ಸಾಮಾನ್ಯವಾಗಿ ನಾವು ಯಾವುದೇ ಬ್ಯಾಂಕ್ ಅಥವಾ ಯಾವುದೇ ದಲ್ಲಾಳಿಗಳ ಬಳಿ ಸಾಲ ಪಡೆದುಕೊಳ್ಳಬೇಕು ಎಂದರೆ ನಮ್ಮ ಮನೆ ಪತ್ರ ಅಥವಾ ನಮ್ಮ ಜಾಮೀನಿನ ಪಾತ್ರವನ್ನು ಅಡ ಇಟ್ಟು ನಂತರ ಸಾಲ ತೆಗೆದುಕೊಳ್ಳಬೇಕು. ಆದರೆ ಕೇಂದ್ರ ಸರ್ಕಾರವು ಈಗ ಯಾವುದೇ ಪತ್ರವನ್ನು ಅಥವಾ ಒಡವೆಯನ್ನು ಅಡ ಇಡದೆ ನಿಮಗೆ ಬರೋಬ್ಬರಿ 10 ಲಕ್ಷ ರುಪಾಯಿ ಸಾಲವನ್ನು ನೀಡುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಅಥವಾ ಯಾವುದೇ documents ನೀಡದೆ ಎಲ್ಲಿ ಸಾಲವನ್ನು ಪಡೆಯುವುದು ಎಂದು ನೀವು ಯೋಚಿಸುತ್ತಾ ಇದ್ದರೆ ಈಗಲೇ ಪಿಎಂ ಮುದ್ರಾ ಯೋಜನೆಯ ಬಗ್ಗೆ ತಿಳಿಯಿರಿ.
ಪಿಎಂ ಮುದ್ರಾ ಯೋಜನೆಯ ಮಾಹಿತಿ ;- ಇದು ಭಾರತ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಇದು ಸಹ ಒಂದಾಗಿದ್ದು, ಈ ಯೋಜನೆಯ ಮೂಲ ಉದ್ದೇಶ ದೇಶದ ಸೂಕ್ಷ್ಮ ವ್ಯವಹಾರ ವ್ಯಾಪಾರ ಘಟಕಗಳ ಅಭಿವೃದ್ಧಿಪಡೆಸುವುದರ ಜೊತೆಗೆ ಆರ್ಥಿಕ ನೆರವು ನೀಡುವುದಾಗಿ. ಈ ಯೋಜನೆಯನ್ನು ೨೦೧೬ ರ ಕೇಂದ್ರ ಹಣಕಾಸು ಬಜೆಟ್ ಮಂಡನೆಯಲ್ಲಿ ಘೋಷಣೆ ಮಾಡಲಾಯಿತು.
ಮೂರು ವಿಭಾಗಗಳಲ್ಲಿ ಪಿಎಂ ಮುದ್ರಾ ಯೋಜನೆಯ ಸಾಲ ಸಿಗುತ್ತದೆ :-
ಈ ಯೋಜನೆಯಲ್ಲಿ ಮೂರು ಹಂತಗಳಲ್ಲಿ ಸಾಲವನ್ನು ಪಡೆಯಬಹುದು. ಸಾಲ ನೀಡಲು ಮೂರು ವರ್ಗಗಳು ಇವೆ. ಮೊದಲನೆಯದಾಗಿ ಶಿಶು ಸಾಲ ಯೋಜನೆ. ಈ ಯೋಜನೆಯಲ್ಲಿ 50 ಸಾವಿರ ರೂಪಾಯಿಗಳ ವರೆಗೆ ಸಾಲವನ್ನು ಪಡೆಯಬಹುದು. ಎರಡನೆಯ ವರ್ಗ ಕಿಶೋರ್ ಸಾಲ ಯೋಜನೆ, ಈ ಯೋಜನೆಯಲ್ಲಿ ನೀವು 50,000 ರೂಪಾಯಿಯಿಂದ 5,00,000 ರೂಪಾಯಿಯ ವರೆಗೆ ಸಾಲವನ್ನು ಪಡೆಯಬಹುದು. ಇನ್ನು ಕೊನೆಯದಾಗಿ ತರುಣ್ ಸಾಲ, ಇದರಲ್ಲಿ ಸಾಲವನ್ನು ಪಡೆಯಬೇಕು ಎಂದರೆ 5,00,000 ರೂಪಾಯಿಯಿಂದ 10,00,000 ರೂಪಾಯಿಯ ವರೆಗೆ ಸಾಲ ಪಡೆಯಲು ಸಾಧ್ಯವಿದೆ. ಪಿಎಂ ಮುದ್ರಾ ಯೋಜನೆಯ ಯಾವುದೇ ವಿಭಾಗದಲ್ಲಿ ಸಾಲವನ್ನು ಪಡೆದರೆ ಶೇಕಡಾ 9% ಇಂದ ಶೇಕಡಾ 12% ವರೆಗೆ ಬಡ್ಡಿ ಕಟ್ಟಬೇಕು.
ಯಾರು ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?: ಪಿಎಂ ಮುದ್ರಾ ಯೋಜನೆಯಲ್ಲಿ ಸಾಲವನ್ನು ಪಡೆಯಬೇಕು ಎಂದರೆ ನೀವು ಸಣ್ಣ ಅಂಗಡಿ ಆರಂಭ ಮಾಡುವ ಉದ್ದೇಶ ಹೊಂದಿರಬೇಕು ಅಥವಾ ಇಲ್ಲವೇ ನೀವು ವ್ಯಾಪಾರಸ್ಥರು ಆಗಿರಬೇಕು. ಇಲ್ಲವೇ ಹೊಸದಾಗಿ ನಿಮ್ಮದೇ ಸ್ವಂತ ವ್ಯವಹಾರವನ್ನು ಶುರು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪಿಎಂ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?: ಪಿಎಂ ಮುದ್ರಾ ಯೋಜನೆ ಅರ್ಜಿ ಸಲ್ಲಿಸಲು www.mudra.org.in ಗೆ ಭೇಟಿ ನೀಡಿ ಮುಖಪುಟದಲ್ಲಿ ಕಾಣುವ ಶಿಶು, ತರುಣ, ಕಿಶೋರ್ ಎಂಬ ಮೂರು ಆಯ್ಕೆಯಲ್ಲಿ ನೀವು ಯಾವ ಅರ್ಜಿ ಹಾಕುತ್ತೀರಿ ಎಂಬುದನ್ನು ಸಪ್ಸ್ತಪಡಿಸಿಕೊಂಡು ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು, ನಿಮ್ಮ ವಿಳಾಸ, ನಿಮ್ಮ ವ್ಯಾಪಾರದ ವಿವರಗಳು ನಿಮಗೆ ಬೇಕಾಗಿರುವ ಸಾಲದ ಮೊತ್ತ ಎಲ್ಲವನ್ನೂ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಎಂದರೆ ಈ ಕೆಲಸವನ್ನು ಮಾಡಲೇಬೇಕು
ಪಿಎಂ ಮುದ್ರಾ ಯೋಜನೆಯ ಲಾಭಗಳು :-
1) ಮನೆ ಮತ್ತು ಆಸ್ತಿಯನ್ನು ಕಳೆದುಕೊಳ್ಳುವ ಭಯ ಇಲ್ಲ:- ಈ ಯೋಜನೆಯನ್ನು ಹೊರತು ಪಡಿಸಿ ಬೇರೆ ಕಡೆ ನಾವು ಸಾಲವನ್ನು ಪಡೆದರೆ ಮನೆ ಅಥವಾ ಆಸ್ತಿಯನ್ನು ಅಡ ಇಡಬೇಕು. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡದೆ ಇದ್ದರೆ ನಮ್ಮ ಮನೆ ಮತ್ತು ಆಸ್ತಿಯನ್ನು ಹರಾಜು ಹಾಕಲಾಗುತ್ತಿದೆ. ಈ ಯೋಜನೆಯಲ್ಲಿ ಮನೆಯನ್ನು ಹರಾಜು ಅಥವಾ ಮುಟ್ಟುಗೋಲು ಹಾಕಿಕೊಳ್ಳುವ ಭಯ ಇಲ್ಲ.
2)ಸಣ್ಣ ವ್ಯಾಪಾರಕ್ಕೆ ಉತ್ತೇಜನ:- ಯಾವುದೇ ವ್ಯಾಪಾರ ಆರಂಭ ಮಾಡುವಾಗ ಬಂಡವಾಳ ತುಂಬಾ ಮುಖ್ಯ. ಈ ಯೋಜನೆಯಿಂದ ಸಣ್ಣ ವ್ಯಾಪಾರಿಗಳು ಭಯ ಇಲ್ಲದೆಯೇ ಹೂಡಿಕೆ ಮಾಡಬಹುದು.
3) ಸ್ವಂತ ಉದ್ಯಮ ಹೆಚ್ಚಳ:- ಸ್ವಂತ ಉದ್ಯಮ ಮಾಡಿ ಹಲವರಿಗೆ ಕೆಲಸ ನೀಡಲು ಈ ಯೋಜನೆಯು ಅನುಕೂಲ ಆಗಲಿದೆ.
4) ಆರ್ಥಿಕ ಸಹಾಯ:- ಆರ್ಥಿಕವಾಗಿ ಹಿಂದುಳಿದ ವ್ಯಾಪಾರಿಗಳಿಗೆ ಇದು ಆರ್ಥಿಕ ಸಹಾಯ ನೀಡಲು ಅನುಕೂಲ ಆಗಿದೆ.
ಇದನ್ನೂ ಓದಿ: ಮಹಿಳೆಯರಿಗಾಗಿ ಹಣವನ್ನು ಉಳಿತಾಯ ಮಾಡುವ ಯೋಜನೆಗಳು, ಕಡಿಮೆ ತೆರಿಗೆಯ ಜೊತೆ ಹಣವನ್ನೂ ಉಳಿಸಬಹುದು!