Radhika Kumaraswamy: ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ ರಾಧಿಕಾ ಕುಮಾರಸ್ವಾಮಿ!

Radhika Kumaraswamy: ಕನ್ನಡ ಚಿತ್ರರಂಗದಲ್ಲಿ ಸ್ವೀಟಿ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾಗಿ ನಟಿಸಲಿದ್ದಾರೆ. ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಈ ಚಿತ್ರದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾದ ಮಹೂರ್ತದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now

ಕನ್ನಡ ತೆಲುಗು ಸೇರಿದಂತೆ ಬರೋಬ್ಬರಿ 7 ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾ ನಿರ್ಮಾಪಕರು ರವಿರಾಜ್ ಅವರು, ನಿರ್ದೇಶನ ಸ್ಥಾನವನ್ನು ಎಂ ಶಶಿಧರ್ ನಿರ್ವಹಿಸುತ್ತಿದ್ದಾರೆ. ಏಳು ಭಾಷೆಯಲ್ಲಿ ಬರುತ್ತಿರುವ ಈ ಚಿತ್ರಕ್ಕೆ ‘ಆಜಾಗ್ರತ'(Ajagratha) ಎಂದು ಹೆಸರಿಟ್ಟಿದ್ದಾರೆ. ಇನ್ನು ಇತ್ತೀಚಿಗೆ ಈ ಸಿನಿಮಾದ ಮುಹೂರ್ತವು ಅದ್ದೂರಿಯಾಗಿ ನೆರವೇರಿದೆ. ರಾಮ ನಾಯ್ಡು ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಈ ಸಮಾರಂಭ ನಡೆದಿದೆ ಇನ್ನು ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಚಿತ್ರರಂಗದ ಸಾಕಷ್ಟು ವಿವಿಧ ಗಣ್ಯರು ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ.

ರಾಧಿಕಾ ಕುಮಾರಸ್ವಾಮಿಯ ಈ ಇಂದಿನ ದಮಯಂತಿ ಚಿತ್ರ ಕೂಡ ಬಹು ಭಾಷೆಯಲ್ಲಿ ತೆರೆಕಂಡಿತ್ತು ಈ ಚಿತ್ರದಲ್ಲಿ ದ್ವಿಪಾತ್ರ ಮಾಡಿದ್ದ ರಾಧಿಕಾ ಕುಮಾರ ಸ್ವಾಮಿಯವರು(Radhika Kumaraswamy) ಈ ಸಿನಿಮಾ ಕೂಡ ಸಕ್ಕತ್ ಸೌಂಡ್ ಮಾಡಿತ್ತು ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚಿಗೆ ರವಿ ಬೊಪಣ್ಣ ಸಿನಿಮಾದಲ್ಲಿ ರವಿಚಂದ್ರನ್ ಅವರ ಜೊತೆ ನಟಿಸಿದ್ದರು ಈ ಸಿನಿಮಾ 2022 ರಲ್ಲಿ ರಿಲೀಸ್ ಆಗಿತ್ತು. ಇನ್ನು ಸಾಕಷ್ಟು ಸಿನಿಮಾಗಳಲ್ಲಿ ನಟಿಸ ಬೇಕಿದ್ದ ರಾಧಿಕಾ ಅವರ ಆ ಸಿನಿಮಾಗಳು ಯಾವು ಕೂಡ ಘೋಷಣೆ ಆಗಲಿಲ್ಲ. ಇದೀಗ ‘ಅಜಾಗ್ರತ’ ಎಂಬ ಏಳು ಭಾಷೆಯ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ರೀ-ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರು ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟ ಬಳಿಕ ಅವರ ಅಭಿಮಾನಿಗಳು ನೀವು ಇನ್ನೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್.. ಇಂದಿನಿಂದಲೇ 5 ಯೋಜನೆಗಳು ಜಾರಿ

ಇದನ್ನೂ ಓದಿ: ಕಲರ್ಸ್ ಕನ್ನಡ ಹಾಗೂ ಜೀ ಕನ್ನಡದ ಪ್ರಮುಖ 2 ಧಾರಾವಾಹಿಗಳು ಮುಕ್ತಾಯ!!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram