ಹಣವನ್ನು ಉಳಿತಾಯ ಮಾಡಲು ಜನರು ಬ್ಯಾಂಕ್ ನಲ್ಲಿ ಪೋಸ್ಟ್ ಆಫೀಸ್ ಗಳಲ್ಲಿ fixed deposit , insurance ಎಂದು ಹಲವಾರು ಬಗೆಯಲ್ಲಿ ಹಣ ಹೂಡಿಕೆ ಮಾಡುತರೆ. ದಿನದಿಂದ ದಿನಕ್ಕೆ ಜನರಿಗೆ ಅನುಕೂಲ ಆಗುವಂತೆ ಹೊಸ ಹೊಸ ಯೋಜನೆಗಳು ಜಾರಿ ಆಗುತ್ತಲೇ ಇರುತ್ತವೆ. ಈಗ ಭಾರತದಲ್ಲಿ ಖಾಸಗಿ ಸಂಸ್ಥೆಗಳು ಸಹ ಹಣ ಹೂಡಿಕೆ ಮಾಡಲು ಹಲವಾರು ಯೋಜನೆಗಳನ್ನು ನೀಡುತ್ತಾ ಇವೆ. ಆದರೆ ಜನರಿಗೆ ಹಣ ಹೂಡಿಕೆ ಹಾಗೂ ಹೆಚ್ಚಿನ ಬಡ್ಡಿದರಗಳ ಜೊತೆಗೆ ಹೂಡಿಕೆ ಮಾಡಿದ ಹಣದ ಸೇಫ್ಟಿ ಸಹ ಮುಖ್ಯ . ಆದರಿಂದ ಖಾಸಗಿ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಲು ಜನರು ಭಯ ಪಡುತ್ತಾರೆ. ಅದರಿಂದ ಜನರು ಪೋಸ್ಟ್ ಆಫೀಸ್ ಸ್ಟೇಟ್ ಬ್ಯಾಂಕ್ ಗಳಲ್ಲಿ ಹೆಚ್ಚಾಗಿ ಹೂಡಿಕೆ ಮಾಡುತ್ತಾರೆ.
ಪೋಸ್ಟ್ ಆಫೀಸ್ ನಲ್ಲಿ ಹಲವಾರು ಬಗೆಯ ಹಣ ಹೂಡಿಕೆಯ ಯೋಜನೆಗಳು ಇವೆ. ಪೋಸ್ಟ್ ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಯೋಜನೆಯು ಹೆಚ್ಚಿನ ಬಡ್ಡಿದರ ನೀಡುವ ಯೋಜನೆ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪೋಸ್ಟ್ ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಗಳು
ಇದು ಒಂದು ರೀತಿಯ ಫಿಕ್ಸಡ್ ಡಿಪಾಸಿಟ್ ಯೋಜನೆ ಆಗಿದೆ. ಇದರಲ್ಲಿ ಜನರು ಒಂದು ವರುಷದಿಂದ ಐದು ವರುಷಗಳ ಕಾಲಾವಧಿಗೆ ಹಣ ಹೂಡಿಕೆ ಮಾಡಬಹುದು. ಕನಿಷ್ಟ ಒಂದು ಸಾವಿರ ರೂಪಾಯಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಯಾವುದೇ ರೀತಿಯ ಗರಿಷ್ಠ ಮೀತಿ ಇಲ್ಲ. 10 ವರುಷ ಅದ ಮಕ್ಕಳ ಪರವಾಗಿ ಪಾಲಕರು ಸಹ ಹಣವನ್ನು ಹೂಡಿಕೆ ಮಾಡಬಹುದು. ಜಂಟಿ ಖಾತೆಯನ್ನು ತೆರೆದು ಹೂಡಿಕೆ ಮಾಡಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪೋಸ್ಟ್ ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಯೋಜನೆಯ ಬಡ್ಡಿ ದರದ ವಿವರ:- ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರವು ಬದಲಾವಣೆ ಆಗುತ್ತಾ ಇರುತ್ತದೆ. ಒಂದು ವರುಷ ಹೂಡಿಕೆ ಮಾಡಿದರೆ ಒಂದು ರೀತಿಯ ಬಡ್ಡಿದರ ಸಿಗುತ್ತದೆ. ಕಾಲಾವಧಿ ಹೆಚ್ಚು ಮಾಡಿದಂತೆ ಬಡ್ಡಿ ದರದಲ್ಲಿ ಬದಲಾವಣೆ ಆಗುತ್ತದೆ. ಫೆಬ್ರುವರಿ 5 ರಂದು ಸಿಕ್ಕಿರುವ ಮಾಹಿತಿಯ ಪ್ರಕಾರ ವರುಷಕ್ಕೆ 6.9 %, ಎರಡು ವರುಷಕ್ಕೆ 7.0%, ಮೂರು ವರುಷಕ್ಕೆ 7,1%, ನಾಲ್ಕು ಅಥವಾ ಐದು ವರುಷಕ್ಕೆ 7.5% ಬಡ್ಡಿದರಗಳು ಇವೆ. ಈ ಬಡ್ಡಿದರಗಳು ಮಾರ್ಚ್ 31 ನೇ ದಿನಾಂಕದ ವರೆಗೆ ಚಾಲ್ತಿಯಲ್ಲಿ ಇರುತ್ತದೆ. ಬಡ್ಡಿದರವನ್ನು ಮೂರು ತಿಂಗಳಿಗೆ ಲೆಕ್ಕಹಾಕಿ ವಾರ್ಷಿಕವಾಗಿ ಹಣವನ್ನು ನೀಡಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 C ಪ್ರಕಾರ 5 ವರ್ಷದ ಯೋಜನೆಯಲ್ಲಿ ತೆರಿಗೆ ಉಪಯೋಗಗಳು ಸಹ ಇವೆ.
10 ಲಕ್ಷ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಪೋಸ್ಟ್ ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಮಾಡಿದರೆ ಸಿಗುವ ಹಣ:- 10 ಲಕ್ಷ ಹಣವನ್ನು ವರುಷಕ್ಕೆ 6.9% ಬಡ್ಡಿದರಕ್ಕೆ ಡೆಪಾಸಿಟ್ ಮಾಡಿದರೆ ನಿಮಗೆ ಸಿಗುವ ಬಡ್ಡಿಯ ಹಣ 70,806 ರೂಪಾಯಿ ಹಣ ಸಿಗುತ್ತದೆ. ನಿಮಗೆ ಸಿಗುವ ಪೂರ್ಣ ಹಣದ ಮೊತ್ತ 70,806 ರೂಪಾಯಿ ಆಗುತ್ತದೆ. ಎರಡು ವರುಷಕ್ಕೆ 7.0% ಬಡ್ಡಿದರ ಅಂದರೆ 1,48,882 ರೂಪಾಯಿ ಪಡೆಯಬಹುದು. ನಿಮಗೆ ಸಿಗುವ ಒಟ್ಟು ಹಣದ ಮೌಲ್ಯ 11,48,882 ರೂಪಾಯಿ ಹಾಗೂ ನೀವು ಮೂರು ವರುಷಗಳ ಅವಧಿಗೆ ಹಣ ಡೆಪಾಸಿಟ್ ಮಾಡಿದರೆ 7,1% ಬಡ್ಡಿದರ ಸಿಗುತ್ತದೆ. ನಿಮಗೆ ಸಿಗುವ ಹಣ 2,35,075 ರೂಪಾಯಿ. ನಾಲ್ಕು ಅಥವಾ ಐದು ವರುಷಕೆ ಹೂಡಿಕೆ ಮಾಡಿದರೆ 7.5 ಬಡ್ಡಿದರ ಸಿಗುತ್ತದೆ. ನಿಮಗೆ ಸಿಗುವ ಹಣ 14,49,948 ರೂಪಾಯಿ.
ಇದನ್ನೂ ಓದಿ: ನೀವು ಪಿಯುಸಿಯನ್ನು ಮುಗಿಸಿದ್ದೀರಾ? ಶಿವಮೊಗ್ಗ ಜಿಲ್ಲೆ ಗ್ರಾಮ ಪಂಚಾಯಿತಿ ಗಳಲ್ಲಿ ನೇಮಕಾತಿ; 14 ಹುದ್ದೆಗಳು ಖಾಲಿ ಇವೆ..
ಇದನ್ನೂ ಓದಿ: ಮಾರ್ಚ್ 31 ರೊಳಗೆ ಇದೊಂದು ಕೆಲಸವನ್ನು ಮಾಡಿ ನಿಮ್ಮ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಿ