ಹಣ ಹೂಡಿಕೆ ಮಾಡುವುದರಿಂದ ಮಹಿಳೆಯರಿಗೆ ತಮ್ಮ ಆರ್ಥಿಕ ಭವಿಷ್ಯವನ್ನು ನಿಯಂತ್ರಿಸುತ್ತದೆ ಮತ್ತು ಸ್ವತಂತ್ರವಾಗಿರಲು ಸಹಾಯ ಮಾಡುತ್ತದೆ ಎಂಬ ಕಾರಣಕ್ಕೆ ಮಹಿಳೆಯರು ತಾವು ಕೂಡಿಟ್ಟ ಹಣವನ್ನು ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಮಹಿಳೆಯರು ಹಣ ಹೂಡಿಕೆ ಮಾಡುವ ಮುನ್ನ ಯಾವ ಯೋಜನೆಯಲ್ಲಿ ಹೆಚ್ಚು ಲಾಭ ಸಿಗುತ್ತದೆ ಎಂಬುದನ್ನು ಅರಿತು ಹಣ ಹೂಡಿಕೆ ಮಾಡುವುದು ಉತ್ತಮ. ಈಗಾಗಲೇ ಮಹಿಳೆಯರಿಗೆ ಪೋಸ್ಟ್ ಆಫೀಸ್ ನಲ್ಲಿ ಹಲವು ಹೂಡಿಕೆ ಯೋಜನೆಗಳು ಇವೆ. ಅದರಲ್ಲಿ 30,000 ಲಾಭ ಕೊಡುವ ಯೋಜನೆ ಯಾವುದೆಂದು ತಿಳಿಯೋಣ.
30000 ರುಪಾಯಿ ಲಾಭ ನೀಡುವ ಯೋಜನೆ ಯಾವುದು?: ಬರೋಬ್ಬರಿ 30,000 ರೂಪಾಯಿ ಲಾಭ ನೀಡುವ ಯೋಜನೆಯ ಹೆಸರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (ಎಂಎಸ್‌ಎಸ್‌ಸಿ) ಯೋಜನೆ. ಇದು ಭಾರತ ಸರ್ಕಾರದಿಂದ ಮಹಿಳೆಯರಿಗೆ ವಿಶೇಷವಾಗಿ ಜಾರಿಗೆ ತಂದ ಒಂದು ಉಳಿತಾಯ ಯೋಜನೆಯಾಗಿದೆ. ಈ ಯೋಜನೆ 2023 ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ಈ ಯೋಜನೆಯಲ್ಲಿ ಒಮ್ಮೆ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಮೊದಲ ವರ್ಷ 15,000 ರೂಪಾಯಿ ಬಡ್ಡಿದರ ಹಾಗೂ ಎರಡನೇ ವರ್ಷ 16,125 ರೂಪಾಯಿ ಬಡ್ಡಿದರ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯ ನಿಯಮಗಳು :-
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಲು ಕೆಲವು ನಿಯಮಗಳು ಇವೆ.
- ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮಹಿಳೆಯ ಕನಿಷ್ಠ ವಯಸ್ಸಿನ ಮಿತಿಯೂ 10 ವರ್ಷ ಆಗಿದೆ.
- ಈ ಯೋಜನೆಯಲ್ಲಿ ಮಹಿಳೆಯರು ಕನಿಷ್ಠ ಹೂಡಿಕೆ 1,000 ಮತ್ತು ಗರಿಷ್ಠ ಹೂಡಿಕೆ 2 ಲಕ್ಷ ಆಗಿದೆ.
- ಎರಡು ವರ್ಷಗಳ ಅವಧಿಗೆ ಹೂಡಿಕೆ ಮಾಡಲು ಅವಕಾಶ ಇದೆ.
ಬಡ್ಡಿದರ :- ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೂಡಿಕೆ ಮೊತ್ತಕ್ಕೆ ಅನುಗುಣವಾಗಿ ಶೇಕಡಾ 7.5% ಬಡ್ಡಿದರ ಸಿಗುತ್ತದೆ.
ತೆರಿಗೆ ವಿನಾಯಿತಿ:- ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನ ಸಿಗುತ್ತದೆ.
ಹೂಡಿಕೆಯ ವಿಧಾನ ಹೇಗೆ:- ಎಂಎಸ್‌ಎಸ್‌ಸಿ ಯೋಜನೆಯಲ್ಲಿ ಖಾತೆ ತೆರೆಯಲು ಬಯಸಿದರೆ ಮಹಿಳೆಯರು ಹತ್ತಿರದ ಯಾವುದೇ ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕಿಗೆ ಭೇಟಿ ನೀಡಿದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಹೂಡಿಕೆ ಮಾಡಲು ನೀಡಬೇಕಾದ ದಾಖಲೆಗಳು :-
- ಗುರುತಿನ ಪುರಾವೆ: ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ.
- ವಯಸ್ಸಿನ ಪುರಾವೆ: ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ.
- ವಾಸಸ್ಥಳದ ಪ್ರಮಾಣಪತ್ರ: ವಾಸಸ್ಥಳದ ಪುರಾವೆ, ವಿದ್ಯುತ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್.
- ಭಾವಚಿತ್ರ.
ಮಹಿಳೆಯರು ಈ ಯೋಜನೆಯಲ್ಲಿ ಏಕೆ ಹೂಡಿಕೆ ಮಾಡಬೇಕು?
- ಆರ್ಥಿಕ ಸ್ವಾತಂತ್ರ್ಯ ಮತ್ತು ಭದ್ರತೆಗಾಗಿ: ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಮಹಿಳೆಯರಿಗೆ ತಮ್ಮ ಆರ್ಥಿಕ ಲಾಭ ನೀಡುತ್ತದೆ ಮತ್ತು ಭದ್ರತೆ ನೀಡುತ್ತದೆ.
- ತಮ್ಮ ಗುರಿಗಳನ್ನು ಸಾಧಿಸಲು: ಹಣ ಹೂಡಿಕೆ ಮಾಡುವುದರಿಂದ ಮಹಿಳೆಯರಿಗೆ ಮನೆ ಖರೀದಿಸುವುದು, ವ್ಯಾಪಾರ ಪ್ರಾರಂಭಿಸುವುದು ಅಥವಾ ಪ್ರಪಂಚದಾದ್ಯಂತ ಪ್ರಯಾಣಿಸುವಂತಹ ತಮ್ಮ ವೈಯಕ್ತಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.
- ತೆರಿಗೆ ಪ್ರಯೋಜನ:- ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ತೆರಿಗೆ ವಿನಾಯಿತಿ ಸಿಗುತ್ತದೆ.
- ಲಾಭ :- ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ.
ಇದನ್ನೂ ಓದಿ: ಎಲ್ಲರಿಗೂ ಕೈಗೆಟುಕುವಂತಹ ಬೆಲೆಯಲ್ಲಿ ಎಥರ್ ಹ್ಯಾಲೊ ಸ್ಮಾರ್ಟ್ ಹೆಲ್ಮೆಟ್ ಬಿಡುಗಡೆ, ಹಾಗಾದರೆ ಇದರ ಬೆಲೆ ಎಷ್ಟು ಗೊತ್ತಾ?
ಇದನ್ನೂ ಓದಿ: ಗ್ರಾಹಕರ ಮನೆ ಮನೆಗೆ ಬರಲಿದೆ ಮಾವಿನ ಹಣ್ಣು?