Post office Personal Loan: ಕಡಿಮೆ ಬಡ್ಡಿ ದರದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಸಾಲವನ್ನು ಪಡೆಯುವುದು ಹೇಗೆ?

Post office Personal Loan: ಇತ್ತೀಚಿಗೆ ಅಂಚೆ ಕಚೇರಿಯಲ್ಲಿ ಒಂದಾದ ಮೇಲೆ ಒಂದು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸರ್ಕಾರವು ಜನರಿಗೆ ಅನುಕೂಲವಾಗುವಂತೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿದೆ. ಅಂತೆಯೇ ನೀವು ಪೋಸ್ಟ್ ಆಫೀಸ್ನಲ್ಲಿ RD ಖಾತೆಯನ್ನು ಹೊಂದಿದ್ದರೆ ಸುಲಭವಾಗಿ ವೈಯಕ್ತಿಕ ಸಾಲವನ್ನು ತೆಗೆಯಬಹುದಾಗಿದೆ. ಬೇರೆಯ ಬ್ಯಾಂಕುಗಳು ಅಥವಾ ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ನೀವು ಅಂಚೆ ಕಚೇರಿಯ ಮೂಲಕ ವೈಯಕ್ತಿಕ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಪಡೆದುಕೊಳ್ಳಬಹುದು. 

WhatsApp Group Join Now
Telegram Group Join Now

ಹಾಗಾದ್ರೆ ಪೋಸ್ಟ್ ಆಫೀಸ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿದುಕೊಳ್ಳೋಣ. ಸಾಲವನ್ನು ಪಡೆಯಲು ಹಗಲು ರಾತ್ರಿ ಕಷ್ಟಪಡುವವರಿದ್ದಾರೆ ಎಷ್ಟು ತಿರುಗಾಡಿದರೂ ಸಹ ಎಲ್ಲಿ ವಿಚಾರಿಸಿದರೂ ಸಹ ಸಾಲ ಪಡೆಯುವುದು ತುಂಬಾ ಕಷ್ಟ ಏಕೆಂದರೆ ಒಂದು ಸಾಲವನ್ನು ಪಡೆಯಬೇಕಾದರೆ ಹಲವಾರು ರೀತಿಯ ದಾಖಲಾತಿಗಳ ಅವಶ್ಯಕತೆ ಇರುತ್ತದೆ ಅಷ್ಟು ಸುಲಭವಾಗಿ ಸಾಲವನ್ನು ಪಡೆಯುವಲು ಸಾಧ್ಯವಿಲ್ಲ. ಏಕೆಂದರೆ ವೈಯಕ್ತಿಕ ಸಾಲವನ್ನು ಪಡೆಯುವುದು ತುಂಬಾ ಕಷ್ಟ, ಆದರೆ ಇತ್ತೀಚಿಗೆ ಅಂಚೆ ಕಚೇರಿಯಲ್ಲಿ ಕೇವಲ ಒಂದು Recurring Deposit(RD) ಖಾತೆಯನ್ನು ತೆರೆಯುವುದರ ಮೂಲಕ ಸುಲಭವಾಗಿ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ ಅದು ಕೂಡ ಕಡಿಮೆ ಬಡ್ಡಿದರದಲ್ಲಿ. ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

RD ಮೂಲಕ Personal Loan ಹೇಗೆ ಪಡೆಯುವುದು?

ಪೋಸ್ಟ್ ಆಫೀಸ್ ಯೋಜನೆಯಲ್ಲಿ ವೈಯಕ್ತಿಕ ಸಾಲ ಪಡೆಯುವುದು ಸುಲಭವಾಗಿದೆ. ಮೊದಲನೆಯದಾಗಿ, ಪೋಸ್ಟ್ ಆಫೀಸ್ ನಲ್ಲಿ RD ಖಾತೆ ತೆರೆಯಬೇಕು. ಖಾತೆ ತೆರೆದ ನಂತರ, 5 ವರ್ಷಗಳವರೆಗೆ ಅದು ಮಾನ್ಯವಾಗಿರುತ್ತದೆ. ನೀವು ಖಾತೆಯಿಂದ ₹25 ರಿಂದ ₹30000 ವರೆಗೆ ವೈಯಕ್ತಿಕ ಸಾಲ ಪಡೆಯಬಹುದು. ಇದು ಬೇಗನೆ ಭರ್ತಿ ಮಾಡಲು ಮತ್ತು ಸಾಕಷ್ಟು ಸೌಲಭ್ಯಗಳನ್ನು ಪಡೆಯುವ ಸೂಕ್ತ ಆಯ್ಕೆಯಾಗಿದೆ. ಇದರಿಂದ ನಿಮಗೆ ಎರಡು ರೀತಿಯ ಬೆನಿಫಿಟ್ ಸಿಗುತ್ತದೆ ಮೊದಲನೆಯದಾಗಿ ವೈಯಕ್ತಿಕ ಸಾಲದ ಜೊತೆಗೆ ನಿಮ್ಮ ಹಣ ಕೂಡ ಸೇವ್ ಆಗುತ್ತದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

RD ಖಾತೆ ಎಂದರೇನು?

ಹಲವು ಜನರಿಗೆ ಈ ಆರ್ ಡಿ ಖಾತೆಯ ಬಗ್ಗೆ ಇನ್ನೂ ತಿಳಿದಿಲ್ಲ.ಆರ್ ಡಿ ಖಾತೆ ಅಥವಾ ಆರ್ ಡಿ ಸಂಖ್ಯೆ ಭಾರತೀಯ ಪೋಸ್ಟ್ ಆಫೀಸ್ ನ ಮುಖಾಂತರ ನಡೆಸಲು ಒಪ್ಪಿಗೆಯನ್ನು ಪಡೆದವರ ಹೆಸರಿನಲ್ಲಿ ಮತ್ತು ಅವರ ಅಧೀನದಲ್ಲಿ ಉಂಟಾಗಿರುವ ಖಾತೆ ಎಂದು ಹೇಳಲಾಗುತ್ತದೆ ಈ ಖಾತೆ ವಿಶೇಷವಾಗಿ ಬ್ಯಾಂಕ್ ಹಣ ಸೇರಿಸುವ ಮತ್ತು ಸ್ಥಿರಗೊಳಿಸುವ ಉದ್ದೇಶದಿಂದ ಉಪಯೋಗಿಸಲ್ಪಡುತ್ತದೆ. ಈ ಖಾತೆಯಲ್ಲಿ ಠೇವಣಿಯನ್ನು ಇಟ್ಟರೆ ಅದಕ್ಕೆ ಬಡ್ಡಿ ಸಿಗುತ್ತದೆ. ಕನಿಷ್ಠ ಎಂದರು ಐದು ವರ್ಷಗಳ ವರೆಗೆ ಇದರಲ್ಲಿ ಠೇವಣಿಯನ್ನು ಇಡಬೇಕಾಗುತ್ತದೆ ಮಧ್ಯದಲ್ಲಿ ಯಾವುದೇ ಕಾರಣಕ್ಕೂ ಸಹ ತೆಗೆಯಲು ಬರುವುದಿಲ್ಲ ಐದು ವರ್ಷಗಳ ನಂತರ ಇದನ್ನು ನೀವು ಹಣವನ್ನು ಬಡ್ಡಿಯ ಜೊತೆಗೆ ಹಿಂಪಡೆಯಬಹುದು ಅಥವಾ ಖಾತೆಯನ್ನು ಮುಂದುವರಿಸಬಹುದು.

ಬ್ಯಾಂಕುಗಳು ದಾಖಲಾತಿ ಇಲ್ಲದೆ ಸಾಲವನ್ನು ನೀಡುವುದಿಲ್ಲ ಪ್ರತಿಯೊಂದು ದಾಖಲಾತಿಯೂ ಕೂಡ ಪರ್ಫೆಕ್ಟ್ ಆಗಿ ಬೇಕಾಗುತ್ತದೆ ಹಳ್ಳಿಯಲ್ಲಿ ಕೆಲವು ಜನರ ಹತ್ತಿರ ಎಲ್ಲ ದಾಲಾತಿಗಳು ಇರುವುದಿಲ್ಲ ಇದನ್ನು ಗಮನಿಸಿದ ಸರ್ಕಾರ ಅಂಚೆ ಕಚೇರಿಯ ಮೂಲಕ ಜನರಿಗೆ ಸಹಾಯವಾಗುವಂತೆ ಈ ಯೋಜನೆಯನ್ನು ಜಾರಿಗೊಳಿಸಿದೆ.

RD ಖಾತೆಯಲ್ಲಿ ಸಾಲ ತೆಗೆದುಕೊಳ್ಳುವುದಕ್ಕೆ ಮೊದಲು ಖಾತೆಯನ್ನು ತೆರೆದು, ನಂತರ ಕನಿಷ್ಠ ಠೇವಣಿಗಳನ್ನು ಇಡಬೇಕಾಗುತ್ತದೆ. ಖಾತೆ ಸಕ್ರಿಯವಾದ ನಂತರ, ನೀವು ಬಯಸಿದಾಗಲೆಲ್ಲಾ ಸಾಲ ತೆಗೆದುಕೊಳ್ಳಬಹುದು. ಸಾಲ ಪಡೆದ ನಂತರವೂ ಅಂಚೆ ಕಚೇರಿಯ ಷರತ್ತುಗಳನ್ನು ಒಪ್ಪಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ RD ಖಾತೆಯಿಂದ ಸಾಲ ತೆಗೆದುಕೊಳ್ಳಬಹುದು.

ಸ್ನೇಹಿತರೆ ನೀವು 50000 ಭರ್ತಿ ಮಾಡಿದ್ದರೆ, ನೀವು ನಿಮ್ಮ RD ಖಾತೆಯಲ್ಲಿ 40 ರಿಂದ 45000 ರೂಪಾಯಿಗಳ ವೈಯಕ್ತಿಕ ಸಾಲವನ್ನು ಪಡೆಯಬಹುದು. ಹೀಗೆ, ನೀವು ಹೊಂದುವ ಮೊತ್ತ 90 ರಿಂದ 95 ಸಾವಿರ ರೂಪಾಯಿಗಳಾಗುತ್ತದೆ. ಈ ಸಾಲವನ್ನು ಮೊದಲು ಭರ್ತಿ ಮಾಡಿದ ಮೊತ್ತಕ್ಕಿಂತ ಕಡಿಮೆ ಆಗುವುದು ಅಲ್ಲದೆ, ಸಾಲ ಪಡೆದ ನಂತರ ನೀವು ಮೊತ್ತವನ್ನು ತೆಗೆದುಹಾಕಬಹುದು. ಇದು ನಿಮ್ಮ ವೈಯಕ್ತಿಕ ಆವಶ್ಯಕತೆಗೆ ಅನುಗುಣವಾಗಿ ನಡೆದುಕೊಳ್ಳುವ ವಿಚಾರವಾಗಿದೆ. ಇದರಿಂದ ನೀವು ನಿಮ್ಮ ಸಂಪೂರ್ಣ ಮೊತ್ತವನ್ನು ತಿಳಿಯಬಹುದು. ಅಷ್ಟೇ ಅಲ್ಲದೆ ನೀವು ಈ ವೈಯಕ್ತಿಕ ಸಾಲವನ್ನು ಪಡೆಯಲು ಕನಿಷ್ಠ 12 ತಿಂಗಳ ಠೇವಣಿ ಕಂತನು ತುಂಬ ಬೇಕಾಗುತ್ತದೆ ಅಂದರೆ ಒಂದು ವರ್ಷಗಳ ಕಾಲ ಠೇವಣಿ ಕಂತನ್ನು ತುಂಬಿದರೆ ಮಾತ್ರ ನೀವು ವೈಯಕ್ತಿಕ ಸಾಲವನ್ನು ಪಡೆಯಲು ಅರ್ಹರಾಗಿರುತ್ತೀರಿ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಷರತ್ತುಗಳು:

ನೀವು ತೆಗೆದುಕೊಂಡ ಸಾಲಕ್ಕೆ ಇಷ್ಟು ಅಂತ ಸಮಯವನ್ನು ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸಾಲವನ್ನು ಹಿಂದಿರುಗಿಸದೆ ಇದ್ದಲ್ಲಿ ನಿಮಗೆ ದಂಡವನ್ನು ವಿಧಿಸಲಾಗುವುದು ಹಾಗೂ ನಿಮ್ಮ RD ಖಾತೆಯನ್ನು ತಡೆಹಿಡಿಯಲಾಗುತ್ತದೆ. ವೈಯಕ್ತಿಕ ಸಾಲ ಪಡೆಯುವುದಕ್ಕೆ ನೀವು ನಿಮ್ಮ ಹತ್ತಿರದ ಅಂಚೆ ಕಚೇರಿಯಿಂದ ಮಾಹಿತಿ ಪಡೆಯಬಹುದು. ಅದಕ್ಕೆ ಮೊದಲು ಆರ್ ಡಿ ಖಾತೆಯನ್ನು ನೀವು ಆಧಾರ್ ಕಾರ್ಡ್ ಮತ್ತು ಬೇಕಾದ ಬೇರೆಯ ಅವಶ್ಯಕ ದಾಖಲಾತಿಗಳನ್ನು ಸಲ್ಲಿಸಬೇಕು. ನಂತರ ಪೋಸ್ಟ್ ಆಫೀಸ್ ನಲ್ಲಿ ನೇರವಾಗಿ ಖಾತೆಯನ್ನು ತೆರೆಯಬಹುದು. ಸಾಲವನ್ನು ಆರ್ ಡಿ ಖಾತೆಯಲ್ಲಿ ಮಾತ್ರ ನೀಡಲು ಅವಕಾಶ ಇದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಹಂಚಿ ಕಚೇರಿಗೆ ಭೇಟಿಯನ್ನು ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ.

ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಬದಲಾಗಲಿರುವ 6 ಹೊಸ ನಿಯಮಗಳು

ಇದನ್ನೂ ಓದಿ: ಇನ್ಮುಂದೆ ಭೂ ದಾಖಲೆಗಳು ಆಗಲಿವೆ ಡಿಜಿಟಲೀಕರಣ; ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಜಾರಿ