Post Office Monthly Income Scheme: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಅಂಚೆ ಕಚೇರಿ ಹೂಡಿಕೆಗೆ ಸುರಕ್ಷಿತತೆ ಮತ್ತು ಹಣದ ಮೇಲೆ ಹೆಚ್ಚು ರಿಟರ್ನ್ ಪಡೆಯಬಹುದಾದ ಯೋಜನೆಯನ್ನು ಸೃಷ್ಟಿಸಿದೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚು ರಿಟರ್ನ್ ಅನ್ನು ಗಳಿಸಬಹುದು ಅಂಚೆ ಕಚೇರಿಯ ಸರಕಾರದ ಸಹಭಾಗಿತ್ವದಲ್ಲಿ ಇರುವುದರಿಂದ, ಇದು ನಿಮಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ಸುರಕ್ಷತೆಯ ಬಗ್ಗೆ ಯಾವುದೇ ಭಯವಿಲ್ಲದೆ ನಿರ್ಭಯದಿಂದ ಹೂಡಿಕೆಯನ್ನು ಮಾಡಬಹುದು. ಅಂಚೆ ಕಚೇರಿಯು ಜನರ ಸಹಾಯಕ್ಕಾಗಿ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ MIS (Monthly Income Scheme) ಯೋಜನೆಯು ಒಂದಾಗಿದೆ. ಈ ಯೋಜನೆಯ ಮೂಲಕ ನಾವು ಪ್ರತಿ ತಿಂಗಳು 9,000 ವರೆಗೆ ಪಡೆಯಬಹುದಾಗಿದೆ ಹಾಗಾದ್ರೆ ಏನಿದು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಪ್ರತಿ ತಿಂಗಳು ನೀವು 9000 ರೂ.ಗಳನ್ನು ಪಡೆಯುವುದು ಹೇಗೆ?
ಈ ಯೋಜನೆಯಲ್ಲಿ ದೊಡ್ಡಮೊತ್ತದ ಹಣವನ್ನು ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳು 9000 ರೂ.ಗಳನ್ನು ಪಡೆಯಲು ಸಹಾಯವಾಗುತ್ತದೆ. ಪ್ರತಿ ತಿಂಗಳ ಜನವರಿಯಿಂದ ಮಾರ್ಚ್ ಒಳಗಡೆ ಇದರ ಬಡ್ಡಿದರ ನಿಗದಿಯಾಗುತ್ತದೆ ಹಾಗೆ ನೀವು ಹೂಡಿಕೆ ಮಾಡಿದ ಹಣವು 5 ವರ್ಷಗಳವರೆಗೆ ಲಾಕ್ ಆಗಿರುತ್ತದೆ. ( Lock in Period 5 years) ಒಮ್ಮೆ ಹೂಡಿಕೆ ಮಾಡಿದ ಹಣವನ್ನು 5 ವರ್ಷಗಳ ಒಳಗಡೆ ತೆಗೆಯಲು ಸಾಧ್ಯವಾಗುವುದಿಲ್ಲ ಐದು ವರ್ಷಗಳ ನಂತರವೇ ನೀವು ಅದು ಮೆಚುರಿಟಿ ಆದ ತಕ್ಷಣ ಹಣವನ್ನು ಪಡೆದುಕೊಳ್ಳಬಹುದು ನಿಮಗೆ ಹಿಂಪಡೆಯಲು ಇಷ್ಟವಿಲ್ಲದೆ ಹೋದರೆ ನೀವು ಅದನ್ನು ಪುನಃ ಹೂಡಿಕೆ ಮಾಡಬಹುದು. ನೀವು ಹೂಡಿಕೆ ಮಾಡಿದ ಹಣಕ್ಕೆ ಕನಿಷ್ಠ 7.1 % ಬಡ್ಡಿದರವನ್ನು ನಿಮಗೆ ನೀಡಲಾಗುತ್ತದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಹಾಗಾದರೆ ಇದರಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಬೇಕು?
ನಿಮ್ಮದು single account ಆದರೆ 9 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆಯನ್ನು ಮಾಡಬೇಕಾಗುತ್ತದೆ ಮೊದಲು 4.5 ಲಕ್ಷಗಳಿತ್ತು ಈಗ ಅದನ್ನು ಒಂಬತ್ತು ಲಕ್ಷಕ್ಕೆ ಏರಿಸಲಾಗಿದೆ ಹಾಗೆ ನಿಮ್ಮದು ಜಾಯಿಂಟ್ ಅಕೌಂಟ್ (Joint account) ಏನಾದ್ರೂ ಇತ್ತು ಅಂತ ಅಂದ್ರೆ ಸುಮಾರು 15 ಲಕ್ಷಗಳವರೆಗೆ ನೀವು ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಯಿಂದ ನಿಮಗೆ 7.1% ಬಡ್ಡಿ ದರದಂತೆ ಪ್ರತಿ ತಿಂಗಳು 9000 ರೂ.ಗಳನ್ನು ನೀಡಲಾಗುತ್ತದೆ.
ಒಂದು ವೇಳೆ ನಿಮ್ಮದು ಸಿಂಗಲ್ ಅಕೌಂಟ್ ನಲ್ಲಿ 9 ಲಕ್ಷವನ್ನು ನೀವು ಹೂಡಿಕೆ ಮಾಡುತ್ತೀರಾ ಅಂದರೆ ನಿಮಗೆ ಸುಮಾರು ಪ್ರತಿ ತಿಂಗಳು 5,325 ನಿಮ್ಮ ಖಾತೆಗೆ ಬರುತ್ತದೆ ಒಂದು ವೇಳೆ ಜಾಯಿಂಟ್ ಅಕೌಂಟ್ ನಲ್ಲಿ ನೀವು ಹೂಡಿಕೆ ಮಾಡುತ್ತಿದ್ದೀರಾ ಎಂದಾದಲ್ಲಿ ಸುಮಾರು ನಿಮಗೆ 8,845 ರೂ. ಗಳವರೆಗೆ ಹಣವು ನಿಮ್ಮ ಖಾತೆಗೆ ಜಮಾ ಆಗುತ್ತದೆ. ಸುಮಾರು 10 ವರ್ಷ ಮೇಲ್ಪಟ್ಟವರು ಎಲ್ಲರೂ ಕೂಡ ಇದರಲ್ಲಿ ಹೂಡಿಕೆಯನ್ನು ಮಾಡಬಹುದು ಅಷ್ಟೇ ಅಲ್ಲದೆ ವಯಸ್ಕರು ಸಹಿತ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ. ಒಟ್ಟಿನಲ್ಲಿ ಎಲ್ಲರೂ ಕೂಡ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಯಾವುದೇ ರಿಸ್ಕ್ ಇಲ್ಲದೆ, ಅತ್ಯಂತ ಸುರಕ್ಷತೆಯಿಂದ ಈ ಯೋಜನೆಯು ಕೂಡಿದ್ದು ಯಾವುದೇ ಭಯವಿಲ್ಲದೆ ನೀವು ಇದರಲ್ಲಿ ಸಂಪೂರ್ಣವಾಗಿ ಹೂಡಿಕೆಯನ್ನು ಮಾಡಬಹುದು.
ಇದನ್ನೂ ಓದಿ: ಪಿಜಿಗಳಿಗೆ ಶುರುವಾಯ್ತು ಹೊಸ ಗೈಡ್ ಲೈನ್ಸ್ ಕಂಟಕ; ಪಿಜಿಗಳಿಗೆ ಬಿಗ್ ಶಾಕ್ ಕೊಡಲು ಮುಂದಾದ ಬಿಬಿಎಂಪಿ
ಇದನ್ನೂ ಓದಿ: ಈ ಮೂರು ಮಾದರಿಯ ಹುಂಡೈ ಕಾರುಗಳನ್ನು ಭಾರತದಲ್ಲಿ ಅತಿ ಹೆಚ್ಚು ಮಾರಾಟ ಮಾಡಲಾಗುತ್ತಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram