Pooja Lokesh: ಕಿರುತೆರೆಗೆ ಕಂಬ್ಯಾಕ್ ಮಾಡಿದ ಸೃಜನ್ ಅಕ್ಕ! ಇಷ್ಟು ವರ್ಷ ನಟನೆಯಿಂದ ದೂರ ಉಳಿಯಲು ಕಾರಣವೇನು?

Pooja Lokesh: ಕನ್ನಡ ಚಿತ್ರರಂಗದಲ್ಲಿ ಸುಬ್ಬಯ್ಯ ನಾಯ್ಡು ಅವ್ರದ್ದು ಮರೆಯಾಲಾಗದ ಹೆಜ್ಜೆ ಗುರುತು. ಕನ್ನಡ ಚಿತ್ರರಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದಿಗ್ಗಜರಲ್ಲಿ ಸುಬ್ಬಯ್ಯ ನಾಯ್ಡು ಅವ್ರು ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಅದ್ರಂತೆ ಮಗ ಲೋಕೇಶ್ ಅವ್ರ ತಂದೆಯ ಹಾದಿಯಲ್ಲಿ ನಡೆದು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯ ಪಾತ್ರಗಳಿಗೆ ಕೈ ಹಾಕಿ ನಟಿಸಿ ಸೈ ಅನಿಸಿಕೊಂಡಿದ್ದ ಅದ್ಭುತ ಕಲಾವಿದ. ಇನ್ನು ಇವ್ರ ಮಕ್ಕಳು ಅಷ್ಟೆ ಅದ್ಭುತ ಕಲಾವಿದರು. ಅದರಲ್ಲೂ ಮಗಳು ಪೂಜಾ ಲೋಕೇಶ್ ಅತ್ಯದ್ಭುತ ನಟಿ ಚಂದನವನದಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಂಡು ಮಿಂಚಿ ಅಷ್ಟೆ ಬೇಗ ಮರೆಯಾಗಿ ಹೋದ್ರು, ಯಾವುದೇ ಕಾರಣ ಇಲ್ಲದೆ ವಿವಾದಗಳಿಲ್ಲದೆ ಈ ನಟಿ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದು ನಿಜಕ್ಕೂ ಬೇಸರದ ಸಂಗತಿ. ಆದ್ರೆ ಇದೀಗ ಮತ್ತೆ ನಟನೆಗೆ ನಟಿ ಪೂಜಾ ಲೋಕೇಶ್ ಕಂಬ್ಯಾಕ್ ಮಾಡಿದ್ದಾರೆ. ಹೌದು ಸಿನಿಮಾ, ಧಾರಾವಾಹಿ, ಶೋ ಅಂತೆಲ್ಲ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದ ಗಿರಿಜಾ ಲೋಕೇಶ್ ಪುತ್ರಿ ಪೂಜಾ ಲೋಕೇಶ್ ಹಲವು ವರ್ಷಗಳಿಂದ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರಲಿಲ್ಲ. ತಮ್ಮದೇ ಪ್ರೊಡಕ್ಷನ್ ಹೌಸ್ ನಲ್ಲಿ ಹಲವಾರು ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಪೂಜಾ, ಹಲವಾರು ವರ್ಷಗಳ ನಂತರ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ.ಅದು ಕೂಡ ಕಿರುತೆರೆಯ ಒಂದು ಧಾರಾವಾಹಿ ಮೂಲಕ.

WhatsApp Group Join Now
Telegram Group Join Now

ಹೌದು ಕನ್ನಡ ಚಿತ್ರರಂಗದಲ್ಲಿ ಅಪ್ಪನ ಜೊತೆಗೆ ಮಗಳ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದ ಇವ್ರು ಪೂಜಾ ಸಿನಿಮಾ ಮೂಲಕ ಪರಿಪೂರ್ಣ ನಾಯಕಿಯಾಗಿ ಚಂದನವನದಲ್ಲಿ ಭರವಸೆ ಮೂಡಿಸಿದ್ರು. ನಂತರ ನಾಯಕಿ ಅಲ್ಲದಿದ್ರೂ ತೂಕ ಇರುವ ಪಾತ್ರಗಳಲ್ಲಿ ನಟಿಸುತ್ತಿದ್ದ ಪೂಜಾ ಅದ್ಭುತ ಕಲಾವಿದೆಯಾಗಿ ಗುರುತಿಸಿಕೊಂಡಿದ್ರು.. ಆದ್ರೆ ಇದ್ದಕಿದ್ದ ಹಾಗೆ ಅವಕಾಶಗಳು ಕಡಿಮೆಯಾಗುತ್ತದೆ ಬಂದ್ವು ಹೀಗಾಗಿ ಕನ್ನಡ ಇಡಸ್ಟ್ರಿಯಿಂದ ದೂರ ಸರಿದರು. ನಂತರ ಸಂಸಾರಿಕ ಜೀವನದಲ್ಲಿ ಕೆಲವೊಂದು ನೋವು ನಿಂದ ಪೂಜಾ ಬಹಳ ಕಷ್ಟ ಅನುಭವಿಸುವಂತಾಯಿತು. ನಂತರ ಪೂಜಾ ತಮ್ಮನ ಜೊತೆ ಸೇರಿ ತೆರೆ ಹಿಂದಿನ ಕೆಲಸ ಶುರು ಮಾಡುದ್ರು. ಹೌದು ಪೂಜಾ ಮತ್ತು ಸೃಜನ್ ಇಬ್ಬರೂ ಪ್ರತಿಭಾವಂತ ಕಲಾವಿದರು. ಸೃಜನ್ ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಿರಂತರ ಕೆಲಸ ಮಾಡುತ್ತಾ ಬಂದರೆ, ಪೂಜಾ ಕೊಂಚ ಕಾಲ ಬ್ರೇಕ್ ತಗೆದುಕೊಂಡಿದ್ದು. ನಂತರ ತೆರೆಯ ಹಿಂದೆ ಕೆಲಸ ಮಾಡಲು ಶುರು ಮಾಡಿದ ಪೂಜಾ ಇದೀಗ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮಾಸ್ಟರ್ ಆನಂದ್ ಮಗಳು ವಂಶಿಕ ಹೆಸರಲ್ಲಿ ದೋಖ! ಫೋಟೋಶೂಟ್, ಟ್ಯಾಲೆಂಟ್ ಶೋ ಹೆಸರಲ್ಲಿ ಲಕ್ಷ ಲಕ್ಷ ಪಿಕಿರೋ ಐನಾತಿ

ಯಾವ ಧಾರವಾಹಿ ಮೂಲಕ ಕಿರುತೆರೆಗೆ ಮರಳಿದ್ದಾರೆ ಗೊತ್ತಾ

ಹೌದು ಪೂಜಾ(Pooja Lokesh) ನಟನೆಯಿಂದ ದೂರ ಸರಿದಿದ್ರು, ಕಿರುತೆರೆಯಿಂದ ದೂರವಿರಲಿಲ್ಲ ಕಿರುತೆರೆಯ ನಂಟನ್ನ ಹಾಗೆ ಉಳಿಸಿಕೊಂಡಿದ್ರು, ಸಹೋದರ ಸೃಜನ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ನಲ್ಲಿ ಪೂಜಾ ಕೆಲಸ ಮಾಡುತ್ತಿದ್ದರು. ಸೃಜನ್ ಅವರ ಕಾಸ್ಟ್ಯೂಮ್ ಡಿಸೈನ್ ಇವರೇ ಮಾಡುತ್ತಿದ್ದರು. ಜೊತೆಗೆ ಹಿನ್ನೆಲೆಯಾಗಿ ನಿಂತುಕೊಂಡು ಕಾರ್ಯಕ್ರಮವನ್ನು ನೋಡಿಕೊಳ್ಳುತ್ತಿದ್ದರು. ಅಲ್ಲದೇ ಲೋಕೇಶ್ ಪ್ರೊಡಕ್ಷನ್ ನ ಉಸ್ತುವಾರಿಯನ್ನು ಇವರೇ ವಹಿಸಿಕೊಂಡಿದ್ದರು. ಇದೀಗ ಇದೆಲ್ಲದರ ಜೊತೆಗೆ ಕಿರುತೆರೆಗೆ ವಿಶೇಷ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಪೂಜಾ ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಇವರ ಪಾತ್ರದ ಪ್ರೋಮೋ ಕೂಡ ರಿಲೀಸ್ ಆಗಿದೆ. ಹೌದು ಖಡಕ್ ಲುಕ್ ನಲ್ಲಿ ಪೂಜಾ ಪ್ರೊಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ವಿಲನ್ ಪಾತ್ರದಂತೆಯೇ ಪ್ರೋಮೋದಲ್ಲಿ ಕಾಣುತ್ತಿದ್ರು ಯಾವ ಪಾತ್ರ, ಪಾತ್ರದ ಹಿನ್ನೆಲೆ ಏನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಹೌದು ಮತ್ತೆ ಕಿರುತೆರೆಗೆ ಒಳ್ಳೆ ತೂಕ ಇರುವ ಪಾತ್ರದ ಮೂಲಕವೇ ಪೂಜಾ ಕಂಬ್ಯಾಕ್ ಮಾಡಿರೋದು ನಿಜಕ್ಕೂ ಅಭಿಮಾನಿಗಳಿಗೆ ಖುಷಿ ತಂದಿದ್ದು, ಪೂಜಾ ಪಾತ್ರದ ಸಂಚಿಕೆಗಾಗಿ ಎಲ್ಲರು ಕಾಯುತ್ತಿದ್ದು, ಯಾವ ರೀತಿಯ ಪಾತ್ರ ಇರಬಹುದು ಅನ್ನೋ ಕುತೂಹಲ ಇದ್ದು ಅದನ್ನ ತಿಳಿದುಕೊಳ್ಳುವ ತವಕದಲ್ಲಿ ಅಭಿಮಾನಿಗಳಿದ್ದಾರೆ.

ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9972245888) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ಶ್ರೀನಿವಾಸನ್” (ತಂತ್ರಿ) 9972245888

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ದಿನಾಂಕ ನಿಗಧಿ; ಅರ್ಜಿ ಸಲ್ಲಿಸೋದು ಯಾವಾಗ? ಹೇಗೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram