ಪೋಸ್ಟ್ ಆಫೀಸ್ ನ ಸ್ಕೀಮ್ ನಲ್ಲಿ 5 ವರ್ಷ ಹೂಡಿಕೆ ಮಾಡಿ 15 ಲಕ್ಷ ರೂಪಾಯಿ ಗಳಿಸಿರಿ

Post Office Schemes

ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಭದ್ರತೆಯ ಜೊತೆಗೆ ಹೆಚ್ಚಿನ ಬಡ್ಡಿದರವನ್ನು ನೀಡುವಲ್ಲಿ ಪೋಸ್ಟ್ ಆಫೀಸ್ ಸ್ಕೀಮ್ ಗಳು ಹೆಚ್ಚು ಪ್ರಚಲಿತದಲ್ಲಿ ಇವೆ. ಹೆಣ್ಣು ಮಕ್ಕಳಿಗೆ ಹಿರಿಯ ನಾಗರಿಕರಿಗೆ ಅಷ್ಟೇ ಏಕೆ ಸಾಮಾನ್ಯ ಜನರಿಗೂ ಪೋಸ್ಟ್ ಆಫೀಸ್ ಸ್ಕೀಮ್ ಗಳು ಹೆಚ್ಚು ಲಾಭ ನೀಡುತ್ತವೆ. ನಿಯಮಿತವಾಗಿ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಸ್ಕೀಮ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಪೋಸ್ಟ್ ಆಫೀಸ್ ನಲ್ಲಿ ಇರುವ ಯೋಜನೆಗಳು ಯಾವುವು?: ಪೋಸ್ಟ್ ಆಫೀಸ್ ನಲ್ಲಿ ಹೆಣ್ಣು ಮಕ್ಕಳಿಗೆ ಹಿರಿಯ ನಾಗರಿಕರಿಗೆ ಹಾಗೂ ಜನಸಾಮಾನ್ಯರಿಗೆ ಬೇರೆ ಬೇರೆ ಯೋಜನೆಗಳು ಇವೆ. ಕೆಲವು ಮುಖ್ಯ ಪೋಸ್ಟ್ ಆಫೀಸ್ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಪೋಸ್ಟ್ ಆಫೀಸ್ FD ಯೋಜನೆ :-

Post Office ನಲ್ಲಿ ಇರುವ FD ಯೋಜನೆಯಲ್ಲಿ ಹೂಡಿಕೆಗೆ ಹೆಚ್ಚಿನ ಬಡ್ಡಿದರ ಸಿಗುತ್ತವೆ. ನೀವು ಹೆಚ್ಚಿನ ಬಡ್ಡಿದರವನ್ನು ಪಡೆಯಬೇಕು ಎಂದಾದರೆ ನೀವು 5 ವರ್ಷಗಳ ಅವಧಿಗೆ FD ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸದ್ಯ ಪೋಸ್ಟ್ ಆಫೀಸ್ ನ ಎಫ್.ಡಿ ಯೋಜನೆಗೆ ಶೇಕಡಾ 7.5% ಬಡ್ಡಿ ದೊರೆಯುತ್ತಿದೆ ನೀವು ಕಡಿಮೆ ಅವಧಿಗೆ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಹಣ ಕಡಿಮೆ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ :-

ಈ ಯೋಜನೆಯಲ್ಲಿ 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 7.7% ಬಡ್ಡಿದರ ಸಿಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡಬಹುದು ಹಾಗೂ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ.

ಹಿರಿಯ ನಾಗರಿಕ ಉಳಿತಾಯ ಯೋಜನೆ :-

ಇದು ಕೇವಲ ಹಿರಿಯ ನಾಗರಿಕರಿಗೆ ಇರುವ ಯೋಜನೆ ಆಗಿದೆ. ಈ ಯೋಜನೆಯಲ್ಲಿ 5 ವರ್ಷಗಳ ವರೆಗೆ ಹಣವನ್ನು ಠೇವಣಿ ಮಾಡಬೇಕು ಹಾಗೂ ನಿಮ್ಮ ಹೂಡಿಕೆಯ ಹಣಕ್ಕೆ ಶೇಕಡಾ 8.2% ಹಣ ಸಿಗುತ್ತದೆ. ಹಿರಿಯ ನಾಗರಿಕರ ಭವಿಷ್ಯಕ್ಕೆ ಇದು ಒಂದು ಉತ್ತಮ ಯೋಜನೆ ಆಗಿದೆ.

ಇದನ್ನೂ ಓದಿ: ಅಕ್ಷಯ ತೃತೀಯ ಶುಭದಿನದಂದು ಏರಿಕೆಯಾದ ಬಂಗಾರ

ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ :-

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಜನಪ್ರಿಯ ಯೋಜನೆ ಆಗಿದ್ದು ಇದು ನಿಮಗೆ ಸ್ಥಿರವಾದ ಮಾಸಿಕ ಆದಾಯವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 9 ಲಕ್ಷ ರೂಪಾಯಿ ಹಾಗೂ ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದಾಗಿದೆ. ನೀವು ಹೂಡಿಕೆ ಮಾಡಿರುವ ಮೊತ್ತಕ್ಕೆ ಶೇಕಡಾ 7.4% ಬಡ್ಡಿದರವನ್ನು ಸಿಗುತ್ತದೆ. ನೀವು ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿ ಠೇವಣಿ ಮಾಡಿದ್ದಲ್ಲಿ ನೀವು ತಿಂಗಳಿಗೆ 9,250 ರೂಪಾಯಿ ಆದಾಯ ಗಳಿಸಬಹುದಾಗಿದೆ.

ಮೇಲಿನ ಎಲ್ಲಾ ಯೋಜನೆಗಳಲ್ಲಿ ಹೂಡಿಕೆ ಮಾಡಲು ನಿಮ್ಮ ಹತ್ತಿರದ ಪೋಸ್ಟ್ ಗೆ ತೆರಳಿ ಹಣ ಹೂಡಿಕೆ ಮಾಡಬಹುದು. ಪೋಸ್ಟ್ ಮ್ಯಾನ್ ಅಥವಾ ಪೋಸ್ಟ್ ಆಫೀಸರ್ ಬಳಿ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿ ಪಡೆದು ಹೂಡಿಕೆ ಮಾಡಬಹುದು. ಹಣ ಹೂಡಿಕೆ ಮಾಡುವಾಗ ಯಾವುದೇ ರೀತಿಯ ದಲ್ಲಾಳಿ ಗಳ ಬಳಿ ಹೋಗಬೇಡಿ. ಅವರು ನಿಮಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಕಡಿಮೆ ಬೆಲೆ, ಹೆಚ್ಚು ಮೈಲೇಜ್, ಹೊಸ ಮಾರುತಿ ಸ್ವಿಫ್ಟ್ ನಿಮ್ಮ ಜೀವನಕ್ಕೆ ಹೊಸತನ ತಂದುಕೊಡಲಿದೆ!