RAC ಮತ್ತು ಟಿಕೆಟ್ ವೈಟಿಂಗ್ ಲಿಸ್ಟ್ ಇದ್ದಾಗ ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಇನ್ನು ಮುಂದೆ ಏಷ್ಟು ರೂಪಾಯಿ ಕಡಿತ ಆಗುತ್ತದೆ ಎಂಬ ಮಾಹಿತಿ ಇಲ್ಲಿದೆ

Railway Ticket Cancellation Charges

ರೈಲ್ವೆಯಲ್ಲಿ ಪ್ರಯಾಣ ಮಾಡುವಾಗ ಮುಂಚಿತವಾಗಿ ರೈಲ್ವೆ ಟಿಕೆಟ್ ಬುಕ್ ಮಾಡುತ್ತೇವೆ. ಆದರೆ ಕೆಲವೊಮ್ಮೆ ನಾವು ಟಿಕೆಟ್ ಬುಕ್ ಮಾಡಿದ ದಿನಾಂಕದಂದು ಪ್ರಯಾಣ ಮಾಡುವಾಗ RAC ಅಥವಾ ಇನ್ನು ವೈಟಿಂಗ್ ಲಾಸ್ಟ್ ನಲ್ಲಿ ಇದ್ದರೆ ಅಂತಹ ಸಮಯದಲ್ಲಿ ನಾವು ಟಿಕೆಟ್ ಕ್ಯಾನ್ಸಲ್ ಮಾಡುತ್ತೇವೆ. ಹಾಗೆ ಮಾಡಿದಾಗ ಪೂರ್ಣ ಹಣ ಅಥವಾ ಹೆಚ್ಚಿನ ಹಣ ಕಡಿತ ಆಗುತ್ತಿತ್ತು. ಆದರೆ ಈ ನಿಯಮದಲ್ಲಿ ಈಗ ಬದಲಾವಣೆ ತರಲಾಗಿದೆ. ಹಾಗಾದರೆ ಇನ್ನು ಮುಂದೆ ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಎಷ್ಟು ಹಣ ಕಡಿತ ಆಗುತ್ತದೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಪ್ರಯಾಣಿಕರ ದೂರಿನ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ :- RAC ಅಥವಾ ಟಿಕೆಟ್ waiting list ನಲ್ಲಿ ಇದ್ದಾಗ ನಾವು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಹೆಚ್ಚಿನ ದರ ಕಡಿತ ಆಗುತ್ತದೆ ಎಂಬ ಬಗ್ಗೆ ಗಿರಿದಿಹ್ ಅವರ ಸಾಮಾಜಿಕ ಕಮ್ ಆರ್‌ಟಿಐ ಕಾರ್ಯಕರ್ತ ಸುನೀಲ್ ಕುಮಾರ್ ಖಂಡೇಲ್ವಾಲ್ ಅವರು ಏಪ್ರಿಲ್ 12 ರಂದು ರೈಲ್ವೆ ಆಡಳಿತಕ್ಕೆ ಪತ್ರವನ್ನು ಕಳುಹಿಸಿದ್ದರು ದೂರು ನೀಡಿದ್ದರು. ಈ ದೂರಿನ ಮೇಲೆ ಸಾರ್ವಜನಿಕ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಈಗ ಕಡಿಮೆ ದರದಲ್ಲಿ Cancelation ಚಾರ್ಜ್ ಕಡಿತ ಮಾಡಲಾಗುತ್ತದೆ. 

ಎಷ್ಟು ಹಣ ಕಡಿತ ಮಾಡಲಾಗುತ್ತದೆ?: ಇನ್ನು ಮುಂದೆ RAC ಅಥವಾ ಟಿಕೆಟ್ waiting list ನಲ್ಲಿ ಇದ್ದಾಗ ನಾವು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಕೇವಲ 60 ರೂಪಾಯಿ ಮಾತ್ರ ಕಡಿತ ಆಗುತ್ತದೆ. ಉಳಿದ ಹಣ ನಮ್ಮ ಖಾತೆಗೆ ಜಮಾ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

IRCTC ಯಾಕೆ ಈ ಕ್ರಮ ಕೈಗೊಂಡಿದೆ.?

ಈ ಹಿಂದೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಪೂರ್ಣ ಮೊತ್ತ ಬರುತ್ತಿರಲಿಲ್ಲ. ಅಥವಾ ಅರ್ಧ ಹಣ ಇಲ್ಲವೇ ಮುಕ್ಕಾಲು ಭಾಗ ಹಣ ಕಡಿತ ಆಗುತ್ತಿತ್ತು.
ಇದರಿಂದ ಸಾರ್ವಜನಿಕರಿಗೆ ಹಣಕಾಸಿನ ನಷ್ಟ ಆಗುತ್ತಿತ್ತು. ಈ ನಷ್ಟವನ್ನು ತಪ್ಪಿಸಲು ಕಡಿತದ ಮೊತ್ತವನ್ನು ಕಡಿಮೆ ಮಾಡಲು IRCTC ನಿರ್ಧರಿಸಿದೆ.

IRCTC ಯ ವ್ಯವಸ್ಥಾಪಕ ನಿರ್ದೇಶಕರ ಹೇಳಿಕೆ ಹೀಗಿದೆ :-

ಟಿಕೆಟ್ ಬುಕಿಂಗ್ ಮತ್ತು ಮರುಪಾವತಿಗೆ ಸಂಬಂಧಿಸಿದ ನೀತಿ, ನಿರ್ಧಾರಗಳು ಮತ್ತು ನಿಬಂಧನೆಗಳು ಕೇವಲ ಭಾರತೀಯ ರೈಲ್ವೆಯ (ರೈಲ್ವೆ ಮಂಡಳಿ) ನಿರ್ಣಯ ಆಗಿದೆ. ಎಂದು ತಿಳಿಸಿದ್ದಾರೆ. IRCTC ಕೇವಲ ರೈಲ್ವೇ ಇಲಾಖೆಯು ರೂಪಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅಸುಸರಿಸುತ್ತದೆ. ಇನ್ನು ಮುಂದೆ, ಆರ್‌ಎಸಿ ಟಿಕೆಟ್ ಕ್ಯಾನ್ಸಲ್ ಶುಲ್ಕಗಳು, ಭಾರತೀಯ ರೈಲ್ವೇ ನಿಯಮಗಳ ಪ್ರಕಾರ ಪ್ರತಿ ಪ್ರಯಾಣಿಕರಿಗೆ ರೂ 60 ರದ್ದತಿ ಶುಲ್ಕವನ್ನು ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ. ಜೊತೆಗೆ ಖಂಡೇಲ್ವಾಲ್ ಅವರ ಸಲಹೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಇಂಥ ಒಳ್ಳೆಯ ವಿಚಾರವನ್ನು ರೈಲ್ವೆ ಇಲಾಖೆಯ ಮುಂದೆ ತಿಳಿಸುವ ಪ್ರಯತ್ನ ಮಾಡಿದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ರೈಲ್ವೆ ಇಲಾಖೆಯ ಯಾವುದೇ ನೀತಿಗಳು ನಿಯಮಗಳು ಅಥವಾ ಯಾವುದೇ ರೀತಿಯ ತೊಂದರೆಗಳು ಇದ್ದರೆ ನೀವು ನೇರವಾಗಿ ಭಾರತೀಯ ರೈಲ್ವೆ ಇಲಾಖೆಯ ಕಚೇರಿಗೆ ದೂರು ನೀಡಬಹುದು. ಇಲ್ಲವೇ ಮೇಲ್ ಮೂಲಕ ದೂರು ನೀಡಬಹುದು. indianrailways.gov.in ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನಿಮ್ಮ ಒಂದು ದೂರಿನಿಂದ ಅನೇಕ ಪ್ರಯಾಣಿಕರಿಗೆ ಒಳಿತಗಲಿದೆ.

ಇದನ್ನೂ ಓದಿ: ಬೆಂಗಳೂರಿನಿಂದ ವಿವಿಧ ಕಡೆಗೆ ಎರಡು ತಿಂಗಳು ವಿಶೇಷ ರೈಲು ಸಂಚರಿಸಲಿದೆ

ಇದನ್ನೂ ಓದಿ: SSLC ನಂತರ ಮುಂದೇನು ಎಂಬ ಯೋಚನೆಯೇ? ಇಲ್ಲಿದೆ ಕೆಲವು ಸಲಹೆಗಳು