ಆಗ್ನೇಯ ಮಧ್ಯ ರೈಲ್ವೆ ಇಲಾಖೆಯಲ್ಲಿ ಒಟ್ಟು 733 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲಬಹುದು. ಹುದ್ದೆಗಳ ವಿವರ, ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಹಾಗೂ ಇನ್ನಿತರ ಮಾಹಿತಿಗಳು ಈ ಲೇಖನದಲ್ಲಿ ತಿಳಿಯಿರಿ.
ಖಾಲಿ ಇರುವ ಹುದ್ದೆಗಳ ವಿವರಗಳು :- ಆಗ್ನೇಯ ಮಧ್ಯ ರೈಲ್ವೆ ಇಲಾಖೆಯಲ್ಲಿ 38 ಕಾರ್ಪೆಂಟರ್ ಹುದ್ದೆಗಳು, 100 COPA ಹುದ್ದೆಗಳು, 10ಡ್ರಾಫ್ಟ್ಸ್ಮ್ಯಾನ್ ಹುದ್ದೆಗಳು, 137 ಎಲೆಕ್ಟ್ರಿಷಿಯನ್ ಹುದ್ದೆಗಳು, 5 ಎಲೆಕ್ಟ್ರಿಷಿಯನ್ (ಮೆಕ್ಯಾನಿಕ್) ಹುದ್ದೆಗಳು, 187 ಫಿಟ್ಟರ್ ಹುದ್ದೆಗಳು, 4 ಮೆಷಿನಿಸ್ಟ್ ಹುದ್ದೆಗಳು, 42 ಪೈಂಟರ್ ಹುದ್ದೆಗಳು, 25 ಪ್ಲಂಬರ್ ಹುದ್ದೆಗಳು,15 ಮೆಕ್ಯಾನಿಕ್(RAC) ಹುದ್ದೆಗಳು, 4 SMW ಹುದ್ದೆಗಳು, 27 ಸ್ಟೆನೊ(ಇಂಗ್ಲಿಷ್) ಹುದ್ದೆಗಳು, 19 ಸ್ಟೆನೊ (ಹಿಂದಿ) ಹುದ್ದೆಗಳು, 12 ಡೀಸೆಲ್ ಮೆಕ್ಯಾನಿಕ್ ಹುದ್ದೆಗಳು, 4 ಟರ್ನರ್ ಹುದ್ದೆ, 4 ವೆಲ್ಡರ್, ಹುದ್ದೆ, 80 ವೈರ್ಮ್ಯಾನ್ ಹುದ್ದೆ, 4 ಕಾಮಿಕಲ್ ಲ್ಯಾಬೊರೇಟರಿ ಅಸಿಸ್ಟೆಂಟ್ ಹಾಗೂ ಡಿಜಿಟಲ್ ಫೋಟೋಗ್ರಾಫರ್ ಹುದ್ದೆಗಳು ಖಾಲಿ ಇವೆ. ಉದ್ಯೋಗದ ಸ್ಥಳ:- ಛತ್ತೀಸ್ ಗಢದ ಬಿಲಸ್ಪುರ.
ಎಜುಕೇಷನ್ ಕ್ವಾಲಿಫಿಕೇಷನ್ :- ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಸೂಚನೆಯ ಪ್ರಕಾರ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ 10 ನೇ ತರಗತಿ ಮತ್ತು ಐಟಿಐ ಪೂರ್ಣಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಯಸ್ಸಿನ ಮಿತಿ :- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 12, 2024ಕ್ಕೆ ಕನಿಷ್ಠ 15 ವರ್ಷ ತುಂಬಿರಬೇಕು. ಹಾಗೂ ಗರಿಷ್ಠ 24 ವರ್ಷ. ಸರ್ಕಾರದ ಮೀಸಲಾತಿ ಅನುಸಾರ ಹಿಂದುಳಿದ ಅಭ್ಯರ್ಥಿಗಳಿಗೆ ಮತ್ತು ವಿಧವಾ ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕದ ವಿವರಗಳು :- ಅಭ್ಯರ್ಥಿಗಳು ಯಾವುದೇ ಜಾತಿ ಪಂಗಡಕ್ಕೆ ಸೇರಿದವರು ಆಗಿದ್ದರೂ ಸಹ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯ ಇಲ್ಲ. ಅರ್ಜಿ ಸಲ್ಲಿಸುವಾಗ ಯಾವುದೇ ಕಂಪ್ಯೂಟರ್ ಕೇಂದ್ರದಲ್ಲಿ ಹಣ ಪಾವತಿಸಲು ಹೇಳಿದರೆ ದಯವಿಟ್ಟು ಯಾವುದೇ ಹಣವನ್ನು ಪಾವತಿಸಬಾರದು.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 9,000 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು, ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ ಮಾಡಿ ಭೇಟಿ ನೀಡಿ. ನಿಮ್ಮ ಮೇಲ್ ಮತ್ತು password ನಮೂದಿಸಿ ಮತ್ತು ಕೆಳಗೆ ನೀಡಿರುವ captcha ನಮೂದಿಸಿ ನಂತರ ಲಾಗ್ ಇನ್ ಆಗಿ. ನಂತರ ಆನ್ಲೈನ್ ಅಪ್ಲಿಕೇಶನ್ ನಲ್ಲಿ ನಿಮ್ಮ ಪೂರ್ಣ ಹೆಸರು ನಿಮ್ಮ ವಿಳಾಸ, ನಿಮ್ಮ ಲಿಂಗ, ನಿಮ್ಮ ಜನ್ಮ ದಿನ, ನಿಮ್ಮ ವಿದ್ಯಾರ್ಹತೆ ಎಲ್ಲವನ್ನೂ ಸರಿಯಾಗಿ ಭರ್ತಿ ಮಾಡಿ ಅಪ್ಲಿಕೇಶನ್ ಸಲ್ಲಿಸಿ. application fill ಮಾಡುವಾಗ ಮಾಹಿತಿಯನ್ನು ನಿಖರವಾಗಿ ನೀಡಬೇಕು. ನಿಮ್ಮ ಮಾಹಿತಿ ಸುಳ್ಳು ಅಥವಾ ತಪ್ಪು ಎಂದಾದರೆ ನಿಮ್ಮ ಅರ್ಜಿಯನ್ನು ಇಲಾಖೆಯು ತಿರಸ್ಕಾರ ಮಾಡುತ್ತದೆ.
ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶಾರ್ಟ್ಲಿಸ್ಟಿಂಗ್ ಮಾಡಿ ಲಿಖಿತ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆಯ ನಂತರ ವೈಯಕ್ತಿಕ ಸಂದರ್ಶನ ನಡೆಸಿ ನಂತರ ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಏಪ್ರಿಲ್ 12 2024 ರ ಒಳಗೆ ಅರ್ಜಿ ಸಲ್ಲಿಸಬೇಕು. ಮಾರ್ಚ್ 12 ರಿಂದ application ಲಿಂಕ್ ಓಪನ್ ಆಗಿದೆ.
ಇದನ್ನೂ ಓದಿ: ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ 60 ಹುದ್ದೆಗಳ ನೇಮಕಾತಿ; ಇಂದೇ ಅರ್ಜಿ ಸಲ್ಲಿಸಿ