ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇದೆ. ಆದರಿಂದ ಅದರ ಪ್ರಚಾರ ಕಾರ್ಯ ಸದ್ದಿಲ್ಲದೆ ಆರಂಭವಾಗಿದೆ. ರಾಜಕೀಯವಾಗಿ ಮಹತ್ವದ ಹೆಜ್ಜೆಗಳನ್ನು ಇಡುತ್ತಿರುವ ಮೋದಿ ಅವರು ಜನವರಿ 16 ರ ರಾತ್ರಿ ಕೊಚ್ಚಿಯಲ್ಲಿ ರೋಡ್ ಶೋ ನಡೆಸಿದರು . ಸಾವಿರಾರು ಮಂದಿ ಬಿಜೆಪಿ ಬೆಂಬಲಿಗರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೃಹತ್ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು. ರೋಡ್ ಶೋ ನಲ್ಲಿ ಮೋದಿ ಮೋದಿ ಎಂಬ ಕೂಗು ಎಲ್ಲಾ ಕಡೆಗಳಲ್ಲಿ ಕೇಳುತ್ತಿತ್ತು. ಪ್ರಚಾರ ಕಾರ್ಯ ಆರಂಭದ ಸೂಚನೆ ಇದಾಗಿರಬಹುದು ಎಂದು ಉನ್ನತ ಮೂಲಗಳು ಹೇಳಿವೆ. ರೋಡ್ ಶೋ ನ ಜೊತೆ ಜೊತೆಗೆ ಮೋದಿ ಅವರು ಎರಡು ದಿನಗಳ ಕೇರಳ ಪ್ರವಾಸವನ್ನು ಆರಂಭಿಸಿದರು.
ರೋಡ್ ಶೋ ನ ಹೈಲೈಟ್ಸ್ :-
- ಕೇಸರಿ ಬಣ್ಣದ ತೆರೆದ ವಾಹನದಲ್ಲಿ ಕೆಪಿಸಿಸಿ ಜಂಕ್ಷನ್‌ನಿಂದ ಸರ್ಕಾರಿ ಅತಿಥಿ ಗೃಹದವರೆಗೆ 1.25 ಕಿ.ಮೀ. ರೋಡ್ ಶೋ ನಡೆಸಿದರು.
- ಮೋದಿ ಅವರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಜೊತೆಗಿದ್ದರು.
- ಮಧ್ಯಾಹ್ನದಿಂದಲೇ ಸಂಭ್ರಮದಲ್ಲಿ ರೋಡ್ ಶೋ ನಡೆಯುವ ಜಾಗದ ತುಂಬಾ ಬಿಜೆಪಿ ಬೆಂಬಲಿಗರು ನೆರೆದಿದ್ದರು.
- ಬಿಜೆಪಿ ಪಕ್ಷದ ಬಾವುಟಗಳನ್ನು ಹಾರಿಸಿ ಸಂಭ್ರಮಿಸಿದರು.
- ಮಹಿಳೆಯರು ಮತ್ತು ಮಕ್ಕಳು ಸಹ ಪ್ರಧಾನಿ ಅವರನ್ನು ನೋಡಲು ಬಂದಿದ್ದರು.
- ಸಮಯಕ್ಕಿಂತ ಮೂರು ತಾಸು ತಡವಾಗಿ ರೋಡ್‌ಶೋ ಆರಂಭವಾಯಿತು. ಆದರೂ ಜನಸಮೂಹದ ಸಂತೋಷ ಕಡಿಮೆ ಆಗಿರಲಿಲ್ಲ.
- ರೋಡ್ ಶೋ ನಲ್ಲಿ ಮೋದಿ ಕೇಸರಿ ಟೋಪಿ ಧರಿಸಿದ್ದರು.
- ಸರ್ಕಾರಿ ಕಾನೂನು ಕಾಲೇಜಿನಿಂದ ರೋಡ್‌ಶೋ ಸಾಗುವ ಮಾರ್ಗದಲ್ಲಿ ಹಿಂದಿನ ದಿನ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕದವರು ಕೇರಳ ಸ್ಟೂಡೆಂಟ್ಸ್ ಯೂನಿಯನ್ (KSU) – ಮೋದಿ ವಿರುದ್ಧ ಬ್ಯಾನರ್ ಎತ್ತಿದ ಗಲಾಟೆ ಮಾಡಿದ್ದರು . ಇಬ್ಬರು ಕೆಎಸ್‌ಯು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬ್ಯಾನರ್ ತೆಗೆದರು ಹಾಕಿದ್ದಾರೆ.
