ಮನೆ ಕಟ್ಟುವ ಯೋಚನೆಯಲ್ಲಿರೋರಿಗೆ ಕೇಂದ್ರದಿಂದ ನೆರವು; 2.67ಲಕ್ಷ ಸಹಾಯಧನ ಅರ್ಜಿ ಸಲ್ಲಿಸೋದು ಹೇಗೆ ಯಾರೆಲ್ಲ ಅರ್ಹರು ಗೊತ್ತಾ?

ಈಗೀನ ಕಾಲದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಕನಸಾಗಿರುತ್ತದೆ, ಆದರೆ ಮನೆಕಟ್ಟಲು ಎಲ್ಲರಿಗೂ ಸಾಧ್ಯವಾಗೋದಿಲ್ಲ. ಆದ್ರಿಗ ಮನೆ ಕಟ್ಟಲು ಆಸೆ ಇರುವವರಿಗೆ ಸರ್ಕಾರವೇ ಸಹಾಯ ಮಾಡುತ್ತದೆ, ಮನೆಯನ್ನು ಕಟ್ಟುವ ಜನರಿಗೆ ಆರ್ಥಿಕ ಸಹಾಯ ಮಾಡಲು ಪಿಎಮ್ ಅವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಆಯ್ಕೆ ಆಗುವ ಫಲಾನುಭವುಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಇದೀಗ ಈ ಯೋಜನೆಯ ಫಲ ಪಡೆಯುವವರಿಗೆ ಸಹಾಯ ಸಿಗುವ ಮೊತ್ತವನ್ನು ಜಾಸ್ತಿ ಮಾಡಲಾಗಿದ್ದು, ಅರ್ಹರಿಗೆ ಸರ್ಕಾರದಿಂದ 2.5 ಲಕ್ಷದಿಂದ 5 ಲಕ್ಷ ರೂಪಾಯಿವರೆಗೂ ಕೂಡ ಸಹಾಯಧನ ಸಿಗುತ್ತದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯ(Pradhan Mantri Awas Yojana) ನಿಯಮಗಳಲ್ಲಿ ಈಗ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಯ ಅನುಸಾರ ಈಗ ಪ್ರತಿಯೊಬ್ಬರಿಗು ಪ್ರಧಾನಮಂತ್ರಿ ಅವಾಸ್ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

WhatsApp Group Join Now
Telegram Group Join Now

ಹಾಗೆಯೇ ಈ ಪ್ರಯೋಜನ ಸಿಗುವವರಿಗೆ ಸರ್ಕಾರ ನೀಡುವ ಸಹಾಯಧನದ ಮೊತ್ತವನ್ನು ಕೂಡ ಈಗ ಹೆಚ್ಚಿಸಲಾಗಿದ್ದು, 3 ಲಕ್ಷಕ್ಕಿಂತ ಜಾಸ್ತಿ ಸಿಗಲಿದೆ. 3 ಲಕ್ಷ ಅಥವಾ 5 ಲಕ್ಷ ಸಹಾಯಧನ ಸಿಗುತ್ತದೆ. 2023ರ ಈ ವರ್ಷದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನೆ ಇಲ್ಲದವರಿಗೆ ಆಶ್ರಯ ಸಿಗಬೇಕು ಎಂದು ಯೋಜನೆ ಮಾಡಿದ್ದಾರೆ. ಇನ್ನು 2023-24 ನೇ ಸಾಲಿನಲ್ಲಿ ನಮ್ಮ ರಾಜ್ಯದಲ್ಲಿ ನಿರಾಶ್ರಿತರೇ ಇರಬಾರದು ಎಂದು ಪ್ರಧಾನ ಮಂತ್ರಿಗಳು ನಿರ್ಧಾರ ಮಾಡಿದ್ದು, ಇದರ ಫಲ ಜನರಿಗೆ ಸಿಗಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿ, ಆಯ್ಕೆಯಾಗುವ ಫಲಾನುಭವಿಗಳಿಗೆ 3 ರಿಂದ 5 ಲಕ್ಷದವರೆಗು ಹಣ ಸಹಾಯ ಮಾಡುವ ಪ್ಲಾನ್ ಮಾಡಿದೆ ಸರ್ಕಾರ.

ಇನ್ನು ಈ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಎರಡು ವಿಧಗಳಿದ್ದು, ಅದರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ಒಂದು, ಮತ್ತೊಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಯೋಜನೆಯನ್ನು ಈ ಹಿಂದೆ ಇಂದಿರಾ ಗಾಂಧಿ ಆವಾಸ್ ಯೋಜನೆ ಎಂದು ಕರೆಯಲಾಗುತ್ತಿತ್ತು. ಆದ್ರೆ ಮಾರ್ಚ್ 2016 ರಲ್ಲಿ ಹೆಸರು ಬದಲಾಯಿಸಲಾಯಿತು. ಇನ್ನು ಪ್ರಮುಖವಾಗಿ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ ಯಾರೆಲ್ಲ ಅರ್ಹರು ಬೇಕಾಗುವ ಮಾನದಂಡಗಳೇನು ಅನ್ನೋದನ್ನ ನೋಡೋಣ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅರ್ಜಿ ಸಲ್ಲಿಸೋದು ಹೇಗೆ?

ಹೌದು ಈ ಯೋಜನೆಯಲ್ಲಿ ಬಳಸುವ ಪ್ರಮುಖ ಷರತ್ತು ಎಂದರೆ ಅರ್ಜಿದಾರರಿಗೆ ಒಮ್ಮೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ನೀವು ಮೊದಲ ಬಾರಿಗೆ ತಪ್ಪು ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸುತ್ತಿದ್ದರೆ, ಈ ಯೋಜನೆಯ ಪ್ರಯೋಜನಗಳನ್ನು ನೀವು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಅರ್ಜಿಯನ್ನು ಬಹಳ ಎಚ್ಚರಿಕೆಯಿಂದ ಸಲ್ಲಿಸಬೇಕು. PMAY ಯೋಜನೆಯಡಿ, ಎಲ್ಲಾ ಫಲಾನುಭವಿಗಳಿಗೆ ಕೇವಲ ವಾರ್ಷಿಕ ಶೇ. 6.50 ಬಡ್ಡಿದರದಲ್ಲಿ 20 ವರ್ಷಗಳವರೆಗೆ ವಸತಿ ಸಾಲ ನೀಡಲಾಗುತ್ತದೆ. ನೆಲ ಮಹಡಿಯಲ್ಲಿರುವ ಮನೆಗಳು ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮಾತ್ರ ಮೀಸಲಾಗಿದೆ, ಗೃಹ ನಿರ್ಮಾಣದಲ್ಲಿ ಸುಸ್ಥಿರ, ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಲಾಗುತ್ತದೆ. ಈ ಯೋಜನೆಯು ದೇಶದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯಿಸುತ್ತದೆ. ಮೂರು ಹಂತಗಳಲ್ಲಿ ನಗರ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಡಿ ವಾರ್ಷಿಕ ಶೇ.6.50ರ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ. PMAY ಯೋಜನೆಯಡಿ ಪ್ರಯೋಜನ ಪಡೆಯುವ ಗಡುವನ್ನು ಕೇಂದ್ರ ಸರ್ಕಾರವು 2024ರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.

ಇನ್ನು ಯೋಜನೆಯ ಅಧಿಕೃತ ವೆಬ್‌ಸೈಟ್ https://pmaymis.gov.in/ ಇದಾಗಿದ್ದು, ಯೋಜನೆಗೆ ಅರ್ಜಿ ಸಲ್ಲಿಸಲು ಅಥವಾ ಯೋಜನೆಯ ಬಗ್ಗೆ ತಿಳಿಯಲು ಟೋಲ್ ಫ್ರೀ ಸಂಖ್ಯೆಗಳು 1800-11-6163 – 1800 11 3377, 1800 11 3388 ಈ ನಂಬರ್ ಗಳಿಗೆ ಕರೆ ಮಾಡಬಹುದು. ಇನ್ನು ಯೋಜನೆಗೆ ಸಂಬಂಧಿಸಿದಂತೆ ಸಲಹೆಗಳು, ದೂರುಗಳಿಗಾಗಿ [email protected] ಭೇಟಿ ನೀಡಿ. ಅಥವಾ ನೇರವಾಗಿ ವಸತಿ, ನಗರ ವ್ಯವಹಾರಗಳ ಸಚಿವಾಲಯ, ನಿರ್ಮಾಣ್ ಭವನ, ನವದೆಹಲಿ – 110011 ಇಲ್ಲಿಗೂ ಭೇಟಿ ನೀಡಬಹುದು. ಸಂಪರ್ಕ ಸಂಖ್ಯೆ 011 2306 3285, 011 2306 0484 ಇದಿಷ್ಟು ಯೋಜನೆಗೆ ಸಂಬಂಧಪಟ್ಟ ಮಾಹಿತಿ.

ಇನ್ನು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅನ್ನೋದನ್ನ ನೋಡೋದಾದ್ರೆ, ವಸತಿ ನಗರಾಭಿವೃದ್ಧಿ ಸಚಿವಾಲಯದ ಅಧಿಕೃತ ವೆಬ್ಸೈಟ್ ಮೂಲಕ ನಾವು ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು. ಯೋಜನೆಯ ಲಾಭವನ್ನ ಯಾರೆಲ್ಲ ಪಡೆದುಕೊಳ್ಳಬಹುದು ಅಂದ್ರೆ
ಫಲಾನುಭವಿಗಳು ಯಾರು ಅಂತ ನೋಡೋದಾದ್ರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಬಿಪಿಎಲ್ ಕಾರ್ಡ್ ಹೊಂದಿರುವವರು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು ಅರೆಸೇನಾ ಪಡೆಗಳು, ವಿಧವೆಯರು, ಮಾಜಿ ಸೈನಿಕರು, ನಿವೃತ್ತಿ ಹೊಂದಿದದವರು ಯೋಜನೆಯಡಿಯಲ್ಲಿ ಲಾಭ ಪಡೆಯಬಹುದು. ಇನ್ನು ಮೊದಲಿಗೆ ನೀಡಲಾದ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ https://pmaymis.gov.in/open/Check_Aadhar_Existence.aspx?comp=b
ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಮುಂದಿನ ಪುಟಕ್ಕೆ ಹೋಗಿ ಮುಂದುವರೆದು ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿ ಮತ್ತು ಎಲ್ಲಾ ದಾಖಲೆ ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ. ನಂತರ ಎಲ್ಲವನ್ನ ಪರಿಶೀಲಿಸಿ ಅರ್ಹರಾಗಿದ್ರೆ ಯೋಜನೆಯ ಲಾಭವನ್ನ ಪಡೆಯಬಹುದು.

ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದಿಪಡಿಗೆ ಈ ತಿಂಗಳು ಇಲ್ಲ ಅವಕಾಶ; ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಬ್ಯಾಡ್ ನ್ಯೂಸ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram