Raghavendra Stores: ಜಗ್ಗೇಶ್ ಸೊಸೆ ಸಿನಿಮಾ ನೋಡಿ ಏನ್ ಹೇಳಿದ್ರು?

Raghavendra Stores: ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾಕೆ ಸಂತೋಷ್ ಆನಂದ್‌ರಾಮ್ ನಿರ್ದೇಶನವಿದೆ. ಹಾಸ್ಯ ಮತ್ತು ಮನರಂಜನೆಯಲ್ಲಿ ಪಕ್ಕ ಪೈಸಾ ವಸೂಲು ಚಿತ್ರ ಅಂತಾಲೆ ಹೇಳಬಹುದು.ಇನ್ನು ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ಶ್ವೇತಾ ಶ್ರೀವಾತ್ಸವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇವ್ರ ಜೊತೆಗೆ ಅಚ್ಯುತ್ ಕುಮಾರ್, ದತ್ತಣ್ಣ, ರವಿಶಂಕರ್ ಗೌಡ, ಮಿತ್ರ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಸಂಕಲನ ಮಾಡಿದ್ದಾರೆ. ಇನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಎಲ್ಲ ಸ್ಟಾರ್ ನಟರು ಕೂಡ ಒಳ್ಳೆಯ ರೇಟಿಂಗ್ಸ್ ಕೊಡುತ್ತಿದ್ದೂ, ಎಲ್ಲರು ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಇನ್ನು ಜಗ್ಗೇಶ್ ಮನೆಯಲ್ಲೂ ಕೂಡ ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಜಗ್ಗೇಶ್ ಪತ್ನಿ ಮತ್ತು ಸೊಸೆ ಸಿನಿಮಾ ನೋಡಿ ಏನ್ ಹೇಳುದ್ರು ಅನ್ನೋದನ್ನ ನವರಸ ನಾಯಕ ಜಗ್ಗೇಶ್ ಅವ್ರೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

WhatsApp Group Join Now
Telegram Group Join Now

ರಾಘವೇಂದ್ರ ಸ್ಟೋರ್ಸ್ ಸಿನಿಮಾ ಹೇಗಿದೆ ಗೊತ್ತಾ?

ರಾಘವೇಂದ್ರ ಸ್ಟೋರ್ಸ್’ ಪಕ್ಕಾ ಜಗ್ಗೇಶ್ ಸಿನಿಮಾ ಅಂದ್ರೆ ತಪ್ಪಾಗಲಿಕ್ಕಿಲ್ಲ. ಜಗ್ಗೇಶ್ ಇದ್ದಾರೆ ಅಂದ್ರೆ ಅಲ್ಲಿ ಕಾಮಿಡಿ ಎಲ್ಲಿಮೆಂಟ್ಸ್ ಗೆ ಕೊರತೆ ಇರೋದಿಲ್ಲ ಹಾಗಾಗಿಯೇ ಜಗ್ಗೇಶ್ ಫ್ಯಾನ್ಸ್ ನಿರೀಕ್ಷೆ ಮಾಡುವ ಎಲ್ಲ ಥರದ ಅಂಶಗಳು ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿದೆ. ಇಡೀ ಸಿನಿಮಾ ಜಗ್ಗೇಶ್ ಅವ್ರ ಸುತ್ತಲೇ ಸುತ್ತುವಂತಿದ್ದು , ಜಗ್ಗೇಶ್ ಅವರೇ ಇಡಿ ಸಿನಿಮಾವನ್ನ ಆವರಿಸಿಕೊಂಡಿದ್ದಾರೆ, ಅಂತ ಅನ್ನಿಸೊದ್ರಾ ಜೊತೆಗೆ ಜಗ್ಗೇಶ್ ಅವ್ರ ಹೆಗಲ ಮೇಲೆ ಸಿನಿಮಾ ಇದೆ ಅನ್ನುವಂತಿದೆ ರಾಘವೇಂದ್ರ ಸ್ಟೋರ್ಸ್ ಸಿನಿಮಾ. ಎಂದಿನಂತೆ ತಮ್ಮ ಮ್ಯಾನರಿಸಂನಿಂದಲೇ ಪ್ರೇಕ್ಷಕರನ್ನ ನಕ್ಕು ನಗಿಸುತ್ತ ನಗೆಗಡಲಲ್ಲಿ ತೇಲಾಡಿಸುವಂತೆ ಮಾಡಿದ್ದಾರೆ.

ಹೌದು ಮದುವೆಯಾಗದೇ ಒದ್ದಾಡುವ 40ರ ಪ್ರಾಯದ ವ್ಯಕ್ತಿಯ ಪಾತ್ರದಲ್ಲಿ ಕಾಮಿಡಿ ಪಾತ್ರಕ್ಕೆ ಜಗ್ಗೇಶ್ ಜೀವ ತುಂಬಿದ್ದು ಕಾಮಿಡಿ ಕಚಗುಳಿ ಇಡುವ ಜಗ್ಗೇಶ್ ನಟನೆ ಜೊತೆಗೆ ಒಮ್ಮೊಮ್ಮೆ ಜಗ್ಗೇಶ್ ಅವ್ರ ಎಮೋಷನಲ್‌ ಸೀನ್‌ಗಳಲ್ಲಿ ನೋಡುಗರನ್ನು ಅಷ್ಟೇ ಭಾವುಕರನ್ನಾಗಿಸುತ್ತಾರೆ. ಹಾಗಾಗಿ, ಇದನ್ನು ಜಗ್ಗೇಶ್ ಅವರ ಒನ್ ಮ್ಯಾನ್‌ ಶೋ ಸಿನಿಮಾ ಅಂತಲೂ ಹೇಳಬಹುದು. ಇನ್ನು ಸಂತೋಷ್ ಆನಂದ್‌ರಾಮ್‌ ಅವರ ಪ್ರತಿ ಸಿನಿಮಾಗಳಲ್ಲಿ ಒಂದು ಸಾಮಾಜಿಕ ಸಂದೇಶವಿರುತ್ತದೆ. ಇಲ್ಲಿಯೂ ಅಂಥದ್ದೇ ಮೆಸೇಜ್‌ ಇದೆ. ಇನ್ನು ಮೊದಲಾರ್ದಾದಲ್ಲಿ ಮದುವೆ ಮತ್ತು ಮೊದಲ ರಾತ್ರಿ ಕುರಿತ ಸೀನ್‌ಗಳು ಅಲ್ಲಲ್ಲಿ ಬರೋದ್ರಲ್ಲಿ ಜೊತೆಗೆ,ಇಂಟರ್ವಲ್‌ ಹೊತ್ತಿಗೆ ಸಣ್ಣ ಟ್ವಿಸ್ಟ್‌ ಕೂಡ ಇದೆ. ಇನ್ನು 36 ವರ್ಷ ಆಗಿದ್ದರೂ, ಮದುವೆಯಾಗದ ವೈಜಯಂತಿ ಎಂಬ ಪಾತ್ರದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಂಡಿದ್ದು, ಆ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಗುಂಡ ಭಟ್ರು ಪಾತ್ರದಲ್ಲಿ ದತ್ತಣ್ಣ ಹಾಗೂ ಖಳನಾಯಕನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಪರ್ಫೆಕ್ಟ್ ಆಕ್ಟಿಂಗ್ ಜೊತೆಗೆ ರವಿಶಂಕರ್ ಗೌಡ ಮತ್ತು ಮಿತ್ರ ಆಗಾಗ ಕಾಮಿಡಿ ಕಚಗುಳಿ ಇಡುತ್ತಾರೆ.

ಇದನ್ನೂ ಓದಿ: ಆಪರೇಷನ್ ಬಳಿಕ 1 ವರ್ಷ ಬೆಡ್ ಮೇಲೆ ಇದ್ದ, ಅಂತರಪಟ ಧಾರಾವಾಹಿ ನಟಿ ಶರ್ಮಿಳಾ

ಹೌದು ಶುಚಿ ಮತ್ತು ರುಚಿಯಲ್ಲಿ ಹೆಸರಾಗಿರುವ ‘ರಾಘವೇಂದ್ರ ಸ್ಟೋರ್ಸ್’ಗೆ ಗುಂಡ ಭಟ್ರು ಓನರ್‌. ‘ರಾಘವೇಂದ್ರ ಸ್ಟೋರ್ಸ್’ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಗುಂಡ ಭಟ್ರು ಮಗ ಹಯವದನ ಪಾತ್ರಧಾರಿ ಜಗ್ಗೇಶ್ ಗೆ ವಯಸ್ಸು 40. ಆದ್ರೆ ಹಯವದನನಿಗೆ ಕಂಕಣ ಭಾಗ್ಯ ಕೂಡಿ ಬರಲ್ಲಾ ಎಲ್ಲ ಹುಡುಗಿಯರು ಅವನನ್ನು ರಿಜೆಕ್ಟ್ ಮಾಡ್ತಾರೆ. ಇಂಥವನೊಬ್ಬನಿಗೆ ಅಂತೂ ಇಂತೂ ಮದುವೆ ಆಗುತ್ತದೆ. ಆನಂತರ ಏನೆಲ್ಲ ಅವಾಂತರಗಳಾಗುತ್ತವೆ? ಲೇಟ್ ಮ್ಯಾರೇಜ್‌ನಿಂದ ಆಗುವ ಸಮಸ್ಯೆಗಳೇನು? ಮದುವೆ ಆಗಲು ಹಯವದನ ಮಾಡುವ ಸರ್ಕಸ್‌ಗಳೇನು ಎಂಬುದನ್ನು ಸಂತೋಷ್ ಆನಂದ್‌ರಾಮ್ ಹಾಸ್ಯದ ಜೊತೆಗೆ ಹೇಳುವ ಪ್ರಯತ್ನ ಮಾಡಿದ್ದಾರೆ. ಇನ್ನು ಈ ಸಿನಿಮಾ ನೋಡಿದ ಎಲ್ಲರು ಕೂಡ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದೂ, ಈ ಚಿತ್ರವನ್ನ ನೋಡಿರುವ ಜಗ್ಗೇಶ್ ಅವ್ರ ಪತ್ನಿ ಹಾಗೂ ಸೊಸೆ ಇಬ್ಬರು ಕೂಡ ತುಂಬಾನೆ ಖುಷಿ ಪಟ್ಟಿದ್ದಾರಂತೆ ಈ ಕುರಿತು ಜಗ್ಗೇಶ್ ಅವ್ರು ಸಂದರ್ಶನವೊಂದರಲ್ಲಿ ಮಾತಾನಾಡಿದ್ದು, ನನಗೆ ಈ ಸಿನಿಮಾ ಮಾಡಿ ತುಂಬಾ ಖುಷಿ ಆಯ್ತು ಅಂತ ಹೇಳಿದ್ದಾರೆ.

ಸಿನಿಮಾ ಬಗ್ಗೆ ಜಗ್ಗೇಶ್ ಪತ್ನಿ, ಸೊಸೆ ಹೇಳಿದ್ದೇನು?

ಹೌದು ಸಿನಿಮಾ ಕುರಿತಂತೆ ಮಾತನಾಡಿರುವ ಜಗ್ಗೇಶ್ ಅವ್ರು ಈ ಸಿನಿಮಾ ಕೊಟ್ಟ ಕಾಸಿಗೂ ಮೋಸವಿಲ್ಲ, ನಗುವಿಗೂ ಕೊರತೆ ಇಲ್ಲ ನೀವು ಪಕ್ಕ ಎಂಜಾಯ್ ಮಾಡ್ತೀರಾ ಅಂತ ಹೇಳಿದ್ದಾರೆ. ಜೊತೆಗೆ ನಿಮ್ಮ ಮನೆಯವರ ಪ್ರತಿಕ್ರಿಯೆ ಹೇಗಿತ್ತು ಅಂತ ಕೇಳಿದ್ದಕ್ಕೆ.. ನಾನು ಶೂಟಿಂಗ್ ಮುಗಿಸಿ ಮನೆಗೆ ಲೇಟ್ ಆಗಿ ಹೋದೆ. ಆಗ ನನ್ನ ಹೆಂಡತಿ ಮನೆಯಲ್ಲಿ ಒಂದು ಮಂದ ಬೆಳಕಿನಲ್ಲಿ ಕುಳಿತಿದ್ಲು, ಪ್ರತಿನಿತ್ಯ 9- 9.30 ಗೆ ಮಲ್ಕೊಂಡು ಬಿಡ್ತಿದ್ಲು ಆದ್ರೆ ಆವತ್ತು ನಾನು ಬಾರೋ ತನಕ ಕಾದು ಈ ಸಿನಿಮಾ ಬಗ್ಗೆ ಮಾತಾಡುದ್ಲು ನಂಗೆ ತುಂಬಾ ಖುಷಿ ಆಯ್ತು, ನೀವು ಮಾಡಿರೋ ಅಷ್ಟು ಸಿನಿಮಾದಲ್ಲಿ ಈ ಸಿನಿಮಾ ತುಂಬಾ ಮನಸ್ಸಿಗೆ ಹತ್ತಿರವಾಯ್ತು.. ಸಿನಿಮಾವನ್ನ ತುಂಬಾ ಚೆನ್ನಾಗಿ ತಗೊಂಡು ಹೋಗಿದೀರಾ ಸಖತ್ ಇಷ್ಟ ಆಯ್ತು, ಅದರಲ್ಲಿ ನೀವು ತುಂಬಾ ಚೆನ್ನಾಗಿ ನಟಿಸಿದ್ದೀರಾ ಅಂತ ಹೇಳುದ್ರಂತೆ. ಜೊತೆಗೆ ಸೊಸೆ ಕೂಡ ಮಾತಾಡುದ್ರಂತೆ.. ಅದರ ಬಗ್ಗೆ ಕೂಡ ಮಾತನಾಡಿರುವ ಜಗ್ಗೇಶ್ ಪಾಪ ನನ್ನ ಸೊಸೆಗೆ ಕನ್ನಡ ಬರಲ್ಲ ಕನ್ನಡ ಇವಾಗ ಕಲಿತಿದ್ದಾಳೆ. ಅವಳು ಸಿನಿಮಾದ ಸಬ್ ಟೈಟಲ್ ನ ನೋಡೀನೇ ತುಂಬಾ ಖುಷಿಪಟ್ಲು. ನಮ್ಮ ವೇಷ್ಟ್ರನ್ ಕಲ್ಚರ್ ನಲ್ಲಿ ಇತರ ಸೆಂಟಿಮೆಂಟ್ ಸಿನಿಮಾಗಳೇ ಇರಲ್ಲ.. ಸೆಂಟಿಮೆಂಟ್ ಇರಲ್ಲ. ಆದ್ರೆ ಈ ಸಿನಿಮಾದಲ್ಲಿ ಎಲ್ಲಾನು ಇದೆ ಅಂತ ಖುಷಿ ಪಟ್ಲು ಅಂತ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಬಗ್ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ತಿದೆ. ನೀವು ಹೋಗಿ ಥೀಯೇಟರ್ ನಲ್ಲಿ ಸಿನಿಮಾ ನೋಡಿ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಛೋಟಾ ಚಾಂಪಿಯನ್ ಶೋ ಗೆ ಟೈಟಲ್ ಹಾಡನ್ನು ಹೇಳಿದ ದಿಯಾ ಹೆಗ್ಡೆ, ಶೋ ಯಾವಾಗಿನಿಂದ ಶುರುವಾಗುತ್ತೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram