PPF Scheme : ಇದನ್ನು ಪಬ್ಲಿಕ್ ಪ್ರಾವಿಡೆಂಡ್ ಫಂಡ್ ಅಂತಲೂ ಕರೆಯುತ್ತಾರೆ. ಹೆಸರೇ ತಿಳಿಸುವಂತೆ ಜನಗಳ ಹಿತಾಸಕ್ತಿಯಿಂದ ಜನರಿಗೆ ನೆರವಾಗುವಂತೆ ಮಾಡಿರುವಂತಹ ಒಂದು ಉಳಿತಾಯ ಯೋಜನೆಯಾಗಿದೆ. ಇದು ಜನಗಳಿಗೆ ದೀರ್ಘಾವಧಿಯ ಉಳಿತಾಯವನ್ನು(Long term) ಕೊಡುತ್ತದೆ. ಹಾಗೂ ತೆರಿಗೆಯನ್ನು ಕಡಿಮೆ ಮಾಡುತ್ತದೆ. ಇದನ್ನು ನಮ್ಮ ದೇಶದ ಯಾವುದೇ ಅಂಚೆ ಕಚೇರಿಯಲ್ಲಿ(Post Office) ಕೂಡ ತೆಗೆಯಬಹುದಾಗಿದೆ. ಜನರಿಗೆ ವಿಶೇಷವಾದ ಬಡ್ಡಿ(Interest) ದರಗಳನ್ನು ಕೊಡುವುದರ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ನಿವೃತ್ತಿಯ ನಂತರ ಉಪಯೋಗವಾಗುವ ಈ ಫಂಡ್ ಗೆ ದೇಶದ ಹಲವಾರು ಜನರು ಖಾತೆಯನ್ನು ತೆರೆಯುವುದರ ಮೂಲಕ ಫಂಡ್ ನ ಆದ್ಯತೆಯನ್ನು ಹೆಚ್ಚಿಸುತ್ತಿದ್ದಾರೆ. ನಿವೃತ್ತಿಯ ನಂತರ ಆದಾಯದ ನೆರವಿಗಾಗಿ ಹುಡುಕುವ ಮನುಷ್ಯನ ಜೀವನಕ್ಕೆ ಬೆಂಬಲವನ್ನು ಒದಗಿಸುವುದರ ಮೂಲಕ ಈ ಫಂಡನ್ನು(Fund) ಸೃಷ್ಟಿಸಲಾಗಿದೆ. ಹಾಗಾದ್ರೆ ಈ ಪಿಪಿಎಫ್ ಫಂಡ್(PPF Fund) ನ್ನು ತೆರೆಯಲು ಬೇಕಾಗುವ ಅರ್ಹತೆಗಳ ಬಗ್ಗೆ ತಿಳಿದುಕೊಳ್ಳೋಣ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಪಿಪಿಎಫ್(PPF) ಖಾತೆಯನ್ನು ತೆರೆಯುವ ಪ್ರಕ್ರಿಯೆ
PPF ಖಾತೆಯನ್ನು ತೆರೆಯಲು ಸ್ವಯಂ ಉದ್ಯೋಗಿ ಆಗಿರಬೇಕು ಮತ್ತು ಒಬ್ಬರು ಒಂದು ಖಾತೆಯನ್ನು ತೆರೆಯಲು ಸಾಧ್ಯ. ಒಂದು ವೇಳೆ 18 ವರ್ಷದ ಒಳಗಿದ್ದಲ್ಲಿ, ಆತನ ಪೋಷಕರು ಈ ಖಾತೆಯನ್ನು ತೆರೆಯಬಹುದು. ಇನ್ನೊಂದು ಪ್ರಮುಖವಾದ ಅಂಶವೇನೆಂದರೆ ಒಂದು ಖಾತೆಯನ್ನು ತೆರೆದ ನಂತರ ಮತ್ತೊಂದು ಖಾತೆಯನ್ನು ತೆರೆಯಲು ಅವಕಾಶವಿರುವುದಿಲ್ಲ. ಇನ್ನು ಈ ಖಾತೆಯನ್ನು ತೆರೆಯಲು ಬೇಕಾಗುವ ದಾಖಲಾತಿಗಳು ಯಾವುದೆಂದರೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಪಾಸ್ಪೋರ್ಟ್ ಗಳು.
ಇದರಲ್ಲಿ ನೀವು ಆನ್ಲೈನ್ ಮುಖಾಂತರವೂ ಹಣವನ್ನು ಜಮಾ ಮಾಡಬಹುದು. ಹೇಗೆಂದರೆ, ನಿಮ್ಮ ಮೊಬೈಲ್ ಮೂಲಕ IPPB ಎನ್ನುವ ಆಪ್(App) ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಇದಕ್ಕೆ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕು. ನಂತರ ನೀವು ಎಷ್ಟು ಮೊತ್ತವನ್ನ ಠೇವಣಿಯಾಗಿ ಇಡುತ್ತಿರೋ ಅಷ್ಟನ್ನ ಅಲ್ಲಿ ಆ ಮೊತ್ತವನ್ನು ಬರೆಯಬೇಕು. ಪೇ ಅನ್ನೋ ಬಟನ್ ಒತ್ತಿ. ನಿಮ್ಮ ಪಿಪಿಎಫ್ ಖಾತೆಗೆ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗುತ್ತದೆ.
ನೀವು ಇದರಲ್ಲಿ ವರ್ಷಕ್ಕೆ ಒಂದುವರೆ ಲಕ್ಷದವರೆಗೂ ಕೂಡ ಠೇವಣಿಯನ್ನ ಇಡಬಹುದು. ಇದು ನಿಮಗೆ ಲಾಂಗ್ ಟರ್ಮ್(long term) ಯೋಜನೆಯಾಗಿದ್ದು, ನಿಮ್ಮ ನಿವೃತ್ತಿಯ ನಂತರ ಹೆಚ್ಚಿನ ಬಡ್ಡಿ ದರದಲ್ಲಿ ಒಳ್ಳೆಯ ರಿಟರ್ನ್ ಅನ್ನು ಪಡೆಯಬಹುದಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಕೂಡ ನಿವೃತ್ತಿಯ ನಂತರ ಒಂದು ಆದಾಯ ಅನ್ನೋದು ಬೇಕಿದೆ. ಮುಪ್ಪಿನ ಕಾಲದಲ್ಲಿ ಬೆಂಬಲ ವಾಗುವಂತೆ ಈ ಆದಾಯ ಯೋಜನೆಯ ರೂಪಿಸಿದ್ದು, ಆ ಸಮಯದಲ್ಲಿ ಇದು ಮನುಷ್ಯನಿಗೆ ಸಹಾಯವಾಗುತ್ತದೆ.
ಪಿಪಿಎಫ್(PPF) ಖಾತೆಯಿಂದ ಆಗುವ ಪ್ರಯೋಜನಗಳೇನು?
ಬ್ಯಾಂಕ್ ಖಾತೆಗೆ ಹೋಲಿಸಿದರೆ ನೀವು ಇದರ ಮೂಲಕ ಹೆಚ್ಚಿನ ಬಡ್ಡಿ ದರವನ್ನು ಪಡೆಯಬಹುದು. ಇದು ಒಂದು ಸರ್ಕಾರಿ ಯೋಜನೆ ಆದ್ದರಿಂದ ಇದರಲ್ಲಿ ಸುರಕ್ಷತೆಯ ಮಟ್ಟ ಹೆಚ್ಚಾಗಿರುತ್ತದೆ. ಹೆಚ್ಚಿನ ವರ್ಷಗಳ ಕಾಲ ನೀವು ಇದರಲ್ಲಿ ಸುರಕ್ಷತೆಯನ್ನು ಕಂಡುಕೊಳ್ಳಬಹುದು ಹಾಗೂ ಹೆಚ್ಚಿನ ಬಡ್ಡಿದರ ಬಯಸುವ ಹೂಡಿಕೆಯನ್ನು ಮಾಡಬಹುದು.
ಇದರಲ್ಲಿ ನಿಮಗೆ 7.1% ಬಡ್ಡಿದರವು ಸಿಗುತ್ತದೆ ಬ್ಯಾಂಕ್ಗಳಿಗೆ ಹೋಲಿಸಿದರೆ ಇಲ್ಲಿನ ಬಡ್ಡಿದರ ಹೆಚ್ಚಾಗಿ ಸಿಗುತ್ತದೆ. ಹಾಗೂ ಹೂಡಿಕೆದಾರರು ಇದರಿಂದ ತೆರಿಗೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು. ನೀವು ಬಯಸಿದಾಗ ಇದರ ಮೊತ್ತವನ್ನು ಚೆಕ್ ಅಥವಾ ಡೈರೆಕ್ಟ್ ಬ್ಯಾಂಕ್ ಖಾತೆ ಜಮಾಾವಣೆಯ ಮೂಲಕ ತೆಗೆದುಕೊಳ್ಳಬಹುದಾಗಿದೆ.
ಇದು ಒಂದು ಸರ್ಕಾರಿ ಯೋಜನೆ ಆದ್ದರಿಂದ ಇದರಲ್ಲಿ ನೀವು ಒಳ್ಳೆಯ ಲಾಭ ಹಾಗೂ ಸುರಕ್ಷತೆಯನ್ನ ಬಯಸಬಹುದು. ದೀರ್ಘಕಾಲ ಹೂಡಿಕೆಯಿಂದ ಹೆಚ್ಚು ಬಡ್ಡಿದರವನ್ನು ಕೂಡ ಪಡೆಯಬಹುದು. ಈ ಹೂಡಿಕೆಯಲ್ಲಿ ನಿವೃತ್ತಿಯ ನಂತರ ನಿಮಗೆ ಬೇರೆಯವರ ಬಳಿ ಹಣವನ್ನು ಕೇಳುವ ಅವಶ್ಯಕತೆ ಇರುವುದಿಲ್ಲ. ಹೆಚ್ಚು ಹೆಚ್ಚು ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ. ಹಾಗೂ ಒಳ್ಳೆಯ ನಿವೃತ್ತಿಯ ಜೀವನವನ್ನು ನಿಭಾಯಿಸಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರೋರಿಗೆ ಬಿಗ್ ಶಾಕ್; ಅಂತವರಿಗೆ ಸಿಗಲ್ಲ ಅನ್ನಭಾಗ್ಯ ಗೃಹಲಕ್ಷ್ಮಿ ಸೌಲಭ್ಯ
ಇದನ್ನೂ ಓದಿ: ಡಿಪ್ಲೋಮಾ ಹಾಗೂ ಪದವೀಧರರಿಗೆ ಸಿಹಿಸುದ್ದಿ; ಯುವನಿಧಿ ಜಾರಿ ಬಗ್ಗೆ ಸಿ.ಎಂ ಘೋಷಣೆ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram