ಈಗಾಗಲೇ ನಮ್ಮ ರಾಜ್ಯ ಸರ್ಕಾರವು ಉಚಿತವಾಗಿ ಕರೆಂಟ್ ನೀಡುತ್ತಿದೆ. ಅದರ ಜೊತೆಗೆ ಈಗ ಪ್ರಧಾನಿ ಅವರು ಉಚಿತ 300 Unit ವಿದ್ಯುತ್ ನೀಡುವ ಬಗ್ಗೆ ಗುರುವಾರ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಹಾಗಾದರೆ ಇದು ಏನು ಪಿಎಂ ಸೂರ್ಯ ಘರ್ ಯೋಜನೆ ಎಂಬುದರ ಪೂರ್ಣ ವಿವರ ಈ ಲೇಖನದಲ್ಲಿ ನೋಡೋಣ.
ಪಿಎಂ ಸೂರ್ಯ ಘರ್ ಯೋಜನೆ ಎಂದರೇನು?
ಪಿಎಂ ಸೂರ್ಯಘರ್ ಯೋಜನೆ ಪ್ರಧಾನಿ ಮಂತ್ರಿ ಮೋದಿ ಅವರು ರಾಮ ಮಂದಿರದ ಪ್ರತಿಷ್ಟಾಪನೆ ಬಳಿಕ ಸೂರ್ಯ ನ ಬೆಳಕು ಎಲ್ಲೆಡೆ ಹರಡಲೀ ಎಂಬ ಉದ್ದೇಶದಿಂದ ಪ್ರತಿ ಮನೆಗೂ ಸೌರ ಫಲಕ ಅಳವಡಿಸುವ ಬಗ್ಗೆ ಘೋಷಣೆ ಮಾಡಿದ್ದರು. ಇದು ಮಧ್ಯಂತರ ಬಜೆಟ್ ನಲ್ಲಿ ಅನುಮೋದನೆ ದೊರಕಿತ್ತು ಈಗ ಮೊನ್ನೆ ಸಚಿವ ಸಂಪುಟದಲ್ಲಿ ಉಚಿತ ವಿದ್ಯುತ್ ನೀಡುವುದರ ಬಗ್ಗೆ ಅನುಮೋದನೆ ದೊರೆತಿದೆ.
ಇನ್ನೂ ಈ ಯೋಜನೆಯಲ್ಲಿ ಒಂದು ಕೋಟಿ ಮನೆಗೆ ಉಚಿತ ವಿದ್ಯುತ್ ಸಿಗಲಿದೆ. ಮಧ್ಯಂತರ ಬಜೆಟ್ ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಪಿಎಂ ಸೂರ್ಯಘರ್ ಯೋಜನೆಯಲ್ಲಿ ಸೌರ ಛಾವಣಿಯ ಸ್ಥಾಪಿಸುವ ಕುಟುಂಬಗಳು ವಾರ್ಷಿಕವಾಗಿ 15,000 ದಿಂದ 18,000 ರೂಪಾಯಿಗಳನ್ನು ಉಳಿಸಬಹುದು ಎಂಬುದಾಗಿ ಹೇಳಿದ್ದರು. ಈ ಯೋಜನೆಗೆ ಫೆಬ್ರುವರಿ 13ನೇ ತಾರೀಕಿನ ದಿನ ಪ್ರಧಾನಿ ಮೋದಿ ಅವರು ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಎಂದು ಮರುನಾಮಕರಣ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯಿಂದ ಏಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ? :- ಈ ಯೋಜನೆಗೆ 75,000 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗಿದೆ. ಈ ಯೋಜನೆಯು ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ಅವರು ಮಾಹಿತಿ ನೀಡಿದರು.
ಉಚಿತ ಸೌರ ಛಾವಣಿಯ ಜೊತೆ ಸಬ್ಸಿಡಿ ಸಿಗುತ್ತದೆ :- 2 ಕಿಲೋವ್ಯಾಟ್ ಸಾಮರ್ಥ್ಯದ 2023 ರ ನವೆಂಬರ್ ತಿಂಗಳಿನವರೆಗೆ, ಯೋಜನೆ ಹಂತ-II ಅಡಿಯಲ್ಲಿ ಸ್ಥಾಪಿಸಲಾದ ಸಾಮರ್ಥ್ಯ 2,651.10 ಮೆಗಾವ್ಯಾಟ್ ಇದೆ.
ಸ್ಥಾಪಿಸುವವರಿಗೆ 60,000 ರೂಪಾಯಿ ಸಬ್ಸಿಡಿ ಸಿಗುತ್ತದೆ. ಹಾಗೂ 3 ಕಿಲೋವ್ಯಾಟ್ ಸಾಮರ್ಥ್ಯದ ಸೌರ ಛಾವಣಿಯ ಅಳವಡಿಸಿಕೊಳ್ಳುವ ಕುಟುಂಬಗಳಿಗೆ ಹಳೆಯ ಯೋಜನೆಡಿ 54,000 ರೂಪಾಯಿಯ ಬದಲಾಗಿ 78,000 ರೂಪಾಯಿಗಳ ಸಬ್ಸಿಡಿ ಸಿಗುತ್ತದೆ. 2023 ರ ನವೆಂಬರ್ ತಿಂಗಳಿನವರೆಗೆ, ಯೋಜನೆ ಹಂತ-II ರಲ್ಲಿ ಸ್ಥಾಪಿಸಲಾದ ಸೌರ ಛಾವಣಿಯು 2,651.10 ಮೆಗಾವ್ಯಾಟ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ದೈನಂದಿನ ಬಳಕೆಗೆ ಸೂಟ್ ಆಗುವಂತಹ ಒಂದೇ ಒಂದು ಸ್ಕೂಟರ್ ಎಂದರೆ ಅದು Ather Rizta Electric Scooter, ಅಬ್ಬಾ ಏನು ವೈಶಿಷ್ಟ್ಯತೆ!
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :-
ಇಲಾಖೆಯ ಅಧಿಕೃತ ವೆಬ್ಸೈಟ್ https://pmsuryaghar.gov.in/ ನಲ್ಲಿ ಮೊದಲು ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡುವಾಗ ತಮ್ಮ ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿ (ಡಿಸ್ಕಾಂ) ಹೆಸರನ್ನು ಆಯ್ಕೆಮಾಡಿಕೊಂಡು, ತಮ್ಮ ವಿದ್ಯುತ್ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೀಡಬೇಕು. ನೋಂದಣಿ ಪ್ರಕ್ರಿಯೆ ಮುಗಿದ ನಂತರ ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಾಕಿ ಲಾಗಿನ್ ಆಗಬೇಕು. ನಂತರ ನಿಮಗೆ ಪೋರ್ಟಲ್ ನಲ್ಲಿ ಅರ್ಜಿ ಫಾರ್ಮ್ ಸಿಗುತ್ತದೆ. ಪೋರ್ಟಲ್‌ನಲ್ಲಿರುವ ಫಾರ್ಮ್‌ನಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ, ಸ್ಥಳೀಯ ಡಿಸ್ಕಾಂನಿಂದ ಅನುಮೋದನೆಗೆ ಕಾಯಬೇಕಾಗಿತ್ತದೆ.
ಇದನ್ನೂ ಓದಿ: ತೈಲ ಬೆಲೆ ಏರಿಕೆಯಿಂದ ಹೆಚ್ಚಾದ ಸಿಲಿಂಡರ್ ಬೆಲೆ, ತಿಂಗಳ ಆರಂಭದಲ್ಲಿ ಹೆಚ್ಚಲಿದೆ ಜನತೆಗೆ ತುಸು ಬಿಸಿ