ಫೋಟೋಗ್ರಾಫಿ ಮಾಡಬೇಕು ಎಂದರೆ ಲಕ್ಷಾಂತರ ರೂಪಾಯಿಯ ಕ್ಯಾಮೆರಾ ತೆಗೆದುಕೊಂಡು ಫೋಟೋಗ್ರಾಫಿ ಸ್ಟಾರ್ಟ್ ಮಾಡ್ಬೇಕು ಎಂದು ನೀವು ಅಂದುಕೊಂಡಿದ್ದರೆ ನೀವು ಈಗ ನಿಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ನಿಂದ ಫೋಟೋಗ್ರಾಫಿ ಬ್ಯುಸಿನೆಸ್ ಸ್ಟಾರ್ಟ್ ಮಾಡಬಹುದು. ಕೇವಲ 5 ಸೆಟ್ಟಿಂಗ್ ಮಾಡಿಕೊಂಡರೆ ನೀವು ನಿಮ್ಮ ಸ್ಮಾರ್ಟ್ ಫೋನ್ ಇಂದಲೇ ನೀವು ಫೋಟೋಗ್ರಾಫಿ ಮಾಡಲು ಸಾಧ್ಯ.
ಸ್ಮಾರ್ಟ್ಫೋನ್ ನಲ್ಲಿ ಯಾವ ರೀತಿಯ ಸೆಟ್ಟಿಂಗ್ ಹಾಕಿಕೊಳ್ಳಬೇಕು..
- ಕ್ಯಾಮೆರಾ ಮೋಡ್:- ಇದರಲ್ಲಿ ಮೂರು ವಿಧಗಳು ಇವೆ. ಅವು ಯಾವುದೆಂದರೆ.
- ಆಟೋ ಮೋಡ್: ನೀವು ಸೆಟ್ಟಿಂಗ್ ಬಳಸುವುದರಿಂದ ನಿಮಗೆ ಆರಂಭಿಕರಿಗಾಗಿ ಉತ್ತಮ ಆಗುತ್ತದೆ. ಈ ಸೆಟ್ಟಿಂಗ್ ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ಬದಲ್ಯಿಸುತ್ತದೆ. ನಿಮಗೆ ಉತ್ತಮ ಫೋಟೋಗಳನ್ನು ತೆಗೆಯಲು ಸಹಾಯ ಮಾಡುತ್ತದೆ.
- ಪ್ರೊ ಮೋಡ್: ಇದು ಅನುಭವಿ ಫೋಟೋಗ್ರಾಫರ್ ಗೆ ಇದು ಉತ್ತಮ ಸೆಟ್ಟಿಂಗ್ ಆಗಿದೆ. ISO, ಷಟರ್ ಸ್ಪೀಡ್, ಮತ್ತು ಅಪರ್ಚರ್ ಸೇರಿದಂತೆ ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ನಿಮಗೆ ತಿಳಿದಿಲ್ಲ ಎಂದಾದರೆ ಪ್ರೊ ಮೋಡ್ ಸೆಟ್ಟಿಂಗ್ ಬಳಸಬಹುದು. ನೀವು ಫೋಟೋ ಎಡಿಟಿಂಗ್ ಮಾಡುವ ಕೆಲಸ ಕೊಂಚ ಕಡಿಮೆ ಇರುತ್ತದೆ.
- ರಾತ್ರಿ ಮೋಡ್: ನಿಮಗೆ ಇದು ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ರಾತ್ರಿ ವೇಳೆಯಲ್ಲಿ ಅಥವಾ ಕಡಿಮೆ ಬೆಳಕು ಇರುವ ಜಾಗದಲ್ಲಿ ಈ ಮೂಡ್ ಬಳಸಬಹುದು.
2) ರೆಸಲ್ಯೂಶನ್: ನಿಮ್ಮ ಕ್ಯಾಮೆರಾಗೆ ಸಾಧ್ಯವಾದಷ್ಟು ಹೆಚ್ಚಿನ ರೆಸಲ್ಯೂಶನ್ ಅನ್ನು ಕ್ಲಿಕ್ ಮಾಡಿ. ಯಾಕೆಂದರೆ ಇದು ನಿಮಗೆ ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಲು ಸಹಾಯಕವಾಗಿದೆ. ಉದಾಹರಣೆಗೆ, 12MP ಫೋಟೋ 8MP ಫೋಟೋಗಿಂತ ಹೆಚ್ಚಿನ ವಿವರಗಳನ್ನು ಹೊಂದಿದೆ ಎಂಬುದು ನಿಮಗೆ ತಿಳಿದಿದೆ. ನಿಮಗೆ ಕಡಿಮೆ MP ಕ್ಯಾಮರಾ ಇಂದ ಉತ್ತಮ ಫೋಟೋ ತೆಗೆಯಲು ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
3) HDR: HDR (ಹೈ ಡೈನಾಮಿಕ್ ರೇಂಜ್) ಅನ್ನು ಆನ್ ಮಾಡಿದರೆ ಇದು ನಿಮಗೆ ಹೆಚ್ಚು ಕ್ಲಿಯರ್ ಫೋಟೋಗಳನ್ನು ತೆಗೆಯಲು ಸಾಧ್ಯವಿದೆ. ಉದಾಹರಣೆಗೆ, ಒಂದು ಪ್ರಕಾಶಮಾನವಾದ ಬೆಳಕಿನಲ್ಲಿ ನೀವು ಒಬ್ಬ ವ್ಯಕ್ತಿಯ ಫೋಟೋವನ್ನು ತೆಗೆದುಕೊಳ್ಳುತ್ತಿದ್ದರೆ, HDR ಅನ್ನು ಆನ್ ಮಾಡುವುದರಿಂದ ವ್ಯಕ್ತಿಯ ಮುಖ ಸ್ಪಷ್ಟವಾಗಿ ಕಾಣುವಂತೆ ಫೋಟೋ ತೆಗೆಯಲು ಸಹಾಯ ಮಾಡುತ್ತದೆ.
4) ಗ್ರಿಡ್: ನೀವು ಗ್ರಿಡ್ ಆಪ್ಷನ್ on ಮಾಡುವುದರಿಂದ ಇದು ನಿಮ್ಮ ಫೋಟೋಗಳನ್ನು ನೇರವಾಗಿ ಮತ್ತು ಸಮತೋಲಿತವಾಗಿ ಸಹಾಯ ಮಾಡುತ್ತದೆ. ನಿಮ್ಮ ಫೋಟೋದಲ್ಲಿನ ಎಲ್ಲಾ ಅಂಶಗಳು ಒಂದೇ ರೀತಿಯಲ್ಲಿ ಕ್ಲಿಕ್ ಆಗಲೂ ಸಹಾಯ ಮಾಡುತ್ತದೆ.
5) ಫ್ಲ್ಯಾಶ್: ನಿಮಗೆ ನೈಸರ್ಗಿಕ ಬೆಳಕು ಸಿಗದೇ ಇದ್ದರೆ ನೀವು ಈ ಪ್ಲಾಷ್ ಲೈಟ್ ಆಪ್ಷನ್ ಬಳಸಲು ಸಾಧ್ಯ. ಆದರೆ ನೀವು ಫ್ಲ್ಯಾಶ್ ಆಪ್ಷನ್ ಬಳಸಿದ್ರೆ ಕೆಲವೊಮ್ಮೆ ನೀವು ತೆಗೆದ ಫೋಟೋ ಕ್ವಾಲಿಟಿ ಚೆನ್ನಾಗಿ ಬರುವುದಿಲ್ಲ. ಆದರೆ ಇದು ಫೋಟೋದ ವಿಷಯವನ್ನು ಬಹಳ ಪ್ರಕಾಶಮಾನವಾಗಿ ಮತ್ತು ಬಿಳಿಯಾಗಿ ಕಾಣುವುದನ್ನು ತಡೆಯುತ್ತದೆ. ನೀವು ಇರುವುದಕ್ಕಿಂತ ಬಿಳಿಯಾಗಿ ಕಾಣಲು ಈ ಆಪ್ಷನ್ ಬಳಸಬಹುದು.
ಇನ್ನೇಕೆ ತಡ ಫೋಟೋಗ್ರಾಫಿ ಮಾಡಬೇಕು ಎಂಬ ಕನಸು ನಿಮಗೆ ಇದ್ದರೆ ನಿಮ್ಮ ಬಳಿ ಸಾವಿರ ರೂಪಾಯಿಗಳ ಸ್ಮಾರ್ಟ್ಫೋನ್ ಇದ್ದರೂ ನೀವು ಉತ್ತಮ ಫೋಟೋಗ್ರಾಫರ್ ಆಗಲೂ ಸಾಧ್ಯವಿದೆ.
ಇದನ್ನೂ ಓದಿ: ಭಾರತದಲ್ಲಿ ಜಾವಾ ಪೆರಾಕ್‌ನಿಂದ ಹೊಸದಾಗಿ ಪರಿಚಯಿಸಲಾದ 42 ಬಾಬರ್ ವಿಶೇಷಣಗಳ ಬಗ್ಗೆ ತಿಳಿದುಕೊಳ್ಳಿ!
ಇದನ್ನೂ ಓದಿ: ಈಗಷ್ಟೇ ಪ್ರಾರಂಭವಾದ Motorola Edge 50 Pro ನ ಮಾರಾಟ; ಹೆಚ್ಚಿನ ರಿಯಾಯಿತಿಗಳಲ್ಲಿ ಖರೀದಿಸಿ!