ಅಂಚೆ ಇಲಾಖೆಯಲ್ಲಿ 40,000 ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಅಧಿಸೂಚನೆ ಹೊರಡಿಸಲಿದೆ.

Post Office Recruitment

ಅಂಚೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದುಕೊಂಡವರಿಗೆ 40,000 ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಅರ್ಜಿ ಗೆ ಅಧಿಸೂಚನೆ ಹೊರಡಿಸಲಿದೆ. ಹುದ್ದೆಗಳ ಬಗ್ಗೆ ಪೂರ್ಣ ವಿವರಗಳು ಇಲ್ಲಿವೆ.

WhatsApp Group Join Now
Telegram Group Join Now

ಹುದ್ದೆಗಳ ವಿವರ ಇಲ್ಲಿದೆ:- ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ಸ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ಸ್, ಡಾಕ್ ಸೇವಕ್ ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗುತ್ತದೆ.

ಪೋಸ್ಟ್ ಹುದ್ದೆಗಳ ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆ ಹೊಂದಿರಬೇಕು:-

  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ 10 ನೇ ತರಗತಿ ಪಾಸ್ ಆಗಿರಬೇಕು ಹಾಗೂ 10 ನೇ ತರಗತಿಯಲ್ಲಿ ಇಂಗ್ಲಿಷ್ ಐಚ್ಛಿಕ ಅಥವಾ ಕಡ್ಡಾಯ ವಿಷಯ ಕಲಿತಿರುವುದು ಅವಶ್ಯಕ. ಜೊತೆಗೆ ಅಭ್ಯರ್ಥಿಯು ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಹಿಂದಿ ಭಾಷೆಯನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರಬೇಕು.
  • ವಯಸ್ಸಿನ ಮಿತಿ: ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಕನಿಷ್ಠ ಮಿತಿ 18 ಹಾಗೂ ಗರಿಷ್ಠ 40 ವರ್ಷದ ನಡುವೆ ಇರಬೇಕು. ಸರಕಾರದ ಮೀಸಲಾತಿ ನಿಯಮದ ಪ್ರಕಾರ ವಯಸ್ಸಿನ ಸಡಿಲಿಕೆ ಇರುತ್ತದೆ.

ಹುದ್ದೆಯ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

  1. ಅರ್ಜಿ ಪರಿಶೀಲನೆ: ಹುದ್ದೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳ ಅರ್ಜಿಯನ್ನು ಹುದ್ದೆಯ ಅರ್ಹತೆಯ ಪರಿಶೀಲನೆ ಮಾಡಲಾಗುವುದು. ಅರ್ಜಿಯ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಹಂತದ ಆಯ್ಕೆ ಪ್ರಕ್ರಿಯೆ ಇರುತ್ತದೆ.
  2. ಮೆರಿಟ್ ಆಧಾರದ :- ಅರ್ಜಿಗಳ ಮಾಹಿತಿ ಪರಿಶೀಲನೆ ಆದ ಬಳಿಕ ಅಭ್ಯರ್ಥಿಗಳ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಪರಿಶೀಲನೆ ಮಾಡಲಾಗುತ್ತದೆ.
  3. ಅಂತಿಮ ಆಯ್ಕೆ: 10 ನೇ ತರಗತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಉತ್ತಮ ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವಾಗ ಈ ವಿಷಯಗಳ ಬಗ್ಗೆ ಗಮನ ಇರಲಿ :-

  • ಸರಿಯಾದ ಮಾಹಿತಿ ನೀಡಿ:- ಅರ್ಜಿ ಸಲ್ಲಿಸುವಾಗ ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಯಾವುದೇ ತಪ್ಪು ಇಲ್ಲದ ಹಾಗೆ ಭರ್ತಿ ಮಾಡಬೇಕು. ನೀವು ಯಾವುದೇ ರೀತಿಯ ಮಾಹಿತಿಯನ್ನು ತಪ್ಪಾಗಿ ನೀಡಿದರೆ ನಿಮ್ಮ ಅರ್ಜಿ ತಿರಸ್ಕಾರ ಆಗುವ ಸಾಧ್ಯತೆ ಇರುತ್ತದೆ.
  • ಅಧಿಸೂಚನೆ ಗಮನಿಸಿ :- ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಅರ್ಜಿ ಆಹ್ವಾನಕ್ಕೆ ಇಲಾಖೆ ಹೊರಡಿಸಿದ ಮಾಹಿತಿಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ನಂತರ ನೀವು ಅರ್ಜಿ ಸಲ್ಲಿಸಬೇಕು.
  • ನಿಖರ ದಾಖಲೆ ನೀಡಿ :- ಅರ್ಜಿ ಸಲ್ಲಿಸುವಾಗ ನಿಮ್ಮ ದಾಖಲಾತಿಗಳನ್ನು ಸ್ಕ್ಯಾನ್ ಕಾಪಿ ಕೇಳಿದರೆ ನಿಖರ ದಾಖಲೆಗಳನ್ನು ಅರ್ಜಿಯಲ್ಲಿ ಸಲ್ಲಿಸಬೇಕು.
  • ಅರ್ಜಿ ಶುಲ್ಕವನ್ನು ಪಾವತಿಸಿ :- ನೀವು ಅರ್ಜಿ ಸಲ್ಲಿಸುವಾಗ ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕು ಎಂಬ ನಿಯಮ ಇದ್ದರೆ ಕೊನೆಯ ದಿನಾಂಕದ ಒಳಗೆ ಅರ್ಜಿ ಶುಲ್ಕ ಸಲ್ಲಿಸಬೇಕು.
  • ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ :- ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಬಗ್ಗೆ ಮಾಹಿತಿ ಇರುತ್ತದೆ. ಅದನ್ನು ಪರಿಶೀಲನೆ ಮಾಡಿ ಕೊನೆಯ ದಿನದ ಒಳಗೆ ಅರ್ಜಿ ಸಲ್ಲಿಸಿ.
  • ಸುಳ್ಳು ಮಾಹಿತಿ ನೀಡಬೇಡಿ :- ಅರ್ಜಿಯಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ವಿದ್ಯೆ ಅಥವಾ ಯಾವುದೇ ಮಾಹಿತಿಗಳನ್ನು ಸುಳ್ಳು ಮಾಹಿತಿ ನೀಡಬೇಡಿ. ಇದು ಕಾನೂನು ಅಪರಾಧ ಆಗುತ್ತದೆ.

ಇದನ್ನೂ ಓದಿ: ಕೆನರಾ ಬ್ಯಾಂಕ್ 2024 ರಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ!

ಇದನ್ನೂ ಓದಿ: ಭಾರತೀಯ ರೈಲ್ವೆಯ ಆಗ್ನೇಯ ರೈಲ್ವೆಯಲ್ಲಿ ಸಹಾಯಕ ಲೋಕೋ ಪೈಲಟ್ ಮತ್ತು ಟ್ರೈನ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ; ಪೂರ್ತಿ ವಿವರ ಇಲ್ಲಿದೆ.