ ಯಜಮಾನನ ಖಾತೆಗೆ ವರುಷಕ್ಕೆ 6,000 ರೂಪಾಯಿ ನೀಡುವ ಮೂಲಕ ಆರ್ಥಿಕವಾಗಿ ರೈತನ ಕಷ್ಟವನ್ನು ಸ್ವಲ್ಪ ಮಟ್ಟಿಗೆ ದೂರ ಮಾಡಿತ್ತು.

WhatsApp Group Join Now
Telegram Group Join Now

ಏನಿದು ಹೊಸ ಸಿಹಿ ಸುದ್ದಿ?: ಮಹಿಳಾ ರೈತರ ಪಾಲಿಗೆ ಆಶಾದಾಯಕವಾಗಿ ಈಗಾಗಲೇ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 6,000 ರೂಪಾಯಿ ಹಾಕಿ ಮಧ್ಯವರ್ತಿಗಳ ಕಾಟದಿಂದ ತಪ್ಪಿಸಿಕೊಂಡು ನೇರವಾಗಿ ರೈತರ ಬದುಕಿಗೆ ಹೊಸ ಭರವಸೆ ನೀಡಿದೆ. 2019 ರಿಂದ ಆರಂಭವಾದ ಕಿಸಾನ್ ಸಮ್ಮಾನ್ (kissan samman) ಯೋಜನೆ ಈಗಾಗಲೇ ಭಾರತದ 11 ಕೋಟಿ ರೈತ ಬಾಂಧವರಿಗೆ ಪ್ರತಿ ವರುಷ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂಪಾಯಿಗಳನ್ನು ನೀಡಿದೆ. ಹಾಗೆಯೇ ಮಹಿಳಾ ರೈತ ಖಾತೆಗೆ ಸಹ 6,000 ರೂಪಾಯಿಯನ್ನು ನೀಡುತ್ತಿತ್ತು . ಈಗ ಮಹಿಳಾ ರೈತರಿಗೆ ನೀಡುವ ಹಣವನ್ನು 12,000 ನೀಡಲು ಸರಕಾರ ಮುಂದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೇ ತಿಂಗಳಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಜನರನ್ನು ಓಲೈಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾ ಇದ್ದರೆ. ಅದರಂತೆ ಬಿಜೆಪಿ ಸರಕಾರ ಮಹಿಳಾ ರೈತರಿಗೆ ನೀಡುತ್ತಿರುವ 6,000 ರೂಪಾಯಿ ಸಹಾಯಧನವನ್ನು 12,000 ದವರೆಗೆ ಹೆಚ್ಚಿಸಲು ಯೋಚಿಸುತ್ತಿದೆ. ಅಂದರೆ ಈಗ ನೀಡುವ ಹಣದ ಎರಡು ಪಟ್ಟು ಹಣ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಈ ಸುದ್ದಿ ನಿಜಕ್ಕೂ ರೈತರಿಗೆ ಸಂತಸ ತಂದಿದೆ. ಉಳಿದ ರೈತರಿಗೆ 8,000 ರೂಪಾಯಿ ನೀಡಲು ತೀರ್ಮಾನಿಸಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಕಿಸಾನ್ ಸಮ್ಮನ್ (kisan samman) ಯೋಜನೆಯಲ್ಲಿ ಮಹಿಳೆಯರಿಗೆ ಹಣವನ್ನು ಹೆಚ್ಚು ಮಾಡುವುದರಿಂದ ಆಗುವ ಲಾಭಗಳೇನು?

  • ಈಗಾಗಲೇ ಬಡ ಮಹಿಳಾ ರೈತರ ಕುಟುಂಬದ ನಿರ್ವಹಣೆಗೆ ಸ್ವಲ್ಪ ಸಹಾಯ ಆಗಿದೆ. ಅದು ಮುಂದುವರೆಯುತ್ತದೆ.
  • ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿರುವ ರೈತನ ಹೊರೆ ಸ್ವಲ್ಪ ಕಡಿಮೆ ಆಗಲಿದೆ.
  • ಸಾಲ ಮಾಡುವ ಸಂಭವ ಸ್ವಲ್ಪ ಕಡಿಮೆ ಆಗಲಿದೆ.
  • ಸರಕಾರ ನಮ್ಮೊಂದಿಗೆ ಇದೆ ಎಂಬ ಭಾವನೆ ಜನರ ಮನಸ್ಸಿಗೆ ಬರುತ್ತದೆ.
  • ಕೂಲಿ ಮಾಡುವ ಮಹಿಳಾ ರೈತರಿಗೆ ಹೆಚ್ಚಿನ ಆದಾಯ ಸಿಕ್ಕಂತೆ ಆಗುತ್ತದೆ.
  • ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕಿಸಾನ್ ಸಮ್ಮನ್ ಯೋಜನೆಯ ಹಣ ಬಾರದೆ ಇದ್ದರೆ ಹೀಗೆ ಮಾಡಿ:- 16ನೇ ಕಂತಿನ ಹಣ ಬರುವ ಫೆಬ್ರುವರಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅದಕ್ಕೂ ಮೊದಲು ನಿಮ್ಮ ಹೆಸರು ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ಇದೆಯೇ ಎಂಬುದನ್ನು ಪರೀಕ್ಷಿಸಿ. ಇಲ್ಲವಾದಲ್ಲಿ ಈ ಕೆಳಗಿನ ಹಂತಗಳನ್ನು ಪಾಲಿಸಿ.

  • ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂಬುದನ್ನು ಪರೀಕ್ಷಿಸಿ ಆಧಾರ್ ಲಿಂಕ್ ಮಾಡಿಸಬೇಕು.
  • ನಿಮ್ಮ ಹೆಸರಿನಲ್ಲಿ ಜಾಮೀನು ಇರುವ ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಬೇಕು.
  • ನಿಮ್ಮ ಖಾತೆಯ ಇ ಕೆ ವೈ ಸಿ ಆಗದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಗೆ ಹೋಗಿ ಇ ಕೆ ವೈ ಸಿ ಮಾಡಿಸಬೇಕು.

ಇದನ್ನೂ ಓದಿ: ಇನ್ನು ಮುಂದೆ ಮೊಬೈಲ್ ಸಲುವಾಗಿ ಇಂಟರ್ನೆಟ್ ಬೇಕಿಲ್ಲ, ಆಫ್ ಲೈನ್ ಅಲ್ಲಿಯೇ ಯೂಟ್ಯೂಬ್ ನೋಡಬಹುದು

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ, ಇನ್ನು ನೀವು ತೆಗೆದುಕೊಂಡ ಸಾಲಕ್ಕೆ ಬಡ್ಡಿ ಕಟ್ಟುವ ಅವಶ್ಯಕತೆ ಇಲ್ಲ, ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಯಬೇಕಾ?