ಪೋಸ್ಟ್ ಆಫೀಸ್ ನಲ್ಲಿ ಈಗ ಮಹಿಳೆಯರ ಸಬಲೀಕರಣಕ್ಕೆ ಮತ್ತು ಹಿರಿಯ ನಾಗರಿಕರ ಆರ್ಥಿಕ ಸ್ಥಿತಿ ಬಲಪಡಿಸುವ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಪೋಸ್ಟ್ ಆಫೀಸ್ ಸರ್ಕಾರದ ಅಧೀನಕ್ಕೆ ಒಳಪಡುವ ಕಾರಣದಿಂದ ಹಣವನ್ನು ಹೂಡಿಕೆ ಮಾಡಲು ಯಾವುದೇ ರೀತಿಯ ಭಯ ಇರುವುದಿಲ್ಲ. ನಮ್ಮ ಹೂಡಿಕೆಯ ಹಣ ಭದ್ರವಾಗಿ ಇರುತ್ತದೆ ಹಾಗೂ ಯಾವುದೇ ಮಧ್ಯವರ್ತಿಗಳ ಪ್ರವೇಶ ಇಲ್ಲದೆಯೇ ನಾವು ಹಣ ಹೂಡಿಕೆಯನ್ನು ಮಾಡಲು ಸಾಧ್ಯವಿದೆ. ಹಾಗಾದರೆ ಪೋಸ್ಟ್ ಆಫೀಸ್ ನ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯೋಣ.
ಹೆಣ್ಣುಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಏಷ್ಟು ಮುಖ್ಯ?: ಸಾಮಾನ್ಯವಾಗಿ ನಮ್ಮ ಸುತ್ತಲೂ ಪುರುಷ ಪ್ರಧಾನ ಸಮಾಜ ಇರುವುದರಿಂದ ಹೆಣ್ಣು ಮಕ್ಕಳು ಅನೇಕ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಆರ್ಥಿಕವಾಗಿ ಸದೃಢ ಇಲ್ಲದಿರುವ ಕಾರಣ ಹೆಣ್ಣು ಎಲ್ಲವನ್ನೂ ಸಹನೆಯಿಂದ ಸಹಿಸುವ ಸ್ಥಿತಿ ಇರುತ್ತದೆ. ಆದರೆ ಮಹಿಳೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದರೆ ಯಾರದೇ ಹಂಗು ಇಲ್ಲದೆಯೇ ಜೀವಿಸಲು ಸಾಧ್ಯವಿದೆ. ಹಾಗೂ ಹಿರಿಯ ನಾಗರಿಕರಿಗೆ ದುಡಿದು ಬದುಕುವ ಶಕ್ತಿ ಇರುವುದಿಲ್ಲ. ಅವರಿಗೆ ತಮ್ಮದೇ ಹಣ ಇದ್ದರೆ ಅವರಿಗೂ ಒಂದು ರೀತಿಯ ಕಾನ್ಫಿಡೆನ್ಸ್ ಇರುತ್ತದೆ ಹಾಗೂ ವೃದ್ದಾಪ್ಯ ಜೀವನವನ್ನು ಸಂತಸದಿಂದ ಕಳೆಯಲು ಸಹಾಯ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೆಣ್ಣು ಮಕ್ಕಳ ಭವಿಷ್ಯ ನಿಧಿಗೆ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ:-
ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿತು. ಈ ಯೋಜನೆಯಲ್ಲಿ ಪಾಲಕರು ಮಕ್ಕಳ ಭವಿಷ್ಯದ ಹಣಕಾಸಿನ ತೊಂದರೆಗಳಿಗೆ ಸಹಾಯ ಆಗಲಿ ಎಂಬ ದೃಷ್ಟಿಯಿಂದ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಬಹುದು. ಈ ಯೋಜನೆಯು ಹೆಣ್ಣು ಮಕ್ಕಳಿಗೆ 21 ವರ್ಷ ವಯಸ್ಸು ಆದ ಕೂಡಲೇ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.
ಮಗಳಿಗೆ 15ವರ್ಷ ತುಂಬುವ ವರೆಗೆ ಪಾಲಕರು ಈ ಯೋಜನೆಯಲ್ಲಿ ಕನಿಷ್ಠ 250 ರೂಪಾಯಿಯಿಂದ ಒಂದೂವರೆ ಲಕ್ಷ ರೂಪಾಯಿಯ ವರೆಗೆ ಹೂಡಿಕೆ ಮಾಡಬಹುದಾಗಿದೆ. ಶೇಕಡಾ 8.2% ಬಡ್ಡಿದರವನ್ನು ನೀಡಲಾಗುತ್ತಿದೆ. ನೀವು 15 ವರ್ಷಗಳ ವರೆಗೆ ವಾರ್ಷಿಕವಾಗಿ ಒಂದೂವರೆ ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ ನೀವು ಬಡ್ಡಿದರ ಮತ್ತು ನಿಮ್ಮ ಹೂಡಿಕೆಯ ಮೊತ್ತವನ್ನು ಸೇರಿಸಿ 70 ಲಕ್ಷ ರೂಪಾಯಿ ಹಣವನ್ನು ಹಿಂಪಡೆಯಬಹುದು.
ಹಿರಿಯ ನಾಗರಿಕರ ಭವಿಷ್ಯ ನಿಧಿ :-
ನಿಮ್ಮ ನಿವೃತ್ತಿಯ ಬಳಿಕ ಬಂದಿರುವ ಪಿಎಫ್ ಹಣವನ್ನು ಅಥವಾ ನೀವು ಕೂಡಿಟ್ಟ ಹಣವನ್ನು ಹೂಡಿಕೆ ಮಾಡಲು ನಿಮಗೆ ಪೋಸ್ಟ್ ಆಫೀಸ್ ನಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ನಿಮಗೆ 60 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸು ಆಗಿದ್ದರೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 1,000 ರೂಪಾಯಿ ಹಾಗೂ ಗರಿಷ್ಠ ಹೂಡಿಕೆಯ ಮೊತ್ತ 30,00,000 ರೂಪಾಯಿ ಆಗಿದೆ. ನೀವು ಗರಿಷ್ಠ 5 ವರ್ಷಗಳ ಅವಧಿಕೆ ಹೂಡಿಕೆ ಮಾಡಬಹುದು. ನಿಮಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ 8.2% ಬಡ್ಡಿದರ ಸಿಗುತ್ತದೆ. ನೀವು ಈ ಯೋಜನೆಯಲ್ಲಿ. ಹಣವನ್ನು ಹೂಡಿಕೆ ಮಾಡುವುದರಿಂದ ನಿಮ್ಮ ಮಕ್ಕಳ ಮದುವೆ ಅಥವಾ ಸ್ವಂತ ಮನೆಯ ಖರೀದಿಗೆ ಸಹಾಯ ಆಗಲಿದೆ.
ಇದನ್ನೂ ಓದಿ: 2024 ಬಜಾಜ್ ಪಲ್ಸರ್ N250 ಖರೀದಿಸುವ ಮೊದಲು ಈ ಐದು ಪ್ರಮುಖ ಅಂಶಗಳನ್ನು ಗಮನಿಸಿ!
ಇದನ್ನೂ ಓದಿ: ಗೃಹಲಕ್ಷ್ಮಿ 9ನೇ ಕಂತಿನ ಹಣದ ಕುರಿತು ಬಂತು ಹೊಸ ಅಪ್ಡೇಟ್.