ಪಿಎಂ ಕಿಸಾನ್ ಯೋಜನೆ ಕೇಂದ್ರ ಸರಕಾರ ಭಾರತದಾದ್ಯಂತ ರೈತರಿಗೆ ಸಹಾಯಧನ ನೀಡುವ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಪ್ರತಿ ರೈತ ಕುಟುಂಬದ ಯಜಮಾನನಿಗೆ ವರುಷಕ್ಕೆ 6,000 ರೂಪಾಯಿ ಹಣ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಬರುತ್ತದೆ. ಕೃಷಿಕರ ಜೀವನಕ್ಕೆ ಸ್ವಲ್ಪ ಸಹಾಯ ಆಗಲಿ ಎಂದು ಶುರುವಾದ ಯೋಜನೆಯು ಹಲವಾರು ತಾಂತ್ರಿಕ ದೋಷಗಳಿಂದ ಕೆಲವರಿಗೆ ಸಿಗುತ್ತಿಲ್ಲ. ತಪ್ಪಾದ ಮಾಹಿತಿಯನ್ನು ಅಂದರೆ ಆಧಾರ್ ಸಂಖ್ಯೆ, ಬ್ಯಾಂಕ್ ಅಕೌಂಟ್ ನಂಬರ್ ತಪ್ಪಿದ್ದರೆ ನಿಮಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣವೂ ಬರುವುದಿಲ್ಲ. ಆದರೆ ನೀವು ನೀಡಿದ ಮಾಹಿತಿಯನ್ನು ಪುನಃ ಪರಿಶೀಲನೆ ಮಾಡಿ ಬದಲಾಯಿಸಬಹುದು.
ತಪ್ಪಾದ ಮಾಹಿತಿಯನ್ನು ನೀಡಿ ಹಲವಾರು ರೈತರು ಯೋಜನೆಯ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈಗ ಕಿಸಾನ್ ಸಮ್ಮಾನ್ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ ಪಡೆಯಬಹುದು. ಅದರಂತೆಯೇ ನಿಮ್ಮ ಮಾಹಿತಿಗಳ ತಿದ್ದುಪಡಿಗೆ ಸಹ ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕಿಸಾನ್ ಸಮ್ಮಾನ ಯೋಜನೆಗೆ ನೀಡಿದ ಆಧಾರ್ ಕಾರ್ಡ್ ತಿದ್ದುಪಡಿ ವಿಧಾನ :-
- ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಭೇಟಿ ನೀಡಿ ನಂತರ ಫಾರ್ಮರ್ಸ್ ಕಾರ್ನರ್ ಎಂಬ ಆಪ್ಷನ್ ಕ್ಲಿಕ್ ಮಾಡಿ.
- ನಂತರ ಆಧಾರ್ ವೈಫಲ್ಯದ ದಾಖಲೆಗಳನ್ನು ಸಂಪಾದಿಸಿ ಎಂಬ ಆಪ್ಷನ್ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ, ನೋಂದಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ಕ್ಯಾಪ್ಚಾ ಕೋಡ್‌ನೊಂದಿಗೆ ನಮೂದಿಸಿ ಪರಿಶೀಲನೆ ಮಾಡಬೇಕು.
- ಪರಿಶೀಲನೆ ಆದ ಬಳಿಕ ನೀವು ನಿಮ್ಮ ಆಧಾರ್ ಕಾರ್ಡ್ ಪ್ರಕಾರ ಹೆಸರನ್ನು ಚೇಂಜ್ ಮಾಡಿಕೊಳ್ಳಬಹುದು.
ಕಿಸಾನ್ ಯೋಜನೆಗೆ ಸಲ್ಲಿಸಿದ ಬ್ಯಾಂಕ್ ಖಾತೆಯ ವಿವರಗಳ ತಿದ್ದುಪಡಿ:- ರೈತರಿಗೆ ಹಣ ವರ್ಗಾವಣೆ ಆಗಲು ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾದ ರೀತಿಯಲ್ಲಿ ನೀಡುವುದು ಬಹಳ ಅಗತ್ಯ ಇದೆ. ಯಾವುದೇ ಮಧ್ಯವರ್ತಿ ಇಲ್ಲದೆಯೇ ನೇರವಾಗಿ ಫಲಾನುಭವಿಗಳಿಗೆ ಹಣ ಸಿಗಬೇಕು ಎಂದು ಕೇಂದ್ರ ಸರ್ಕಾರ ನೇರವಾಗಿ ಬ್ಯಾಂಕ್ ಗೆ ಹಣ ವರ್ಗಾವಣೆ ಮಾಡುತ್ತಿದೆ. ಯಾವುದೇ ಕಾರಣದಿಂದ ನಿಮ್ಮ ಬ್ಯಾಂಕ್ ಖಾತೆ ಹಣ ಚಲಾವಣೆ ಇಲ್ಲದೆಯೇ ಕ್ಲೋಸ್ ಆದರೆ ಸಹ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಆಗ ನೀವು ಮತ್ತೊಂದು ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬೇಕು ಬ್ಯಾಂಕ್ ಖಾತೆಯ ತಿದ್ದುಪಡಿ ವಿಧಾನ ಹೀಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ಗೆ ಭೇಟಿ ನೀಡಿ ನಂತರ ಫಾರ್ಮರ್ಸ್ ಕಾರ್ನರ್ ಎಂಬ ಆಪ್ಷನ್ ಕ್ಲಿಕ್ ಮಾಡಿ, ಬ್ಯಾಂಕ್ ಖಾತೆಯ ಮಾಹಿತಿಯನ್ನು ಬದಲಾಯಿಸುವ ಮೊದಲು ಫಲಾನುಭವಿ ಸ್ಥಿತಿ ಎಂಬ option ಕ್ಲಿಕ್ ಮಾಡಿ ನಿಮ್ಮ ಕಿಸಾನ್ ಸಮ್ಮಾನ್ ಖಾತೆಯ ವಿವರಗಳನ್ನು ಪರಿಶೀಲನೆ ಮಾಡಿ ನಂತರ NCPI ಆಧಾರ್ ಲಿಂಕ್ ಮಾಡುವ ಫಾರ್ಮ್ ಹುಡುಕಲು ಸಲಹೆ ಸೂಚನೆಗಳನ್ನು ನೀಡುತ್ತದೆ. ಅಲ್ಲಿ ಆಧಾರ್ ಲಿಂಕ್ ಮಾಡುವ ಫಾರ್ಮ್ ಡೌನ್ಲೋಡ್ ಮಾಡಿ. ಡೌನ್ಲೋಡ್ ಮಾಡಿದ ಫಾರ್ಮ್ ಭರ್ತಿ ಮಾಡಿ ಬ್ಯಾಂಕ್ ಗೆ ಹೋಗಿ ಸಲ್ಲಿಸಬೇಕು. ನಂತರ ಬ್ಯಾಂಕ್ ನಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ಪರಿಶೀಲನೆ ಮಾಡಿ ವಿವರಗಳನ್ನು ಸಿಲ್ಲಿಸಿದ ನಂತರ ನಿಮಗೆ ಹಣ ಜಮಾ ಆಗುತ್ತದೆ.
ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ?
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಫಾರ್ಮರ್ಸ್ ಕಾರ್ನರ್ ಎಂಬ ಆಪ್ಷನ್ ಕ್ಲಿಕ್ ಮಾಡಿ ನಂತರ ಸ್ವಯಂ-ನೋಂದಾಯಿತ ರೈತರ ಅಪ್‌ಡೇಟ್ ಎಂಬ ಆಯ್ಕೆ ಮಾಡಿ. ನಂತರ ನಿಮ್ಮ ಹಳೆಯ ಮೊಬೈಲ್ ಸಂಖ್ಯೆ ಮತ್ತು captcha ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ಹಾಕಿ ಅದನ್ನು ಒಮ್ಮೆ ಪರಿಶೀಲನೆ ಗೆ ಕೇಳುತ್ತದೆ ಮತ್ತೆ ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಹಾಕಿದರೆ ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಆಗುತ್ತದೆ.
ಇದನ್ನೂ ಓದಿ: ನೀವು ಪಿಯುಸಿಯನ್ನು ಮುಗಿಸಿದ್ದೀರಾ? ಶಿವಮೊಗ್ಗ ಜಿಲ್ಲೆ ಗ್ರಾಮ ಪಂಚಾಯಿತಿ ಗಳಲ್ಲಿ ನೇಮಕಾತಿ; 14 ಹುದ್ದೆಗಳು ಖಾಲಿ ಇವೆ..
ಇದನ್ನೂ ಓದಿ: ಮಾರ್ಚ್ 31 ರೊಳಗೆ ಇದೊಂದು ಕೆಲಸವನ್ನು ಮಾಡಿ ನಿಮ್ಮ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಿ