ಗಣರಾಜ್ಯೋತ್ಸವದ ದಿನದಂದು, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ರಾಜ್ಯದ 21 ಅಧಿಕಾರಿಗಳಿಗೆ ಸಿಗಲಿದೆ ರಾಷ್ಟ್ರಪತಿ ಪದಕ

ಸ್ವಾತಂತ್ರ ಪಡೆದು 7 ದಶಮಾನಗಳು ಕಳೆದಿವೆ. ಭಾರತದ ಸ್ವಾತಂತ್ರ್ಯದ ಸಂಭ್ರಮವನ್ನು ಆಗಸ್ಟ್ 15 ರಂದು ಆಚರಣೆ ಮಾಡುವುದು ಎಲ್ಲರಿಗೂ ತಿಳಿದೇ ಇದೆ ಅಂತೆಯೇ ಭಾರತೀಯರು ಆಚರಿಸುವ ದೊಡ್ಡ ಹಬ್ಬ ಎಂದರೆ ಗಣರಾಜ್ಯೋತ್ಸವ. ಭಾರತಕ್ಕೆ ಒಂದು ಸಂವಿಧಾನ ರಚನೆ ಆಗಬೇಕು ಎಂದು ಅಂಬೇಡ್ಕರ್ ಮತ್ತು ಅವರ ತಂಡವು ನಿರ್ಧರಿಸಿ ಎಲ್ಲಾ ಜನರ ಬಗ್ಗೆ ಯೋಚಿಸಿ 1949 ರಲ್ಲಿ ರಚನೆಯಾಗಿ 1950 ಜನವರಿ 26 ರಂದು ಅಂಗಿಕಾರಕೊಂಡಿತು. ಅಲ್ಲಿಂದ ಜನವರಿ 26 ರಂದು ಭಾರತ ಗಣರಾಜ್ಯ ದಿನವನ್ನು ಆಚರಿಸಲಾಗುತ್ತದೆ.

WhatsApp Group Join Now
Telegram Group Join Now

ಇಡೀ ಭಾರತ ಸಂಭ್ರಮದಲ್ಲಿ ಆಚರಿಸುವ ಹಬ್ಬ:- ಭಾರತದ ಎಲ್ಲ ಧರ್ಮ ಜಾತಿಯ ಜನರು ಸಂಭ್ರಮದಿಂದ ಆಚರಿಸುತ್ತಾರೆ. ದೇಶದ ಶಾಲಾ
ಕಾಲೇಜುಗಳಲ್ಲಿ ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಶಾಲೆಗಳಲ್ಲಿ ಸಮವಸ್ತ್ರ ಧರಿಸಿ ಬರುವ ಮಕ್ಕಳು ಕೈಯಲ್ಲಿ ಧ್ವಜ ಹಿಡಿದು ಭಾರತಾಂಬೆಯ ಜೈಕಾರ ಹಾಕುತ್ತಾ ಪ್ರಭಾತಪೇರಿ ಮಾಡುತ್ತಾರೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಸಂವಿಧಾನದ ತಿಳುವಳಿಕೆ ಮಾಡುತ್ತಾರೆ. ಎಲ್ಲರಿಗೂ ಸಿಹಿಯನ್ನು ಹಂಚಿ ಸಂಭ್ರಮ ಪಡುತ್ತಾರೆ. ಇನ್ನು ದೇಶದ ಎಲ್ಲ ಕಚೇರಿಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2024ರ ಗಣರಾಜ್ಯೋತ್ಸವದಂದು ನೀಡುವ ಪ್ರಶಸ್ತಿಗಳು:- 277 ವೀರ ಸೈನಿಕರಿಗೆ ಶೌರ್ಯ ಪ್ರಶಸ್ತಿನೀಡಿ ಗೌರವಿಸುತ್ತಾರೆ. ಪೊಲೀಸ್‌, ಅಗ್ನಿಶಾಮಕ ಸೇವೆ, ಗೃಹ ರಕ್ಷಕ, ನಾಗರಿಕರ ರಕ್ಷಣೆ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಶೌರ್ಯ ಪ್ರಶಸ್ತಿ ಮತ್ತು ಸೇವಾ ಪದಕಗಳನ್ನು ನೀಡಿ ಸನ್ಮಾನ ಮಾಡಲಾಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 2006ರ ನಂತರದಲ್ಲಿ ಸರಕಾರಿ ಕೆಲಸಕ್ಕೆ ಜಾಯಿನ್ ಆದ 13000 ನೌಕರರಿಗೆ ಶುಭಸುದ್ದಿ, ಅವರನ್ನು ಹಳೆಯ ಪಿಂಚಣಿ ವ್ಯವಸ್ಥೆಗೆ ಸೇರಿಸಲಿದ್ದಾರೆ

ರಾಜ್ಯದ 21 ಪೊಲೀಸ್ ಅಧಿಕಾರಿಗಳಿಗೆ ಸಿಗುತ್ತಿದೆ ರಾಷ್ಟ್ರಪತಿ ಪದಕ :-

ಅತ್ಯುತ್ತಮ ಸೇವೆ ಸಲ್ಲಿಸಿದ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ನೀಡುವ ಪ್ರಶಸ್ತಿ ರಾಷ್ಟ್ರಪತಿ ಪದಕ . ಭಾರತೀಯ ಸಶಸ್ತ್ರ ಪಡೆಗಳ ಯಾವುದೇ ಹುದ್ದೆಯಲ್ಲಿ ಇದ್ದಿ ಉತ್ತಮ ಸೇವೆಯನ್ನು ನೀಡಿದವರನ್ನು ಗುರುತಿಸಿ ಈ ಪದಕವನ್ನು ರಾಷ್ಟ್ರಪತಿಗಳು ನೀಡುತ್ತಾರೆ. 2024 ರ ಗಣರಾಜ್ಯೋತ್ಸವದ ಸಮಯದಲ್ಲಿ ರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ ಸಿಗುತ್ತಿದೆ ಅವರ ಹೆಸರುಗಳು ಇಂತಿವೆ.

  • ಎಡಿಜಿಪಿ ಸೌಮೇಂದ್ರ ಮುಖರ್ಜಿ ಹಾಗೂ ಡಿವೈಎಸ್ಪಿ ಸುಧೀರ್ ಮಹದೇವ್ ಹೆಗ್ಡೆ ಅವರ ಸೇವೆಗೆ ರಾಷ್ಟ್ರಪತಿ ಪದಕ ಪ್ರಶಸ್ತಿ ಸಿಗುತ್ತಿದೆ.
  • ಪೊಲೀಸ್ ಸೇವೆಯನ್ನು ಗುರುತಿಸಿ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಐಜಿಪಿ ರಮಣ್ ಗುಪ್ತಾ, ಎಎಸ್​​ಪಿ ಅನಿಲ್​​ಕುಮಾರ್.ಎಸ್, ಎಸಿಪಿ ಶಿವಗಂಗೆ ಪುಟ್ಟರಂಗಪ್ಪ, ಡಿವೈಎಸ್​​ಪಿ ರಘು ಕುಮಾರ್, ಎಸಿಪಿ ನಾರಾಯಣಸ್ವಾಮಿ, ಡಿವೈಎಸ್​​ಪಿ ಶ್ರೀನಿವಾಸ್ ರಾಜ್ ಬೆಟೋಲಿ ಅವರಿಗೆ ರಾಷ್ಟ್ರಪತಿ ಅವರು ಪದಕ ನೀಡಿ ಸನ್ಮಾನಿಸಲಿದ್ದಾರೆ.
  • ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ಮಾಸ್ತೇನಹಳ್ಳಿ ರಾಮಪ್ಪ ಹರೀಶ್ ಹಾಗೂ ಇನ್ಸ್ಪೆಕ್ಟರ್ ಸಣ್ಣ ರಂಗಪ್ಪ, ವಿರೇಂದ್ರ ಪ್ರಸಾದ್ ಅವರಿಗೆ ಸನ್ಮಾನ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.
  • ಸಬ್ ಇನ್ಸ್ಪೆಕ್ಟರ್ ಆದ ದಾದಾಪೀರ್ ಕಣ್ಣೂರ್ ಸಾಬ್, ವೈರಲೆಸ್ ಎಎಸ್ಐ ಸುರೇಶ್ ರಾಮಪ್ಪ ಪುಂಡಲಿಕಟ್ಟಿ, ಎಎಸ್ಐ ರಾಮ ಅವರಿಗೆ ರಾಷ್ಟ್ರಪತಿ ಪದಕ ಸಿಗುತ್ತಿದೆ.
  • ಎಸ್ಪಿ ಕಮಾಂಡೆಂಟ್ ನಾಗರಾಜ್ ಅಂಜಪ್ಪ,
  • ಹೆಡ್ ಕಾನ್ಸ್ಟೇಬಲ್ ಸಿ.ವಿ.ಗೋವಿಂದರಾಜು ಹಾಗೂ ಹೆಡ್ ಕಾನ್ಸ್ಟೇಬಲ್ ಮಣಿಕಂಠ ಮಂದರ್ ಬೈಲ್, ನರಸಿಂಹರಾಜು ಎಸ್.
  • ಎಎಸ್ಐ ಸಮಂತ್.ಎಸ್, ಎನ್, ಎಸ್ಐ ಪುಂಡಲಿಕ್, ಜೆ.ವಿ.ರಾಮರಾವ್ ನಾಯ್ಕ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ಸನ್ಮಾನ ಪುರಸ್ಕಾರ ಸಿಗಲಿದೆ.

ಇದನ್ನೂ ಓದಿ: ಇಡೀ ಮಾರುಕಟ್ಟೆಯನ್ನು ಅಲುಗಾಡಿಸುವ Hero Xtreme 125R ಹೊಸ ವಿನ್ಯಾಸದೊಂದಿಗೆ