ರೋಡ್ ಶೋ ಬಳಿಕ ಮೋದಿಯವರ ಕಾರ್ಯಕ್ರಮಗಳೆನು?
ಕೊಚ್ಚಿಯಲ್ಲಿ ರೋಡ್ ಶೋ ಮುಗಿದ ಬಳಿಕ ಮೋದಿ ಬುಧವಾರ ಬೆಳಗ್ಗೆ ನೆರೆಯ ತ್ರಿಶೂರ್ ಜಿಲ್ಲೆಗೆ ಹೋಗಲಿದ್ದಾರೆ ಎಂಬ ಮಾಹಿತಿ ಇದೆ. . ಅಲ್ಲಿ ಅವರು ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ನಡೆಯುವ ನಟ ಮತ್ತು ಬಿಜೆಪಿ ನಾಯಕ ಸುರೇಶ್ ಗೋಪಿ ಅವರ ಪುತ್ರಿಯ ವಿವಾಹದಲ್ಲಿ ಭಾಗವಹಿಸಲಿದ್ದಾರೆ. ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅಲ್ಲಿಂದ ಮುಂದೆ ತ್ರಿಶೂರ್‌ನ ತ್ರಿಪ್ರಯಾರ್‌ನಲ್ಲಿರುವ ಶ್ರೀರಾಮಸ್ವಾಮಿ ದೇವಸ್ಥಾನಕ್ಕೂ ಮೋದಿ ಭೇಟಿ ನೀಡಲಿದ್ದಾರೆ. ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ದೇವಾಲಯದ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮೊದಲು ಭಗವಾನ್ ರಾಮ ಮಂದಿರದ ಭೇಟಿಯು ಮಹತ್ವ ಪಡೆದಿದೆ.
ಕೊಚ್ಚಿನ್ ನಲ್ಲಿ ಮೋದಿ ಅವರನ್ನು ಸ್ವಾಗತಿಸಿದ ರೀತಿ ಹೇಗಿತ್ತು?
ಮಂಗಳವಾರ ಬೆಳಗ್ಗೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬರಮಾಡಿಕೊಂಡರು. ಕೇಂದ್ರ ರಾಜ್ಯ ಸಚಿವ ವಿ ಮುರಳೀಧರನ್ ಮತ್ತು ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು. ಪ್ರಧಾನಮಂತ್ರಿಯವರು ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಸಂಜೆ 6.50ಕ್ಕೆ ಕೊಚ್ಚಿಗೆ ಬಂದಿಳಿದರು. ಅವರು ಹೆಲಿಕಾಪ್ಟೆಲ್‌ನಲ್ಲಿ ಸಂಜೆ 7 ಗಂಟೆಗೆ ನೌಕಾ ನೆಲೆಯ ವಿಮಾನ ನಿಲ್ದಾಣಕ್ಕೆ ತೆರಳಿದರು.
ನೇವಲ್ ಬೇಸ್ ವಿಮಾನ ನಿಲ್ದಾಣದಲ್ಲಿ, ಅಲ್ಲಿನ ರಾಜ್ಯ ಕೈಗಾರಿಕಾ ಸಚಿವ ಪಿ ರಾಜೀವ ನೇತೃತ್ವದ ನಿಯೋಗವು ಪ್ರಧಾನ ಮಂತ್ರಿಯವರಿಗೆ ಸ್ವಾಗತಿಸಿತು. ಮುಖ್ಯ ಕಮಾಂಡಿಂಗ್ ಫ್ಲಾಗ್ ಆಫೀಸರ್ ವೈಸ್ ಅಡ್ಮಿರಲ್ ವಿ ಶ್ರೀನಿವಾಸ್, ಕೊಚ್ಚಿ ನಗರ ಪೊಲೀಸ್ ಆಯುಕ್ತ ಎ ಅಕ್ಬರ್, ಹೆಚ್ಚುವರಿ ರಾಜ್ಯ ಪ್ರೋಟೋಕಾಲ್ ಅಧಿಕಾರಿ ಎಂ ಎಸ್ ಹರಿಕೃಷ್ಣನ್ ಮತ್ತು ವಿವಿಧ ರಾಜಕೀಯ ಮುಖಂಡರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರಧಾನಿಯವರಿಗೆ ಸ್ವಾಗತ ಮಾಡಿದರು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಉಜ್ವಲ 2.0 ಯೋಜನೆಯಲ್ಲಿ ಉಚಿತ ಸಿಲೆಂಡರ್ ಮತ್ತು ಗ್ಯಾಸ್ ಒಲೆಯನ್ನು ಪಡೆಯಲು ಈಗಲೇ ಅಪ್ಲೈ ಮಾಡಿ ..