ಮಾಧ್ಯಮ ಮತ್ತು ಕೆಳವರ್ಗದ ಮಹಿಳೆಯರ ಆರೋಗ್ಯ ಕಲ್ಯಾಣಕ್ಕೆ ಕೇಂದ್ರ ಸರ್ಕಾರವು ಉಜ್ವಲ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಲ್ಲಿ ಮಹಿಳೆಯರು ಉಚಿತವಾಗಿ ಸಿಲೆಂಡರ್ ಗ್ಯಾಸ್ ಪಡೆಯಬಹುದಾಗಿದೆ. 2024 ರ ಉಜ್ವಲ ಯೋಜನೆಯ ಫಲಾನುಭವಿಗಳ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು, ನಿಮ್ಮ ಹೆಸರು ಉಜ್ವಲ ಯೋಜನೆಯಲ್ಲಿ ಸೇರಿದೆಯೇ ಎಂಬುದನ್ನು ಆನ್ಲೈನ್ ಮೂಲಕ ನೀವು ತಿಳಿಯಲು ಸಾಧ್ಯವಿದೆ.
ಇಲ್ಲಿಯ ತನಕ 30 ಕೋಟಿ ಮಹಿಳೆಯರು ಉಜ್ವಲ ಯೋಜನೆಯ ಲಾಭ ಪಡೆದಿದ್ದಾರೆ :- ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಮಹಿಳೆಯರು ಅಡುಗೆ ಮನೆಯಲ್ಲಿ ಸೌದೆ ಒಲೆಯ ಹೊಗೆಯಿಂದ ಖಾಯಿಲೆಗೆ ಒಳಗಾಗುತ್ತಿದ್ದಾರೆ ಮತ್ತು ಮಹಿಳೆಯರು ಅಡುಗೆ ಮನೆಯ ಬಿಟ್ಟು ಹೊರಗಿನ ಪ್ರಪಂಚಕ್ಕೆ ಕಾಲಿಡಲು ಸಮಯವೇ ಸಿಗುತ್ತಿಲ್ಲ ಎಂಬ ಸಂಗತಿಯನ್ನು ಮನದಲ್ಲಿ ಇರಿಸಿಕೊಂಡು ಪಿಎಂ ಉಜ್ವಲ ಯೋಜನೆಯನ್ನು ಜಾರಿ ಗೊಳಿಸಿದರು. ಇದರಂತೆ ಇಲ್ಲಿಯ ವರೆಗೆ 30 ಕೋಟಿ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕದ ಜೊತೆ ಮನೆಗೆ ಬೇಕಾದ ಗ್ಯಾಸ್ ಸಿಲಿಂಡರ್ ಉಚಿತವಾಗಿ ಸಿಗುತ್ತದೆ. ಆದರೆ ಈ ಯೋಜನೆಗೆ ಅಹತೆ ಪಡೆಯಲು ಕೆಲವು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.
ಪಿಎಂ ಉಜ್ವಲ ಯೋಜನೆಯ ಫಲಾನುಭವಿ ಆಗಲೂ ಈ ಕೆಳಗಿನ ಅರ್ಹತೆಗಳು ಅಗತ್ಯ:- ಪಿಎಂ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳನ್ನು ಸರ್ಕಾರ ಹೇಳಿದೆ ಅದೇನೆಂದರೆ.
ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಬಿಪಿಎಲ್ ಕಾರ್ಡ್ ಹೊಂದಿರಬೇಕು, ರೂರಲ್ ಹೌಸಿಂಗ್ ಸ್ಕೀಮ್ ನಲ್ಲಿ ಅರ್ಹತೆ ಪಡೆದಿರಬೇಕು, ಬಡತನ ರೇಖೆಗಿಂತ ಕಡಿಮೆ ಆದಾಯ ಹೊಂದಿರಬೇಕು, ಅಂತ್ಯೋದಯ ಯೋಜನೆಯಡಿ ಒಳಪಡುವ ಕುಟುಂಬ ಆಗಿರಬೇಕು ಅಥವಾ SECC 2011 ರ ಅಡಿಯಲ್ಲಿ ಒಳಪಡುವ ನಾಗರಿಕರು ಅಥವಾ ನದಿ ದ್ವೀಪಗಳಲ್ಲಿ ವಾಸಿಸುವ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಕಾಲಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸಿದರೆ ಶೇಕಡಾ 5% ರಿಯಾಯಿತಿ ಘೋಷಣೆ ಮಾಡಿದ ಪಂಚಾಯತ್ ರಾಜ್ ಇಲಾಖೆ
ಆನ್ಲೈನ್ ಮೂಲಕ ಉಜ್ವಲ ಯೋಜನೆಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ :-
ಈಗ ನೀವು ಮೊಬೈಲ್ ಅಥವಾ ಲ್ಯಾಪ್ಟಾಪ್ ಇಂದ ನಿಮ್ಮ ಮನೆಯಲ್ಲಿಯೇ ಕುಳಿತು ಉಜ್ವಲ ಯೋಜನೆಯಲ್ಲಿ ನಿಮ್ಮ ಹೆಸರು ಸೇರ್ಪಡೆ ಆಗಿದೆಯೇ ಇಲ್ಲವೇ ಎಂಬ ಮಾಹಿತಿಯನ್ನು ಪಡೆಯಬಹುದು. ಅದಕ್ಕೂ ಮೊದಲು ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಂತರದ ನೀವು ನಿಮ್ಮ ಹೆಸರನ್ನು ಪರಿಕ್ಷಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ :-
- ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ತೆರಳಿ.
- ಮುಖಪುಟದಲ್ಲಿ ಹಲವಾರು ಗ್ಯಾಸ್ ಕಂಪನಿಗಳ ಹೆಸರು ಇರುತ್ತದೆ. ನೀವು ಯಾವ ಗ್ಯಾಸ್ ಕಂಪನಿಯ ಮೂಲಕ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂಬುದನ್ನು ಆಯ್ಕೆ ಮಾಡಬೇಕು.
- ನಂತರ ನೀವು ಉಜ್ವಲ್ ಫಲಾನುಭವಿ ಎಂಬ ಆಪ್ಷನ್ ಕ್ಲಿಕ್ ಮಾಡಬೇಕು.
- ನಂತರ ನಿಮ್ಮ ರಾಜ್ಯ ಹಾಗೂ ಜಿಲ್ಲೆ ಹಾಗೂ ಬ್ಲಾಕ್ ಆಯ್ಕೆ ಮಾಡಿಕೊಳ್ಳಿ ಕೆಳಗೆ ಕಾಣುವ ಕ್ಯಾಪ್ಚಾ ಕೋಡ್ ನಮೂದಿಸಿ ಕ್ಯಾಪ್ಟ್ ಕೋಡ್ ನಮೂದಿಸಿ ಸಲ್ಲಿಸು ಬಟನ್ ಒತ್ತಿ.
ಮೇಲಿನ ಹಂತಗಳನ್ನು ದಾರಿಯ ಪಾಲಿಸಿದರೆ ನಿಮಗೆ ನಿಮ್ಮ ಹೆಸರು ಉಜ್ವಲ ಯೋಜನೆಯ ಫಲಾನುಭವಿ ಲಿಸ್ಟ್ ನಲ್ಲಿ ಇದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದಾಗಿದೆ.
ಇದನ್ನೂ ಓದಿ: ಕರ್ನಾಟಕ ರೈತರ ಗಮನಕ್ಕೆ; ಪಹಣಿಗೆ ಇನ್ಮುಂದೆ ಆಧಾರ್ ಲಿಂಕ್ ಕಡ್ಡಾಯ.