ಅಂಚೆ ಇಲಾಖೆಯಲ್ಲಿ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಲು ಇಲಾಖೆ ಅಧಿಸೂಚನೆ ಹೊರಡಿಸಿದೆ. ಹುದ್ದೆಯ ಬಗ್ಗೆ ಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಯೋಣ.
ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ:- ಒಟ್ಟು 27 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳು ಖಾಲಿ ಇದ್ದು. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಎಂಎಂಎಸ್ ಬೆಂಗಳೂರಿನಲ್ಲಿ 15 ಹುದ್ದೆಗಳು, ಎಂಎಂಎಸ್ ಮೈಸೂರಿನಲ್ಲಿ 3 ಹುದ್ದೆಗಳು ಹಾಗೂ ಚಿಕ್ಕೋಡಿ, ಕಲಬುರಗಿ, ಹಾವೇರಿ, ಕಾರವಾರ, ಮಂಡ್ಯ, ಪುತ್ತೂರು, ಶಿವಮೊಗ್ಗ, ಉಡುಪಿ ಹಾಗೂ ಕೋಲಾರದಲ್ಲಿ ತಲಾ ಒಂದೊಂದು ಹುದ್ದೆಗಳು ಖಾಲಿ ಇವೆ.
ಹುದ್ದೆಗೆ ಅರ್ಜಿ ಸಲ್ಲಿಸುವವರ ಶೈಕ್ಷಣಿಕ ಅರ್ಹತೆ ಮತ್ತು ಮಾನದಂಡಗಳು:- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ SSLC ಪಾಸ್ ಆಗಿರಬೇಕು. ಜೊತೆಗೆ ಲಘು ಹಾಗೂ ಭಾರಿ ವಾಹನ ಚಾಲನಾ ಪರವಾನಗೆ ಪತ್ರ (ಡ್ರೈವಿಂಗ್ ಲೈಸೆನ್ಸ್) ಹೊಂದಿರಬೇಕು. ಹಾಗು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಲಘು ಹಾಗೂ ಭಾರಿ ವಾಹನ ಚಾಲನೆಯಲ್ಲಿ ಮೂರು ವರ್ಷಗಳ ಅನುಭವ ಇರಬೇಕು. ಹಾಗೂ ಮೋಟಾರ್ ಮೆಕ್ಯಾನಿಸಮ್ ಜ್ಞಾನ ಇರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಯಸ್ಸಿನ ಮಿತಿ:-
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ. ಸರ್ಕಾರದ ಮೀಸಲಾತಿ ನಿಯಮದ ಅನ್ವಯ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?: ಅಭ್ಯರ್ಥಿಗಳ ಚಾಲನಾ ಪರೀಕ್ಷೆ ನಡೆಸಲಾಗುತ್ತದೆ. ಹಾಗೂ ಮೋಟಾರ್ ಮೆಕ್ಯಾನಿಸಮ್ ಬಗ್ಗೆ ಎಷ್ಟು ಜ್ಞಾನ ಹೊಂದಿದ್ದಾರೆ ಎಂಬ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ವೇತನದ ವಿವರ ಹೀಗಿದೆ :- 19,900 ರೂಪಾಯಿಯಿಂದ 63,200 ರೂಪಾಯಿಯ ವರೆಗೆ ಅಭ್ಯರ್ಥಿಯ ಅನುಭವ ಮೇರೆಗೆ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :-
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ತಿಳಿಸಿದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ತಿಳಿಯುವುದು ಉತ್ತಮ. ಪೋಸ್ಟ್ ಆಫೀಸ್ ನ ಅಧಿಕೃತ ವೆಬ್ಸೈಟ್ ಗೆ ತೆರಳಿ ಅಪ್ಲಿಕೇಶನ್ ಫಾರ್ಮ್ ಪ್ರಿಂಟ್ ತೆಗೆದುಕೊಳ್ಳಬೇಕು. ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ನಿಮ್ಮ ಪೂರ್ಣ ಹೆಸರು, ನಿಮ್ಮ ತಂದೆಯ ಹೆಸರು, ನಿಮ್ಮ ಖಾಯಂ ವಿಳಾಸ, ನಿಮ್ಮ ವಿಳಾಸದ ಪಿನ್ ಕೋಡ್, ನಿಮ್ಮ ಮೇಲ್ id, ನೀವು ಹುಟ್ಟಿದ ದಿನಾಂಕ, 14-05-2024 ಕ್ಕೇ ನಿಮಗೆ ಎಷ್ಟು ವಯಸ್ಸು ಆಗಿದೆ ಎಂಬ ಬಗ್ಗೆ ಮಾಹಿತಿ, ನಿಮ್ಮ ಜಾತಿಯ ವಿವರ, ನಿಮ್ಮ ಅನುಭವ ಮತ್ತು ಶೈಕ್ಷಣಿಕ ಅರ್ಹತೆಯ ಬಗ್ಗೆ ಮಾಹಿತಿ, ಡ್ರೈವಿಂಗ್ ಲೈಸೆನ್ಸ್ ವಿವರವನ್ನು ಭರ್ತಿ ಮಾಡಿ ಜೊತೆಗೆ ನಿಮ್ಮ ವಯಸ್ಸಿನ ಪುರಾವೆ, ನಿಮ್ಮ ಎಜುಕೇಷನ್ ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ ಇದ್ದರೆ, ನಿಮ್ಮ ಅನುಭವದ ಬಗ್ಗೆ ವಿವರಗಳು, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಎಲ್ಲವನ್ನೂ ಅರ್ಜಿಯೊಂದಿಗೆ attach ಮಾಡಿ ” ಮ್ಯಾನೇಜರ್, ಮೇಲ್ ಮೋಟಾರ್ ಸರ್ವಿಸ್, ಬೆಂಗಳೂರು – 560001 ” ಈ ವಿಳಾಸಕ್ಕೆ ಮೇ 14, 2024ರ ಒಳಗಾಗಿ ಪೋಸ್ಟ್ ಮೂಲಕ ಕಳುಹಿಸಬೇಕು. ಅರ್ಜಿ ಸಲ್ಲಿಸುವಾಗ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹುಂಡೈ ಪ್ರಿಯರಿಗೆ, ಹುಂಡೈ ಕಾರುಗಳ ವಿಶೇಷ ರಿಯಾಯಿತಿಯನ್ನು ತಿಳಿಯಿರಿ!
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ನೀವು ಸುಲಭವಾಗಿ ಸಾಲ ಪಡೆಯಲು ಸಾಧ್ಯವಿದೆ