ತೆರಿಗೆ ಮುಕ್ತ ಎಫ್‌ಡಿಗಿಂತ ಉತ್ತಮ ಬಡ್ಡಿಯನ್ನು ಪಡೆಯುವ ಪೋಸ್ಟ್ ಆಫೀಸ್ ಸ್ಕೀಮ್ ಬಗ್ಗೆ ತಿಳಿಯಿರಿ

Post Office Scheme High interest Rate

ಯಾವುದೇ ಹೂಡಿಕೆಯ ಸ್ಕೀಮ್ ನಲ್ಲಿ ಹೂಡಿಕೆ ಮಾಡುವ ಮುನ್ನ ನನಗೆ ಏನು ಲಾಭ ಇದೆ ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ. ಹೂಡಿಕೆಯ ಲಾಭಗಳು ಏನು ಎಂಬುದರ ವಿವರಗಳನ್ನು ಪಡೆದು ಹಣವನ್ನು ಹೂಡಿಕೆ ಮಾಡಬೇಕು. ಈಗ ಪೋಸ್ಟ್ office ನಲ್ಲಿ 5 ವರ್ಷ ಎಫ್ ಡಿ ಯೋಜೇನೆಯಲ್ಲಿಂಹುದಿಕೆ ಮಾಡಿದರೆ ತೆರಿಗೆ ಕಟ್ಟಬೇಕು ಎಂಬ ನಿಯಮ ಇಲ್ಲ. ಅದರಂತೆಯೇ ಈಗ ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗೆ ಇನ್ನೊಂದು ಉತ್ತಮ ಹೂಡಿಕೆ ಯೋಜನೆ ಒಂದನ್ನು ಬಿಡುಗಡೆ ಮಾಡಿದೆ. ಪೋಸ್ಟ್ ಆಫೀಸ್ ನ ಹೊಸ ಯೋಜನೆಯ ಪೂರ್ಣ ಮಾಹಿತಿಗಳನ್ನು ತಿಳಿಯಿರಿ.

WhatsApp Group Join Now
Telegram Group Join Now

ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್ ಬಗ್ಗೆ ಮಾಹಿತಿ :- ಭಾರತೀಯ ಅಂಚೆ ಇಲಾಖೆಯು ಹೊಸದಾಗಿ ಪೋಸ್ಟ್ ಆಫೀಸ್‌ನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನೂ ಆರಂಭ ಮಾಡಿದೆ. ಈ ಯೋಜನೆಯು 5ವರ್ಷದ ತೆರಿಗೆ ಮುಕ್ತ FD ಯೋಜನೆಗಿಂತ ಹೆಚ್ಚಿನ ಲಾಭಗಳನ್ನು ಹೊಂದಿದೆ. ಈ ಯೋಜನೆಯು ವಿಶೇಷವಾಗಿ ಸಣ್ಣ ಮತ್ತು ಮಧ್ಯಮ-ಆದಾಯ ಹೂಡಿಕೆದಾರರಿಗೆ, ಭದ್ರ ಮತ್ತು ಲಾಭದಾಯಕ ಹೂಡಿಕೆ ಅವಕಾಶವನ್ನು ನೀಡುತ್ತದೆ. 

NSC ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು:-

ಅಂಚೆ ಕಛೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಲು ಬಯಸುವ ವ್ಯಕ್ತಿಗಳಿಗೆ ಕಡ್ಡಾಯವಾಗಿ ಭಾರತದ ಪ್ರಜೆ ಆಗಿರಬೇಕು. ಈ ಯೋಜನೆಯಲ್ಲಿ ತಂದೆ ತಾಯಿ ತಮ್ಮ ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಸಾಧ್ಯವಿದೆ. ಹಾಗೂ 10 ವರ್ಷಕ್ಕಿಂತ ಮೇಲ್ಪಟ್ಟ ಮಗು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಎರಡರಿಂದ ಮೂರು ಜನರು ಜಂಟಿ ಖಾತೆ ತೆರೆಯಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬಡ್ಡಿದರದ ಬಗ್ಗೆ ಮಾಹಿತಿ :- ಈ ಯೋಜನೆಯಲ್ಲಿ ಹೂಡಿಕೆ ಮಾಡುವವರು ಒಂದು ವಿಚಾರ ಗಮನದಲ್ಲಿಟ್ಟುಕೊಳ್ಳಬೇಕು. ಬೇರೆ ಯೋಜನೆಗಳಂತೆ ಬಡ್ಡಿದರಗಳು ಹೆಚ್ಚಾದಾಗ ಆ ಸಮಯದಲ್ಲಿ ನಿಮ್ಮ ಹೂಡಿಕೆ ಹಣದ ಮೇಲೆ ಹೂಡಿಕೆ ಮಾಡುವಾಗ ಏಷ್ಟು ಬಡ್ಡಿದರ ನಿಗದಿ ಆಗಿತ್ತು ಅಷ್ಟೇ ಬಡ್ಡಿ ಹಣ ಸಿಗುತ್ತದೆ.

ಹೂಡಿಕೆಯ ಮೊತ್ತ ಏಷ್ಟು :- ಈ ಯೋಜನೆಯ ಅಡಿಯಲ್ಲಿ ಕನಿಷ್ಟ 1,000 ರೂಪಾಯಿ ಹಣ ಹೂಡಿಕೆ ಮಾಡಬಹುದು. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಲು ಗರಿಷ್ಠ ಮಿತಿ ಇಲ್ಲ. ನಿಮ್ಮ ಶಕ್ತಿಯ ಅನುಸಾರ ಏಷ್ಟು ಹಣವನ್ನು ಬೇಕಾದರೂ ಹೂಡಿಕೆ ಮಾಡಲು ಸಾಧ್ಯವಿದೆ.

ತೆರಿಗೆ ವಿನಾಯಿತಿ ಬಗ್ಗೆ ಮಾಹಿತಿ :- ಈ ಎನ್‌ಎಸ್‌ಸಿ ಯೋಜನೆಯಲ್ಲಿ 1.5 ಲಕ್ಷದವರೆಗೆ ಹಣಕ್ಕೆ ಸೆಕ್ಷನ್ 80 ಸಿ ಅಡಿಯಲ್ಲಿ ವಾರ್ಷಿಕ ತೆರಿಗೆ ವಿನಾಯಿತಿ ಸಿಗುತ್ತದೆ. ಒಮ್ಮೆ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 5 ವರ್ಷಗಳ ಕಾಲ ಠೇವಣಿ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ ಹೂಡಿಕೆ ಮಾಡಿದ ವ್ಯಕ್ತಿ ನಿಧನ ಆದರೆ ಈ ಖಾತೆಯನ್ನು ಕ್ಲೋಸ್ ಮಾಡಲು ಸಾಧ್ಯವಿದೆ. 5 ವರ್ಷಗಳ ನಂತರ ಹೂಡಿಕೆ ಅವಧಿಯನ್ನು ವಿಸ್ತರಿಸಬೇಕು ಎಂದರೆ ಮತ್ತೆ ಅರ್ಜಿ ಸಲ್ಲಿಸಿ ಹೂಡಿಕೆ ಮಾಡುವ ಸೌಲಭ್ಯ ಇದೆ.

ತೆರಿಗೆ ಮುಕ್ತ FD ಯೋಜನೆಯ ಬಡ್ಡಿದರಗಳು ಹೀಗಿವೆ :-

ಪೋಸ್ಟ್ ಆಫೀಸ್ ನಲ್ಲಿ ಶೇಕಡಾ 7.5% ಬಡ್ಡಿದರ ಸಿಗುತ್ತದೆ. ಸ್ಟೇಟ್ ಬ್ಯಾಂಕ್ ನಲ್ಲಿ ಶೇಕಡಾ 6.5% ಬಡ್ಡಿದರ ಸಿಗುತ್ತದೆ. ಪಂಜಾಬ್ ಬ್ಯಾಂಕ್ ನಲ್ಲಿ ಶೇಕಡಾ 6.5% ಬಡ್ಡಿದರ ಸಿಗುತ್ತದೆ. ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಶೇಕಡಾ 6.5% ಬಡ್ಡಿದರ ಸಿಗುತ್ತದೆ. ಹಾಗೂ HDFC ಬ್ಯಾಂಕ್ ನಲ್ಲಿ ಶೇಕಡಾ 7% ಬಡ್ಡಿದರ ಸಿಗುತ್ತದೆ. ಹಾಗೂ ICICI ನಲ್ಲಿ 7% ಬಡ್ಡಿದರ ಸಿಗುತ್ತದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನಲ್ಲಿ ಕ್ಲರ್ಕ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿ ಸಲ್ಲಿಸಿ 

ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ ತಿದ್ದುಪಡಿಯ ಅಧಿಸೂಚನೆ ಹೊರಡಿಸಿದೆ.