ಹಣ ಹೂಡಿಕೆ ಮಾಡಲು ಇಂದು ಹಲವಾರು ದಾರಿಗಳು ಇವೆ. ಹಲವಾರು ಕಂಪನಿಗಳು ಹಲವಾರು ಬ್ಯಾಂಕ್ ಗಳು ನಿಮ್ಮ ಹಣ ಹೂಡಿಕೆಯ ಮೇಲೆ ಹೆಚ್ಚಿನ ಬಡ್ಡಿದರ ನೀಡುವುದರ ಜೊತೆಗೆ ಬೋನಸ್ ಎಂದೆಲ್ಲಾ ನೀಡುತ್ತವೆ. ಈಗ ಬ್ಯಾಂಕ್ ಮತ್ತು ಕಂಪನಿಗಳಿಗಿಂತ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಕಡಿಮೆ ಮೊತ್ತದ ಇನ್ವೆಸ್ಟ್ ಮಾಡಿ ಹಣ ಪಡೆಯುವುದರ ಜೊತೆಗೆ ನಮ್ಮ ಹಣವೂ ಭದ್ರವಾಗಿ ಇರುತ್ತವೆ ಎಂಬ ಆಲೋಚನೆಗಳಿಂದ ಜನರು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುತ್ತಾರೆ. ಈಗಾಗಲೇ ಪೋಸ್ಟ್ ಆಫೀಸ್ ನಲ್ಲಿ ಹಲವರು ಯೋಜನೆಗಳು ಜನಪ್ರಿಯವಾಗಿದೆ. ಈಗ ತಿಂಗಳಿಗೆ 1,000 ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಪೋಸ್ಟ್ ಆಫೀಸ್ ಹೊಸ ಯೋಜನೆಯೊಂದನ್ನು ಆರಂಭಿಸಿದೆ. ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯೋಣ.
ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯ ಬಗ್ಗೆ ಮಾಹಿತಿ :-
ಇದು ಕೇಂದ್ರ ಸರ್ಕಾರದ ಖಾತರಿ ಯೋಜನೆ ಆಗಿದ್ದು ಜನರು ತಮ್ಮ ಪೆನ್ಷನ್ ಜೀವನವನ್ನು ಸುಂದರವಾಗಿ ಕಳೆಯಲು ಇರುವ ಉತ್ತಮ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ತಿಂಗಳಿಗೆ ಒಂದು ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯು 15 ವರುಷಗಳಲ್ಲಿ ಮುಕ್ತಾಯ ಆಗುತ್ತದೆ. ಪಿಪಿಎಫ್ ಯೋಜನೆಯಲ್ಲಿ ನೀವು ವಾರ್ಷಿಕವಾಗಿ 500 ರೂಪಾಯಿಯಿಂದ ರೂ 1.5 ಲಕ್ಷದ ವರೆಗೆ ಹೂಡಿಕೆ ಮಾಡಬಹುದಾಗಿದೆ. ಸದ್ಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಶೇಕಡಾ 7.1% ಬಡ್ಡಿದರ ಸಿಗುತ್ತಿದೆ. 15 ವರ್ಷಗಳ ವರೆಗೆ ತಿಂಗಳಿಗೆ 1,000 ರೂಪಾಯಿ ಹೂಡಿಕೆ ಮಾಡಿ ಲಕ್ಷಕ್ಕೂ ಹೆಚ್ಚಿನ ಹಣವನ್ನು ನೀಡು ಸಂಗ್ರಹ ಮಾಡಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿ ತಿಂಗಳು ಹೂಡಿಕೆ ಮಾಡಿ 3ಲಕ್ಷಕ್ಕೂ ಅಧಿಕ ಹಣ ಪಡೆಯಬಹುದು.
ಒಬ್ಬ ವ್ಯಕ್ತಿ ಒಂದು ತಿಂಗಳಿಗೆ 1,000 ರೂಪಾಯಿ ಹೂಡಿಕೆ ಮಾಡಿದರೆ ಒಂದು ವರುಷಕ್ಕೆ 12,000 ರೂಪಾಯಿ ಹೂಡಿಕೆಯ ಮೊತ್ತ ಆಗುತ್ತದೆ. ಹೂಡಿಕೆಯ ಮೊತ್ತ ಮತ್ತು ಬಡ್ಡಿದರ ಸೇರಿದರೆ ವರುಷಕ್ಕೆ 852 ರೂಪಾಯಿ ಬಡ್ಡಿ ಸಿಗುತ್ತದೆ. ಅಂದ್ರೆ ಒಂದು ವರುಷಕ್ಕೆ12,852 ರೂಪಾಯಿ ಆಗುತ್ತದೆ. 15 ವರುಷಗಳ ಕಾಲ ನಿರಂತರ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡುವ ಮೊತ್ತವು 1,80,000 ರೂಪಾಯಿ ಆಗುತ್ತದೆ. ಬಡ್ಡಿದರ ಸೇರಿ 1,92,780 ರೂಪಾಯಿ ಆಗುತ್ತದೆ. ಈ ಯೋಜನೆಯನ್ನು ನೀವು ಮತ್ತೆ 10 ವರುಷಗಳ ವರೆಗೆ ಮುಂದುವರೆಸಲು ಸಾಧ್ಯವಿದೆ. ಅಂದರೆ 25 ವರ್ಷಗಳಿಗೆ ನಿಮ್ಮ ಹೂಡಿಕೆಯ ಮೊತ್ತ 3,00,000 ರೂಪಾಯಿ ಆಗುತ್ತದೆ. ಒಟ್ಟು ಬಡ್ಡಿದರ 21,300 ರೂಪಾಯಿ ಆಗಿ ನಿಮಗೆ ಸಿಗುವ ಹಣ 3,21,300 ರೂಪಾಯಿ ಆಗಿರುತ್ತದೆ.
ಇದನ್ನೂ ಓದಿ: 9% FD ಬಡ್ಡಿ ಆಫರ್! ಈ ಬ್ಯಾಂಕುಗಳಲ್ಲಿ ಉಳಿಸಿ ಲಕ್ಷಾಧಿಪತಿ ಆಗಿ!
ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯ ಪ್ರಮುಖ ಲಾಭಗಳು:-
- PPF ಖಾತೆಯನ್ನು 5 ವರ್ಷಗಳ ಅವಧಿಗಳಲ್ಲಿ ವಿಸ್ತರಿಸಬಹುದು. ಜೊತೆಗೆ ನೀವು ಎರಡು ವಿಧಾನದಲ್ಲಿ ವಿಸ್ತರಣೆಗೆ ಅವಕಾಶ ಇರುತ್ತದೆ.
- ಕೊಡುಗೆ ವಿಸ್ತರಣೆ: ಈ ಆಯ್ಕೆಯಲ್ಲಿ, ನೀವು ಹಿಂದಿನ ಖಾತೆಗೆ ಕೊಡುಗೆ ನೀಡುವುದನ್ನು ಮುಂದುವರಿಸಬಹುದು.
- ಹೂಡಿಕೆಯಿಲ್ಲದೆ ವಿಸ್ತರಣೆ: ಈ ಆಯ್ಕೆಯಲ್ಲಿ, ಯಾವುದೇ ಹೆಚ್ಚುವರಿ ಹಣ ಜಮಾ ಮಾಡದೆ ಖಾತೆಯನ್ನು ಮುಂದುವರಿಸಬಹುದು.
- ಕಡಿಮೆ ಮೊತ್ತದ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಬಹುದು.
- ನಿಗದಿತ ಸಮಯಕ್ಕೆ ನಿಮ್ಮ ಹಣ ನಿಮ್ಮ ಕೈ ಸೇರುತ್ತದೆ.
- ನಿವೃತ್ತಿಯ ನಂತರದ ಜೀವನಕ್ಕೆ ಉತ್ತಮ ಯೋಜನೆ ಆಗಿದೆ.
ಇದನ್ನೂ ಓದಿ: ATM ನಿಂದ ಒಂದು ತಿಂಗಳಿಗೆ ಎಷ್ಟು ಉಚಿತವಾಗಿ ಹಣ ತೆಗೆಯಬಹುದು?