ಹಣ ಹೂಡಿಕೆಗೆ ಈಗ ಹಲವಾರು ಆಪ್ಷನ್ ಗಳು ಇವೆ. ಕಡಿಮೆ ಮೊತ್ತದ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ. ಪಿಪಿಎಫ್ ನಲ್ಲಿ ಈಗ ಹೆಚ್ಚಿನ ಹೂಡಿಕೆಯ ಆಪ್ಷನ್ ಗಳು ಇವೆ. ನಿಯಮಿತವಾಗಿ ಹೂಡಿಕೆ ಮಾಡಿ ಒಂದು ಕೋಟಿ ಗಳಿಸುವ ಅವಕಾಶವನ್ನು ಪಿಎಫ್ ಸಂಸ್ಥೆ ನೀಡುತ್ತಿದೆ. ಹಾಗಾದರೆ ಒಂದು ಕೋಟಿ ಗಳಿಸಲು ಏಷ್ಟು ಹೂಡಿಕೆ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಗೆ ಈ ಲೇಖನವನ್ನು ಓದಿ.
25 ವರ್ಷ ಹೂಡಿಕೆ ಮಾಡಿ ಒಂದು ಕೋಟಿ ಗಳಿಸಬಹುದು :- ಒಂದು ಕೋಟಿ ರೂಪಾಯಿ ಪಿಪಿಎಫ್ ಹಣವನ್ನು ಗಳಿಸಲು ನಿಯಮಿತವಾಗಿ 25 ವರ್ಷ ಹೂಡಿಕೆ ಮಾಡಬೇಕು. ಕನಿಷ್ಠ ಹೂಡಿಕೆಯ ಮೊತ್ತ 500 ರೂಪಾಯಿ ಹಾಗೂ ಗರಿಷ್ಠ 1,50,000 ದ ವರೆಗೆ ಹೂಡಿಕೆ ಮಾಡಬಹುದಾಗಿದೆ. ತಿಂಗಳಿಗೆ ಅಥವಾ ವಾರ್ಷಿಕವಾಗಿ ಒಮ್ಮೆ ಹೂಡಿಕೆ ಮಾಡುವ ಆಪ್ಷನ್ ಇರುತ್ತದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಹೂಡಿಕೆಯ ಆಯ್ಕೆ ಮಾಡಿಕೊಳ್ಳಬಹುದು.
ಮೆಚುರಿಟಿ ಅವಧಿಯ ಬಗ್ಗೆ ಮಾಹಿತಿ :- 1 ಕೋಟಿ ಗಳಿಸುವ ಪಿಎಫ್ ಯೋಜನೆಯ ಮೆಚುರಿಟಿ ಅವಧಿ 15 ವರ್ಷ ಆಗಿರುತ್ತದೆ. ಬ್ಲಾಕ್ ನಲ್ಲಿ 5 ವರ್ಷ ಅವಧಿಯ ವಿಸ್ತರಣೆ ಮಾಡಬಹುದು. ಆದರೆ ಅವಧಿಯ ವಿಸ್ತರಣೆಗೆ ಕೆಲವು ನಿಬಂಧನೆಗಳು ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಡ್ಡಿದರಗಳ ಮಾಹಿತಿ :- PPF ಯೋಜನೆಗೆ ಹೂಡಿಕೆಯ ಮೊತ್ತಕ್ಕೆ ಬಡ್ಡಿ ದರವನ್ನು ಸರ್ಕಾರವು ನಿಗದಿಪಡಿಸುತ್ತದೆ. ಸರಕಾರವು ಪಿಎಫ್ ಯೋಜನೆಯ ಬಡ್ಡಿದರವನ್ನು ತ್ರೈಮಾಸಿಕವಾಗಿ ಪರಿಷ್ಕರಣೆ ಮಾಡುತ್ತದೆ. 7% ರಿಂದ 8% ವರೆಗೆ ಸಾಮಾನ್ಯವಾಗಿ ಬಡ್ಡಿದರ ಇರುತ್ತದೆ.
ಇದನ್ನೂ ಓದಿ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವ ಬ್ಯಾಂಕ್ ಗಳು ಯಾವುವು?
ಪಿಪಿಎಫ್ ಯೋಜನೆಯ ತೆರಿಗೆ ಪ್ರಯೋಜನಗಳು :-
PPF ನಲ್ಲಿ ಹೂಡಿಕೆ ಮಾಡಿದರೆ ಟ್ರಿಪಲ್ ತೆರಿಗೆ ವಿನಾಯಿತಿ ಪ್ರಯೋಜನವನ್ನು ಪಡೆಯಬಹುದು. ಹೂಡಿಕೆಯ ಅಸಲು ಮೊತ್ತ ಹಾಗೂ ಇಲಾಖೆ ನೀಡುವ ಬಡ್ಡಿದರ ಹಾಗೂ ಮೆಚ್ಯೂರಿಟಿ ಮೊತ್ತಕ್ಕೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.
ಒಂದು ಕೋಟಿ ಹಣ ಗಳಿಸುವ ವಿಧಾನ :-
ಒಂದು ಕೋಟಿ ಮೆಟ್ಯೂರಿಟಿ ಹಣ ಗಳಿಸಲು ತಿಂಗಳಿಗೆ 12,500 ರೂಪಾಯಿ ಅಥವಾ ವಾರ್ಷಿಕವಾಗಿ 1,50,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ವಾರ್ಷಿಕ ಬಡ್ಡಿದರವನ್ನು ಸೇರಿಸಿದರೆ ವಾರ್ಷಿಕವಾಗಿ 1,60,650 ರೂಪಾಯಿ ಆಗುತ್ತದೆ. ಮತ್ತೆ ಮುಂದಿನ ವರ್ಷ 1,50,000 ರೂಪಾಯಿ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆಯ ಮೊತ್ತ 3,10,650 ರೂಪಾಯಿ ಆಗಿರುತ್ತದೆ. ಇದಕ್ಕೆ ವಾರ್ಷಿಕ ಬಡ್ಡಿದರ ಸೇರಿಸಲಾಗುತ್ತದೆ. 15 ವರ್ಷಗಳ ಕಾಲ ನಿಯಮಿತವಾಗಿ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆಯ ಮೊತ್ತವು 22.50 ಲಕ್ಷ ರೂಪಾಯಿ ಆಗಿರುತ್ತದೆ. 15 ವರ್ಷಕ್ಕೆ ಬಡ್ಡಿ ದರ ₹ 18.18 ಲಕ್ಷ ರೂಪಾಯಿ ಸೇರಿ ಒಟ್ಟು ನಿಮ್ಮ ಖಾತೆಯಲ್ಲಿ 40.68 ರೂಪಾಯಿ ಆಗುತ್ತದೆ. ಮತ್ತೆ 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ 65.58 ಲಕ್ಷ ರೂಪಾಯಿ ಆಗಿರುತ್ತದೆ. ಜೊತೆಗೆ ಬಡ್ಡಿದರ ಎಲ್ಲವೂ ಸೇರಿ ನಿಮಗೆ 1.3 ಕೋಟಿ ರೂಪಾಯಿ ಹಣ ನಿಮಗೆ ಸಿಗುತ್ತದೆ.
ಇದು ಕೇಂದ್ರ ಸರಕಾರದ ಅಡಿಯಲ್ಲಿ ಇರುವ ಸಂಸ್ಥೆ ಆಗಿರುವ ಕಾರಣದಿಂದ ನಿಮ್ಮ ಹೂಡಿಕೆಯ ಮೊತ್ತ ಸುರಕ್ಷಿತವಾಗಿ ಇರುತ್ತದೆ ಜೊತೆಗೆ ನಿಮಗೆ ಆದಾಯ ತೆರಿಗೆ ಲಾಭಗಳು ಸಿಗುವುದರಿಂದ ನೀವು ಆರಾಮಾಗಿ ಪಿಪಿಎಫ್ ನಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು.
ಇದನ್ನೂ ಓದಿ: ಮಹಿಳೆಯರಿಗೆ ಲಖ್ಪತಿ ದೀದಿ ಯೋಜನೆಯಲ್ಲಿ 5 ಲಕ್ಷ ರೂಪಾಯಿಯ ವರೆಗೆ ಬಡ್ಡಿರಹಿತ ಸಾಲ ಸಿಗುತ್ತದೆ.