ಪಬ್ ಜಿಯಿಂದ ಶುರುವಾಯ್ತು ಲವ್ ಸ್ಟೋರಿ! 4ಮಕ್ಕಳ ಪಾಕಿಸ್ತಾನಿ ತಾಯಿ ಭಾರತೀಯ ಯುವಕನ ಮೇಲೆ ಪ್ರೀತಿ..

ನಮ್ಮ ದೇಶಕ್ಕೆ ಕೊರೋನ ಮಹಾಮಾರಿ ಒಕ್ಕರಿಸಿದ್ದೆ ಒಕ್ಕರಿಸಿದ್ದು ಜನರು ಮೊಬೈಲ್ ಗೀಳಿಗೆ ಅಂಟಿಕೊಂಡ್ರು, ಕುಂತ್ರು ಮೊಬೈಲ್ ನಿಂತ್ರು ಮೊಬೈಲ್ ಎಂಬಂತೆ ಮೊಬೈಲ್ ಗೆ ಅಡಿಕ್ಟ್ ಆಗಿ ಹೋದ್ರು. ಆ ಸಂದರ್ಭದಲ್ಲಿ ಕೆಲವೊಂದಷ್ಟು ಆನ್ಲೈನ್ ಗೇಮ್ ಗಳು ಸಾಕಷ್ಟು ಸದ್ದು ಮಾಡಿದ್ವು ಅದ್ರಲ್ಲಿ ಪಬ್ ಜೀ ಕೂಡ ಒಂದು. ಇದೀಗ ಈ ಪಬ್‌ಜಿ ಮೂಲಕ ಮೂಡಿದ ಪ್ರೀತಿಗಾಗಿ ಪಾಕಿಸ್ತಾನದಿಂದ ನಾಲ್ಕು ಮಕ್ಕಳ ಮಹಿಳೆಯೊಬ್ಬಳು ಗಂಡನನ್ನ ಬಿಟ್ಟು ಭಾರತಕ್ಕೆ ಅಕ್ರಮವಾಗಿ ಬಂದು ಸದ್ಯ ಮಕ್ಕಳ ಸಮೇತ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ಸೀಮಾ ಹೈದರ್ ಎಂಬ ಮಹಿಳೆಗೆ ಜಾಮೀನು ಸಿಕ್ಕಿದೆ. ಆದ್ರೆ ಇಷ್ಟೆಲ್ಲ ಆದ್ರು ಕೂಡ ಆಕೆ ಪಾಕಿಸ್ತಾನಕ್ಕೆ ವಾಪಸ್ ಹೋಗಲು ಬಯಸುತ್ತಿಲ್ಲ. ಪಬ್‌ಜಿ ಪ್ರಿಯಕರನನ್ನ ನೇಪಾಳದಲ್ಲಿ ಮದುವೆಯಾಗಿದ್ದ ಆಕೆ, ತಾನೀಗ ಹಿಂದೂ ಅಂತ ಹೇಳಿಕೊಳ್ಳುತ್ತಿದ್ರೆ. 

WhatsApp Group Join Now
Telegram Group Join Now

ಈ ಮಹಿಳೆಯ ಮೊದಲ ಗಂಡ ಗುಲಾಮ್ ನನಗೆ ಪತ್ನಿ ಡೈವೋರ್ಸ್ ಕೊಟ್ಟಿಲ್ಲ ನಂಗೆ ನನ್ನ ಪತ್ನಿ ಮತ್ತು ನಾಲ್ಕು ಮಕ್ಕಳು ಬೇಕು ಅವಳನ್ನ ವಾಪಾಸ್ ಕಳುಹಿಸಿಕೊಡಿ ಅಂತ ವಿಡಿಯೋ ಮೂಲಕ ಭಾರತ ಸರ್ಕಾರಕ್ಕೆ ಮೊರೆಯಿಟ್ಟಿದ್ದಾನೆ. ಆದ್ರೆ ಇತ್ತ ಮಹಿಳೆ ಮಾತ್ರ ತನು ಸಚಿನ್ ನ ಮದುವೆಯಾಗಿದ್ದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು ಹಿಂದೂ ಸಂಪ್ರದಾಯ ಸಂಸ್ಕಾರ ಆಚಾರ ವಿಚಾರವನ್ನ ಕಲಿತಿದೀನಿ ನಾನು ಎಲ್ಲಿಯೂ ಹೋಗಲ್ಲ ಇಲ್ಲಿಯೇ ಇರ್ತೀನಿ ಸಚಿನ್ ನನ್ನ ಗಂಡ, ನಾನು ಪಾಕಿಸ್ತಾನಕ್ಕೆ ಹೋಗಲ್ಲ ಹೋದರೆ ಅವ್ರು ನನ್ನನ್ನ ಸುಮ್ನೆ ಬಿಡಲ್ಲ ನನಗೆ ಪ್ರಾಣ ಬೆದರಿಕೆ ಇದೆ ಅಲ್ಲಿಗೆ ಹೋದರೆ ಅವ್ರು ನನ್ನನ್ನ ಸಾಯಿಸಿಬಿಡುತ್ತಾರೆ ಅಂತಿದ್ದಾಳೆ.. ಹಾಗಾದ್ರೆ ಏನಿದು ವಿಚಿತ್ರ ಲವ್ ಸ್ಟೋರಿ, ಈ ಪ್ರೀತಿ ಹೇಗಾಯ್ತು ಏನ್ ಕಥೆ ನೋಡೋಣ ಬನ್ನಿ.

ಇದನ್ನೂ ಓದಿ: ತಮ್ಮ ಮದುವೆಯ ಆರತಕ್ಷತೆಗೆ ಅಭಿಮಾನಿಗಳನ್ನು ಅಹ್ವಾನಿಸಿದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಹಾಗೂ ಪಲ್ಲವಿ

ಪಾಕಿಸ್ತಾನ ಬಿಟ್ಟು ಬಂದಿದ್ದು ಹೇಗೆ? ವಿಚಿತ್ರ ಪ್ರೇಮ ಕತೆ

ಪ್ರೀತಿ ಕುರುಡು ಅಂತ ಹೇಳ್ತಾರೆ ಅದು ಈ ಪರಿ ಕುರುಡು ಅಂತ ಗೊತ್ತಾಗಿದ್ದೆ ನಮ್ಮ ದೇಶದದ್ಯಂತ ಸಂಚಲನ ಮೂಡಿಸಿದ್ದ ಈ ಪಬ್ ಜೀ ಲವ್ ಸ್ಟೋರಿ ಮೂಲಕ. ಹೌದು ಪಬ್‌ಜಿ ಗೇಮ್ ಮೂಲಕ ಪರಿಚಿತನಾದ ಭಾರತದ ವ್ಯಕ್ತಿಯನ್ನು ಭೇಟಿ ಮಾಡಲು ತನ್ನ ನಾಲ್ಕು ಮಕ್ಕಳ ಸಹಿತ ಭಾರತದ ಒಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್‌ಗೆ ಜಾಮೀನು ದೊರಕಿದೆ. ಆಕೆಯ ಜತೆಗೆ ಭಾರತದ ಸಚಿನ್ ಮೀನಾ ಕೂಡ ಜಾಮೀನು ಪಡೆದುಕೊಂಡಿದ್ದಾನೆ. ಹೌದು ಇದೆ ಮಾರ್ಚ್‌ನಲ್ಲಿ 30 ವರ್ಷದ ಸೀಮಾ ಮತ್ತು 25 ವರ್ಷದ ಸಚಿನ್ ಇಬ್ಬರೂ ನೇಪಾಳದಲ್ಲಿ ಭೇಟಿಯಾಗಿದ್ದರು. ಪಬ್‌ಜಿನಲ್ಲಿ ಬೆಳೆದಿದ್ದ ಪ್ರೀತಿ, ಆಕೆಯನ್ನು ಮಕ್ಕಳ ಸಹಿತ ಗಡಿದಾಟಿ ಬರುವ ಹುಚ್ಚು ಸಾಹಸಕ್ಕೆ ಪ್ರಚೋದಿಸಿತ್ತು. ಪಬ್ ಜೀ ಯಿಂದ ಪರಿಚಯವಾಗಿ ನಂತರ ಸೋಷಿಯಲ್ ಮೀಡಿಯಾದಲ್ಲಿ ನಂಬರ್ ಚೇಂಜ್ ಮಾಡಿಕೊಂಡ ಇಬ್ಬರು ಪ್ರೀತಿಗೆ ಬೀಳಲು ಹೆಚ್ಚು ಸಮಯ ಬೇಕಾಗಿರಲಿಲ್ಲ.

ಹೌದು ಆದ್ರೆ ಪ್ರೀತಿ ಮಾಡಿದ ನಂತರ ಆ ಮಹಿಳೆ ಹೇಗಾದ್ರು ಭಾರತಕ್ಕೆ ಹೋಗಬೇಕು ತನ್ನ ಪ್ರಿಯಕರನ ಜೊತೆಗಿರಬೇಕು ಅಂತ ಅವಕಾಶ ಕಾಯ್ತಿದ್ಲು ಇವಳ ಅದೃಷ್ಟಕ್ಕೆ ಗಂಡ ಕೂಡ ಜೊತೆಗಿರಲಿಲ್ಲ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡ್ತಿದ್ದ ಈಗಾಗಿ ಧೈರ್ಯ ಮಾಡ್ತಾಳೆ ಆದ್ರೆ ಭಾರತಕ್ಕೆ ಬರುವುದು ಅಷ್ಟು ಸುಲಭ ಅಲ್ಲ ಅಂತ ಗೊತ್ತಾದ ಮೇಲೆ ಅವ್ಳು ಮಾಡುದ ಪ್ಲಾನ್ ಯಪ್ಪಾ ಹೀಗೂ ಮಾಡಬಹುದಾ ಅನ್ಸುತ್ತೆ. ಹೌದು ಮೊದಲು ಕರಾಚಿಯಿಂದ ದುಬೈಗೆ ತೆರಳಿ, ಅಲ್ಲಿ 11 ಗಂಟೆ ಕಾಯಬೇಕಿತ್ತು, ನಿದ್ದೆ ಕೂಡ ಮಾಡುವಂತೆ ಇರಲಿಲ್ಲ. ನಂತರ ನೇಪಾಳಕ್ಕೆ ಬರುತ್ತಾರೆ, ಅಲ್ಲಿಂದ ರಸ್ತೆ ಮಾರ್ಗದಲ್ಲಿ ಪೋಖರಾಗೆ ಬಂದ ಈಕೆ ಅಲ್ಲಿ ಸಚಿನ್‌ನನ್ನು ಭೇಟಿ ಮಾಡ್ತಾಳೆ. ನಂತರ ಮದುವೆ ಆಗಲು ನಿರ್ಧರಿಸಿ ಬಳಿಕ ಆಕೆ ಪಾಕಿಸ್ತಾನಕ್ಕೆ ವಾಪಸ್ ಹೋಗಿದ್ದಳು. ಸಚಿನ್ ಕೂಡ ಭಾರತಕ್ಕೆ ಮರಳಿದ್ದ. ಮನೆಗೆ ಮರಳಿದ ಸೀಮಾ ಹಾಗೂ ಗಂಡನ ನಡುವೆ ಜಗಳವಾಗಿತ್ತು. ಆಕೆ ತನ್ನ ಪ್ಲಾಟ್ ಅನ್ನು 12 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಳು. ತನಗೆ ಹಾಗೂ ತನ್ನ ನಾಲ್ಕು ಮಕ್ಕಳಿಗೆ ವಿಮಾನ ಟಿಕೆಟ್ ಹಾಗೂ ನೇಪಾಳ ವೀಸಾ ವ್ಯವಸ್ಥೆ ಮಾಡಿಕೊಂಡಿದ್ದಳು.

ನಂತರ ಮೇ ತಿಂಗಳಲ್ಲಿ ಆಕೆ ದುಬೈ ಮೂಲಕ ನೇಪಾಳಕ್ಕೆ ಬಂದಿದ್ದಳು.ಆಗ ಪೋಖರಾ ನಗರದಲ್ಲಿ ಕೆಲವು ಸಮಯ ಕಳೆದಿದ್ದಳು. ಕಠ್ಮಂಡುವಿನಿಂದ ಬಸ್‌ನಲ್ಲಿ ದಿಲ್ಲಿಗೆ ಬಂದು, ಮೇ 13ರಂದು ಗ್ರೇಟರ್ ನೋಯ್ಡಾ ತಲುಪಿದ್ದಳು. ಆಕೆಯ ಪಾಕಿಸ್ತಾನದ ಗುರುತನ್ನು ಮುಚ್ಚಿಟ್ಟು, ಬಾಡಿಗೆ ಮನೆಯಲ್ಲಿ ಮಕ್ಕಳ ಜತೆ ವಾಸಿಸಲು ಸಚಿನ್ ವ್ಯವಸ್ಥೆ ಮಾಡಿದ್ದ. ಆದ್ರೆ ಗಡಿಯಾಚೆಗಿನ ಪ್ರೇಮ ಪ್ರಕರಣಕ್ಕೆ ತಿರುವು ಎಂಬಂತೆ ಸೀಮಾಳ ಅಕ್ರಮ ವಾಸದ ಮಾಹಿತಿ ತಿಳಿದ ಪೊಲೀಸರು, ಜುಲೈ 4ರಂದು ಆಕೆಯನ್ನು ಬಂಧಿಸಿದ್ದರು. ಅದ್ರಿಗ ಆಕೆಗೆ ಜಾಮೀನು ಸಿಕ್ಕಿದೆ. ಹೀಗಾಗಿ ಭಾರತದಲ್ಲಿಯೇ ಅಧಿಕೃತವಾಗಿ ವಾಸಿಸಲು ಬೇಕಾದ ದಾಖಲೆಗಳನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. 

ಹೆಂಡತಿ ಮತ್ತು ಮಕ್ಕಳನ್ನು ಮತ್ತೆ ಪಾಕಿಸ್ತಾನಕ್ಕೆ ಕಳುಹಿಸುವಂತೆ ಭಾರತ ಸರ್ಕಾರಕ್ಕೆ ಗಂಡನ ಮನವಿ

ಆದ್ರೆ ಅತ್ತ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಸೀಮಾ ಳ ಗಂಡ ಗುಲಾಮ್ ಹೈದರ್, ತನ್ನ ಹೆಂಡತಿ ಮತ್ತು ಮಕ್ಕಳನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾನೆ. ಅಲ್ದೇ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ನರೇಂದ್ರ ಮೋದಿ ಸರ್ಕಾರಕ್ಕೆ ವಿಡಿಯೋ ಮನವಿಯಲ್ಲಿ ಕೋರಿರುವ ಆತ, ಪಬ್‌ಜಿ ಮೂಲಕ ತನ್ನ ಹೆಂಡತಿಗೆ ಆಮಿಷವೊಡ್ಡಿ, ಆಕೆಯ ತಲೆಕೆಡಿಸಿ ಭಾರತಕ್ಕೆ ಬರುವಂತೆ ಮಾಡಲಾಗಿದೆ ಅಂತ ಆರೋಪಿಸಿದ್ದಾನೆ. ಅಲ್ದೇ ತನ್ನ ಹೆಂಡತಿ ಮತ್ತು ಮಕ್ಕಳ ಪತ್ತೆಗೆ ಸಹಾಯ ಮಾಡಿದ ಭಾರತೀಯ ಮಾಧ್ಯಮದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದು, ತನ್ನ ಕುಟುಂಬ ಸುರಕ್ಷಿತವಾಗಿ ಪಾಕಿಸ್ತಾನಕ್ಕೆ ಮರಳಲಿ. ಇದರ ಮೂಲಕ ಕುಟುಂಬದ ಜತೆ ಮತ್ತೆ ಸೇರಿಕೊಳ್ಳಬೇಕು ಅಂತ ಗಂಡ ಹೇಳ್ತಿದ್ರೆ, ಇತ್ತ ಅಕ್ರಮವಾಗಿ ಭಾರತಕ್ಕೆ ಬಂದಿರುವ ಸೀಮಾ, ಮರಳಿ ತನ್ನ ಕುಟುಂಬದ ಜತೆ ಸೇರಿಕೊಳ್ಳುವ ಆಸೆ ಹೊಂದಿಲ್ಲ. ನನ್ನ ಗಂಡ ಒಬ್ಬ ಹಿಂದೂ, ಹೀಗಾಗಿ ನಾನೂ ಕೂಡ ಹಿಂದೂ. ನಾನು ಈಗ ಭಾರತೀಯಳು ಎಂಬ ಭಾವನೆ ಬಂದಿದೆ ನಾನು ಸಚಿನ್ ಜೊತೆಗೆ ಇರಬೇಕು ಅಂದುಕೊಂಡಿದ್ದೀನಿ ಅಂತ ಹೇಳ್ತಿದ್ದಾಳೆ. ಆದ್ರೆ ಇದು ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕು.

ಇದನ್ನೂ ಓದಿ: ಮಾಸ್ಟರ್ ಆನಂದ್ ಮಗಳು ವಂಶಿಕ ಹೆಸರಲ್ಲಿ ದೋಖ! ಫೋಟೋಶೂಟ್, ಟ್ಯಾಲೆಂಟ್ ಶೋ ಹೆಸರಲ್ಲಿ ಲಕ್ಷ ಲಕ್ಷ ಪಿಕಿರೋ ಐನಾತಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram