Kisan Vikas Patra Scheme: ಅಂಚೆ ಇಲಾಖೆಯಲ್ಲಿ ಹಣ ಉಳಿತಾಯ ಮಾಡಲು ಉತ್ತಮ ಯೋಜನೆಗಳು ಲಭ್ಯವಿದ್ದು, ಹೂಡಿಕೆಗೆ ತಕ್ಕಂತೆ ಒಳ್ಳೆ ಫಲಿತಾಂಶ ಲಭ್ಯವಿದ್ದು ಚಿಕ್ಕವರಿಂದ ಹಿಡಿದು ವಯಸ್ಸಾಗಿರೋ ವೃದ್ಧರಾಧಿ ಪ್ರಯೋಜನವನ್ನ ಪಡೆಯಬಹುದು. ಅದೇ ರೀತಿ, ಅಂಚೆ ಕಚೇರಿಯಲ್ಲಿ ಕಿಸಾನ್ ವಿಕಾಸ್ ಪತ್ರ ಉಳಿತಾಯ ಯೋಜನೆಯು ಹೂಡಿಕೆದಾರರಿಗೆ ಖಾತರಿಯ ಆದಾಯವನ್ನು ನೀಡುತ್ತದೆ. ಜತೆಗೆ ಇದರಲ್ಲಿ ಹೂಡಿಕೆದಾರರ ಹಣ 10 ವರ್ಷ 2 ತಿಂಗಳಿನಲ್ಲಿ ಇಮ್ಮಡಿಯಾಗಬಹುದು. ಹೌದು ಪ್ರತಿಯೊಬ್ಬರೂ ತಾವು ಗಳಿಸುವ ಬಹಳಷ್ಟು ಹಣವನ್ನು ಉಳಿಸುವ ಬಗ್ಗೆ ಯೋಚಿಸುತ್ತಾರೆ. ತಮ್ಮ ಆದಾಯಕ್ಕೆ ಅನುಗುಣವಾಗಿ ಸಾಕಷ್ಟು ಉಳಿತಾಯ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಜಾಗೃತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುವ ಜನರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಅದೇ ರೀತಿ ಅಂಚೆ ಇಲಾಖೆಯ ಕಿಸಾನ್ ವಿಕಾಸ್ ಪತ್ರವು ಒಂದು ರೀತಿಯ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆದಾರರ ಹಣ 10 ವರ್ಷ 2 ತಿಂಗಳಿನಲ್ಲಿ ಇಮ್ಮಡಿಯಾಗಬಹುದು.
ಇದು ಕೇಂದ್ರ ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದ್ದು, ಹಿಂದಿನಿಂದಲೂ ಕೇಂದ್ರ ಸರಕಾರ ಈ ರೀತಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಬದಲಾಯಿಸುತ್ತಿಲ್ಲ. ಕಿಸಾನ್ ವಿಕಾಸ ಪತ್ರ ಯೋಜನೆಯು ಹೂಡಿಕೆದಾರರಿಗೆ ಖಾತರಿಯ ಆದಾಯವನ್ನು ನೀಡುತ್ತದೆ. 124 ತಿಂಗಳುಗಳಲ್ಲಿ ಅಂದ್ರೆ 10 ವರ್ಷ 2 ತಿಂಗಳು ನಿಮ್ಮ ಹೂಡಿಕೆ ಇಮ್ಮಡಿಯಾಗಬಲ್ಲುದು. ಅದು ಹೇಗೆ ಏನ್ ಮಾಡಬೇಕು ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಹೂಡಿಕೆ ಹೇಗೆ? ಯಾವಾಗ ಮಾಡಬೇಕು? ಆಗುವ ಗಳಿಕೆ ಎಷ್ಟು
ಕಿಸಾನ್ ವಿಕಾಸ್ ಯೋಜನೆ(Kisan Vikas Patra Scheme) ಅಂಚೆ ಕಚೇರಿ ಪರಿಚಯಿಸಿದ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಭದ್ರತೆಯ ಜೊತೆಗೆ ಉತ್ತಮ ಆದಾಯವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಸರ್ಕಾರವು ಶೇಕಡಾ 7.5 ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯಲ್ಲಿ 1000 ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ಅಲ್ದೇ ನೀವು ಜಂಟಿ ಖಾತೆಯನ್ನು ಸಹ ತೆರೆಯಬಹುದು ಮತ್ತು ಹೂಡಿಕೆ ಮಾಡಬಹುದು. 10 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಆದಾಯವನ್ನು ದ್ವಿಗುಣಗೊಳಿಸಬಹುದು. ಇದಕ್ಕಾಗಿ, ನೀವು 9 ವರ್ಷ 7 ತಿಂಗಳು ಹೂಡಿಕೆ ಮಾಡಬೇಕಾಗುತ್ತದೆ. ಇದರರ್ಥ ಹಣವನ್ನು ಒಟ್ಟು 115 ತಿಂಗಳುಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಇದರಿಂದ ನೀವು ನೀವು 10 ಲಕ್ಷ ಪಡೆಯಬಹುದು. ಈ ಮೊದಲು ಇದು 120 ತಿಂಗಳುಗಳಾಗಿತ್ತು, ಆದರೆ ಈಗ ಸರ್ಕಾರ ಅದನ್ನು 115 ತಿಂಗಳಿಗೆ ಇಳಿಸಿದೆ.
ಮುಖ್ಯವಾಗಿ ಕಿಸಾನ್ ವಿಕಾಸ ಪತ್ರ ಯೋಜನೆಗೆ(Kisan Vikas Patra Scheme) ವಾರ್ಷಿಕ ಶೇ. 6.9 ಬಡ್ಡಿ ಸಿಗುತ್ತದೆ. ಕನಿಷ್ಠ 1000 ರೂ. ಹಣ ಹೂಡಿಕೆ ಮಾಡಬೇಕಾಗುತ್ತದೆ. ಮೊದಲು ಶೇ.7.6 ಬಡ್ಡಿ ಇತ್ತು. ಆದರೆ ಈಗ ಬಡ್ಡಿ ಸ್ವಲ್ಪ ಇಳಿಕೆಯಾಗಿದೆ. ಆದರೆ ಹಣ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ಇನ್ನು ಯಾವುದೇ ಭಾರತೀಯ ನಾಗರಿಕರು ಹಣ ಹೂಡಿಕೆ ಮಾಡಬಹುದು. ಕಿಸಾನ್ ಪತ್ರ ಯೋಜನೆ ಖಾತೆಯನ್ನು ಸ್ಥಳೀಯ ಅಂಚೆ ಕಚೇರಿಯಲ್ಲಿ ತೆರೆಯಬಹುದು. ಇದಕ್ಕಾಗಿ, ಅಪ್ಲಿಕೇಶನ್ ಫ್ಯಾನ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ನಂತರ ನೀವು ಹೂಡಿಕೆ ಮಾಡಲು ಬಯಸುವ ಮೊತ್ತವನ್ನು ಚೆಕ್, ನಗದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಪಾವತಿಸಬಹುದು. ಈ ಉಳಿತಾಯ ಯೋಜನೆಯಲ್ಲಿನ ಬಡ್ಡಿದರವನ್ನು ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸುತ್ತದೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗುತ್ತದೆ.
ಖಾತೆ ತೆರೆಯಲು ಕನಿಷ್ಠ 18 ವರ್ಷ ಆಗಿರಬೇಕು. ಅಪ್ರಾಪ್ತರಾಗಿದ್ದರೆ ಜಂಟಿ ಖಾತೆ ತೆರೆಯಬಹುದು. ಒಬ್ಬ ವ್ಯಕ್ತಿ ಹಲವಾರು ಕಿಸಾನ್ ವಿಕಾಸ್ ಪತ್ರಗಳನ್ನು ಕೊಳ್ಳಬಹುದು. ಈ ಪತ್ರವನ್ನು ಸಂಬಂಧಿಸಿದ ಅಂಚೆ ಕಚೇರಿಯಲ್ಲಿ ಸ್ವೀಕೃತಿ ಪತ್ರವಾಗಿ ಪಡೆದು ಭದ್ರತೆಯಾಗಿ ಅಡಮಾನವೂ ಇಡಬಹುದು. ಒಂದು ಅಂಚೆ ಕಚೇರಿಯಿಂದ ಮತ್ತೊಂದು ಕಚೇರಿಗೆ ವರ್ಗಾಯಿಸಬಹುದು. ಅನಿವಾಸಿ ಭಾರತೀಯರು ಇದರಲ್ಲಿ ಹಣ ಹೂಡಿಕೆ ಮಾಡುವಂತಿಲ್ಲ. ಟ್ರಸ್ಟ್‌ಗಳು ಕೂಡ ಹಣ ಹೂಡಿಕೆ ಮಾಡಬಹುದು. ಇನ್ನು ಕಿಸಾನ್ ವಿಕಾಸ್ ಪತ್ರದಲ್ಲಿ ಖಾತೆದಾರರು ಆಕಸ್ಮಿಕವಾಗಿ ಮೃತಪಟ್ಟರೆ ಅವಧಿಗೆ ಮುನ್ನ ಹೂಡಿಕೆ ಹಿಂತೆಗೆದುಕೊಂಡು ಖಾತೆಯನ್ನು ಸ್ಥಗಿತಗೊಳಿಸಬಹುದು. ಇಲ್ಲದಿದ್ದರೆ ಹೂಡಿಕೆ ಮಾಡಿದ ಎರಡೂವರೆ ವರ್ಷಗಳ ನಂತರ ಹಿಂತೆಗೆದುಕೊಳ್ಳುವ ಅವಕಾಶವೂ ಇದೆ. ಹೀಗಾಗಿ ಭದ್ರತೆಯ ದೃಷ್ಟಿಯಲ್ಲಿ ಹಣ ಹೂಡಿಕೆ ಮಾಡಬೇಕು ಅಂದುಕೊಂದವರು ಇದನ್ನೊಮ್ಮೆ ಪ್ರಯತ್ನಿಸಬಹುದು.
ಇದನ್ನೂ ಓದಿ: ನೀವು 10th ಪಾಸ್ ಆಗಿದ್ದೀರಾ? ಹಾಗಾದರೆ ನಿಮಗಿದೆ ಶಿವಮೊಗ್ಗ ಜಿಲ್ಲಾ ಕೋರ್ಟ್ ನಲ್ಲಿ ಉದ್ಯೋಗಾವಕಾಶ ಇಂದೇ ಅರ್ಜಿಯನ್ನು ಸಲ್ಲಿಸಿ