ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ. ಪಾಲಕರಿಗೆ ಆರ್ಥಿಕ ಹೊರೆ

Private Schools fee Hike

ಈಗಾಗಲೇ ತರಕಾರಿ ದಿನಸಿ ಬೆಳಗಲು ಗಗನಕ್ಕೆ ಏರಿದೆ. ಇದರ ಜೊತೆಗೆ ಈಗ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ವಾರ್ಷಿಕ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಇದ್ದು ಹೆತ್ತವರಿಗೆ ಆರ್ಥಿಕವಾಗಿ ಹೆಚ್ಚಿನ ಹೊರೆ ಆಗಲಿದೆ.

WhatsApp Group Join Now
Telegram Group Join Now

ಎಷ್ಟು ಪ್ರಮಾಣದ ಶುಲ್ಕ ಹೆಚ್ಚಳ ಆಗಲಿದೆ :- ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ 2023-24 ನೇ ಶೈಕ್ಷಣಿಕ ವರ್ಷದಿಂದ ಶುಲ್ಕ ಹೆಚ್ಚಳ ಆಗಲಿದ್ದು, ಪ್ರತಿ ವಿದ್ಯಾರ್ಥಿಗೆ 30 ರಿಂದ 40 ಪ್ರತಿಶತ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. ಇದು ಪಾಲಕರ ಪಾಲಿಕೆ ಬರೆ ಎಳೆದಂತೆ ಆಗಿದೆ.

ಪೋಷಕರಿಂದ ಖಾಸಗಿ ಶಾಲೆಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ :- ಒಮ್ಮೆಲೆ ಹೆಚ್ಚಿನ ಶುಲ್ಕ ಏರಿಸಿದ ಖಾಸಗಿ ಶಾಲೆಗಳ ನಿರ್ಣಯವನ್ನು ಮಕ್ಕಳ ಪಾಲಕರು ತೀವ್ರವಾಗಿ ಖಂಡಿಸಿದ್ದಾರೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಎಂಬ ಕಾರಣಕ್ಕೆ ಪೋಷಕರು ಕಷ್ಟ ಪಟ್ಟು ಖಾಸಗಿ ಶಾಲೆಗಳಿಗೆ ಸೇರಿಸಿರುತ್ತಾರೆ. ಆದರೆ ಪೋಷಕರ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡು ಖಾಸಗಿ ಶಾಲೆಗಳು ಈ ರೀತಿಯ ಸುಲಿಗೆ ಮಾಡುವುದು ಸರಿಯಲ್ಲ ಎಂಬುದು ಪೋಷಕರ ಅಭಿಪ್ರಾಯ ಆಗಿದೆ. 

ನೋಟಿಸ್ ಬೋರ್ಡ್ ಮತ್ತು ಮೇಲ್ ನಲ್ಲಿ ಮಾಹಿತಿ ಹಂಚಿಕೆ ಆಗಿದೆ :- ಖಾಸಗಿ ಶಾಲೆಗಳು ಪೋಷಕರ ಮೇಲ್ ಗೆ ಅಥವಾ ಪೋಷಕರ ನಂಬರ್ ಗೆ ಮೆಸೇಜ್ ಕಳುಹಿಸಿ ಶುಲ್ಕ ಹೆಚ್ಚಳ ವಿಚಾರವನ್ನು ಹಂಚಿಕೊಂಡಿದ್ದಾರೆ ಜೊತೆಗೆ ಶಾಲೆಗಳ ನೋಟಿಸ್ ಬೋರ್ಡ ನಲ್ಲಿ ಸಹ ಶುಲ್ಕ ಹೆಚ್ಚಳದ ಬಗ್ಗೆ ವಿವರಗಳನ್ನು ಹಾಕಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪೋಷಕ ಸಮನ್ವಯ ಸಮಿತಿ ಅಧ್ಯಕ್ಷ ದಯಾನಂದ ಅವರ ಹೇಳಿಕೆ ಏನು?: ಖಾಸಗಿ ಶಾಲೆಗಳ ಶುಲ್ಕ ಏರಿಸುವ ಕ್ರಮಗಳ ಬಗ್ಗೆ ಮಾತನಾಡಿದೆ ಪೋಷಕ ಸಮನ್ವಯ ಸಮಿತಿ ಅಧ್ಯಕ್ಷ ದಯಾನಂದ ಅವರು ಶುಲ್ಕ ಹೆಚ್ಚಳ ಮಾಡಿರುವುದು ಅಸಂವಿಧಾನಿಕ ಶುಲ್ಕ ಹೆಚ್ಚಳ ಮಾಡುವ ಮುನ್ನ ವೈಜ್ಞಾನಿಕ ಕಾರಣದ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದು ನಂತರ ಇಲಾಖೆಯ ಅನುಮತಿ ಸಿಕ್ಕರೆ ಮಾತ್ರ ಶುಲ್ಕ ಹೆಚ್ಚಳ ಮಾಡಬೇಕು ಆದರೆ ಖಾಸಗಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ನ ನಿಯಮದಲ್ಲಿ ಭಾರಿ ಬದಲಾವಣೆ; ಜೂನ್ 1 ರಿಂದ ಜಾರಿ

ಶುಲ್ಕ ಹೆಚ್ಚಿಸುವುದರಿಂದ ಪೋಷಕರಿಗೆ ಏನು ಸಂಕಷ್ಟ ಆಗುತ್ತದೆ?

1) ಆರ್ಥಿಕ ಹೊರೆ: ಶುಲ್ಕ ಹೆಚ್ಚಳ ಮಾಡಿದರೆ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಸೇರಿಸುವುದು ಪೋಷಕರಿಗೆ ಹೆಚ್ಚು ದುಬಾರಿಯಾಗುತ್ತದೆ. ಕಡಿಮೆ ಆದಾಯದ ಕುಟುಂಬಗಳಿಗೆ, ಶುಲ್ಕ ಪಾವತಿಸಲು ಕಷ್ಟ ಆಗುತ್ತದೆ. ಶುಲ್ಕ ಹೆಚ್ಚಳದಿಂದ ಮಕ್ಕಳ ಇತರ ಅಗತ್ಯಗಳನ್ನು ಪೂರೈಸಲು ಅವರಿಗೆ ಹಣದ ಕೊರತೆ ಉಂಟಾಗುತ್ತದೆ.

2) ಅಸಮಾನತೆ: ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳವು ಶಿಕ್ಷಣದಲ್ಲಿ ಅಸಮಾನತೆ ಉಂಟುಮಾಡುವ ಸಾಧ್ಯತೆ ಇರುತ್ತದೆ. ಶ್ರೀಮಂತ ಕುಟುಂಬಗಳು ಉತ್ತಮ ಖಾಸಗಿ ಶಾಲೆಗಳನ್ನು ಭರಿಸಬಹುದು, ಆದರೆ ಮಾಧ್ಯಮ ಮತ್ತು ಬಡ ಕುಟುಂಬಗಳು ಮಕ್ಕಳನ್ನು ಉತ್ತಮ ದರ್ಜೆ ಶಾಲೆಗಳಿಗೆ ಕಳುಹಿಸಲು ಕಷ್ಟ ಆಗುತ್ತದೆ. ಇದರಿಂದ ಮಕ್ಕಳಲ್ಲಿ ಅಸಮಾನತೆ ಉಂಟಾಗಬಹುದು.

3) ಮಕ್ಕಳಿಗೂ ಇದು ಸಂಕಷ್ಟ ಆಗಬಹುದು :- ಖಾಸಗಿ ಶಾಲೆಗಳ ಶುಲ್ಕ ಏರಿಕೆಯಿಂದ ಮಕ್ಕಳನ್ನು ಈಗ ಓದುತ್ತಿರುವ ಶಾಲೆಯನ್ನು ಬಿಡಿಸಿ ಬೇರೆ ಶಾಲೆಗೆ ಸೇರಿಸಬಹುದು. ಇದರಿಂದ ಮಕ್ಕಳು ಬೇರೆ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳುವ ತೊಂದರೆ ಉಂಟಾಗುತ್ತದೆ. ಹಾಗೂ ಮಕ್ಕಳಿಗೆ ಇದು ಮುಂದಿನ ಎಜುಕೇಷನ್ ಗೆ ಹೊಡೆತ ಆಗಬಹುದು.

ಈಗಾಗಲೇ ಬೆಲೆ ಏರಿಕೆಯು ಮಾಧ್ಯಮ ಮತ್ತು ಬಡ ಕುಟುಂಬಕ್ಕೆ ಆರ್ಥಿಕವಾಗಿ ಹೊರೆ ಆಗಿದೆ. ಹೀಗೆ ಎಲ್ಲಾ ವಿಭಾಗದಲ್ಲಿ ಬೆಲೆ ಏರಿಕೆ ಆದರೆ ಮಾಧ್ಯಮ ಮತ್ತು ಬಡ ವರ್ಗದ ಜನರ ಆರ್ಥಿಕ ಜೀವನ ಕಷ್ಟ ಆಗುತ್ತದೆ. ಈ ಬಗ್ಗೆ ಸರ್ಕಾರ ಹಾಗೂ ಖಾಸಗಿ ಶಾಲೆಗಳು ಪೋಷಕರ ಹೊರೆ ಕಡಿಮೆ ಮಾಡಲು ಶುಲ್ಕವನ್ನು ಕಡಿಮೆ ಮಾಡಬೇಕಾಗಿದೆ.

ಇದನ್ನೂ ಓದಿ: 2.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರ್ಯಕ್ಷಮತೆಯ ಬೈಕ್‌ಗಳು; ಪಲ್ಸರ್ NS400Z ರಿಂದ Apache RTR 310 ವರೆಗೆ!