ಈ ಕಾರ್ಡ್ ಇದ್ರೆ ಸಾಕು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಸಿಲೆಂಡರ್ ಸಿಗಲಿದೆ.

PM Ujjwala Yojana 2.0 Connection

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ LPG ಸಂಪರ್ಕಗಳನ್ನು ಒದಗಿಸುವ ಉದ್ದೇಶದಿಂದ 2016 ರ ಮೇ 1 ರಂದು ಪ್ರಧಾನ ಮಂತ್ರಿ ಉಜ್ವಲ ಉಚಿತ ಗ್ಯಾಸ್ ಸಿಲೆಂಡರ್ ಯೋಜನೆ ಆರಂಭ ಆಗಿರುವುದು ಎಲ್ಲರಿಗೂ ತಿಳಿದಿದೆ. ಈ ಯೋಜನೆಯಲ್ಲಿ ಹಲವಾರು ಕುಟುಂಬಗಳು ಉಚಿತವಾಗಿ ಪ್ರತಿ ತಿಂಗಳು ಗ್ಯಾಸ್ ಸಿಲೆಂಡರ್ ಪಡೆಯುತ್ತಾ ಇದ್ದಾರೆ. ಇದರಿಂದ ಮಹಿಳೆಯರಿಗೆ ಸೌದೆ ಒಲೆಯ ಮುಂದೆ ಕುಳಿತು ಅಡಿಗೆ ಮಾಡುವ ಪ್ರಮೇಯ ಇಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಇದೊಂದು ಕಾರ್ಡ್ ಇದ್ದರೆ ಸಾಕು. ಹಾಗಾದರೆ ಅದು ಯಾವ ಕಾರ್ಡ್ ಎಂಬ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕಾರ್ಡ್ ಅವಶ್ಯಕ:- ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಿಪಿಎಲ್ ಕುಟುಂಬದ ಮಹಿಳೆ ಆಗಿರಬೇಕು. ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಒಂದಿದ್ದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಕಾರ್ಡ್ ಹೊಂದಿರಲಿ ಪಡಿತರ ವಿತರಣೆ ಸಂಸ್ಥೆಯಿಂದ ಅದರದ್ದೇ ಆದ ಮಾನದಂಡಗಳು ಇವೆ. ಆ ಮಾನದಂಡಗಳನ್ನು ಆಧರಿಸಿ ನಿಮಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡ್ ಕುಟುಂಬದ ಮಹಿಳೆ ನೀವು ಆಗಿದ್ದರೆ ನೀವು ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸ ಬಹುದು. ಇದರ ಜೊತೆಗೆ ಪಾಸ್ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಪಾಸಬುಕ್ ಜೆರಾಕ್ಸ್, ವಯಸ್ಸಿನ ದಾಖಲೆ ಪ್ರಮಾಣಪತ್ರ, ಹಾಗೂ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಸ್ಟೆಪ್ 1:- www.pmuy.gov.in ಗೆ ಭೇಟಿ ನೀಡಿ.
  • ಸ್ಟೆಪ್ 2:- ಉಜ್ವಲ ಯೋಜನೆ 2.0 ಆಯ್ಕೆಯನ್ನು ಕ್ಲಿಕ್ ಮಾಡಿ.
  • ಸ್ಟೆಪ್ 3:- ನಿಮ್ಮ ಗ್ಯಾಸ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿ.
  • ಸ್ಟೆಪ್ 4:- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯನ್ನು ನೀಡಿ.
  • ಸ್ಟೆಪ್ 5- ಉಲ್ಲೇಖ ಸಂಖ್ಯೆಯನ್ನು ಪಡೆಯಿರಿ.

ಉಜ್ವಲ ಯೋಜನೆಯ ಲಾಭಗಳು :-

  1. ಆರೋಗ್ಯ ಕವಚ:- ಹೊಗೆಡುವ ಅಡುಗೆಮನೆಗಳಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಮನೆಯ ಸದಸ್ಯರಿಗೆ ಇದು ಆರೋಗ್ಯ ರಕ್ಷಣೆಗೆ ಸಹಾಯಕ ಆಗಿದೆ.
  2. ಅಪಾಯ ಕಡಿಮೆ:- ಸೌದೆ ಒಲೆಯಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಇದು ಸಹಾಯಕ. ಸೌದೆ ಒಲೆಯಲ್ಲಿ ಅಡುಗೆ ಮಾಡುವಾಗ ಕೈ ಸುಡುವುದು ಸೌದೆಯ ಬೆಂಕಿ ಬಟ್ಟೆಗೆ ತಗುಲಿ ಆಗುವ ಅನಾಹುತಗಳಿಂದ ಗ್ಯಾಸ್ ಸಿಲೆಂಡರ್ ಕಾಪಾಡಲಿ ಸಹಾಯಕ.
  3. ಆರ್ಥಿಕ ಸಹಾಯ:– ಅಡುಗೆ ಅನಿಲದ ಬಳಕೆಯಿಂದ ಉರುವಲು ಮತ್ತು ಇತರ ಇಂಧನಗಳಿಗೆ ಖರ್ಚಾಗುವ ಹಣವನ್ನು ಉಳಿಸುತ್ತದೆ. ಹಾಗೂ ಗ್ಯಾಸ್ ಸಿಲೆಂಡರ್ ಗೆ ಕೊಡುವ ಹಣವನ್ನು ಮನೆಯ ಬೇರೆ ಖರ್ಚುಗಳಿಗೆ ಉಪಯೋಗಿಸಲು ಸಹಾಯ ಮಾಡುತ್ತದೆ.
  4. ಮಹಿಳಾ ಸಬಲೀಕರಣ:- ಸೌದೆ ಒಲೆಯಲ್ಲಿ ಅಡುಗೆ ಮಾಡುವಾಗ ಮಹಿಳೆಯರಿಗೆ ಅಡಿಗೆ ಮನೆ ಬಿಟ್ಟು ಬೇರೆ ಯಾವುದೇ ಉದ್ಯೋಗ ಅಥವಾ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಗ್ಯಾಸ್ ಸಿಲಿಂಡರ್ ಇಂದ ಸಮಯ ಉಳಿತಾಯ ಆಗು ಮಹಿಳೆಯರು ಬೇರೆ ಉದ್ಯೋಗ ಅಥವಾ ಕೆಲಸ ಮಾಡಿ ತಮ್ಮ ದುಡಿಮೆ ಮಾಡಲು ಸಹಾಯಕ.

ಇದನ್ನೂ ಓದಿ: ಎಚ್ಚರಿಕೆ! SBI ಡೆಬಿಟ್ ಕಾರ್ಡ್ ಬಳಕೆದಾರರಿಗೆ ಇದು ದುಬಾರಿಯಾಗಬಹುದು.

ಇದನ್ನೂ ಓದಿ: ಮಾರ್ಚ್ 31ರ ಒಳಗಾಗಿ ಮ್ಯೂಚುಯಲ್ ಫಂಡ್ ಹೂಡಿಕೆದಾರರು ಇದೊಂದು ಕೆಲಸವನ್ನು ತಪ್ಪದೇ ಮಾಡಿ, ಇಲ್ಲದೆ ಹೋದರೆ ನಿಮ್ಮ ಖಾತೆಗೆ ನಿರ್ಬಂಧ!!