ಮಹಿಳೆಯರಿಗೆ ಗುಡ್ ನ್ಯೂಸ್; ರೇಷನ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಉಚಿತ ಉಜ್ಜಲ್ ಸಿಲಿಂಡರ್, ಅರ್ಜಿ ಸಲ್ಲಿಸುವ ಪ್ರಕ್ರಿಯೆ. ಸಂಪೂರ್ಣ ಮಾಹಿತಿ

PM Ujjwala Yojana: ಹೌದು ಸ್ನೇಹಿತರೆ, ಸರ್ಕಾರವು ಮತ್ತೊಮ್ಮೆ ಮಹಿಳೆಯರಿಗೆ ಗುಡ್ ನ್ಯೂಸ್ ಅನ್ನು ಕೊಟ್ಟಿದೆ. ಬಿಪಿಎಲ್ ಕಾರ್ಡ್ (BPL Card) ಹೊಂದಿದವರಿಗೆ ಉಚಿತವಾಗಿ ಅಡುಗೆ ಅನಿಲ ಒದಗಿಸುವುದರ ಮೂಲಕ ಮಹಿಳೆಯರಿಗೆ ಗುಡ್ ನ್ಯೂಸ್ ಅನ್ನ ಕೊಟ್ಟಿದೆ. ಈ ಹಿಂದೆಯೂ ಸಹ ಉಜ್ವಲ್ ಯೋಜನೆ ಅಡಿ ಹಲವಾರು ಕುಟುಂಬಗಳು ಉಚಿತ ಅನಿಲವನ್ನು ಪಡೆದುಕೊಂಡಿವೆ. ಆದರೆ ಅರ್ಧಕ್ಕೆ ಅರ್ಜಿ ಸಲ್ಲಿಕೆ ಬಂದಾಗಿತ್ತು. ಆದರೆ ಇದೀಗ ಮತ್ತೆ ಅರ್ಜಿ ಸಲ್ಲಿಸುವಿಕೆಯ ಪ್ರಕ್ರಿಯೆ ಶುರುವಾಗಿದ್ದು ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿದ್ದಾರೆ. ಹಾಗಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

WhatsApp Group Join Now
Telegram Group Join Now

ಇದರಲ್ಲಿ ಕೇಂದ್ರ ಸರ್ಕಾರವೇ ಕೆಲವೊಂದು ತೈಲ ಕಂಪನಿಗಳಿಗೆ ಕಾಂಟ್ರಾಕ್ಟ್ ಕೊಡಲಿದ್ದು ಕುಟುಂಬಗಳು ತಮಗೆ ಬೇಕಾದ ಅನಿಲಗಳ ಆಯ್ಕೆಯನ್ನ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬಿಪಿಸಿಎಲ್ ಎಚ್ ಪಿ ಸಿ ಎಲ್ ಹಾಗೂ ಐ ಓ ಸಿ ಈ ಮೂರು ತೈಲ ಏಜೆನ್ಸಿಗಳಿಗೆ ಕೇಂದ್ರ ಸರ್ಕಾರವು ದತ್ತಾಂಶಗಳನ್ನು ಕೊಟ್ಟಿದೆ. ಇದನ್ನು ಮಹಿಳೆಯರು ಆಯ್ಕೆ ಮಾಡಿಕೊಂಡು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈಗಾಗಲೇ 10 ಕೋಟಿಗು ಅಧಿಕ ಕುಟುಂಬಗಳು ಉಚಿತ ಗ್ಯಾಸ್ ಸಂಪರ್ಕವನ್ನು ಪಡೆದುಕೊಂಡಿದ್ದು, ಇನ್ನು ಉಳಿದವರು ಈಗ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಈ ಗ್ಯಾಸ್ ಏಜೆನ್ಸಿಗಳು ತಮ್ಮ ಟಾರ್ಗೆಟ್ ರೀಚ್ ಮಾಡಲು ಗ್ರಾಮೀಣ ವಿಭಾಗಗಳಲ್ಲಿ ಕಂಡುಬರುವ ಬಡ ಕುಟುಂಬಗಳನ್ನ ಗುರುತಿಸಿ ಉಚಿತ ಗ್ಯಾಸ್ ಅನ್ನು ಪಡೆದುಕೊಳ್ಳಲು ಸಹಾಯ ಮಾಡಿವೆ. ಇನ್ನು ಮೈಸೂರು, ಬೆಂಗಳೂರು ಸೇರಿದಂತೆ 60 ಸಾವಿರಕ್ಕೂ ಹೆಚ್ಚಿನ ಮಂದಿ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆದುಕೊಂಡಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಗ್ಯಾಸ್ ಸಂಪರ್ಕದ ಜೊತೆಗೆ ಏನೆಲ್ಲಾ ಪಡೆಯಬಹುದು?

ಗ್ಯಾಸ್ ಸಿಲಿಂಡರ್ ಜೊತೆಗೆ ರಬ್ಬರ್ ಟ್ಯೂಬ್, ಸ್ಟೋವ್, ಹಾಗೂ ರೆಗ್ಯುಲೇಟರ್ ಗಳನ್ನು ನೀಡಲಾಗುತ್ತದೆ. ಉಜ್ವಲ್ ಯೋಜನೆಯಲ್ಲೇ(PM Ujjwala Yojana) ಯಾರು ಯಾರು ಅನಿಲ ಸಂಪರ್ಕವನ್ನ ಪಡೆದಿದ್ದಾರೋ ಅಂತಹವರಿಗೆ ಸಬ್ಸಿಡಿ ಹಣವು ಕೂಡ ಕಡಿತವಾಗಿದೆ. ಈಗ ಮತ್ತೆ ಕೇಂದ್ರ ಸರ್ಕಾರವು ಪುನಃ ಈ ಸಬ್ಸಿಡಿ(Subsidy) ಯೋಜನೆಯನ್ನು ಪ್ರಾರಂಭಿಸಿದ್ದು ಸುಮಾರು 70 ಲಕ್ಷಕ್ಕೂ ಹೆಚ್ಚು ಮಂದಿ ಉಚಿತ ಗ್ಯಾಸ್ ಪ್ರಯೋಜನವನ್ನು ಪಡೆಯಬಹುದಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದವರು ಹಲವಾರು ಇರುವ ಜನ ಇರುವುದರಿಂದ ಮೊದಲು ಯಾರು ಅರ್ಜಿಗಳನ್ನ ಸಲ್ಲಿಸುತ್ತಾರೋ ಅಂತಹವರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದು ಗ್ಯಾಸ್ ಏಜೆನ್ಸಿ ಅವರು ಹೇಳಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವವರು ಉಜ್ವಲ್ ಯೋಜನೆಯ(PM Ujjwala Yojana) ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ಬಿಪಿಎಲ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಬೇಕು. ಹಾಗೂ ನಿಮ್ಮ ಮನೆಯ ವಿಳಾಸವನ್ನ ಕೂಡ ಬರೆಯಬೇಕು. ಈ ಯೋಜನೆಯ ಅಡಿಯಲ್ಲಿ ನೀವು 5 ಕೆಜಿಯ ಎರಡು ಸಿಲಿಂಡರನ್ನ ಪಡೆಯಬಹುದಾಗಿದೆ ಹಾಗೂ ನಿಮಗೆ ಬೇಕಾದ ಗ್ಯಾಸ್ ಏಜೆನ್ಸಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎಲ್ಲವೂ ಕೂಡ ನಿಮಗೆ ಆನ್ಲೈನ್ ನಲ್ಲೆ ಕೆಲಸವಾಗುತ್ತದೆ. https://www.pmuy.gov.in/ujjwala2.html ಇಲ್ಲಿ ಕೊಡಲಾದ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ನಿಮ್ಮ ದಾಖಲಾತಿಗಳನ್ನ ಎಂಟ್ರಿ ಮಾಡಿ.

ನೀವು ಎಲ್ಲ ಕೆಲಸವನ್ನು ಕೂಡ ಆನ್ಲೈನ್ ನಲ್ಲೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಉಚಿತ ಅಡುಗೆ ಅನಿಲವನ್ನು ಪಡೆಯಬಹುದಾಗಿದೆ ಒಂದು ವೇಳೆ ನಿಮಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಅರ್ಥವಾಗದೆ ಇದ್ದ ಪಕ್ಷದಲ್ಲಿ ನಿಮ್ಮ ಹತ್ತಿರವಿರುವ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಆ ಮೂಲಕವೂ ಕೂಡ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಸಿಎಂ ಗುಡ್ ನ್ಯೂಸ್; ಎರಡು ತಿಂಗಳ 4000 ಹಣ ಒಟ್ಟಿಗೆ ಜಮಾ

ಇದನ್ನೂ ಓದಿ: ಜಿಯೋ ಲ್ಯಾಪ್ಟಾಪ್ ಕೇವಲ 15000 ಕ್ಕೆ ಲಭ್ಯವಿದೆ, ಖರೀದಿಸುವವರು ಪೂರ್ತಿ ಮಾಹಿತಿಯನ್ನ ತಿಳಿದುಕೊಳ್ಳಿ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram