ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ 50 ಸಾವಿರ ರೂಪಾಯಿಗಳ ವರೆಗೂ ಸಾಲ ಸೌಲಭ್ಯ: ಹೀಗೆ ಅರ್ಜಿ ಸಲ್ಲಿಸಿ

PM Svanidhi Scheme Apply Online

ತರಕಾರಿ, ಹಣ್ಣು, ವ್ಯಾಪಾರಿಗಳು ಹಾಗೂ ಹೂವಿನ ವ್ಯಾಪಾರಿಗಳಿಗೆ ಸಹಾಯ ಆಗಲಿ ಎಂದು ನರೇಂದ್ರ ಮೋದಿ ಸರ್ಕಾರವು ಆರಂಭಿಸಿದ ಯೋಜನೆ ಪಿಎಂ ಸ್ವ ನಿಧಿ. ಸಣ್ಣ ವ್ಯಾಪಾರಸ್ಥರಿಗೆ ಸಾಲ ನೀಡುವ ಯೋಜನೆ ಇದಾಗಿದೆ. ಆರ್ಥಿಕವಾಗಿ ಹಿಂದುಳಿದರುವ ಬಡ ವ್ಯಾಪಾರಿಗರಿಗೆ ಬಡ್ಡಿಗೆ ಹಣ ನೀಡುವ ದಲ್ಲಾಳಿಗಳಿಂದ ತಪ್ಪಿಸಿಕೊಳ್ಳಲು ಈ ಯೋಜನೆ ಸಹಾಯ ಆಗಲಿದೆ.

WhatsApp Group Join Now
Telegram Group Join Now

2020 ಮಾರ್ಚ್ ನಲ್ಲಿ ಕರೋನದಿಂದ lockdown ಆಯಿತು. ಆಗ ಸಣ್ಣ ಪುಟ್ಟ ಬೀದಿ ವ್ಯಾಪಾರಿಗಳು ಕೆಲಸ ಇಲ್ಲದೆ ದುಡಿಮೆ ಇಲ್ಲದೆ ಆರ್ಥಿಕವಾಗಿ ಬಹಳ ಕಷ್ಟ ಅನುಭವಿಸಿದರು. ಆದರಿಂದ ಅವರಿಗೆ ನೆರವಾಗುವ ನಿಟ್ಟಿನಲಿ ಜೂನ್ 1, 2020 ರಂದು ಪಿಎಂ ಸ್ವ ನಿಧಿ ಯೋಜನೆಯನ್ನು ಜಾರಿ ಮಾಡಲಾಯಿತು. ಕರೋನ ಸಮಯದಲ್ಲಿ ಆರಂಭವಾದ ಯೋಜನೆಯನ್ನು ಈಗ ಡಿಸೆಂಬರ್ 2024ರ ವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯಲ್ಲಿ ಫಲಾನುಭವಿಗಳು ಮೊದಲನೇ ಹಂತದಲ್ಲಿ 10,000 ರೂಪಾಯಿ ಎರಡನೇ ಹಂತದಲ್ಲಿ 20,000 ರೂಪಾಯಿ ಹಾಗೂ ಮೂರನೇ ಹಂತದಲ್ಲಿ 50,000 ರೂಪಾಯಿಗಳ ವರೆಗೆ ಸಾಲ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸ್ವ ನಿಧಿ ಯೋಜನೆಯ ಮೊಬೈಲ್ ಆ್ಯಪ್:- ಜುಲೈ 17 2023 ರಂದು ಸ್ವ ನಿಧಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಆಗಿದ್ದು ಈ ಅಪ್ಲಿಕೇಷನ್ ನಲ್ಲಿ ಯೂಪಿಐ ಕ್ಯು ಅರ್ ಕೋಡ್ ಸೌಲಭ್ಯ ಇದ್ದು ಇದರಿಂದ ಡಿಜಿಟಲ್ ಪೇಮೆಂಟ್ ಗೆ ಅನುಕೂಲ ಆಗಲಿದೆ. ಇದರಲ್ಲಿ ಪ್ರತಿ ತಿಂಗಳು ಕ್ಯಾಶ್ ಬ್ಯಾಕ್ ಸಹ ಸಿಗಲಿದೆ. ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸಲು ಈ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ.

ಯೋಜನೆಯ ಉಪಯೋಗಗಳು :-

  • 50,000 ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಸಿಗುತ್ತದೆ.
  • ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡಿದವರಿಗೆ ಶೆ. 7%ಬಡ್ಡಿದರದಲ್ಲಿ ಸಬ್ಸಿಡಿ ಸಿಗಲಿದೆ.
  • ಡಿಜಿಟಲ್ ಅಪ್ಲಿಕೇಶನ್ ಬಳಸಿದರೆ 1,200 ರೂಪಾಯಿಗಳ ವರೆಗೆ cash back ಪಡೆಯಬಹುದು.

ಪಿಎಂ ಸ್ವ ನಿಧಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಯಾರು ಅರ್ಹರು?: ಜೀವನ ಹಕ್ಕು ಸಂರಕ್ಷಣೆ ಮತ್ತು ಬೀದಿ ವ್ಯಾಪಾರಿಗಳ ನಿರ್ವಹಣೆ 2014 ಕಾಯ್ದೆಯಲ್ಲಿ ರೂಪಿಸಿದ ನಿಯಮಗಳ ಪ್ರಕಾರ ಯೋಜನೆಯನ್ನು ಪ್ರಕಟಿಸಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪಾರಿಗಳು ಅರ್ಜಿ ಸಲ್ಲಿಸಲು ಅರ್ಹರು.

ಪಿಎಂ ಸ್ವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  1.  ಪಿಎಂ ಸ್ವ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಭೇಟಿನೀಡಿ.
  2. ಮುಖಪುಟದಲ್ಲಿ 10k ಸಾಲವನ್ನು ಅನ್ವಯಿಸಿ, 20k ಸಾಲವನ್ನು ಅನ್ವಯಿಸಿ , 50k ಸಾಲವನ್ನು ಅನ್ವಯಿಸಿ ಎಂಬ ಆಪ್ಷನ್ ಕಾಣಿಸುತ್ತದೆ ನೀವು ಯಾವ ಹಂತದಲ್ಲಿ ಸಾಲ ಪಡೆಯುತ್ತಾ ಇದ್ದಿರೋ ಅದನ್ನು ಆಯ್ಕೆ ಮಾಡಿ.
  3. ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು captha code ಭರ್ತಿ ಮಾಡಿ.
  4. ನಂತರ ನಿಮ್ಮ ಆಧಾರ್ ಕಾರ್ಡ್ ಪಾನ್ ಕಾರ್ಡ್ ನಿಮ್ಮ ವಿಳಾಸ ನಿಮ್ಮ ವ್ಯಾಪಾರದ ಮಾಹಿತಿ ಎಲ್ಲವನ್ನೂ ಭರ್ತಿ ಮಾಡಿ.
  5. ಎಲ್ಲಾ ಮಾಹಿತಿಯನ್ನು ತುಂಬಿದ ನಂತರ ಒಮ್ಮೆ ಪರಿಶೀಲಿಸಿ submit ಬಟನ್ ಒತ್ತಿ.

ಬಡ್ಡಿಗೆ ಸಾಲ ಕೊಡುವವರ ದಬ್ಬಾಳಿಕೆಯಿಂದ ಸಾಮಾನ್ಯ ಜನರ ಜೀವನವನ್ನು ಉನ್ನತಿಗೆ ತರಲು ಈ ಯೋಜನೆ ಬಹಳ ಅಗತ್ಯವಾಗಿದೆ. ಈ ಯೋಜನೆಯನ್ನು ಬಳಸಿಕೊಂಡು ನಿಮ್ಮ ಆರ್ಥಿಕ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಿ.

ಇದನ್ನೂ ಓದಿ: ಪಿಯುಸಿ ಪಾಸ್ ಆದವರಿಗೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸಿಗಲಿದೆ ಉದ್ಯೋಗ

ಇದನ್ನೂ ಓದಿ: ಭೀಮ್ ಆ್ಯಪ್ ನೀಡುತ್ತಿದೆ ಭರ್ಜರಿ 750 ರೂಪಾಯಿ ಕ್ಯಾಶ್ ಬ್ಯಾಕ್! ಹೇಗೆ ಪಡೆಯುವುದು ನೋಡಿ